ಸಾಮಾನ್ಯವಾಗಿ ನಾವು ಸ್ಮಾರ್ಟ್ಫೋನ್ ಬಳಸುವಾಗ ಅಥವಾ ಹೊಸ ಸ್ಮಾರ್ಟ್ಫೋನ್ ಖರೀದಿಸುವಾಗ ಹಲವಾರು ಫೀಚರ್ ಮತ್ತು ಮಾಹಿತಿಗಳನ್ನು ಹೆಚ್ಚಾಗಿ ಗಮನಿಸದೆ ಅಥವಾ ಅದರ ಬಗ್ಗೆ ತಿಳಿಯದ ಕಾರಣಗಳಿಂದಾಗಿ ನಮಗೆ ಅರಿಯದೆ ಹಲವಾರು ಫೀಚರ್ ಮತ್ತು ಆಯ್ಕೆಗಳನ್ನು ಬಳಸಲು ಆರಂಭದಲ್ಲೇ ಅದಕ್ಕೆ ಪ್ರವೇಶವನ್ನು ಅನುಮತಿಸುತ್ತೇವೆ. ಒಂದಿಷ್ಟು ವರದಿಗಳ ಪ್ರಕಾರ ಕಾಲ ಕಳೆದಂತೆ ಬಳಕೆದಾರರು ಕೇವಲ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳು, ಬ್ಯಾಂಕಿಂಗ್ ಅಪ್ಲಿಕೇಶನ್, ಕರೆಗಳು ಮತ್ತು SMS ಹೊರೆತು ಯಾವುದೇ ಫೀಚರ್ಗಳನ್ನು ವರ್ಷಾನುಗಟ್ಟಲೆ ಮುಟ್ಟುವುದೇ ಇಲ್ಲವೆಂದು ವರದಿಯಾಗಿದೆ. ಇದರಿಂದಾಗಿ ಕೆಲವೊಂದು ಸೆಟ್ಟಿಂಗ್ಗಳಿಂದಲೇ ಫೋನ್ ಹ್ಯಾಕ್ (Phone Hack) ಮಾಡಲು ನೀವೇ ದಾರಿ ಮಾಡಿಕೊಡುವಂತೆ ಆಗುತ್ತದೆ. ಆದ್ದರಿಂದ ಯಾವ ಫೀಚರ್ಗಳು ಮತ್ತು ಹೇಗೆ ಸುರಕ್ಷಿತವಾಗಿಸುವುದು ಎನ್ನುವುದನ್ನು ಈ ಕೆಳಗೆ ತಿಳಿಯಿರಿ.
Also Read: Reliance Jio ಸದ್ದಿಲ್ಲದೇ 3 ತಿಂಗಳ ಹೊಸ ಜಿಯೋ ಏರ್‌ಫೈಬರ್ ಪ್ಲಾನ್ ಉಚಿತ OTT ಅಪ್ಲಿಕೇಶನ್‌ನೊಂದಿಗೆ ಪರಿಚಯಿಸಿದೆ
ಮೊದಲು ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಅನ್ನು ತೆರೆಯಿರಿ. ಇದರ ನಂತರ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. ಇದರ ನಂತರ ಸೆಟ್ಟಿಂಗ್‌ಗಳಿಗೆ ಹೋಗಿ. ಇಲ್ಲಿ ನೀವು ಗೌಪ್ಯತೆ ಸೆಟ್ಟಿಂಗ್‌ಗಳ ಆಯ್ಕೆಯನ್ನು ನೋಡುತ್ತೀರಿ ಅದರ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಸುರಕ್ಷಿತ ಬ್ರೌಸಿಂಗ್ ಆಯ್ಕೆಯನ್ನು ನೋಡುತ್ತೀರಿ ಅದರ ಮೇಲೆ ಕ್ಲಿಕ್ ಮಾಡಿ. ಇದರ ನಂತರ ನೀವು ಮೂರು ಆಯ್ಕೆಗಳನ್ನು ನೋಡುತ್ತೀರಿ. ಇದರಲ್ಲಿ Enhanced Protection, Standard Protection ಮತ್ತು No protection (Not Recommended) ಆಯ್ಕೆಗಳು ಕಾಣಿಸುತ್ತದೆ. ಇದರಲ್ಲಿ ಸ್ಟ್ಯಾಂಡರ್ಡ್ ಬ್ರೌಸಿಂಗ್ ಅಥವಾ ನೋ ಪ್ರೊಟೆಕ್ಷನ್ ಬ್ರೌಸಿಂಗ್ ಆಯ್ಕೆ ಆನ್ ಆಗಿದ್ದರೆ ನಿಮ್ಮ ಮೊಬೈಲ್ ಯಾವುದೇ ಸಮಯದಲ್ಲಿ ಹ್ಯಾಕರ್‌ಗಳ ಗುರಿಯಾಗಬಹುದು. ತಕ್ಷಣ ಇದನ್ನು Enhanced Protection ಆಯ್ಕೆಗೆ ಬದಲಾಯಿಸಿಕೊಳ್ಳಿ.
ಇದನ್ನು ಇನ್ನು ಸರಳವಾಗಿ ನಿಮಗೆ ತಿಳಿಸಬೇಕಂದರೆ ಮೊದಲಿಗೆ ನೀವು ನಿಮ್ಮ ಫೋನ್ ಒಳಗೆ ಗೂಗಲ್ ಕ್ರೋಮ್ ಬ್ರೌಸರ್ ತೆರೆಯಿರಿ ಇದರ ನಂತರ ಕೊನೆಯಲ್ಲಿರುವ ⋮ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಈಗ ಈ ಪಟ್ಟಿಯಲ್ಲಿ ಕೆಳಗೆ Settings ಆಯ್ಕೆಯನ್ನು ಕಾಣಲು ಸಾಧ್ಯವಾಗುತ್ತದೆ. ಅದನ್ನು ಆಯ್ಕೆ ಮಾಡಿದ ನಂತರ Privacy and Security ಆಯ್ಕೆಯನ್ನು ಆರಿಸಿ ಕೊಂಚ ಕೆಳಗೆ ಸ್ಕ್ರೋಲ್ ಮಾಡಿದರೆ ನಿಮಗೆ Security ವಿಭಾಗದಲ್ಲಿ Safe Browsing ಎಂಬ ಆಯ್ಕೆಯನ್ನು ಕಾಣಬಹುದು ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ Enhanced Protection, Standard Protection, No protection (Not Recommeded) ಎಂಬ ಆಯ್ಕೆಗಳು ನಿಮ್ಮ ಮುಂದೆ ಬರುತ್ತದೆ. ಇದನ್ನು ಮೊದಲ ಆಯ್ಕೆಯನ್ನು Enhanced Protection ಆರಿಸಿಕೊಳ್ಳಿ ಅಷ್ಟೇ.
ಹ್ಯಾಕಿಂಗ್ ಅನ್ನು ತಪ್ಪಿಸಲು ನೀವು ವರ್ಧಿತ ಸುರಕ್ಷಿತ ಬ್ರೌಸಿಂಗ್ ಆಯ್ಕೆಯನ್ನು ಆನ್ ಮಾಡಬೇಕು. 2020 ರಲ್ಲಿ ಮೊದಲ ಬಾರಿಗೆ Google Chrome ಬ್ರೌಸರ್‌ಗಾಗಿ ಈ ಸುರಕ್ಷಿತ ಬ್ರೌಸಿಂಗ್ (Enhanced Protection) ಫೀಚರ್ ಅನ್ನು ಪ್ರಾರಂಭಿಸಲಾಗಿತ್ತು ಇದರಿಂದ ವೆಬ್ ಬ್ರೌಸ್ ಮಾಡುವಾಗ ಹೆಚ್ಚು ಸುಧಾರಿತ ಮಟ್ಟದ ಭದ್ರತೆಯ ಅಗತ್ಯವಿರುವ ಅಥವಾ ಬಯಸುವ ಬಳಕೆದಾರರಿಗೆ ಈ ವೈಶಿಷ್ಟ್ಯವು ಒಂದು ಆಯ್ಕೆಯಾಗಿದೆ. Google ಪ್ರಕಾರ ವರ್ಧಿತ ಸುರಕ್ಷಿತ ಬ್ರೌಸಿಂಗ್ ಅನ್ನು ಆನ್ ಮಾಡುವುದು ಅಪಾಯಕಾರಿ ವೆಬ್‌ಸೈಟ್‌ಗಳು ಮತ್ತು ಡೌನ್‌ಲೋಡ್‌ಗಳಿಂದ ರಕ್ಷಣೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. Google ಸುರಕ್ಷಿತ ಬ್ರೌಸಿಂಗ್‌ನೊಂದಿಗೆ ನೈಜ-ಸಮಯದ ಡೇಟಾವನ್ನು ಹಂಚಿಕೊಳ್ಳುವ ಮೂಲಕ ಅಪಾಯಕಾರಿ ಸೈಟ್‌ಗಳಿಂದ Chrome ನಿಮ್ಮನ್ನು ಪೂರ್ವಭಾವಿಯಾಗಿ ರಕ್ಷಿಸುತ್ತದೆ.