Important: ಉಚಿತ Aadhaar ಅಪ್‌ಡೇಟ್‌ಗಾಗಿ UIDAI ಮತ್ತೊಂದು ಹೊಸ ದಿನಾಂಕ ನೀಡಿದೆ | Tech News

Important: ಉಚಿತ Aadhaar ಅಪ್‌ಡೇಟ್‌ಗಾಗಿ UIDAI ಮತ್ತೊಂದು ಹೊಸ ದಿನಾಂಕ ನೀಡಿದೆ | Tech News
HIGHLIGHTS

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಈ ಮೊದಲು 14ನೇ ಡಿಸೆಂಬರ್ 2023 ಕೊನೆ ದಿನಾಂಕವೆಂದು ಹೊರಡಿಸಿತ್ತು

ಈಗ ಮತ್ತೆ ಇದಕ್ಕೆ ಆಧಾರ್ (Aadhaar) ಸಂಸ್ಥೆ ಹೊಸ ದಿನಾಂಕದೊಂದಿಗೆ ಮತ್ತೆ 3 ತಿಂಗಳ ಕಾಲವಕಾಶದೊಂದಿಗೆ ವಿಸ್ತರಿಸಿದೆ.

Aadhaar Update 2023: ಭಾರತದಲ್ಲಿ ಉಚಿತವಾಗಿ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಬಗ್ಗೆ ಹೊಸ ಮತ್ತು ಭಾರಿ ವಿಷಯಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಏಕೆಂದರೆ ಈವರೆಗೆ 14ನೇ ಡಿಸೆಂಬರ್ 2023 ದಿನಾಂಕ ನಿಮ್ಮ ಆಧಾರ್ ಕಾರ್ಡ್ ಮಾಹಿತಿಗಳನ್ನು ಅಪ್ಡೇಟ್ ಮಾಡಿಕೊಳ್ಳಲು ಕೊನೆ ದಿನಾಂಕವಾಗಿದ್ದು ತಮ್ಮ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡದಿರುವವರು ತಕ್ಷಣ ಅದನ್ನು ಮಾಡಬೇಕೆಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಜ್ಞಾಪನೆಯನ್ನು ಹೊರಡಿಸಿತ್ತು ಆದರೆ ಈಗ ಮತ್ತೆ ಇದಕ್ಕೆ ಆಧಾರ್ ಸಂಸ್ಥೆ ಹೊಸ ದಿನಾಂಕದೊಂದಿಗೆ ಮತ್ತೆ 3 ತಿಂಗಳ ಕಾಲವಕಾಶದೊಂದಿಗೆ ವಿಸ್ತರಿಸಿದೆ.

Also Read: ಏರ್ಟೆಲ್‌ನ ಈ ರಿಚಾರ್ಜ್ ಪ್ಲಾನ್‌ನಲ್ಲಿ Unlimited ಡೇಟಾ ಮತ್ತು ಕರೆಗಳೊಂದಿಗೆ ಉಚಿತ OTT ಲಭ್ಯ!

ಉಚಿತ Aadhaar ಅಪ್‌ಡೇಟ್‌ಗಾಗಿ ಹೊಸ ದಿನಾಂಕ

ಹೌದು ಈಗ ನಿಮ್ಮ ಆಧಾರ್ ಕಾರ್ಡ್ ಅನ್ನು 14ನೇ ಮಾರ್ಚ್ 2024 ಒಳಗೆ ಪೂರ್ತಿಯಾಗಿ ಅಪ್ಡೇಟ್ ಮಾಡಿಕೊಳ್ಳಲು ಸೂಚಿಸಿದೆ. ಅದರಲ್ಲೂ ವಿಶೇಷವಾಗಿ ದಶಕಗಳಷ್ಟು ಹಳೆಯದಾದ ಆಧಾರ್ ಕಾರ್ಡ್ (Aadhaar Card) ಅನ್ನು ನವೀಕರಿಸದೆ ಇರುವ ಬಳಕೆದಾರರಿಗೆ ತಮ್ಮ ಮಾಹಿತಿಯನ್ನು ಅಪ್ಡೇಟ್ ಮಾಡಿಕೊಳ್ಳಲು ಒತ್ತಾಯಿಸುತ್ತಿದೆ. ಅವರು ತಮ್ಮ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಈ ಉಚಿತ ಅಪ್ಡೇಟ್ ಸೇವೆಯನ್ನು ಪಡೆಯಬಹುದು. ಉದಾಹರಣೆಗಾಗಿ ಹೆಸರು, ಹುಟ್ಟಿದ ದಿನಾಂಕ ಮತ್ತು ವಿಳಾಸದಂತಹ ವಿವರಗಳನ್ನು ನಿಖರವಾಗಿ ಮತ್ತು ನವೀಕೃತವಾಗಿರಿಸಲು ಸಹಾಯ ಮಾಡುತ್ತದೆ.

Aadhaar free update extended to 14 March 2024 - UIDAI

ಆನ್‌ಲೈನ್‌ನಲ್ಲಿ Aadhaar ಅಪ್ಡೇಟ್ ಮಾಡುವುದು ಹೇಗೆ?

ಹಂತ 1: ಮೊದಲಿಗೆ ಆಧಾರ್ ಸ್ವಯಂ ಸೇವಾ ಅಪ್‌ಡೇಟ್ ಪೋರ್ಟಲ್‌ಗೆ https://myaadhaar.uidai.gov.in/portal ಭೇಟಿ ನೀಡಬೇಕು.

ಹಂತ 2: ಇದರ ನಂತರ ವಿಳಾಸ, ಹೆಸರು, ಹುಟ್ಟಿದ ದಿನಾಂಕವನ್ನು ಅಪ್ಡೇಟ್ ಮಾಡಲು ಮುಂದುವರಿಯಿರಿ’ ಮೇಲೆ ಕ್ಲಿಕ್ ಮಾಡಿ.

ಹಂತ 3: ನಿಮ್ಮ ಆಧಾರ್ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು OTP ಬಳಸಿ ಲಾಗ್ ಇನ್ ಮಾಡಿ.

ಹಂತ 4: ಇಲ್ಲಿ ಮಾನ್ಯವಾದ ವಿಳಾಸ, ಹೆಸರು ಅಥವಾ ಹುಟ್ಟಿದ ದಿನಾಂಕದ ಪುರಾವೆಯೊಂದಿಗೆ ಅಪ್ಡೇಟ್ ಮಾಡಲು ಕ್ಲಿಕ್ ಮಾಡಿ.

ಹಂತ 5: ಈಗ ಇದರಲ್ಲಿ 12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ‘ಒಟಿಪಿ ಕಳುಹಿಸಿ’ ಕ್ಲಿಕ್ ಮಾಡಿ.

ಹಂತ 6: ಆಧಾರ್ ಖಾತೆಗೆ ಲಾಗ್ ಇನ್ ಮಾಡಲು OTP ಅನ್ನು ನಮೂದಿಸಿ.

ಹಂತ 7: ಹೊಸ ವಿಳಾಸವನ್ನು ನಮೂದಿಸಿ ‘ಅಡ್ರೆಸ್ ಪ್ರೂಫ್ ಮೂಲಕ ವಿಳಾಸವನ್ನು ನವೀಕರಿಸಿ’ ಆಯ್ಕೆಯನ್ನು ಆರಿಸಿ ಅಥವಾ ‘ಸೀಕ್ರೆಟ್ ಕೋಡ್ ಮೂಲಕ ವಿಳಾಸವನ್ನು ನವೀಕರಿಸಿ’ ಆಯ್ಕೆಯನ್ನು ಬಳಸಿ.

ಹಂತ 8: ನಂತರ ‘ವಿಳಾಸದ ಪುರಾವೆ’ಯಲ್ಲಿ ಉಲ್ಲೇಖಿಸಿರುವಂತೆ ವಸತಿ ವಿಳಾಸವನ್ನು ನಮೂದಿಸಿ.

ಹಂತ 9: ಈ ವಿಳಾಸ ಪುರಾವೆಗಾಗಿ ಡಾಕ್ಯುಮೆಂಟ್ ಪ್ರಕಾರವನ್ನು ಆಯ್ಕೆಮಾಡಿ.

ಹಂತ 10: ವಿಳಾಸ ಪುರಾವೆಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ ಮತ್ತು ‘ಸಲ್ಲಿಸು’ ಕ್ಲಿಕ್ ಮಾಡಿ.

UIDAI ಆನ್‌ಲೈನ್‌ನಲ್ಲಿ Aadhaar ಅಪ್ಡೇಟ್ ಸ್ಟೇಟಸ್ ಪರಿಶೀಲಿಸುವುದು ಹೇಗೆ?

➥ಆಧಾರ್ ಅಪ್‌ಡೇಟ್ ವಿನಂತಿಯನ್ನು ಸ್ವೀಕರಿಸಲಾಗುತ್ತದೆ ಮತ್ತು 14-ಅಂಕಿಯ ಅಪ್‌ಡೇಟ್ ವಿನಂತಿ ಸಂಖ್ಯೆ (URN) ಅನ್ನು ರಚಿಸಲಾಗುತ್ತದೆ.

➥ಬಳಕೆದಾರರು ನೀಡಿದ ವಿನಂತಿಯ URN (Update Reference Number) ಸಂಖ್ಯೆಯನ್ನು ಬಳಸಿಕೊಂಡು ವಿನಂತಿಯ ಸ್ಟೇಟಸ್ ಪರಿಶೀಲಿಸಬಹುದು.

➥ಅಪ್ಡೇಟ್ ಪೂರ್ಣಗೊಂಡ ನಂತರ ಆ ಅಪ್ಡೇಟೆಡ್ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

UIDAI ಅಪ್ಡೇಟ್ ಮಾಡಿಸುವಾಗ ಈ ಅಂಶಗಳನ್ನು ಗಮನದಲ್ಲಿಡಿ

UIDAI ತಮ್ಮ ಅಧಿಕೃತ ವೆಬ್‌ಸೈಟ್ ವಿಳಾಸ ಪುರಾವೆಗಾಗಿ ನವೀಕರಿಸಿದ ಮತ್ತು ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯನ್ನು ಒದಗಿಸುತ್ತದೆ. ನವೀಕರಣಕ್ಕಾಗಿ ನೀವು ಆಧಾರ್ ಕೇಂದ್ರಕ್ಕೆ ಭೇಟಿ ನೀಡಲು ಆಯ್ಕೆ ಮಾಡಿದರೆ ಪ್ರತಿ ವಿನಂತಿಗೆ ತಲಾ ₹50 ರೂಗಳ ಸೇವಾ ಶುಲ್ಕ ಅನ್ವಯಿಸುತ್ತದೆ. ಆಧಾರ್ ಕಾರ್ಡ್ ನವೀಕರಣದೊಂದಿಗೆ ಸಮಯೋಚಿತ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಆನ್ಲೈನ್ ಮೂಲಕವೆ ಮೊದಲು ಅರ್ಜಿ ನೀಡುವುದು ಎಲ್ಲಕ್ಕಿಂದ ಮುಖ್ಯವಾಗಿದೆ. ಅಲ್ಲದೆ ನಿವು ಆಧಾರ್ ಕೇಂದ್ರಕ್ಕೆ ಭೇಟಿ ನೀಡುವಾಗ ನಿಮ್ಮ ಅಸಲಿ ಆಧಾರ್ ಕಾರ್ಡ್ ಮತ್ತು ಈ ನಿಮ್ಮ ವಿನಂತಿ ಅರ್ಜಿಯೊಂದಿಗೆ ನೀವು ಪಡೆಯ ದಿನಾಂಕ ಮತ್ತು ಸಮಯಕ್ಕೆ ಸರಿಯಾಗಿ ನೀವು ಅಲ್ಲಿರಬೇಕು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo