Thomson Smart TV: ಜರ್ಮನಿಯ ಟೆಕ್ನಾಲಜಿ ಬ್ರಾಂಡ್ ಥಾಮ್ಸನ್ (Thomson) ಭಾರತದಲ್ಲಿ ತಮ್ಮ ಹೊಚ್ಚ ಹೊಸ ಸ್ಮಾರ್ಟ್ ಟಿವಿಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಸ್ಮಾರ್ಟ್ ಟಿವಿಯೊಂದಿಗೆ ಥಾಮ್ಸನ್ ಭಾರತದಲ್ಲಿ FA ಸರಣಿ ಮತ್ತು ಓಥ್ ಪ್ರೊ ಮ್ಯಾಕ್ಸ್ 4K ಟಿವಿ ಸೇರಿದಂತೆ ಹಲವಾರು ಹೊಸ ಸ್ಮಾರ್ಟ್ ಟಿವಿಗಳನ್ನು ಪರಿಚಯಿಸಿದೆ. ಹೊಸ ಸ್ಮಾರ್ಟ್ ಟಿವಿ ಹೊಸ ಥಾಮ್ಸನ್ FA ಸರಣಿಯು 32-ಇಂಚಿನ, 40-ಇಂಚಿನ ಮತ್ತು 50-ಇಂಚಿನ ಟಿವಿಗಳನ್ನು ಒಳಗೊಂಡಂತೆ ಮೂರು ಟಿವಿ ಮಾದರಿಗಳನ್ನು ಒಳಗೊಂಡಿದೆ. ಹಾಗಾದರೆ ಈ ಮೂರು ಹೊಸ ಸ್ಮಾರ್ಟ್ ಟಿವಿಗಳ ಟಿವಿಯ ಬೆಲೆ, ವೈಶಿಷ್ಟ್ಯಗಳು ಮತ್ತು ವಿಶೇಷಣಗಳನ್ನು ತಿಳಿಯಿರಿ.
ಭಾರತದಲ್ಲಿ ಜರ್ಮನ್ ಸ್ಮಾರ್ಟ್ ಟಿವಿ ಕಂಪನಿ ಥಾಮ್ಸನ್ ಎಫ್‌ಎ ಸರಣಿಯ ಬೆಲೆ 32 ಇಂಚಿನ ಮಾಡೆಲ್ ನಿಮಗೆ ಕೇವಲ 10,499 ರೂಗಳಿಗೆ ಖರೀದಿಸಬಹುದು. ಇದರ ಕ್ರಮವಾಗಿ ಇದರ 40 ಇಂಚಿನ ಮಾಡೆಲ್ ನಿಮಗೆ 15,999 ರೂಗಳಾಗಿದ್ದು ಕೊನೆಯದಾಗಿ 50 ಇಂಚಿನ ಮಾಡೆಲ್ 16,999 ರೂಗಳಾಗಿವೆ. ಮತ್ತು 43 ಇಂಚಿನ ಮತ್ತು 50 ಇಂಚಿನ Oath Pro Max 4K TV ಮಾದರಿಗಳಿಗೆ ಕ್ರಮವಾಗಿ 22,999 ಮತ್ತು 27,999 ರೂಗಳಾಗಿವೆ. ಇತ್ತೀಚಿನ ಟಿವಿಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಈ ಸ್ಮಾರ್ಟ್ ಟಿವಿಗಳು ಇದೇ ಮೇ 30 ರಿಂದ ಮೊದಲ ಮಾರಾಟಕ್ಕೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಾಗಲಿವೆ.
https://twitter.com/ThomsonTvIndia/status/1661595159916855296?ref_src=twsrc%5Etfw
ಹೊಸ ಥಾಮ್ಸನ್ FA ಸರಣಿ ಟಿವಿ 1GB RAM ಮತ್ತು 8GB ಸ್ಟೋರೇಜ್ ಜೊತೆಗೆ RealTek ಪ್ರೊಸೆಸರ್ ಅನ್ನು ಒಳಗೊಂಡಿದೆ. ಈ ಟಿವಿಯು ಬೆಜೆಲ್-ಲೆಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಪೂರ್ಣ HD ರೆಸಲ್ಯೂಶನ್ ಅನ್ನು ಬೆಂಬಲಿಸುತ್ತದೆ. ಅದರೊಂದಿಗೆ ಇದು ಡಾಲ್ಬಿ ಡಿಜಿಟಲ್ ಬೆಂಬಲದೊಂದಿಗೆ 30W ಸ್ಪೀಕರ್‌ಗಳನ್ನು ಪಡೆಯುತ್ತಿದೆ. ಇದು Netflix, Amazon Prime Video, Apple TV, ZEE5 ಇತ್ಯಾದಿಗಳನ್ನು ಒಳಗೊಂಡಿದೆ. Google Play Store ಬೆಂಬಲದೊಂದಿಗೆ ಬರುತ್ತದೆ.
ಓಥ್ ಪ್ರೊ ಮ್ಯಾಕ್ಸ್ 4K ಟಿವಿಗಳು 43 ಇಂಚಿನ ಮತ್ತು 50 ಇಂಚಿನ ಡಿಸ್ಪ್ಲೇ ಗಾತ್ರಗಳಲ್ಲಿ ಬರುತ್ತವೆ. ಇದು ಸಾವಿರಾರು ಅಪ್ಲಿಕೇಶನ್‌ಗಳು ಮತ್ತು ಆಟಗಳಿಗೆ ಬೆಂಬಲವನ್ನು ಪಡೆಯುತ್ತದೆ. ಈ ಟಿವಿ ಡಾಲ್ಬಿ ವಿಷನ್ ಮತ್ತು HDR10+ ಗೆ ಬೆಂಬಲದೊಂದಿಗೆ ಬೆಜೆಲ್-ಲೆಸ್ ವಿನ್ಯಾಸದೊಂದಿಗೆ ಬರುತ್ತದೆ. ಡಾಲ್ಬಿ ಎಟಿಎಂಒಎಸ್, ಡಾಲ್ಬಿ ಡಿಜಿಟಲ್ ಪ್ಲಸ್ ಮತ್ತು ಡಿಟಿಎಸ್ ಟ್ರೂ ಸರೌಂಡ್ ಜೊತೆಗೆ 40W ಸ್ಟೀರಿಯೋ ಬಾಕ್ಸ್ ಸ್ಪೀಕರ್‌ಗಳಿವೆ. ಹೊಸ ಥಾಮ್ಸನ್ 4K ಟಿವಿಗಳು 2GB RAM ಮತ್ತು 16GB ಸ್ಟೋರೇಜ್ ಜೊತೆಗೆ ಕ್ವಾಡ್-ಕೋರ್ ಚಿಪ್‌ಸೆಟ್‌ನಿಂದ ಚಾಲಿತವಾಗಿವೆ.