ನಿಮ್ಮ ಇಷ್ಟದ ಚಾನಲ್ಗಳನ್ನು ಹರಿಸಿಕೊಳ್ಳಲು ಬಳಕೆದಾರರಿಗೆ ಟ್ರೈಯ್ 31ನೇ ಜನವರಿಯವರೆಗೆ ಸಮಯ ನೀಡಿದೆ

Updated on 31-Dec-2018
HIGHLIGHTS

100 ಕ್ಕಿಂತ ಹೆಚ್ಚು ಚಾನಲ್ಗಳನ್ನು ನೋಡಲು ಬಯಸಿದರೆ ನೀವು ಇತರ 25 ಚಾನಲ್ಗಳಿಗೆ 20 ರೂಪಾಯಿಗಳನ್ನು ಹೆಚ್ಚು ನೀಡಬೇಕಾಗಿದೆ.

ಭಾರತದಲ್ಲಿ TRAI ಕೇಬಲ್ ಟಿವಿಗಳಿಗಾಗಿ ಹೊಸ ರೇಟ್ ಅನುಷ್ಠಾನಕ್ಕೆ ಆದೇಶ ನೀಡಿದ್ದು ಡಿಸೆಂಬರ್ 29 ರಿಂದ ಎಲ್ಲಾ ಮಲ್ಟಿ ಸರ್ವಿಸ್ ಆಪರೇಟರ್ಸ್ (MSOs) ಮತ್ತು ಲೋಕಲ್ ಕೇಬಲ್ ಆಪರೇಟರ್ಸ್ (LCOs) ಗಳಲ್ಲಿ TRAI ಹೊಸ ಸುಂಕವನ್ನು ಅಳವಡಿಸಬೇಕೆಂದು ಹೇಳಲಾಗಿದೆ. ಆದರೆ ಈಗ ಟ್ರೈನ್ ಜನವರಿ 31 ರವರೆಗೆ ಈ ಗಡುವು ವಿಸ್ತರಿಸಿದೆ. ಈಗ ಬಳಕೆದಾರರು ತಮ್ಮ ನೆಚ್ಚಿನ ಚಾನಲ್ಗಳನ್ನು ಜನವರಿ 31 ರಿಂದ ಆಯ್ಕೆ ಮಾಡಬಹುದು

ಟ್ರಾಯ್ ಕಾರ್ಯದರ್ಶಿ S.K ಗುಪ್ತಾ ಅವರು "TRAI ಎಲ್ಲಾ ಕೇಬಲ್ ಟಿವಿ ಸೇವಾ ಪೂರೈಕೆದಾರರೊಂದಿಗೆ ಮಾತನಾಡುತ್ತಿದ್ದು ಇದರಲ್ಲಿ ಎಲ್ಲರೂ ಹೊಸ ನಿಯಮವನ್ನು ಅಳವಡಿಸಿಕೊಳ್ಳಲು ಒಪ್ಪಿದ್ದಾರೆ. ಆದರೆ ಸೇವಾ ಪೂರೈಕೆದಾರರು ತಮ್ಮದೇ ಆದ ಪ್ರಕಾರ ಚಾನಲ್ಗಳನ್ನು ಆಯ್ಕೆ ಮಾಡಲು ಸ್ವಲ್ಪ ಸಮಯವನ್ನು ನೀಡಲು ಬಳಕೆದಾರರಿಗೆ ನೀಡಲಾಗಿದೆ" ಎಂದು ತಿಳಿಸಿದ್ದಾರೆ.

ಇದರ ಪರಿಣಾಮವಾಗಿ 31ನೇ ಜನವರಿ ತನಕ ಈ ಅವಧಿಯನ್ನು ವಿಸ್ತರಿಸಲಾಗಿದೆ. TRAI ಟಿವಿ ಗೈಡ್ನಲ್ಲಿ ಪ್ರತಿ ಚಾನಲ್ಗೆ ಅದರ MRP ಬರೆಯಲಾಗುತ್ತದೆ. ಇದರಿಂದ ಯಾವುದೇ ವಿತರಕ ಈ ಬೆಲೆಗಿಂತ ಯಾವುದೇ ವಿತರಕ ಪ್ರಸಾರವನ್ನು ಜನಸಾಮಾನ್ಯರು ತೆಗೆದುಕೊಳ್ಳಬಹುದು. ಇದರ ಅಡಿಯಲ್ಲಿ ಬಳಕೆದಾರರು 100 ಚಾನಲ್ಗಳಿಗೆ ತಿಂಗಳಿಗೆ ಗರಿಷ್ಠ 130 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. 

ಅದೇ ಸಮಯದಲ್ಲಿ ನೀವು 100 ಕ್ಕಿಂತ ಹೆಚ್ಚು ಚಾನಲ್ಗಳನ್ನು ನೋಡಲು ಬಯಸಿದರೆ ನೀವು ಇತರ 25 ಚಾನಲ್ಗಳಿಗೆ 20 ರೂಪಾಯಿಗಳನ್ನು ಹೆಚ್ಚು ನೀಡಬೇಕಾಗಿದೆ. ನೀವು ವಿಭಿನ್ನವಾಗಿ ಪಾವತಿಸಬೇಕಾದ ಚಾನಲ್ ಅನ್ನು ಆರಿಸಿದರೆ ಆ ಮೊತ್ತವನ್ನು ನಿಮ್ಮ ಮಾಸಿಕ ಪ್ಯಾಕ್ಗೆ ಸೇರಿಸಲಾಗುತ್ತದೆ. ಅಂದ್ರೆ 1 ಮತ್ತು 19 ರೂಪಾಯಿಗಳ ನಡುವಿನ ಚಾನಲ್ಗಳ ಬೆಲೆಯನ್ನು ಇಟ್ಟುಕೊಂಡಿದೆ. 

 

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :