DTH ಆಪರೇಟರ್‌ಗಳಾದ AIRTEL ಮತ್ತು TATA SKY ಹೊಸ ತಾರೀಫ್ ಆರ್ಡರ್ 2.0 ಅನ್ನು ಜಾರಿಗೆ ತಂದಿದೆ
ಭಾರತದಲ್ಲಿ ಇಂದು ಟ್ರಾಯ್ ಮಾರ್ಗಸೂಚಿಗಳನ್ನು ಅನುಸರಿಸಿ ದೇಶದ DTH ಆಪರೇಟರ್‌ಗಳಾದ AIRTEL ಮತ್ತು TATA SKY ಹೊಸ ತಾರೀಫ್ ಆರ್ಡರ್ 2.0 (NTO – New Tariff Order) ಅನ್ನು ಜಾರಿಗೆ ತಂದಿದೆ. ಈ ಎರಡೂ ಕಂಪನಿಗಳು ಹೊಸ ನೆಟ್‌ವರ್ಕ್ ಸಾಮರ್ಥ್ಯ ಶುಲ್ಕ (NCF – Network Capacity Fee) ಮತ್ತು ಮಲ್ಟಿ ಟಿವಿ ಬೆಲೆಗಳನ್ನು ಘೋಷಿಸಿದ್ದು ಇದು ಇಂದಿನಿಂದ ಅಂದ್ರೆ 1ನೇ ಮಾರ್ಚ್ 2020 ರಿಂದ ಅನ್ವಯವಾಗಲಿದೆ. ಈ ಬದಲಾವಣೆಗಳ ಭಾಗವಾಗಿ ಟಾಟಾ ಸ್ಕೈ ಮತ್ತು ಏರ್‌ಟೆಲ್ ಡಿಜಿಟಲ್ ಟಿವಿ ತಮ್ಮ ಬಳಕೆದಾರರಿಗೆ 200 SD (FTA – Free To Air) ಚಾನೆಲ್‌ಗಳನ್ನು ಕೇವಲ 153.4 ರೂಗಳನ್ನೂ ನೀಡಲಿವೆ. ನಮಗೆ ಈಗಾಗಲೇ ತಿಳಿದಿರುವಂತೆ ಟಾಟಾ ಸ್ಕೈ ಮತ್ತು ಏರ್‌ಟೆಲ್ ಡಿಜಿಟಲ್ ಟಿವಿಯ ಮಲ್ಟಿ ಟಿವಿ ಚಂದಾದಾರರಿಗೆ ಟ್ರಾಯ್ NTO 2.0 ಬೃಹತ್ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ.
ಏರ್ಟೆಲ್ ಡಿಜಿಟಲ್ ಟಿವಿ ಮತ್ತು ಟಾಟಾ ಸ್ಕೈ ಎರಡೂ ಬಳಕೆದಾರರ ಎರಡನೇ ಕನೆಕ್ಷನ್ ಹೊಂದಿರುವ ಬಳಕೆದಾರರಿಂದ ಮೊದಲ 200 SD ಚಾನೆಲ್‌ಗಳಿಗೆ NCF ಆಗಿ ತಿಂಗಳಿಗೆ ಕೇವಲ 61.36 ರೂಗಳು ಮತ್ತು ಈ ಮೊದಲು ಟಾಟಾ ಸ್ಕೈ ಪ್ರತಿ ಮಲ್ಟಿ ಟಿವಿ ಬಳಕೆದಾರರಿಂದ 153.4 ರೂಗಳ ಪೂರ್ತಿ NCF ಅನ್ನು ವಿಧಿಸುತ್ತಿತ್ತು ಆದರೆ ಟ್ರಾಯ್ ಈ ಶುಲ್ಕವನ್ನು ಪ್ರೈಮರಿ NCF ನಂತೆ ಕೇವಲ 40% ಗೆ ನಿರ್ಬಂಧಿಸುತ್ತಿದೆ. ಹೊಸ ಬದಲಾವಣೆಗಳು ಇಂದಿನಿಂದ ಪರಿಣಾಮಕಾರಿಯಾಗಿರುತ್ತವೆ. ಮತ್ತು ಅಸ್ತಿತ್ವದಲ್ಲಿರುವ ಬಳಕೆದಾರರನ್ನು ನಿಧಾನವಾಗಿ ಸ್ಥಳಾಂತರಿಸಲಾಗುತ್ತದೆ.
ಈಗ ನಾವು ನೇರವಾಗಿ ಯಾವ ಬೆಲೆಯನ್ನು ಈ ಹೊಸ ತಾರೀಫ್ ಆರ್ಡರ್ ನಂತರ ತೆರಬೇಕಾಗಿದೆ ಅನ್ನುವುದನ್ನು ನೋಡುವದಾದರೆ ಮೊದಲಿಗೆ ನಾವು NFC ಬೆಲೆಯನ್ನು ನೋಡುವುದಾದರೆ ಸಾಮಾನ್ಯವಾಗಿ NFC = 130 ರೂಗಳು 23.4 ರೂಗಳ GST ಸೇರಿಸಿ 153.4 ರೂಗಳನ್ನು ಪಾವತಿಸಲೇಬೇಕಾಗುತ್ತದೆ. ಒಂದು ವೇಳೆ ನೀವು 200 SD ಚಾನೆಲ್‌ಗಳಿಗಿಂತ ಹೆಚ್ಚಿನ ಚಾನಲ್‌ಗಳಿಗೆ ಚಂದಾದಾರಿಕೆಗಾಗಿ ಪಡೆದರೆ 188.80 + GST ನೀಡಬೇಕಾಗುತ್ತದೆಂದು ನವೀಕರಿಸಿದ NCF ಘೋಷಣೆ ಬಿಡುಗಡೆಯಲ್ಲಿ ಟಾಟಾ ಸ್ಕೈ ಉಲ್ಲೇಖಿಸಿದೆ.
ಈಗ ಇದರ ನಂತರ ನಾವು ಮಲ್ಟಿ ಕನೆಕ್ಷನ್ ಚಾರ್ಜ್ ನೋಡುವುದಾದರೆ ಯಾವುದೇ ಆಪರೇಟರ್ NCF ನಂತೆ 40% ಕ್ಕಿಂತ ಹೆಚ್ಚು ಶುಲ್ಕ ವಿಧಿಸಬಾರದೆಂದು ಟ್ರಾಯ್ ಹೇಳಿದೆ. ಆದ್ದರಿಂದ ಮಲ್ಟಿ ಟಿವಿ ಕನೆಕ್ಷನ್ ಹೊಂದಿರುವವರಿಗೆ ಎರಡು ಹೊಸ ಫಿಕ್ಸ್ ಮಾಡಲಾದ NCF ಶುಲ್ಕಗಳು ಮಾತ್ರ ಇರುತ್ತವೆ. ಎಲ್ಲಾ ಮಲ್ಟಿ ಟಿವಿ ಕಾಂನೆಕ್ಷನ್ಗಳು ಒಂದೇ ಮನೆಯಲ್ಲಿ ಒಂದೇ ಖಾತೆಯಲ್ಲಿ ಸಕ್ರಿಯಗೊಳ್ಳಲು 200 SD ಚಾನೆಲ್‌ಗಳಿಗೆ 52 ರೂಗಳ ನೆಟ್‌ವರ್ಕ್ ಸಾಮರ್ಥ್ಯ ಶುಲ್ಕ (NCF ತೆರಿಗೆ ಸೇರಿದಂತೆ 61.36 ರೂಗಳು) ಅನ್ವಯವಾಗುತ್ತದೆ. ಈ 200 SD ಚಾನೆಲ್‌ಗಳ ಮೇಲಿರುವ ಮತ್ತು ಅದಕ್ಕಿಂತ ಹೆಚ್ಚಿನ ಚಾನೆಲ್‌ಗಳಿಗೆ ಚಂದಾದಾರಿಕೆಗಾಗಿ 30 ರೂಗಳ ಹೆಚ್ಚುವರಿ NCF ಅನ್ವಯವಾಗಲಿದೆ ಎಂದು ಏರ್ಟೆಲ್ ಡಿಜಿಟಲ್ ಟಿವಿ ಹೇಳಿದೆ. ಆದಾಗ್ಯೂ ಟಾಟಾ ಸ್ಕೈ 200 ಕ್ಕೂ ಹೆಚ್ಚು SD ಚಾನೆಲ್‌ಗಳಿಗೆ ತಿಂಗಳಿಗೆ 75.52 ರೂಗಳ (ತೆರಿಗೆ ಸೇರಿದಂತೆ) ಫಿಕ್ಸ್ ಮಾಡಲಾದ NCF ಶುಲ್ಕ ವಿಧಿಸಲಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile