ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲವಾದರೆ ಈಗಲೇ ಮಾಡ್ಕೊಳ್ಳಿ! ಇಲ್ಲವಾದ್ರೆ ಹಣ ನೀಡಬೇಕಾಗುತ್ತೆ!

Updated on 07-Apr-2023
HIGHLIGHTS

ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಹೆಚ್ಚಿನ ಕೆಲಸಗಳಲ್ಲಿ ಇದು ಅಗತ್ಯವಿದೆ

ಆಧಾರ್ ಈ ಹಿಂದೆ ಪ್ರತಿಯೊಂದು ಅಪ್ಡೇಟ್ಗಳಿಗಾಗಿ 25 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು ಆದರೆ ಸದ್ಯಕ್ಕೆ ಇದು ಉಚಿತ.

ನಿಮ್ಮ ಆಧಾರ್ ಕಾರ್ಡ್ 10 ವರ್ಷ ಹಳೆಯದಾಗಿದ್ದರೆ ನೀವು ಅದನ್ನು ಕಡ್ಡಾಯವಾಗಿ ನವೀಕರಿಸಬೇಕಾಗುತ್ತದೆ.

Adhaar Free Update: ಭಾರತೀಯ ನಿವಾಸಿಗಳು ತಮ್ಮ ತಮ್ಮ ಆಧಾರ್ ವಿವರಗಳನ್ನು ಬರುವ ಜೂನ್ 14 ಒಳಗಾಗಿ ಉಚಿತವಾಗಿಯೇ ನವೀಕರಿಸಬಹುದು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಪ್ರಕಟಿಸಿದೆ. ಈ ಸೌಲಭ್ಯವನ್ನು myAadhaar ಪೋರ್ಟಲ್‌ನಲ್ಲಿ (myaadhaar.uidai.gov.in) ಪ್ರವೇಶಿಸಬಹುದು. ಆದರೆ ಗಮನಿಸಿ ಈ ಸೇವೆ ಎಲ್ಲರಿಗೂ ಅಲ್ಲ ಕೇವಲ ಯಾರ್ಯಾರು ಕಳೆದ 10 ವರ್ಷಗಳಲ್ಲಿ ಒಮ್ಮೆಯೂ ತಮ್ಮ ಆಧಾರ್ ಮಾಹಿತಿಯನ್ನು ಅಪ್ಡೇಟ್ ಮಾಡಿಸಿಲ್ಲವೋ ಅಂಥವರಿಗಾಗಿ ಸರ್ಕಾರ ಉಚಿತವಾಗಿ ಅಪ್ಡೇಟ್ ಮಾಡಿಸುವ ಅವಕಾಶವನ್ನು ನೀಡುತ್ತಿದೆ. ಈ ಹಿಂದೆ ಪ್ರತಿಯೊಂದು ಅಪ್ಡೇಟ್ಗಳಿಗಾಗಿ 25 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು ಆದರೆ ಸದ್ಯಕ್ಕೆ ಇದು ಉಚಿತ. 

10 ವರ್ಷ ಹಳೆಯ ಕಾರ್ಡ್ ಹೊಂದಿರುವವರಿಗೆ ಅವಶ್ಯಕ:

ನಿಮ್ಮ ಆಧಾರ್ ಕಾರ್ಡ್ 10 ವರ್ಷ ಹಳೆಯದಾಗಿದ್ದರೆ ನೀವು ಅದನ್ನು ಕಡ್ಡಾಯವಾಗಿ ನವೀಕರಿಸಬೇಕಾಗುತ್ತದೆ. ನವೀಕರಣದ ಪ್ರಕ್ರಿಯೆಯನ್ನು UIDAI ಒಂದು ನಿರ್ದಿಷ್ಟ ಸಮಯದವರೆಗೆ ಉಚಿತವಾಗಿ ಇರಿಸಿದೆ. ಅಂದರೆ ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಉಚಿತವಾಗಿ ನವೀಕರಿಸಬಹುದು. ಈ ಸೌಲಭ್ಯವು ಸೀಮಿತ ಅವಧಿಗೆ ಇದ್ದರೂ. 14ನೇ ಜೂನ್ 2023 ಒಳಗೆ ನಿಮ್ಮ ಆಧಾರ್ ಅನ್ನು ನೀವು ಉಚಿತವಾಗಿ ನವೀಕರಿಸಬಹುದು.

https://twitter.com/UIDAI/status/1636330492755623939?ref_src=twsrc%5Etfw

UIDAI ಪೋರ್ಟಲ್‌ಗೆ ಮನವಿ:

ಮೊದಲಿಗೆ ಮೈ ಆಧಾರ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಭಾರತದ ಯಾರಾದರೂ ಉಚಿತವಾಗಿ ದಾಖಲೆಗಳನ್ನು ನವೀಕರಿಸಬಹುದು ಎಂದು ಯುಐಡಿಎಐ ಜನರಿಗೆ ಮನವಿ ಮಾಡಿದೆ.ಡಾಕ್ಯುಮೆಂಟ್‌ಗಳನ್ನು ನವೀಕರಿಸಲು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.ಆದರೆ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ದಾಖಲೆಯನ್ನು ನವೀಕರಿಸುವಾಗ ರೂ. 50 ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಈ ರೀತಿ ಆಧಾರ್ ವಿವರಗಳನ್ನು ನವೀಕರಿಸಿ:

ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಆಧಾರ್ ಸಂಖ್ಯೆಯ ಮೂಲಕ https://myaadhaar.uidai.gov.in/ ಗೆ ಲಾಗ್ ಇನ್ ಆಗುತ್ತಾರೆ. ಇದರ ನಂತರ ನಿಮ್ಮ ಫೋನ್‌ಗೆ ಒನ್ ಟೈಮ್ ಪಾಸ್‌ವರ್ಡ್ (OTP) ಬರುತ್ತದೆ. OTP ಅನ್ನು ಭರ್ತಿ ಮಾಡಿದ ನಂತರ ಡಾಕ್ಯುಮೆಂಟ್ ನವೀಕರಣದ ಮೇಲೆ ಕ್ಲಿಕ್ ಮಾಡಿ. ಇದರ ನಂತರ ನೀವು ನಿಮ್ಮ ವಿವರಗಳನ್ನು ನೋಡುತ್ತೀರಿ. ಅದರ ನಂತರ ನೀವು ನಿಮ್ಮ ವಿವರಗಳನ್ನು ಪರಿಶೀಲಿಸಬೇಕು.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :