ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಹೆಚ್ಚಿನ ಕೆಲಸಗಳಲ್ಲಿ ಇದು ಅಗತ್ಯವಿದೆ
Aadhaar ಈ ಹಿಂದೆ ಪ್ರತಿಯೊಂದು ಅಪ್ಡೇಟ್ಗಳಿಗಾಗಿ 25 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು ಆದರೆ ಸದ್ಯಕ್ಕೆ ಇದು ಉಚಿತ.
ನಿಮ್ಮ ಆಧಾರ್ ಕಾರ್ಡ್ 10 ವರ್ಷ ಹಳೆಯದಾಗಿದ್ದರೆ ನೀವು ಅದನ್ನು ಕಡ್ಡಾಯವಾಗಿ ನವೀಕರಿಸಬೇಕಾಗುತ್ತದೆ.
ಇದೀಗ ಜನರು ತಮ್ಮ ಆಧಾರ್ ಕಾರ್ಡ್ (Aadhaar Card) ಆನ್‌ಲೈನ್‌ನಲ್ಲಿ ದಾಖಲೆಗಳನ್ನು ನವೀಕರಿಸಲು ಉಚಿತವಾಗಿ ಆಯ್ಕೆ ಮಾಡಬಹುದು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಹೇಳಿದೆ. ಮುಂದಿನ 3 ತಿಂಗಳ ಕಾಲ MyAadhaar ಪೋರ್ಟಲ್‌ನಲ್ಲಿ ಉಚಿತ ಡಾಕ್ಯುಮೆಂಟ್ ಅಪ್‌ಡೇಟ್ ಸೌಲಭ್ಯವನ್ನು ಬಳಕೆದಾರರು ಪಡೆದುಕೊಳ್ಳಬಹುದಾದ ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ದೊಡ್ಡ ವಿಷಯವೆಂದರೆ ನವೀಕರಣಕ್ಕಾಗಿ ನೀವು ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ. ಅಂದರೆ ನಿಮ್ಮ ಆಧಾರ್ ಅನ್ನು ಉಚಿತವಾಗಿ ನವೀಕರಿಸಲಾಗುತ್ತದೆ. ಈ ಹಿಂದೆ ಪ್ರತಿಯೊಂದು ಅಪ್ಡೇಟ್ಗಳಿಗಾಗಿ 25 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು ಆದರೆ ಸದ್ಯಕ್ಕೆ ಇದು ಉಚಿತ.
10 ವರ್ಷ ಹಳೆಯ ಕಾರ್ಡ್ ಹೊಂದಿರುವವರಿಗೆ ಉಚಿತ:
ನಿಮ್ಮ ಆಧಾರ್ ಕಾರ್ಡ್ 10 ವರ್ಷ ಹಳೆಯದಾಗಿದ್ದರೆ ನೀವು ಅದನ್ನು ಕಡ್ಡಾಯವಾಗಿ ನವೀಕರಿಸಬೇಕಾಗುತ್ತದೆ. ನವೀಕರಣದ ಪ್ರಕ್ರಿಯೆಯನ್ನು UIDAI ಒಂದು ನಿರ್ದಿಷ್ಟ ಸಮಯದವರೆಗೆ ಉಚಿತವಾಗಿ ಇರಿಸಿದೆ. ಈ ಸೇವೆ ನಿಜಕ್ಕೂ ಉಚಿತವಾಗಿದ್ದು ಕಳೆದ 10 ವರ್ಷದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲದವರು ಮಾತ್ರ ಈ ಸೇವೆಗೆ ಅರ್ಹರಾಗಿರುತ್ತಾರೆ. ಇಂಥವರಿಂದ ಹೆಚ್ಚುವರಿ ಹಣ ಕೇಳಿದರೆ ಅವರಿಗೆ ಈ UIDAI ಅಧಿಕೃತ ಟ್ವಿಟ್ಟರ್ ತೋರಿಸಬಹುದು. 14ನೇ ಜೂನ್ 2023 ಒಳಗೆ ನಿಮ್ಮ ಆಧಾರ್ ಅನ್ನು ನೀವು ಉಚಿತವಾಗಿ ನವೀಕರಿಸಬಹುದು.
Keep Demographic Details Updated to Strengthen Your #Aadhaar.
If your Aadhaar had been issued 10 years ago & had never been updated – you may now upload Proof of Identity & Proof of Address documents online at https://t.co/4k2YjTvwMe ‘FREE OF COST’ from 15 March – June 14, 2023. pic.twitter.com/0Lx1LNxZzE— Aadhaar (@UIDAI) March 15, 2023
UIDAI ಮನವಿ:
ಮೊದಲಿಗೆ ಮೈ ಆಧಾರ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಭಾರತದ ಯಾರಾದರೂ ಉಚಿತವಾಗಿ ದಾಖಲೆಗಳನ್ನು ನವೀಕರಿಸಬಹುದು ಎಂದು ಯುಐಡಿಎಐ ಜನರಿಗೆ ಮನವಿ ಮಾಡಿದೆ.ಡಾಕ್ಯುಮೆಂಟ್‌ಗಳನ್ನು ನವೀಕರಿಸಲು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.ಆದರೆ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ದಾಖಲೆಯನ್ನು ನವೀಕರಿಸುವಾಗ ರೂ. 50 ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಈ ರೀತಿ ಆಧಾರ್ ವಿವರಗಳನ್ನು ನವೀಕರಿಸಿ:
ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಆಧಾರ್ ಸಂಖ್ಯೆಯ ಮೂಲಕ https://myaadhaar.uidai.gov.in/ ಗೆ ಲಾಗ್ ಇನ್ ಆಗುತ್ತಾರೆ. ಇದರ ನಂತರ ನಿಮ್ಮ ಫೋನ್‌ಗೆ ಒನ್ ಟೈಮ್ ಪಾಸ್‌ವರ್ಡ್ (OTP) ಬರುತ್ತದೆ. OTP ಅನ್ನು ಭರ್ತಿ ಮಾಡಿದ ನಂತರ ಡಾಕ್ಯುಮೆಂಟ್ ನವೀಕರಣದ ಮೇಲೆ ಕ್ಲಿಕ್ ಮಾಡಿ. ಇದರ ನಂತರ ನೀವು ನಿಮ್ಮ ವಿವರಗಳನ್ನು ನೋಡುತ್ತೀರಿ. ಅದರ ನಂತರ ನೀವು ನಿಮ್ಮ ವಿವರಗಳನ್ನು ಪರಿಶೀಲಿಸಬೇಕು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile