TRAI ಮತ್ತು DoT ಸಂಚಾರ್ ಸಾಥಿ (Sanchar Saathi) ಪೋರ್ಟಲ್ ಅಡಿಯಲ್ಲಿ ಸುಮಾರು 1 ಕೋಟಿಗೂ ಅಧಿಕ ಮೊಬೈಲ್ ನಂಬರ್‌ಗಳನ್ನು ಬ್ಲಾಕ್ ಮಾಡಿವೆ
ಒಂದು ವೇಳೆ ನಿಮ್ಮ ಅಥವಾ ನಿಮಗೆ ತಿಳಿದವರ ಮೊಬೈಲ್ ನಂಬರ್ ಬ್ಲಾಕ್ ಅಥವಾ ಇದ್ದಕ್ಕಿದ್ದಂತೆ ಬಂದ್ ಆಗಿದ್ದರೆ ಪರಿಶೀಲಿಸಿಕೊಳ್ಳಿ.
ಸುಮಾರು 3.5 ಲಕ್ಷ ಪರಿಶೀಲಿಸದ SMS ಹೆಡರ್‌ಗಳು ಮತ್ತು 12 ಲಕ್ಷ ಕಂಟೆಂಟ್ ಟೆಂಪ್ಲೇಟ್‌ಗಳನ್ನು ನಿರ್ಬಂಧಿಸಲಾಗಿದೆ.
ಭಾರತದಲ್ಲಿ ಸೈಬರ್ ವಂಚನೆಗಳ (Cyber Crime) ಮೊಬೈಲ್ ನಂಬರ್‌ಗಳ ವಿರುದ್ಧ TRAI ಮತ್ತು DoT ಈಗ ಭಾರಿ ಕಠಿಣ ಕ್ರಮ ಕೈಗೊಂಡಿದ್ದು ಭಾರತದ ಜನಪ್ರಿಯ ಸೈಟ್ ಸಂಚಾರ್ ಸಾಥಿ (Sanchar Saathi) ಪೋರ್ಟಲ್ ಅಡಿಯಲ್ಲಿ ಸುಮಾರು 1 ಕೋಟಿಗೂ ಅಧಿಕ ಮೊಬೈಲ್ ನಂಬರ್‌ಗಳನ್ನು ಬ್ಲಾಕ್ ಮಾಡಿವೆ. ನಾಗರಿಕರಿಗೆ ಅನುಮಾನಾಸ್ಪದ ಕರೆಗಳು ಮತ್ತು ಸಂದೇಶಗಳನ್ನು ವರದಿ ಮಾಡಲು ಅನುವು ಮಾಡಿಕೊಡುತ್ತದೆ.
ಒಂದು ವೇಳೆ ನಿಮ್ಮ ಅಥವಾ ನಿಮಗೆ ತಿಳಿದವರ ಮೊಬೈಲ್ ನಂಬರ್ ಬ್ಲಾಕ್ ಅಥವಾ ಇದ್ದಕ್ಕಿದ್ದಂತೆ ಬಂದ್ ಆಗಿದ್ದರೆ ಈ ಸುದ್ದಿ ದೂರಸಂಪರ್ಕ ವಲಯದಲ್ಲಿ ನಡೆಯುತ್ತಿರುವ ಭಾರಿ ವಂಚನೆಗಳನ್ನು ಸುಧಾರಿಸಲು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಮತ್ತು ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಶನ್ ಕೈಗೊಂಡಿರುವ ಕ್ರಮಗಳಾಗಿವೆ. ಸಂಚಾರ್ ಸಾಥಿ (Sanchar Saathi) ಪೋರ್ಟಲ್ ಸೈಬರ್ ವಂಚನೆಯ ವಿರುದ್ಧ ಹೋರಾಡಲು ರಚಿಸಲಾದ ನಾಗರಿಕ-ಕೇಂದ್ರಿತ ವೆಬ್ ಪೋರ್ಟಲ್ ಆಗಿದೆ.
Also Read: Lava Blaze 3 5G ಸ್ಮಾರ್ಟ್ಫೋನ್ 50MP AI ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲು ಸಜ್ಜಾಗಿದೆ!
1 ಕೋಟಿಗೂ ಅಧಿಕ ಮೊಬೈಲ್ ನಂಬರ್ ಬ್ಲಾಕ್:
ಸಂಚಾರ್ ಸಾಥಿ ಮೂಲಕ 1 ಕೋಟಿಗೂ ಅಧಿಕ ಫ್ರಾಡ್ ನಂಬರ್‌ಗಳ ಸಂಖ್ಯೆಗಳ ಸಂಪರ್ಕ ಕಡಿತಗೊಳಿಸಲಾಗಿದೆ” ಎಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ DoT ಪೋಸ್ಟ್ ಮಾಡಿದೆ. ಸ್ಪ್ಯಾಮ್ ಕರೆಗಳ ಬೆದರಿಕೆಯನ್ನು ತಡೆಯುವ ಪ್ರಯತ್ನದ ಸಂಬಂಧ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಸಹ ಫ್ರಾಡ್ ಸಂಖ್ಯೆಗಳ ಸಂಪರ್ಕ ಕಡಿತಗೊಳಿಸಲು ಮತ್ತು ಯೂನಿಟ್ಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಟೆಲಿಕಾಂ ಆಪರೇಟರ್‌ಗಳಿಗೆ ನಿರ್ದೇಶನ ನೀಡಿದೆ.
ಸಚಿವಾಲಯವು ನೆಟ್‌ವರ್ಕ್ ಲಭ್ಯತೆ, ಕರೆ ಡ್ರಾಪ್ ದರಗಳು ಮತ್ತು ಪ್ಯಾಕೆಟ್ ಡ್ರಾಪ್ ದರಗಳನ್ನು ಹೈಲೈಟ್ ಮಾಡಿದೆ. ಅವುಗಳನ್ನು ಸುಧಾರಿಸಲು ಸಾಧ್ಯ ಇರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇಲ್ಲಿಯವರೆಗೆ 1 ಕೋಟಿಗೂ ಹೆಚ್ಚು ಮೊಬೈಲ್ ಸಂಪರ್ಕಗಳನ್ನು ಮುಚ್ಚಲಾಗಿದೆ ಎಂದು ಸಚಿವಾಲಯ ಹೇಳಿದೆ.
TRAI ಮತ್ತು DoT ಈ ನಿರ್ಧಾರ
ದೂರಸಂಪರ್ಕ ಸೇವೆಯನ್ನು ಸುಧಾರಿಸಲು TRAI ಮತ್ತು DoT ಈ ನಿರ್ಧಾರವನ್ನು ತೆಗೆದುಕೊಂಡಿದೆ. ರೋಬೋ ಕರೆಗಳು ಮತ್ತು ಪ್ರಿ-ರೆಕಾರ್ಡ್ ಕರೆಗಳು ಸಹ ಇದರಲ್ಲಿ ಸೇರಿದ್ದಾವೆ. ಇತ್ತೀಚಿನ ದಿನಗಳಲ್ಲಿ ಸುಮಾರು ಮೂರೂವರೆ ಲಕ್ಷ ಸಂಖ್ಯೆಗಳು ಸ್ವಿಚ್ಡ್ ಆಫ್ ಆಗಿವೆ. ಇದರಲ್ಲಿ 50 ಯೂನಿಟ್ಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಸುಮಾರು 3.5 ಲಕ್ಷ ಪರಿಶೀಲಿಸದ SMS ಹೆಡರ್‌ಗಳು ಮತ್ತು 12 ಲಕ್ಷ ಕಂಟೆಂಟ್ ಟೆಂಪ್ಲೇಟ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಸಂಚಾರ ಸಾಥಿ ಸಹಾಯದಿಂದ ಸುಮಾರು 2.27 ಲಕ್ಷ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ನಿರ್ಬಂಧಿಸಲಾಗಿದೆ.
ಇವರೆಲ್ಲರೂ ಸೈಬರ್ ಕ್ರೈಮ್ ಮತ್ತು ಹಣಕಾಸು ವಂಚನೆಯಲ್ಲಿ ಭಾಗಿಯಾಗಿದ್ದರು. ನೆಟ್‌ವರ್ಕ್ ಸುಧಾರಿಸಲು ಸಂವಹನ ಸಚಿವಾಲಯವು ನಿರಂತರ ಕೆಲಸ ಮಾಡುತ್ತಿದೆ. TRAI ನಿಂದ ನಿಯಂತ್ರಣವನ್ನು ಸಹ ಸುಧಾರಿಸಲಾಗಿದೆ. ಆದರೂ ಇದರ ನಂತರವೂ ನೆಟ್ವರ್ಕ್ನಲ್ಲಿ ಗುರುತಿಸುವಿಕೆಯನ್ನು ಇನ್ನೂ ಮಾಡಲಾಗುತ್ತಿದೆ. ಈ ನಿಬಂಧನೆಗಳನ್ನು 1ನೇ ಅಕ್ಟೋಬರ್ 2024 ರಿಂದ ಜಾರಿಗೊಳಿಸಲಾಗಿದೆ ಮತ್ತು 1ನೇ ಏಪ್ರಿಲ್ 2025 ರಿಂದ ಪ್ರತಿ ತಿಂಗಳು ಕಾರ್ಯಕ್ಷಮತೆ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile