ನಿಮ್ಮ ಸಿಂಪಲ್ ಮತ್ತು ಸರಳವಾದ PIN ಮತ್ತು Password ಹ್ಯಾಕ್ ಮಾಡಲು ತುಂಬಾ ಸುಲಭವಾಗಿಸುತ್ತದೆ.
ಹೆಚ್ಚಿನ ಬಳಕೆದಾರರು ತಮ್ಮ ಒಂದೇ ಮಾದರಿಯ PIN ಮತ್ತು Password ಅನ್ನು ಎಲ್ಲೆಡೆ ಬಳಸುತ್ತಾರೆ.
ನಿಮ್ಮ ಸರಳ ಮತ್ತು ಸುಲಭವಾದ ಪಿನ್ ಅಥವಾ ಪಾಸ್‌ವರ್ಡ್‌ಗಳನ್ನು ಭೇದಿಸುವುದು ಹ್ಯಾಕರ್‌ಗಳಿಗೆ ತುಂಬಾ ಸುಲಭವಾಗಿದೆ.
ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಡಿಜಿಟಲ್ ಹಗರಣಗಳ ಸಂಖ್ಯೆ ನಿರಂತರವಾಗಿ ದ್ವಿಗುಣವಾಗುತ್ತಿದೆ. ಇದರಲ್ಲಿ ಜನ ಸಾಮಾನ್ಯರ ಡಿವೈಸ್‌ಗಳ ವೈಯಕ್ತಿಕ ಡೇಟಾವನ್ನು ಕದ್ದು ನಂತರ ವಂಚನೆಗಾಗಿ ದುರ್ಬಳಕೆ ಮಾಡಲಾಗುತ್ತಿದೆ. ಇದರೊಂದಿಗೆ ಕೆಲವೊಮ್ಮೆ ನೀವು ನಾವು ಬಳಸುವ ಸಾಮಾನ್ಯ PIN ಮತ್ತು Password ಮೂಲಕ ವಂಚಕರು ಪಂಗ ನಾಮ ಹಾಕುತ್ತಿರುವುದು ಹೆಚ್ಚಾಗಿದೆ. ಯಾಕೆಂದರೆ ನಿಮ್ಮ ಸರಳ ಮತ್ತು ಸುಲಭವಾದ ಪಿನ್ ಅಥವಾ ಪಾಸ್‌ವರ್ಡ್‌ಗಳನ್ನು ಭೇದಿಸುವುದು ಹ್ಯಾಕರ್‌ಗಳಿಗೆ ತುಂಬಾ ಸುಲಭವಾಗಿದೆ. ಪಿನ್ ರಚಿಸುವಾಗ ಕೆಲವು ಪ್ರಮುಖ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಒಂದೇ ಪಿನ್ ಅಥವಾ ಪಾಸ್‌ವರ್ಡ್ ಅನ್ನು ಎಲ್ಲೆಡೆ ಬಳಸದಂತೆ ನೋಡಿಕೊಳ್ಳುವುದು ನಮ್ಮ ನಿಮ್ಮ ಮೊದಲ ಮಾತಾಗಿರುತ್ತದೆ.
ಅಪ್ಪಿತಪ್ಪಿಯೂ ಈ PIN ಮತ್ತು Password ಬಳಸಲೇಬೇಡಿ:
ಸೈಬರ್ ಸೆಕ್ಯೂರಿಟಿ ವರದಿಗಳಲ್ಲಿ ಹೆಚ್ಚಿನ ಜನರು ಸಾಮಾನ್ಯವಾಗಿ ತಮ್ಮ ಭದ್ರತೆಗಾಗಿ ಬಳಸುವ ಪಿನ್ ಮತ್ತು ಪಾಸ್ವರ್ಡ್ ಅಂದ್ರೆ ಕೇವಲ 4 ಸಂಖ್ಯೆಯನ್ನು ರಚಿಸಿರುವುದು ಮುಖ್ಯವಾ ಕಾರಣವಾಗಿದೆ. ಇಲ್ಲಿ ಅಂತಹ ಕೆಲವೊಂದು ಸಾಮಾನ್ಯವಾಗಿ ಅಧಿಕವಾಗಿ ಬಳಸುವ 4 ಅಂಕಿಯ PIN ಮತ್ತು Password ಬಗ್ಗೆ ತಿಳಿಯಿರಿ. ಹೆಚ್ಚುತ್ತಿರುವ ಡಿಜಿಟಲ್ ವಂಚನೆಗಳ ಬಗ್ಗೆ ಜನರಿಗೆ ಅರಿವಾಗುತ್ತಿಲ್ಲ ಎಂದು ಈ ಅಧ್ಯಯನವು ತೋರಿಸಿದೆ. 11 ರಷ್ಟು ಜನರು 1234 ಪಿನ್ ಅನ್ನು ಎಟಿಎಂ ಪಿನ್ ಆಗಿ ಹೊಂದಿಸಿದ್ದಾರೆ ಮತ್ತು ಅದನ್ನು ಇತರ ಸ್ಥಳಗಳಲ್ಲಿಯೂ ಬಳಸುತ್ತಾರೆ.
ಹೆಚ್ಚುವರಿಯಾಗಿ ಸರಳವಾದ ಪಿನ್‌ಗಳಲ್ಲಿ 1111, 0000, 1212 ಮತ್ತು 7777 ಸೇರಿವೆ. ಪರಿಶೀಲಿಸಲಾದ 3.4 ಮಿಲಿಯನ್ ಪಿನ್‌ಗಳಲ್ಲಿ ಅನೇಕ ಬಳಕೆದಾರರು ತಮ್ಮ ಭದ್ರತಾ ಕೋಡ್‌ಗಳಿಗಾಗಿ ಸರಳ ಮಾದರಿಗಳನ್ನು ಅವಲಂಬಿಸಿದ್ದಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ಸಾಮಾನ್ಯವಾಗಿ ಬಳಸುವ 4 ಅಂಕಿಯ ಪಿನ್ ಪಟ್ಟಿಗೆ ಈ 1234, 1111, 0000, 1212, 7777, 1004, 2000, 4444, 2222, 6969, 8557, 8438, 9539, 7063, 6827, 0859, 6793, 0738, 6835, 8093 ಸಹ ಸೇರಿವೆ.
Also Read: CAMON 30 Premier 5G ಭಾರತದಲ್ಲಿ ಬಿಡುಗಡೆ! 50MP ಸೆಲ್ಫಿ ಕ್ಯಾಮೆರಾದೊಂದಿಗೆ ಟಾಪ್ 5 ಫೀಚರ್‌ಗಳೇನು?
ಈ ವಿಷಯಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು:
ಸಾಮಾನ್ಯವಾಗಿ ಪಾಸ್ವರ್ಡ್ ರಚಿಸುವಾಗ ಅಂದ್ರೆ ಸಾಧ್ಯವಾದರೆ ಅಥವಾ ಅವಕಾಶವಿದ್ದರೆ ನಿಮ್ಮ ಪಾಸ್‌ವರ್ಡ್‌ನಲ್ಲಿ ಅಕ್ಷರಗಳು, ಸಂಖ್ಯೆಗಳು ಮತ್ತು ವಿಶೇಷ ಐಕಾನ್ ಬಳಸಿ ಪಾಸ್ವರ್ಡ್ ರಚಿಸುವುದು ಅತ್ಯುತ್ತಮವಾದ ಮಾರ್ಗವಾಗಿದ್ದು ಇದು ಹ್ಯಾಕ್ ಮಾಡಲು ಕಷ್ಟವಾಗುತ್ತದೆ. ಉದಾಹರಣೆಗೆ ನೀವು user@123#45@, kumar2024@28$, m#P52s@ap$V, UBm@5q9EF& ನಂತಹ ಪಾಸ್‌ವರ್ಡ್ ಅನ್ನು ಇರಿಸಬಹುದು. ನೀವು ಬಳಕೆದಾರರ ಸ್ಥಳದಲ್ಲಿ ವಿಶೇಷ ಹೆಸರನ್ನು ಸಹ ಇರಿಸಬಹುದು ಅದು ರಹಸ್ಯವಾಗಿದೆ. ಪಿನ್ ರಚಿಸುವಾಗ ನೀವು ತಪ್ಪಾಗಿ ಮೊಬೈಲ್ ಸಂಖ್ಯೆಯಿಂದ ಯಾವುದೇ ಅಂಕೆಗಳನ್ನು ಇಡಬಾರದು. ಏಕೆಂದರೆ ಹೆಚ್ಚಿನ ಜನರು ಪಿನ್ ಮಾಡುವಾಗ ಈ ತಪ್ಪನ್ನು ಮಾಡುತ್ತಾರೆ. ಊಹಿಸಲು ಕಷ್ಟವಾಗಿರುವ ಇಂತಹ ಅಂಕಿಗಳನ್ನು ಪಿನ್‌ನಲ್ಲಿ ಬಳಸಲು ಸಲಹೆ ನೀಡಲಾಗುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile