Truecaller in WhatsApp: ನಕಲಿ ಕರೆಗಳು ಮತ್ತು ಮೆಸೇಜ್ಗಳು ದೇಶದಾದ್ಯಂತ ಹೆಚ್ಚು ಪ್ರಚಲಿತವಾಗುತ್ತಿವೆ. ಇದನ್ನು ತಡೆಯುವ ಪ್ರಯತ್ನದಲ್ಲಿ ವಾಟ್ಸಾಪ್ ಮತ್ತು ಟ್ರೂಕಾಲರ್ ಪರಸ್ಪರ ಕೈ ಜೋಡಿಸಿವೆ. ಟ್ರೂಕಾಲರ್‌ನಿಂದ ಕರೆ ಮಾಡುವವರ ಐಡೆಂಟಿಫಿಕೇಶನ್ ಸೇವೆಯು ಶೀಘ್ರದಲ್ಲೇ WhatsApp ಅಪ್ಲಿಕೇಶನ್‌ಗೆ ಲಭ್ಯವಾಗಲಿದೆ. ಈ ಸೇವೆಯ ಮೂಲಕ ಇಂಟರ್ನೆಟ್‌ನಿಂದ ಮಾಡುವ ನಕಲಿ ಕರೆಗಳು ಮತ್ತು ಮೆಸೇಜ್ಗಳನ್ನು ಗುರುತಿಸಬಹುದು. ಟ್ರೂಕಾಲರ್‌ನ CEO ಈ ಮಾಹಿತಿಯನ್ನು ನೀಡಿದ್ದು ಈ ಸೇವೆಯು ಪ್ರಸ್ತುತ ಬೀಟಾ ಪರೀಕ್ಷೆಯಲ್ಲಿದೆ. WhatsApp ಮತ್ತು Truecaller ಯೋಜನೆ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಜನಪ್ರಿಯ ಕಾಲರ್ ಐಡಿ ಸೇವೆಯನ್ನು ನೀಡುತ್ತಿರುವ Truecaller ಅಪ್ಲಿಕೇಶನ್ CEO ಅಲನ್ ಮಮೆಡಿ ರವರು ಎಲ್ಲಾ ಬಳಕೆದಾರರು ಮೇ ಅಂತ್ಯದ ವೇಳೆಗೆ ಈ ಸೇವೆಯನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಕರೆಗಳು ಮತ್ತು ಮೆಸೇಜ್ಗಳಿಂದ ಆನ್‌ಲೈನ್ ವಂಚನೆಯ ಹಲವಾರು ಘಟನೆಗಳು ಕಾಣಿಸಿಕೊಂಡಿವೆ. ನಿಮಗೊತ್ತಾ 2021 ರ ವರದಿಯ ಪ್ರಕಾರ ಭಾರತದ ಪ್ರತಿಯೊಬ್ಬ ಬಳಕೆದಾರರು ಪ್ರತಿ ತಿಂಗಳು ವಾಟ್ಸಾಪ್‌ನಲ್ಲಿ ಕನಿಷ್ಠ 17 ನಕಲಿ ಕರೆಗಳನ್ನು ಸ್ವೀಕರಿಸುತ್ತಾರೆ.
ಇಂಟರ್ನೆಟ್‌ನಿಂದ ಬರುವ ಫೋನ್ ಕರೆಗಳನ್ನು ನಿಷೇಧಿಸುವಂತೆ ಟೆಲಿಕಾಂ ಕಂಪನಿಗಳಿಗೆ ಕೇಳುವುದರ ಜೊತೆಗೆ ಟೆಲಿಕಾಂ ನಿಯಂತ್ರಕ TRAI ಆಫ್‌ಲೈನ್‌ನಲ್ಲಿ ಬರುವ ಫೋನ್ ಕರೆಗಳು ಮತ್ತು SMS ಗಳನ್ನು ತಡೆಯಲು ಈಗಾಗಲೇ ಟೆಲಿಕಾಂ ಕಂಪನಿಗಳಿಗೆ ವಿನಂತಿಸಿದೆ. ಪ್ರಮುಖ ಎರಡು ಟೆಲಿಕಾಂ ಪೂರೈಕೆದಾರರಾದ ಏರ್‌ಟೆಲ್ ಮತ್ತು ಜಿಯೋ ಇದಕ್ಕೆ ಪ್ರತಿಕ್ರಿಯೆಯಾಗಿ AI ಆಧಾರಿತ ಸೇವೆಗಳನ್ನು ನೀಡಲು ಪ್ರಾರಂಭಿಸಿವೆ. ಈ ಎರಡೂ ಟೆಲಿಕಾಂ ಕಂಪನಿಗಳು ಸುಮಾರು 70% ಬಳಕೆದಾರರನ್ನು ಹೊಂದಿವೆ. ಇದರ ಜೊತೆಗೆ AI ಆಧಾರಿತ ಸಿಸ್ಟಮ್ ಅನ್ನು Vi ಸಹ ಪರೀಕ್ಷಿಸುತ್ತಿದೆ. ಎಲ್ಲಾ ಟೆಲಿಕಾಂ ಕಂಪನಿಗಳು ಮುಂಬರುವ ತಿಂಗಳುಗಳಲ್ಲಿ ಇಂಟರ್ನೆಟ್‌ನಿಂದ ಬರುವ ನಕಲಿ ಕರೆಗಳು ಮತ್ತು ಮೆಸೇಜ್ಗಳನ್ನು ನಿಲ್ಲಿಸುತ್ತವೆ.
ಭಾರತದಲ್ಲಿ WhatsApp ಮೂಲಕ ಸ್ಪ್ಯಾಮ್ ಕರೆಗಳ ಸಂಖ್ಯೆಯಲ್ಲಿ ಅತಿ ಹೆಚ್ಚಿನ ಬೆಳವಣಿಗೆಯನ್ನು ನಾವು ಕಂಡಿದ್ದೇವೆ ಎಂದು Truecaller CEO ಮಮೆಡಿ ಹೇಳಿದರು. ಹೀಗೆ ಬರುವ ಇಂಟರ್ನೆಟ್ ನಕಲಿ ಕರೆಗಳನ್ನು ಕಾನೂನುಬಾಹಿರಗೊಳಿಸಬೇಕು. ಭಾರತದಲ್ಲಿ WhatsApp ಅತ್ಯಂತ ಜನಪ್ರಿಯ ಮೆಸೇಜಿಂಗ್ ಸೇವೆಯಾಗಿದೆ. ಪ್ರಸ್ತುತ ನಕಲಿ ಕರೆಗಳಗನ್ನು ತಡೆಯುವುದು ತೀರಾ ಅಗತ್ಯವಿದೆ. ಇದರ ಬಗ್ಗೆ ಮತ್ತೊಂದು ಲೇಖನದಲ್ಲಿ ವಾಟ್ಸಾಪ್‌ನಲ್ಲಿ ನಿಮಗೆ ಈ ನಂಬರ್‌ಗಳಿಂದ ಕರೆ ಬಂದರೆ ಹುಷಾರ್! ಕೆಲಸ ನೀಡುವ ನೆಪದಲ್ಲಿ ವಂಚನೆ! ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿದೆ.