Vikrant Rona: ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರಕ್ಕೆ ಒಟಿಟಿಯಲ್ಲಿ 100 ಕೋಟಿ ರೂಗಳ ಆಫರ್ ಬಂದಿತ್ತು!

Vikrant Rona: ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರಕ್ಕೆ ಒಟಿಟಿಯಲ್ಲಿ 100 ಕೋಟಿ ರೂಗಳ ಆಫರ್ ಬಂದಿತ್ತು!
HIGHLIGHTS

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ (Vikrant Rona Kannada Movie) ಈ ವರ್ಷ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಕಿಚ್ಚ ಸುದೀಪ್ ಅವರ ದೊಡ್ಡ ಬಜೆಟ್ ಚಿತ್ರ, ವಿಕ್ರಾಂತ್ ರೋಣ ಫೆಬ್ರವರಿ 24 ರಂದು ಬಹು ಭಾಷೆಗಳಲ್ಲಿ ಬಿಡುಗಡೆಯಾಗಬೇಕಿತ್ತು

ಕೋವಿಡ್ -19 ಪರಿಸ್ಥಿತಿಯಿಂದಾಗಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ತಯಾರಕರು ಈಗ ಘೋಷಿಸಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ (Vikrant Rona Kannada Movie) ಈ ವರ್ಷ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಕಿಚ್ಚ ಸುದೀಪ್ ಅವರ ದೊಡ್ಡ ಬಜೆಟ್ ಚಿತ್ರ, ವಿಕ್ರಾಂತ್ ರೋಣ ಫೆಬ್ರವರಿ 24 ರಂದು ಬಹು ಭಾಷೆಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್ -19 ಪರಿಸ್ಥಿತಿಯಿಂದಾಗಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ತಯಾರಕರು ಈಗ ಘೋಷಿಸಿದ್ದಾರೆ. ನಟ ನಿರೂಪ್ ಭಂಡಾರಿ ಅವರು ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಭರವಸೆ ನೀಡಿದರು.

ಕೋವಿಡ್-19 ಪ್ರಕರಣಗಳು ಮತ್ತೆ ಏರಿಕೆ ಕಾಣುತ್ತಿರುವುದರಿಂದ ದೇಶಾದ್ಯಂತ ಥಿಯೇಟರ್‌ಗಳು ಮತ್ತೆ ಮುಚ್ಚುವ ಸಾಧ್ಯತೆಯಿದೆ. ಹಲವು ಚಿತ್ರಗಳು ಒಟಿಟಿ ರಿಲೀಸ್ ಆಗುತ್ತಿವೆ. ಇದರಿಂದಾಗಿ ವರದಿಯ ಪ್ರಕಾರ OTT ದೈತ್ಯನಿಂದ ವಿಕ್ರಾಂತ್ ರೋಣ (Vikrant Rona Kannada Movie)ಗೆ 100 ಕೋಟಿ ರೂ. ನಿರ್ದೇಶಕ ಅನುಪ್ ಭಂಡಾರಿ ಮತ್ತು ನಿರ್ಮಾಪಕ ಜಾಕ್ ಮಂಜುನಾಥ್ ಆಫರ್ ಬಗ್ಗೆ ತೆರೆದಿಟ್ಟರು. ಸದ್ಯಕ್ಕೆ ಆನ್ಲೈನ್ OTT ಅಲ್ಲಿ ಬಿಡುಗಡೆಯಾಗುವ ದಿನಾಂಕವನ್ನು ಇನ್ನು ಬಹಿರಂಗಗೊಳಿಸಿಲ್ಲ.

OTT ಪ್ಲಾಟ್‌ಫಾರ್ಮ್‌ನಿಂದ ವಿಕ್ರಾಂತ್ ರೋಣ (Vikrant Rona Kannada Movie)ಗೆ 100 ಕೋಟಿ ರೂ ಆಫರ್!

ಅನುಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ 24 ಫೆಬ್ರವರಿ 2022 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಮಹಾಮಾರಿ ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ದೇಶದ್ಯಂತ ಚಲನಚಿತ್ರದ ನಿರ್ಮಾಣವು ವಿಳಂಬವಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಅನೇಕ ಚಲನಚಿತ್ರ ನಿರ್ಮಾಪಕರು ಚಿತ್ರವನ್ನು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಮಾಧ್ಯಮ ಸಂವಾದದ ಸಂದರ್ಭದಲ್ಲಿ ವಿಕ್ರಾಂತ್ ರೋಣ (Vikrant Rona Kannada Movie) ನಿರ್ಮಾಪಕ ಜಾಕ್ ಮಂಜುನಾಥ್ ಹೌದು ಆಫರ್ ನೀಡಿರುವುದು ನಿಜ ಆದರೆ ವಿಕ್ರಾಂತ್ ರೋಣ ದೊಡ್ಡ ಸ್ಕ್ರಿನ್ ಅನುಭವವನ್ನು ಹೆಚ್ಚಾಗಿ ನೀಡುತ್ತದೆ. 

ನಾನು ವೈಯಕ್ತಿಕವಾಗಿ ನೋಡಿದ ನಂತರ ಈ ದೃಶ್ಯಗಳು ದೊಡ್ಡ ಸ್ಕ್ರಿನ್ ಮೇಲೆ ಪೂರ್ತಿ ಕುಟುಂಬಗಳು ಮತ್ತು ಮಕ್ಕಳು ಆಸಕ್ತಿವಹಿಸಿ ಆನಂದಿಸುವ ವಿಷಯವಾಗಿದೆ. ಈ ವಿಕ್ರಾಂತ್ ರೋಣ (Vikrant Rona Kannada Movie) 3D ಅನುಭವವು ಪ್ರೇಕ್ಷಕರು ಹೆಚ್ಚು ಬಯಸುವ ಸಂಗತಿಯಾಗಿದೆ. ಇದು ದೇಶದ ಅತಿದೊಡ್ಡ ಸ್ಕಿರ್ನ್ಗಳಿಗೆ ಅರ್ಹವಾದ ಚಲನಚಿತ್ರವಾಗಿದ್ದು ಅದು ಪ್ರೇಕ್ಷಕರಿಗೆ ಸಿನಿಮೀಯ ಅನುಭವವನ್ನು ಕಡಿಮೆಗೊಳಿಸುವುದು ಸೂಕ್ತವಲ್ಲವೆಂದು ಹೇಳಿದ್ದಾರೆ.

ನಿರ್ದೇಶಕ ಅನುಪ್ ಭಂಡಾರಿ ಆಫರ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದೊಂದು ಉತ್ತಮ ಕೊಡುಗೆಯಾಗಿದೆ. ಚಿತ್ರಕ್ಕೆ ಅರ್ಹವಾದ ಮೆಚ್ಚುಗೆಯನ್ನು ಪಡೆಯುತ್ತಿರುವುದು ಸಂತೋಷವಾಗಿದೆ. ಚಿತ್ರದ 3D ಆವೃತ್ತಿಯು ನಿಜವಾಗಿಯೂ ಉತ್ತಮವಾಗಿ ರೂಪುಗೊಂಡಿದೆ ಮತ್ತು ಇದು ದೊಡ್ಡ ಪರದೆಯ ಮೇಲೆ ಪ್ರೇಕ್ಷಕರಿಗೆ ಒಂದು ಅನುಭವವಾಗಿದೆ. ಯಾವುದೇ ಚಿತ್ರ ನಿರ್ಮಾಪಕರು ಪ್ರೇಕ್ಷಕರು ಚಿತ್ರವನ್ನು ಆಲೋಚಿಸಿದ ರೀತಿಯಲ್ಲಿ ಆನಂದಿಸಬೇಕೆಂದು ಬಯಸುತ್ತಾರೆ ಮತ್ತು ತಂಡವು ಸಹ ಅದೇ ರೀತಿ ಭಾವಿಸುತ್ತಾರೆ.

ವಿಕ್ರಾಂತ್ ರೋಣ (Vikrant Rona Kannada Movie) ಬಗ್ಗೆ ಒಂದಿಷ್ಟು! 

ವಿಕ್ರಾಂತ್ ರೋಣ (Vikrant Rona Kannada Movie) ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಆಗಿದೆ. ಈ ಚಿತ್ರಕ್ಕೆ ಆರಂಭದಲ್ಲಿ ಫ್ಯಾಂಟಮ್ ಎಂದು ಹೆಸರಿಡಲಾಗಿತ್ತು. ನಂತರ ತಯಾರಕರು ಶೀರ್ಷಿಕೆಯನ್ನು ವಿಕ್ರಾಂತ್ ರೋಣ ಎಂದು ಬದಲಾಯಿಸಿದರು. 3ಡಿ ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ 14 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ವಿಕ್ರಾಂತ್ ರೋಣದಲ್ಲಿ ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್, ಸಿದ್ದು ಮೂಲಿಮನಿ ಮತ್ತು ರವಿಶಂಕರ್ ಗೌಡ ಕಾಣಿಸಿಕೊಂಡಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬುರ್ಜ್ ಖಲೀಫಾದಲ್ಲಿ ಬಿಡುಗಡೆ ಮಾಡಲಾಯಿತು. ಸದ್ಯ ವಿಕ್ರಾಂತ್ ರೋಣ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo