ನಿಮ್ಮ ಈ 5 ವಿಷಯಗಳನ್ನು ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಬಾರದು

ನಿಮ್ಮ ಈ 5 ವಿಷಯಗಳನ್ನು ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಬಾರದು
HIGHLIGHTS

ಇದರೊಂದಿಗೆ ನಿಮ್ಮ ಮಾಹಿತಿಗಳನ್ನು ಕದಿಯಲು ಒಂದು ರೀತಿಯಲ್ಲಿ ನೀವೇ ಕಾರಣರಾಗಬವುದು

ವಯಸ್ಸಿನ ನಿರ್ಬಂಧಗಳ ಹೊರತಾಗಿಯೂ ಮಕ್ಕಳು ಮತ್ತು ಹದಿಹರೆಯದವರು ಸಹ ಈ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದಾರೆ

ನೀವು ನಿಮ್ಮ ಸಾಮಾಜಿಕ ಮಾಧ್ಯಮದಲ್ಲಿ ಏನನ್ನು ಹಂಚಿಕೊಳ್ಳುತ್ತೀರಿ ಎಂಬುದನ್ನು ಜಾಗರೂಕರಾಗಿರಿ. ಏಕೆಂದರೆ ನಿಮ್ಮ ಸಣ್ಣ ಪುಟ್ಟ ಮೋಜು ಮಸ್ತಿಗಾಗಿ ಮಾಡಿದ ಯಾವುದೋ ಮಾಹಿತಿ ಮುಂದೆ ನಿಮ್ಮ ಜೀವನಕ್ಕೆ ಮುಳುವಾಗಿ ನಿಮ್ಮ ಶಾಂತಿ ನಾಶವಾಗಬಹುದು ಎಂಬುದು ನಿಮಗೆ ಗೊತ್ತಿಲ್ಲದಿರಬವುದು. ನೀವು ಸಾಧ್ಯವಾದ ಮಟ್ಟಿಗೆ ಎಂದಿಗೂ ಯೋಚಿಸದೇ ಅತ್ಯಂತ ಮುಗ್ಧ ಮತ್ತು ಒಳ್ಳೆಯ ಉದ್ದೇಶಿತ ಪೋಸ್ಟ್ಗಳನ್ನು ಬಳಸುವಾಗಲು ಸ್ವಲ್ಪ ಹೆಚ್ಚರಿಕೆಯಿಂದಿರಿ. ಇಂದಿನ ಟೆಕ್ನಾಲಜಿ ಪ್ರತಿ ವಲಯದಲ್ಲೂ ಪ್ರಗತಿಯನ್ನು ಕಾಣುತ್ತಿದ್ದರು ಕೆಲವರು ಇದರ ದುರುಪಯೋಗಗೊಳಿಸಿ ಜನ ಸಾಮಾನ್ಯರ ಮಾಹಿತಿಯೊಂದಿಗೆ ಆಟವಾಡುವುದು ಟಿವಿ, ಪತ್ರಿಕೆಗಳಲ್ಲಿ ನೀವೀಗಾಗಲೇ ಕೇಳಿರುತ್ತೀರಿ. ಆದ್ದರಿಂದ ಮುಖ್ಯವಾಗಿ ಈ 5 ವಿಷಯಗಳನ್ನು ಯಾವುದೇ ಕಾರಣಕ್ಕೂ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಬೇಡಿ. 

ಹಣ, ಬ್ಯಾಂಕ್ ಮತ್ತು ಆಭರಣಗಳ ವಿವರ

ಪ್ರತಿಯೊಬ್ಬರೂ ಈಗಾಗಲೇ ಅದರ ದಕ್ಷತೆಯಿಂದಾಗಿ ಇದನ್ನು ಬಳಸುತ್ತಿರುವುದರಿಂದ ನಾವು ಸಾಮಾಜಿಕ ಮಾಧ್ಯಮಗಳ ಉತ್ತುಂಗದಲ್ಲಿದ್ದೇವೆ.  ಅದರಲ್ಲೂ ಆನ್ಲೈನ್ ದರೋಡೆಕೋರರು ಮತ್ತು ಕಳ್ಳರು ಸೇರಿದ್ದಾರೆ. ಹೌದು ಅವರು ಹೈಟೆಕ್ ಕೂಡ ಆಗಿದ್ದರೆ ಒಂದು ಕಂಪನಿಯು ತಮ್ಮ ಮಾರುಕಟ್ಟೆಯನ್ನು ಆಕರ್ಷಿಸಲು ಮತ್ತು ವಿಸ್ತರಿಸಲು ಸಾಮಾಜಿಕ ಮಾಧ್ಯಮವನ್ನು ಬಳಸಿದರೆ ದರೋಡೆಕೋರರು ಅದನ್ನು ತಮ್ಮ ಗುರಿ ಮತ್ತು ಭವಿಷ್ಯವನ್ನು ಹುಡುಕಲು ಮತ್ತು ವಿಸ್ತರಿಸಲು ಬಳಸುತ್ತಾರೆ. ನಿಮ್ಮ ಪೋಸ್ಟ್ಗಳು ಇಂಥವರ ಕೆಲಸವನ್ನು ಸುಲಭಗೊಳಿಸುತ್ತದೆ. ಆದ್ದರಿಂದ ನಿಮ್ಮ ಸಂಪತ್ತು ಮತ್ತು ಸಂಪತ್ತಿನ ಬಗ್ಗೆ ಹೆಮ್ಮೆಪಡಿ ಆದರೆ ಅದನ್ನು ಸಾರ್ವಜನಿಕವಾಗಿ ತೋರಿಸದಿರಿ. ಏಕೆಂದರೆ ಮುಂದೊಂದು ದಿನ ನೀವು ಅವುಗಳನ್ನು ಕಳೆದುಕೊಳ್ಳಬಹುದು ಈ ಮೂಲಕ ನಿಮ್ಮ ಜೀವನ ಮತ್ತು ಸುರಕ್ಷತೆಗೆ ನೀವು ಅಪಾಯವನ್ನುಂಟುಮಾಡುತ್ತೀರಿ.

ನಿಮ್ಮ ರಜೆ ದಿನಗಳ ಮಾಹಿತಿ  

ಮಕ್ಕಳ ಅಥವಾ ನಿಮ್ಮ ರಜೆ ದಿನಗಳನ್ನು ಎಂಜಾಯ್ ಮಾಡಲು ಹೊಸ ಸ್ಥಳಕ್ಕೆ ಹೋಗುವಾಗ ಇಮೇಜ್ ವಿಡಿಯೋ ಮಾಡುವುದು ಎಷ್ಟು  ಸಹಜವೊ ಅದೇ ಇಮೇಜ್ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ನಿಮ್ಮ ಉತ್ಸಾಹವನ್ನು ವ್ಯಕ್ತಪಡಿಸುವುದು ಅಷ್ಟೇ ಮುಖ್ಯವಾಗಿದೆ. ನೀವು ಮರಳಿ ಬರುವಾಗ ಜಗತ್ತಿಗೆ ನಿಮ್ಮ ಅನುಭವ ಮತ್ತು ನಿಮ್ಮ ಇಷ್ಟಗಳನ್ನು ಹೇಳಲು ಸೋಶಿಯಲ್ ಮೀಡಿಯಾ ಅತ್ಯಂತ ಸ್ಮಾರ್ಟ್ ಸ್ಥಳವಾಗಿದೆ. ಆದರೆ ನಿಮ್ಮ ಪ್ರತಿಯೊಂದು ಪೋಸ್ಟ್ಗಳನ್ನು ಯಾರ್ಯಾರು ನೋಡಬಹುದೆಂದು ನೀವು ಊಹಿಸಲು ಅಸಾಧ್ಯ. ಇದರೊಂದಿಗೆ ನಿಮ್ಮ ಮಾಹಿತಿಗಳನ್ನು ಕದಿಯಲು ಒಂದು ರೀತಿಯಲ್ಲಿ ನೀವೇ ಕಾರಣರಾಗಬವುದು. 

ವೈಯಕ್ತಿಕ ಅಭಿಪ್ರಾಯಗಳು

ನಿಮ್ಮ ವೈಯಕ್ತಿಕ ಅಭಿಪ್ರಾಯವು ಯಾರಾದರೂ ಅದನ್ನು ಕೇಳಿದಾಗ ಮಾತ್ರ ಮುಖ್ಯವಾಗುತ್ತದೆ. ಇಲ್ಲದಿದ್ದರೆ ವ್ಯರ್ಥವಾಗಿ ಹಂಚದಿರಿ. ಅದಕ್ಕಾಗಿಯೇ ಇದನ್ನು "ವೈಯಕ್ತಿಕ" ಅಭಿಪ್ರಾಯ ಎಂದು ಕರೆಯಲಾಗುತ್ತದೆ. ನಿಮ್ಮ ಮನಸ್ಸಿನಲ್ಲಿರುವುದನ್ನು ವ್ಯರ್ಥವಾಗಿ ಪೋಸ್ಟ್ ಮಾಡಬೇಡಿ. ಈವರೆಗೆ ಮಾಡಿದರೆ ಅದನ್ನು ಡಿಲೀಟ್ ಮಾಡಿಬಿಡಿ. ಏಕೆಂದರೆ ನಿಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಆಧಾರವನ್ನಾಗಿಕೊಂಡು ನಿಮ್ಮನ್ನು ಮೋಸಮಾಡುವವರು ಮರ ಹತ್ತಿಸಿ ನಂತರ ಮರವನ್ನೇ ಕಡಿಯಬವುದು ಎಚ್ಚರಿಕೆಯಿಂದಿರಿ. ಯಾವುದೇ ಸ್ಥಳ, ವಸ್ತು ಅಥವಾ ಜನರ ಮೇಲೆ ಬೇಕಾಬಿಟ್ಟಿಯಾಗಿ ನಿಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ನೀಡುವುದು ಎಷ್ಟು ಸರಿ ನೀವೇ ಯೋಚಿಸಿ.

ನಾರ್ಮಲ್ ಮತ್ತು ಬೆತ್ತಲೆ ಚಿತ್ರಗಳು

ಗಂಡು ಅಥವಾ ಹೆಣ್ಣು ಯಾರೆಯಾಗಲಿ ದೇಹವನ್ನು ಬೇರೆಯೊಬ್ಬರಿಗೆ ಸೋಶಿಯಲ್ ಮೀಡಿಯಾದ ಮೂಲಕ ತೋರಿಸಲು ಅಥವಾ  ಬಹಿರಂಗಪಡಿಸುವ ಅಗತ್ಯವೇನಿದೆ. ಇಂದಿನ ದಿನಗಳಲ್ಲಿ ನಿಮಗೆ ತಿಳಿದಿರುವ ಹಾಗೆ ಅಶ್ಲೀಲ ಸೈಟ್ಗಳಲ್ಲಿ ವಿಡಿಯೋ ಕಾಲ್ ಮತ್ತು ಫೋನ್ ಚಾಟ್ಗಳಲ್ಲಿ ಹೆಚ್ಚಾಗಿ ಲಭ್ಯವೆಂದು ವರದಿಯಾಗಿದೆ. ಒಂದು ನಿಮಿಷದ ತಮಾಷೆಗಾಗಿ ಅಥವಾ 10 ನಿಮಿಷದ ಮಜಾ ಮಾಡುವುದಕ್ಕಾಗಿ ಹೀಗೆ ಮಾಡುವುದು ಎಷ್ಟು ಸರಿ. ನಿಮ್ಮ ಬಯಕೆ ಮತ್ತು ಫ್ಯಾಂಟಸಿಗಳ ಐಕಾನ್ ಆಗಿ ಬಳಸುವುದು ನೀವು ಹೆಮ್ಮೆಪಡಬೇಕಾದ ವಿಷಯವಲ್ಲ. ವಯಸ್ಸಿನ ನಿರ್ಬಂಧಗಳ ಹೊರತಾಗಿಯೂ ಮಕ್ಕಳು ಮತ್ತು ಹದಿಹರೆಯದವರು ಸಹ ಈ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದಾರೆ.

ವೈಯಕ್ತಿಕ ಸಂಭಾಷಣೆ ಪ್ರಚಾರ

ಇದು ಎಂದಿಗೂ ಮಾಡಬೇಡಿ ಅದಕ್ಕಾಗಿಯೇ ಇದನ್ನು “ವೈಯಕ್ತಿಕ” ಎಂದು ಕರೆಯುತ್ತೇವೆ ಏಕೆಂದರೆ ಮೆಸೇಜ್ ನಿಮ್ಮ ಕಣ್ಣುಗಳಿಗೆ ಅಥವಾ ನಿಮ್ಮಿಬ್ಬರಿಗಾಗಿ ಮಾತ್ರವಾಗಿರಬೇಕು. ಸಾಧ್ಯವಾದರೆ ಸಾರ್ವಜನಿಕ ಸ್ಥಳಗಳಲ್ಲಿ ಫೋನಿನ ಬ್ರೈಟ್ನೆಸ್ ಕಡಿಮೆ ಮಾಡಿ ಬಳಸಿ. ಇದು ಪ್ರೈವೇಟ್ ವಿಷಯವಾಗಿದೆ. ಅದನ್ನು ಯಾವ ಕಾರಣಕ್ಕೂ ಸಾರ್ವಜನಿಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬೇಡಿ. ನಿಮ್ಮ ಸಂಭಾಷಣೆಯನ್ನು ಪೋಸ್ಟ್ ಮಾಡುವುದು ನಿಜವಾಗಿಯೂ ತಮಗೆ ಮತ್ತು ನಿಮ್ಮಿಬ್ಬರಿಗೂ ಅಗೌರವದ ಕಾರ್ಯವೇ ಸರಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo