UPI Transaction: ಈ ಕಾರಣಗಳಿಂದ ಈ ನಿಮ್ಮ ಯುಪಿಐ ವಹಿವಾಟುಗಳು ನಾಳೆಯಿಂದ ಸ್ಥಗಿತಗೊಳ್ಳಬಹುದು!

UPI Transaction: ಈ ಕಾರಣಗಳಿಂದ ಈ ನಿಮ್ಮ ಯುಪಿಐ ವಹಿವಾಟುಗಳು ನಾಳೆಯಿಂದ ಸ್ಥಗಿತಗೊಳ್ಳಬಹುದು!
HIGHLIGHTS

1ನೇ ಫೆಬ್ರವರಿಯಿಂದ ಯುಪಿಐ ವಹಿವಾಟಿಗೆ (UPI Transaction) ಹೊಸ ನಿಯಮ ಜಾರಿಯಾಗಲಿದೆ.

ಪ್ರಸ್ತುತ ಇ-ವಾಲೆಟ್ (PhonePe, Paytm, Gpay & Banks Apps) ಬಳಸುವುದು ಅನಿವಾರ್ಯವಾಗಿದೆ.

ಈ ಡಿಜಿಟಲ್ ಪೇಮೆಂಟ್ (Digital Payment) ಸಮಯಕ್ಕೆ ಸರಿಯಾದ ಚಿಲ್ಲರೆ ಹಣದ ಕೊರತೆ ಒಂದಾಗಿದೆ.

UPI Transaction: ಭಾರತದಲ್ಲಿ ಪ್ರಸ್ತುತ ಪ್ರತಿಯೊಂದು ಸಣ್ಣ ಪುಟ್ಟ ಖರೀದಿಗೆ ತಂಬಾಕು, ಬಿಡಿ ಸಿಗರೇಟ್, ಪ್ರಯಾಣಿಕರ ಬಾಡಿಗೆ, ಮೆಟ್ರೋ, ಟಿಕೆಟ್ ಖರೀದಿ ಮತ್ತು ಅನೇಕ ಸಣ್ಣ ಪುಟ್ಟ ಅಂಗಡಿಗಳಿಂದ ದೊಡ್ಡ ಮಾಲ್, ಹೋಟೆಲ್ ಪ್ರತಿಯೊಂದನ್ನು ಬಳಸಲು ಜನ ಅಧಿಕವಾಗಿ ಡಿಜಿಟಲ್ ಪೇಮೆಂಟ್ ಇ-ವಾಲೆಟ್ (PhonePe, Paytm, Gpay & Banks Apps) ಸಹಾಯದಿಂದ ಮಾಡುವುದು ಅನಿವಾರ್ಯವಾಗಿದೆ. ಯಾಕೆಂದರೆ ಇದಕ್ಕೆ ಮೂಲ ಕಾರಣವೆಂದರೆ ಸಮಯಕ್ಕೆ ಸರಿಯಾದ ಚಿಲ್ಲರೆ ಹಣದ ಕೊರತೆ ಒಂದಾಗಿದೆ. ಇದೊಂದಿಗೆ ಈ ಡಿಜಿಟಲ್ ಪೇಮೆಂಟ್ (Digital Payment) ಇಂದಿನ ಆಧುನಿಕ ಯುಗದಲ್ಲಿ ನೀಡಿದ ಪುರಾವೆಯಾಗಿರುವುದರೊಂದಿಗೆ ನಿಮ್ಮ ಪ್ರತಿಯೊಂದು ರೂಪಾಯಿ ಮೇಲೆ ಗಮನ ಇಡಲು ಸಹಕರಿಸುತ್ತದೆ.

Also Read: Upcoming Phones in Feb 2025: ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಹೊಸ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ!

UPI Transaction ಬಗ್ಗೆ ಹೊಸ ನಿಯಮ ಜಾರಿ!

ಹೌದು, ನಾಳೆ ಅಂದ್ರೆ 1ನೇ ಫೆಬ್ರವರಿ 2025 ರಿಂದ ಏಕೀಕೃತ ಪಾವತಿ ವ್ಯವಸ್ಥೆಯಲ್ಲಿ (Unified Payments Interface -UPI) ಯಾವುದೇ ವಹಿವಾಟುಗೊಳಿಸಲು ಅದಕ್ಕೆ ಪೂರಕವಾಗಿರುವ UPI ID ಮೇಲೆ ಹೊಸ ನಿಯಮವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಸರಳ ಭಾಷೆಯಲ್ಲಿ ಏನಪ್ಪಾ ಈ ಹೊಸ ರೂಲ್ ಅನ್ನೋದಾದ್ರೆ ನೀವು ಯಾವುದೇ ಇ-ವಾಲೆಟ್ (PhonePe, Paytm, Gpay & Banks Apps) ಅಪ್ಲಿಕೇಶನ್ಗಳನ್ನು ಬಳಸುತ್ತೀರಿ ಆದರೆ ಆ ಅಪ್ಲಿಕೇಶನ್ ಒಳಗೆ ನೀವು ರಚಿಸಿರುವ UPI ID ಜೊತೆಗೆ ಯಾವುದೇ ಸ್ಪೆಷಲ್ ಚಿನ್ಹೆಗಳಾಗಿರುವ @, $, #,^,%,* (ಅಂಕಿಗಳನ್ನು ಬಳಸಬಹುದು) ಇವನ್ನು ಹೊಂದಿರಬಾರದು ಎನ್ನುವುದು ನಿಯಮ.

UPI transaction News 2025

UPI ID ಜೊತೆಗೆ ಯಾವುದೇ ಸ್ಪೆಷಲ್ ಚಿನ್ಹೆ ಬಳಸುವಂತಿಲ್ಲ!

ಇದನ್ನು ನಿಮಗೆ ಮತ್ತಷ್ಟು ಉದಾಹರಣೆಯ ಸಮೇತ ವಿವರಿಸುವುದಾದರೆ ನಿಮ್ಮ ಐಡಿಯಲ್ಲಿ ಮೊದಲನೇಯದಾಗಿ ಸ್ಪೆಷಲ್ ಚಿನ್ಹೆಗಳಾದ @, $, #,^,%,* ಹೊಂದಿರಬಾರದು. ಆದರೆ ಪ್ರಸ್ತುತ ಸುಮಾರು ಜನರಿಗೆ ತಲೆಕೆಡಿಸುತ್ತಿರುವ ಪ್ರಶ್ನೆ ಅಂದರೆ ನಾವು ಹಾಕದೆ ನಮ್ಮ ಐಡಿಯ ಕೊನೆಯಲ್ಲಿ @ybl, @ibl, ಅಥವಾ @axl ಹೊಂದಿದೆ ಅನ್ನೋದು. ಆದರೆ ಈ ಹೊಸ ನಿಮಯದಲ್ಲಿ ನೀವು ರಚಿಸುವ ಐಡಿಗೆ ಮಾತ್ರ ನಿಯಮ ಅನ್ವಯಿಸುತ್ತದೆ. ಉದಾಹರಣೆ ನಿಮ್ಮ ಹೆಸರು ಪ್ರಕಾಶ್ ಕುಮಾರ್ ಆಗಿದ್ದು ನೀವು prakash.kumar, prakash_kumar, prakash$kumar, prakash@kumar, prakash%kumar,prakash*kumar ಎಂಬ ಐಡಿಗಳನ್ನು ಬಳಸುವಂತಿಲ್ಲ.

ಫೆಬ್ರವರಿ 1ರಿಂದ ಯಾವುದೇ ವಿಶೇಷ ಚಿಹ್ನೆಗಳನ್ನು ಹೊಂದಿರುವ ಯುಪಿಐ ವಹಿವಾಟು ಸ್ವೀಕರಿಸಲಾಗುವುದಿಲ್ಲ ಎಂದು NPCI (National Payments Corporation of India ) ಮಾಹಿತಿಯನ್ನು ನೀಡಿದೆ. ಈ ಸಂಬಂಧ 9ನೇ ಜನವರಿಯಂದು ಸುತ್ತೋಲೆಯನ್ನು ಸಹ ಹೊರಡಿಸಲಾಗಿದೆ. ಈ ಸುತ್ತೋಲೆ ಪ್ರಕಾರ ಯುಪಿಐ ವಹಿವಾಟು ಐಡಿಯನ್ನು ಕ್ರಿಯೇಟ್ ಮಾಡುವಾಗ ಕೇವಲ ಅಕ್ಷರ ಮತ್ತು ಸಂಖ್ಯೆಗಳನ್ನು ಮಾತ್ರ ಬಳಸಬೇಕು ಎಂದು ಸೂಚನೆ ನೀಡಲಾಗಿದೆ. ವಿಶೇಷ ಚಿಹ್ನೆ (Special Character) ಐಡಿಯನ್ನು ಯುಪಿಐ ಸ್ವೀಕರಿಸುವುದಿಲ್ಲ ಒಂದು ವೇಳೆ ಇದ್ದರೆ ಇಂದೇ ಅದನ್ನು ಬದಲಾಹಿಸಿಕೊಳ್ಳಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo