ಕರೆ ಮತ್ತು ಮೆಸೇಜ್ ಮೂಲಕದ ವಂಚನೆಗಳಿಗೆ ಬ್ರೇಕ್ ಹಾಕಲು TRAI ಹೊಸ ನಿಯಮ ಜಾರಿ
ಈ ಹೊಸ ಬದಲಾವಣೆಗಳು ದೇಶದಲ್ಲಿ 1ನೇ ನವೆಂಬರ್ 2024 ರಿಂದ ಅನ್ವಯವಾಗಲಿದೆ.
ಇದು Jio, Airtel, Vi ಅಥವಾ BSNL ಗ್ರಾಹಕರು ನೀವಾಗಿದ್ದರೆ ಇದರ ಪ್ರಯೋಜನ ಪಡೆಯಬಹುದು.
TRAI Update: ಭಾರತದಲ್ಲಿ ಪ್ರಸ್ತುತ ಹೆಚ್ಚಾಗಿ ನಡೆಯುತ್ತಿರುವ ಕರೆ ಮತ್ತು ಮೆಸೇಜ್ ಮೂಲಕದ ವಂಚನೆಗಳಿಗೆ ಬ್ರೇಕ್ ಹಾಕಲು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ಹೊಸ ಬದಲಾವಣೆಗಳು ದೇಶದಲ್ಲಿ 1ನೇ ನವೆಂಬರ್ 2024 ರಿಂದ ದೇಶಾದ್ಯಂತ ಅನ್ವಯವಾಗಲಿದೆ. ಅಲ್ಲದೆ ನೀವು Jio, Airtel, Vi ಅಥವಾ BSNL ಗ್ರಾಹಕರು ನೀವಾಗಿದ್ದರೆ ಇದರ ಪ್ರಯೋಜನಗಳನ್ನು ಪಡೆಯಬಹುದು. ಯಾಕೆಂದರೆ ಈ ಹೊಸ ನಿಯಮದಲ್ಲಿ ನಿಮ್ಮ ಮೊಬೈಲ್ ಫೋನ್‌ಗಳಲ್ಲಿ ಸ್ವೀಕರಿಸಿದ ಮೆಸೇಜ್ಗಳ ಮೇಲ್ವಿಚಾರಣೆಯನ್ನು ಹೆಚ್ಚಿಸುವ ಮೆಸೇಜ್ ಅನ್ನು ಪತ್ತೆಹಚ್ಚಲು ಎಲ್ಲಾ ಟೆಲಿಕಾಂ ಆಪರೇಟರ್‌ಗಳಿಗೆ ಅವಕಾಶವನ್ನು ನೀಡುತ್ತಿದೆ.
ಮೆಸೇಜ್ ಪತ್ತೆಹಚ್ಚುವಿಕೆಯ ಅರ್ಥವೇನು?
ಇನ್ನೂ ಮೂರು ದಿನಗಳ ನಂತರ ಅಂದ್ರೆ 1ನೇ ನವೆಂಬರ್ 2024 ರಿಂದ ನಿಮ್ಮ ಫೋನ್‌ಗೆ ಬರುವ ಪ್ರತಿಯೊಂದು ಮೆಸೇಜ್ಗಳನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ನಿಮಗೆ ಅರ್ಥವಾಗುವ ಭಾಷೆಯಲ್ಲಿ ಹೇಳುವುದಾದರೆ ವಂಚನೆಯ ಕರೆ ತವ ಮೆಸೇಜ್ಗಳನ್ನು ನಿರ್ಬಂಧಿಸಲು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಇದರ ಮುಖ್ಯ ಕಾರಣವೆಂದರೆ ಅವನ್ನು ಗುರುತಿಸಿ ಬಳಕೆದಾರರಿಗೆ ಹೆಚ್ಚರಿಸಲು ಸುಲಭವಾಗುತ್ತದೆ. ಬಳಕೆದಾರರು ಬಯಸಿದಲ್ಲಿ ಯಾವುದೇ ಅನಗತ್ಯ ಮೆಸೇಜ್ ಅಥವಾ ಕರೆಗಳನ್ನು ನೇರವಾಗಿ ನಿರ್ಬಂಧಿಸುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ.
ಇದರ ಬಗ್ಗೆ ಈಗಾಗಲೇ ಆಗಸ್ಟ್‌ನಲ್ಲಿ ತಿಳಿಸಲಾಗಿದ್ದು ಟೆಲಿಮಾರ್ಕೆಟಿಂಗ್ ಮತ್ತು ಪ್ರಚಾರಗಳಿಗೆ ಸಂಬಂಧಿಸಿದ ಬ್ಯಾಂಕ್‌ಗಳು, ಇ-ಕಾಮರ್ಸ್ ಸೈಟ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಮೆಸೇಜ್ಗಳನ್ನು ನಿರ್ಬಂಧಿಸಲು ಟೆಲಿಕಾಂ ಕಂಪನಿಗಳಿಗೆ TRAI ಸೂಚನೆ ನೀಡಿತು. ಟೆಲಿಮಾರ್ಕೆಟಿಂಗ್ ಮೆಸೇಜ್ಗಳು ಪ್ರಮಾಣಿತ ಸ್ವರೂಪವನ್ನು ಅನುಸರಿಸಬೇಕು ಎಂದು TRAI ಒತ್ತಿಹೇಳಿದೆ. ಇದು ಬಳಕೆದಾರರಿಗೆ ಪ್ರಚಾರದ ಸಂದೇಶಗಳು ಮತ್ತು ಕರೆಗಳನ್ನು ಗುರುತಿಸಲು ಸಹಾಯ ಮಾಡುವುದರೊಂದಿಗೆ ವಂಚನೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
Also Read: Upcoming Phones: ಮುಂಬರಲಿರುವ ಈ OnePlus 13, iQOO 13, Xiaomi 15 ಮತ್ತು Honor Magic 7 5G ಫೋನ್‌ಗಳು!
ಆನ್‌ಲೈನ್ ವಂಚನೆಗಳಿಗೆ TRAI ಬ್ರೇಕ್:
ಈ ಉಪಕ್ರಮವು ಭಾರತದಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ವಂಚನೆಯನ್ನು ನಿಭಾಯಿಸುವ ಗುರಿಯನ್ನು ಹೊಂದಿದ್ದರೂ ಪ್ರಮುಖ ಬ್ಯಾಂಕಿಂಗ್ ಸಂದೇಶಗಳು ಮತ್ತು OTP ಗಳನ್ನು ಸ್ವೀಕರಿಸುವಲ್ಲಿ ಸಂಭಾವ್ಯ ವಿಳಂಬಗಳ ಬಗ್ಗೆ ಕಳವಳಗಳಿವೆ. ಇದು ಆನ್‌ಲೈನ್ ಪಾವತಿಗಳನ್ನು ಅಡ್ಡಿಪಡಿಸಬಹುದು. ಟೆಲಿಕಾಂ ಆಪರೇಟರ್‌ಗಳು ಗಡುವಿನೊಳಗೆ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ತಮ್ಮ ಸಿದ್ಧತೆಯನ್ನು ದೃಢಪಡಿಸಿದ್ದಾರೆ. ಪ್ರಸ್ತುತ ವರದಿಗಳ ಪ್ರಕಾರ, ಭಾರತದಲ್ಲಿ ಪ್ರತಿದಿನ ಸುಮಾರು 1.5 ರಿಂದ 1.7 ಬಿಲಿಯನ್ ವಾಣಿಜ್ಯ ಸಂದೇಶಗಳನ್ನು ಕಳುಹಿಸಲಾಗುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile