ನಾಳೆ ಬಿಡುಗಡೆಯಾಗಲಿದೆ Tata Neu ಸೂಪರ್ ಆಪ್! ದಿನನಿತ್ಯದ ಎಲ್ಲಾ ಸೇವೆಗಳು ಒಂದೇ ಕಡೆ ಲಭ್ಯ

Updated on 06-Apr-2022
HIGHLIGHTS

ಸದ್ಯ ಹಲವು ಪ್ರಾಯೋಗಿಕ ಹಂತ ಮುಗಿಸಿರುವ ಈ ಆಪ್ 7 ಏಪ್ರಿಲ್ ರಂದು ಬಿಡುಗಡೆಯಾಗಲಿದೆ.

ಅದೇ ಗೂಗಲ್ ಪ್ಲೇ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ.

ಹಣ ಪಾವತಿ, ಸ್ಟ್ರೀಮಿಂಗ್, ಶಾಪಿಂಗ್, ಟಿಕೆಟ್ ಬುಕಿಂಗ್, ದಿನಸಿ ಸೇರಿದಂತೆ ಹಲವು ಸೇವೆಗಳು ಈ ಸೂಪರ್ ಆಪ್‌ನಲ್ಲಿ ಲಭ್ಯವಿರಲಿವೆ

ಭಾರತೀಯರ ನೆಚ್ಚಿನ ಬ್ರ್ಯಾಂಡ್ ಟಾಟಾ ಗ್ರೂಪ್ ತನ್ನ ಬಹು ನಿರೀಕ್ಷಿತ ಅಪ್ಲಿಕೇಶನ್ 'Tata Neu' ಅನ್ನು ಇದೆ ಏಪ್ರಿಲ್ 7 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಭಾರತದ ಬೃಹತ್ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಅಮೇಜಾನ್, ಫ್ಲಿಪ್‌ಕಾರ್ಟ್ ಮತ್ತು ಜಿಯೋ ಸೇರಿದಂತೆ ಕೆಲವೇ ಕೆಲವು ಕಂಪೆನಿಗಳು ಅಧಿಪತ್ಯ ಸಾಧಿಸಿರುವ ವೇಳೆಯಲ್ಲಿ Tata Neu ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಲಾಗುತ್ತಿದ್ದು ದಿನಸಿ ಸಾಮಾನುಗಳಿಂದ ಹಿಡಿದು ಗ್ಯಾಜೆಟ್‌ಗಳವರೆಗೆ Tata Neu ಆಪ್‌ನಲ್ಲಿ ಎಲ್ಲವನ್ನೂ ಹುಡುಕಿ. 

ವಿಶೇಷ ಕೊಡುಗೆಗಳು, ಪ್ರಯೋಜನಗಳು ಮತ್ತು ಸವಲತ್ತುಗಳೊಂದಿಗೆ ಪ್ಯಾಕ್ ಮಾಡಲಾದ Tata Neuನ ಲಾಭದಾಯಕ ಜಗತ್ತನ್ನು ಅನುಭವಿಸಿ. ಇದು ತಡೆರಹಿತ ಶಾಪಿಂಗ್ ಮತ್ತು ಪಾವತಿಗಳ ಅನುಭವಕ್ಕಾಗಿ ನಿಮಗಾಗಿ ಲಭ್ಯವಿರಲಿದೆ ಎಂದು ಕಂಪನಿಯು ಪ್ರಕಟಣೆಯನ್ನು ಹೊರಡಿಸಿದೆ. Tata Neu ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡುವ ಮೊದಲು ಟಾಟಾ ಗ್ರೂಪ್ ತನ್ನ ಉದ್ಯೋಗಿಗಳೊಂದಿಗೆ ಕೆಲವು ಸಮಯದಿಂದ ಅಪ್ಲಿಕೇಶನ್ ಅನ್ನು ಪರೀಕ್ಷಿಸುತ್ತಿದ್ದು ಸದ್ಯ ಹಲವು ಪ್ರಾಯೋಗಿಕ ಹಂತ ಮುಗಿಸಿರುವ ಈ ಆಪ್ 7 ಏಪ್ರಿಲ್ ರಂದು ಬಿಡುಗಡೆಯಾಗಲಿದೆ.

ಅದೇ ಗೂಗಲ್ ಪ್ಲೇ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ. Tata Neu ಅಪ್ಲಿಕೇಷನ್ ಒಂದು ಸೂಪರ್ ಆಪ್ ಆಗಿದ್ದು ಇದರಲ್ಲಿ ಗ್ರಾಹಕರು ಬಹು ಟಾಟಾ ಬ್ರಾಂಡ್ ಅಪ್ಲಿಕೇಶನ್‌ಗಳು, ಟಾಟಾ ವೆಬ್‌ಸೈಟ್‌ಗಳು ಮತ್ತು ಸ್ಟೋರ್‌ನಲ್ಲಿ NeuCoins, ಕಾರ್ಡ್‌ಗಳು, UPI, EMI ಮತ್ತು ಇತರ ಆಯ್ಕೆಗಳನ್ನು ಬಳಸಿಕೊಂಡು ಪಾವತಿಗಳನ್ನು ಮಾಡಬಹುದಾಗಿದೆ. ಇಷ್ಟೇ ಅಲ್ಲದೇ ಬಿಗ್‌ಬಾಸ್ಕೆಟ್, 1mg ಗಳಲ್ಲಿನ ಲಾಯಲ್ಟಿ ಕೊಡುಗೆ ಬದಲು ಅವುಗಳನ್ನು ಟಾಟಾ NeuCoins ಜೊತೆ ವೀಲಿನಗೊಳಿಸಲು ಕಂಪೆನಿ ಚಿಂತಿಸಿದೆ.

Tata ಕಂಪೆನಿ ಸಮೂಹದ ನೂತನ Tata Neu ಅಪ್ಲಿಕೇಷನ್ ಒಂದು ಸೂಪರ್ ಆಪ್ ಆಗಿರಲಿದ್ದು ಅಮೇಜಾನ್, ಪೇಟಿಎಂ, ಜಿಯೋ ಸೇರಿದಂತೆ ಹಲವಾರು ಕಂಪನಿಗಳು ಸೂಪರ್ ಆಪ್ಲಿಕೇಶನ್‌ಗಳ ವಿರುದ್ಧ ಇದು ಸೇವೆಯನ್ನು ಒದಗಿಸಲಿದೆ. ಹಣ ಪಾವತಿ, ಸ್ಟ್ರೀಮಿಂಗ್, ಶಾಪಿಂಗ್, ಟಿಕೆಟ್ ಬುಕಿಂಗ್, ದಿನಸಿ ಸೇರಿದಂತೆ ಹಲವು ಸೇವೆಗಳು ಈ ಸೂಪರ್ ಆಪ್‌ನಲ್ಲಿ ಲಭ್ಯವಿರಲಿವೆ. ಇ ಮೊಬಿಲಿಟಿ, ಸೋಶಿಯಲ್ ಮೇಸೆಂಜಿಂಗ್, ಡಿಜಿಟಲ್ ಪೇಮೆಂಟ್, ಫುಡ್ ಡೆಲಿವರಿ, ತಂತ್ರಜ್ಞಾನ, ಆನ್‌ಲೈನ್ ಶಾಪಿಂಗ್, ಯುಟಿಲಿಟಿ ಬಿಲ್ ಸೇರಿದಂತೆ ಹಲವು ಸೇವೆಗಳನ್ನು Tata Neu ಆಪ್ನೀಡಲಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :