ಟೆಲಿಕಾಂ ಕಂಪನಿಗಳು ಈ ಬಾಕಿ ದಂಡ ಪಾವತಿಸದಿದ್ದರೆ ಬ್ಯಾಂಕ್ ಗ್ಯಾರಂಟಿಗಳನ್ನು Encash ಮಾಡುವಂತೆ TRAI ಘೋಷಣೆ!

ಟೆಲಿಕಾಂ ಕಂಪನಿಗಳು ಈ ಬಾಕಿ ದಂಡ ಪಾವತಿಸದಿದ್ದರೆ ಬ್ಯಾಂಕ್ ಗ್ಯಾರಂಟಿಗಳನ್ನು Encash ಮಾಡುವಂತೆ TRAI ಘೋಷಣೆ!
HIGHLIGHTS

DoT ಕಳೆದ ಹಲವಾರು ವರ್ಷಗಳಿಂದ ಬಾಕಿ ಇರುವ ದಂಡವನ್ನು ಪಾವತಿಸುವುದರ ಬಗ್ಗೆ ಮಾತುಕತೆ ನಡೆಸಿ ದೊಡ್ಡ ನಿರ್ಧಾರ ತೆಗೆದುಕೊಂಡಿದೆ.

ಟೆಲಿಕಾಂ ಕಂಪನಿಗಳು ಜನ ಸಾಮಾನ್ಯರಿಗೆ ಬರುವ ವಂಚಕರ ಕರೆಗಳನ್ನು (Scam Call) ನಿಲ್ಲಿಸುವಂತೆ ನಿಯಮ ತಂದಿದೆ.

ದಂಡ ನೀಡಲು ವಿಫಲರಾದ ಟೆಲಿಕಾಂ ಆಪರೇಟರ್‌ ಕಂಪನಿಗಳ ಬ್ಯಾಂಕ್ ಗ್ಯಾರಂಟಿಗಳನ್ನು (Encash) ನೀಡುವಂತೆ ಹೇಳಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ದೂರಸಂಪರ್ಕ ಇಲಾಖೆಗೆ (DoT) ಕಳೆದ ಹಲವಾರು ವರ್ಷಗಳಿಂದ ಬಾಕಿ ಇರುವ ದಂಡವನ್ನು ಪಾವತಿಸುವಂತೆ ಹೇಳಿಕೆ. ಇದಕ್ಕೆ ಕಾರಣವೆಂದರೆ ದೇಶದ ಟೆಲಿಕಾಂ ಕಂಪನಿಗಳು ಜನ ಸಾಮಾನ್ಯರಿಗೆ ಬರುವ ವಂಚಕರ ಕರೆಗಳನ್ನು (Scam Call) ನಿಲ್ಲಿಸುವಂತೆ ನಿಯಮವೊಂದನ್ನು ನೀಡಿತ್ತು ಇದರಡಿಯಲ್ಲಿ ಕೆಲವೊಂದು ಟೆಲಿಕಾಂ ಕಂಪನಿಗಳು ವಿಫಲವಾದ ಕಾರಣಕ್ಕಾಗಿ ಸುಮಾರು 8 ರಿಂದ 9 ವರ್ಷಗಳಿಂದ ಹಾಕಿದ ದಂಡವನ್ನು ಪಾವತಿಸುವಂತೆ ಹಲವಾರು ಬಾರಿ ಕೇಳಿಕೊಂಡಿದ್ದ ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಷನ್ ಈಗ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (TRAI) ಪತ್ರ ಬರೆದಿದೆ.

ಇದನ್ನೂ ಓದಿ: BSNL Live TV: ಬಿಎಸ್ಎನ್ಎಲ್ ಬಳಕೆದಾರರಿಗೆ ಹೊಸ ಲೈವ್ ಟಿವಿ ಅಪ್ಲಿಕೇಶನ್ ಪರಿಚಯಿಸಲು ಸಜ್ಜಾಗಿದೆ!

ಬರೋಬ್ಬರಿ 115 ಕೋಟಿ ರೂಪಾಯಿಗಳ ಬಾಕಿ

ಹಿನ್ನಲೆಯಲ್ಲಿ ಈವರೆಗೆ ದಂಡ ನೀಡಲು ವಿಫಲರಾದ ಟೆಲಿಕಾಂ ಆಪರೇಟರ್‌ ಕಂಪನಿಗಳ ಬ್ಯಾಂಕ್ ಗ್ಯಾರಂಟಿಗಳನ್ನು (Encash) ಪೂರ್ವ ಅನುಮೋದನೆ ನೀಡುವಂತೆ TRAI ಹೇಳಿದೆ. ಟ್ರಾಯ್ ಕಾಯಿದೆಯಡಿ ನಿಯಮಗಳನ್ನು ಪಾಲಿಸದ ಟೆಲಿಕಾಂಗಳ ಪರವಾನಗಿಯನ್ನು ರದ್ದುಗೊಳಿಸುವ ಅಧಿಕಾರ ನಿಯಂತ್ರಕರಿಗೆ ಇದೆ ಎಂದು ಹಿರಿಯ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ. ಆದಾಗ್ಯೂ ಅಂತಹ ಹಂತವು ತುಂಬಾ ತೀವ್ರವಾಗಿರುತ್ತದೆ ಮತ್ತು ಬದಲಾಗಿ ಬ್ಯಾಂಕ್ ಗ್ಯಾರಂಟಿಗಳಿಂದ 115 ಕೋಟಿ ರೂಪಾಯಿಗಳ ಬಾಕಿಯನ್ನು ಮರುಪಡೆಯಲು ಪ್ರಸ್ತಾಪಿಸಲಾಗಿದೆ.

TRAI decide to use bank guarantee to recover Spam Call fines
TRAI decide to use bank guarantee to recover Spam Call fines

ಇದರ ಬಗ್ಗೆ ಮಾತನಾಡಿರುವ TRAI ಇದು ಸ್ವತಃ ಅಭೂತಪೂರ್ವ ಕ್ರಮವಾಗಿದೆ ಎಂದು ಅಧಿಕಾರಿಗಳು ಎಕನಾಮಿಕ್ ಟೈಮ್‌ಗೆ ತಿಳಿಸಿದ್ದಾರೆ. ವರದಿಯ ಪ್ರಕಾರ ರಾಜ್ಯ ನಡೆಸುತ್ತಿರುವ BSNL ಮತ್ತು MTNL ಕಳೆದ 8-10 ವರ್ಷಗಳಲ್ಲಿ ಸುಮಾರು 50 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿವೆ. ನಂತರ ಭಾರ್ತಿ ಏರ್‌ಟೆಲ್ (Airtel), ವೊಡಾಫೋನ್ ಐಡಿಯಾ (Vodafone Idea) ಮತ್ತು ರಿಲಯನ್ಸ್ ಜಿಯೋ (Reliance Jio) ಇವೆ. DoT ಹಲವಾರು ಬಾರಿ ಕಳಿಹಿಸಿದ ಪುನರಾವರ್ತಿತ ಜ್ಞಾಪನೆಗಳಿಗೆ ಉತ್ತರಿಸದ ನಂತರ ಈ ಬೆಳವಣಿಗೆಯಾಗಿದೆ ಎಂದು ಪತ್ರಿಕೆಯೊಂದಕ್ಕೆ ಹೇಳಿದೆ.

ಹತ್ತಾರು ವಿಭಾಗ ಆನ್‌ಲೈನ್ ವಂಚನೆಗಳ ಸಮಸ್ಯೆಯ ವಿರುದ್ಧ ಹೋರಾಡತ್ತಿವೆ

ತೊಂದರೆಯ ಕರೆಗಳು ಮತ್ತು ಆನ್‌ಲೈನ್ ವಂಚನೆಗಳ ಸಮಸ್ಯೆಯ ವಿರುದ್ಧ ಹೋರಾಡಲು ಹಲವಾರು ಸರ್ಕಾರಿ ಸಂಸ್ಥೆಗಳು ಕೈಜೋಡಿಸುತ್ತಿವೆ. ಟ್ರಾಯ್, ಸೆಬಿ, ಆರ್‌ಬಿಐ, ಗೃಹ ಸಚಿವಾಲಯ ಮತ್ತು ದೂರಸಂಪರ್ಕ ಇಲಾಖೆ ಸೇರಿದಂತೆ ಹಲವಾರು ಉನ್ನತ ನಿಯಂತ್ರಕರು ಮತ್ತು ಸಚಿವಾಲಯಗಳು ಸಮಸ್ಯೆಯನ್ನು ಪರಿಹರಿಸಲು ಸಹಕರಿಸಿವೆ. ಸರ್ಕಾರ ಮತ್ತು ಟ್ರಾಯ್‌ನ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ಟೆಲಿಕಾಂ ವಾಹಕಗಳು ಆಯ್ದ ಸ್ಥಳಗಳಲ್ಲಿ ಕಾಲರ್ ಐಡಿ ಸೇವಾ ಪ್ರಯೋಗಗಳನ್ನು ಪ್ರಾರಂಭಿಸಿವೆ ಎಂದು ವರದಿಯಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo