ಬರೋಬ್ಬರಿ 1 ಕೋಟಿಗೂ ಅಧಿಕ ಮೊಬೈಲ್ ನಂಬರ್‌ಗಳನ್ನು ಬ್ಲಾಕ್ ಮಾಡಿರುವ TRAI ಮತ್ತು DoT! ಕಾರಣವೇನು?

Updated on 12-Sep-2024
HIGHLIGHTS

TRAI ಮತ್ತು DoT ಸಂಚಾರ್ ಸಾಥಿ (Sanchar Saathi) ಪೋರ್ಟಲ್ ಅಡಿಯಲ್ಲಿ ಸುಮಾರು 1 ಕೋಟಿಗೂ ಅಧಿಕ ಮೊಬೈಲ್ ನಂಬರ್‌ಗಳನ್ನು ಬ್ಲಾಕ್ ಮಾಡಿವೆ

ಒಂದು ವೇಳೆ ನಿಮ್ಮ ಅಥವಾ ನಿಮಗೆ ತಿಳಿದವರ ಮೊಬೈಲ್ ನಂಬರ್ ಬ್ಲಾಕ್ ಅಥವಾ ಇದ್ದಕ್ಕಿದ್ದಂತೆ ಬಂದ್ ಆಗಿದ್ದರೆ ಪರಿಶೀಲಿಸಿಕೊಳ್ಳಿ.

ಸುಮಾರು 3.5 ಲಕ್ಷ ಪರಿಶೀಲಿಸದ SMS ಹೆಡರ್‌ಗಳು ಮತ್ತು 12 ಲಕ್ಷ ಕಂಟೆಂಟ್​ ಟೆಂಪ್ಲೇಟ್‌ಗಳನ್ನು ನಿರ್ಬಂಧಿಸಲಾಗಿದೆ.

ಭಾರತದಲ್ಲಿ ಸೈಬರ್ ವಂಚನೆಗಳ (Cyber Crime) ಮೊಬೈಲ್ ನಂಬರ್‌ಗಳ ವಿರುದ್ಧ TRAI ಮತ್ತು DoT ಈಗ ಭಾರಿ ಕಠಿಣ ಕ್ರಮ ಕೈಗೊಂಡಿದ್ದು ಭಾರತದ ಜನಪ್ರಿಯ ಸೈಟ್ ಸಂಚಾರ್ ಸಾಥಿ (Sanchar Saathi) ಪೋರ್ಟಲ್ ಅಡಿಯಲ್ಲಿ ಸುಮಾರು 1 ಕೋಟಿಗೂ ಅಧಿಕ ಮೊಬೈಲ್ ನಂಬರ್‌ಗಳನ್ನು ಬ್ಲಾಕ್ ಮಾಡಿವೆ. ನಾಗರಿಕರಿಗೆ ಅನುಮಾನಾಸ್ಪದ ಕರೆಗಳು ಮತ್ತು ಸಂದೇಶಗಳನ್ನು ವರದಿ ಮಾಡಲು ಅನುವು ಮಾಡಿಕೊಡುತ್ತದೆ.

ಒಂದು ವೇಳೆ ನಿಮ್ಮ ಅಥವಾ ನಿಮಗೆ ತಿಳಿದವರ ಮೊಬೈಲ್ ನಂಬರ್ ಬ್ಲಾಕ್ ಅಥವಾ ಇದ್ದಕ್ಕಿದ್ದಂತೆ ಬಂದ್ ಆಗಿದ್ದರೆ ಈ ಸುದ್ದಿ ದೂರಸಂಪರ್ಕ ವಲಯದಲ್ಲಿ ನಡೆಯುತ್ತಿರುವ ಭಾರಿ ವಂಚನೆಗಳನ್ನು ಸುಧಾರಿಸಲು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಮತ್ತು ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಶನ್ ಕೈಗೊಂಡಿರುವ ಕ್ರಮಗಳಾಗಿವೆ. ಸಂಚಾರ್ ಸಾಥಿ (Sanchar Saathi) ಪೋರ್ಟಲ್ ಸೈಬರ್ ವಂಚನೆಯ ವಿರುದ್ಧ ಹೋರಾಡಲು ರಚಿಸಲಾದ ನಾಗರಿಕ-ಕೇಂದ್ರಿತ ವೆಬ್ ಪೋರ್ಟಲ್ ಆಗಿದೆ.

Also Read: Lava Blaze 3 5G ಸ್ಮಾರ್ಟ್ಫೋನ್ 50MP AI ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲು ಸಜ್ಜಾಗಿದೆ!

1 ಕೋಟಿಗೂ ಅಧಿಕ ಮೊಬೈಲ್ ನಂಬರ್‌ ಬ್ಲಾಕ್:

ಸಂಚಾರ್ ಸಾಥಿ ಮೂಲಕ 1 ಕೋಟಿಗೂ ಅಧಿಕ ಫ್ರಾಡ್​ ನಂಬರ್​ಗಳ ಸಂಖ್ಯೆಗಳ ಸಂಪರ್ಕ ಕಡಿತಗೊಳಿಸಲಾಗಿದೆ” ಎಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ DoT ಪೋಸ್ಟ್ ಮಾಡಿದೆ. ಸ್ಪ್ಯಾಮ್ ಕರೆಗಳ ಬೆದರಿಕೆಯನ್ನು ತಡೆಯುವ ಪ್ರಯತ್ನದ ಸಂಬಂಧ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಸಹ ಫ್ರಾಡ್​ ಸಂಖ್ಯೆಗಳ ಸಂಪರ್ಕ ಕಡಿತಗೊಳಿಸಲು ಮತ್ತು ಯೂನಿಟ್​ಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಟೆಲಿಕಾಂ ಆಪರೇಟರ್‌ಗಳಿಗೆ ನಿರ್ದೇಶನ ನೀಡಿದೆ.

TRAI and DoT disconnect over 1 crore fraud mobile numbers in India

ಸಚಿವಾಲಯವು ನೆಟ್‌ವರ್ಕ್ ಲಭ್ಯತೆ, ಕರೆ ಡ್ರಾಪ್ ದರಗಳು ಮತ್ತು ಪ್ಯಾಕೆಟ್ ಡ್ರಾಪ್ ದರಗಳನ್ನು ಹೈಲೈಟ್ ಮಾಡಿದೆ. ಅವುಗಳನ್ನು ಸುಧಾರಿಸಲು ಸಾಧ್ಯ ಇರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇಲ್ಲಿಯವರೆಗೆ 1 ಕೋಟಿಗೂ ಹೆಚ್ಚು ಮೊಬೈಲ್ ಸಂಪರ್ಕಗಳನ್ನು ಮುಚ್ಚಲಾಗಿದೆ ಎಂದು ಸಚಿವಾಲಯ ಹೇಳಿದೆ.

TRAI ಮತ್ತು DoT ಈ ನಿರ್ಧಾರ

ದೂರಸಂಪರ್ಕ ಸೇವೆಯನ್ನು ಸುಧಾರಿಸಲು TRAI ಮತ್ತು DoT ಈ ನಿರ್ಧಾರವನ್ನು ತೆಗೆದುಕೊಂಡಿದೆ. ರೋಬೋ ಕರೆಗಳು ಮತ್ತು ಪ್ರಿ-ರೆಕಾರ್ಡ್ ಕರೆಗಳು ಸಹ ಇದರಲ್ಲಿ ಸೇರಿದ್ದಾವೆ. ಇತ್ತೀಚಿನ ದಿನಗಳಲ್ಲಿ ಸುಮಾರು ಮೂರೂವರೆ ಲಕ್ಷ ಸಂಖ್ಯೆಗಳು ಸ್ವಿಚ್ಡ್​ ಆಫ್ ಆಗಿವೆ. ಇದರಲ್ಲಿ 50 ಯೂನಿಟ್​ಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಸುಮಾರು 3.5 ಲಕ್ಷ ಪರಿಶೀಲಿಸದ SMS ಹೆಡರ್‌ಗಳು ಮತ್ತು 12 ಲಕ್ಷ ಕಂಟೆಂಟ್​ ಟೆಂಪ್ಲೇಟ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಸಂಚಾರ ಸಾಥಿ ಸಹಾಯದಿಂದ ಸುಮಾರು 2.27 ಲಕ್ಷ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ನಿರ್ಬಂಧಿಸಲಾಗಿದೆ.

TRAI and DoT disconnect over 1 crore fraud mobile numbers in India

ಇವರೆಲ್ಲರೂ ಸೈಬರ್ ಕ್ರೈಮ್ ಮತ್ತು ಹಣಕಾಸು ವಂಚನೆಯಲ್ಲಿ ಭಾಗಿಯಾಗಿದ್ದರು. ನೆಟ್‌ವರ್ಕ್ ಸುಧಾರಿಸಲು ಸಂವಹನ ಸಚಿವಾಲಯವು ನಿರಂತರ ಕೆಲಸ ಮಾಡುತ್ತಿದೆ. TRAI ನಿಂದ ನಿಯಂತ್ರಣವನ್ನು ಸಹ ಸುಧಾರಿಸಲಾಗಿದೆ. ಆದರೂ ಇದರ ನಂತರವೂ ನೆಟ್​ವರ್ಕ್​ನಲ್ಲಿ ಗುರುತಿಸುವಿಕೆಯನ್ನು ಇನ್ನೂ ಮಾಡಲಾಗುತ್ತಿದೆ. ಈ ನಿಬಂಧನೆಗಳನ್ನು 1ನೇ ಅಕ್ಟೋಬರ್ 2024 ರಿಂದ ಜಾರಿಗೊಳಿಸಲಾಗಿದೆ ಮತ್ತು 1ನೇ ಏಪ್ರಿಲ್ 2025 ರಿಂದ ಪ್ರತಿ ತಿಂಗಳು ಕಾರ್ಯಕ್ಷಮತೆ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :