ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡು ಪಿಎಫ್​ ಹಣವನ್ನು ಆನ್‌ಲೈನ್‌ನಲ್ಲಿ ಸರಳವಾಗಿ ಡ್ರಾ ಮಾಡಿ!

ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡು ಪಿಎಫ್​ ಹಣವನ್ನು ಆನ್‌ಲೈನ್‌ನಲ್ಲಿ ಸರಳವಾಗಿ ಡ್ರಾ ಮಾಡಿ!
HIGHLIGHTS

ಉದ್ಯೋಗಿಗಳ ಭವಿಷ್ಯ ನಿಧಿ (EPF) ಇದನ್ನು ಪಿಎಫ್ (ಪ್ರಾವಿಡೆಂಟ್ ಫಂಡ್) ಎಂದೂ ಕರೆಯಲಾಗುತ್ತದೆ.

EPF ನಿಯಮಗಳ ಪ್ರಕಾರ ಉದ್ಯೋಗಿಗಳು ತಮ್ಮ ಮೂಲ ವೇತನದ 12% ಅನ್ನು ಪ್ರತಿ ತಿಂಗಳು ಈ ನಿಧಿಗೆ ನೀಡಬೇಕು.

ಪಿಎಫ್ ಖಾತೆಗೆ ಹಣವನ್ನು ಜಮಾ ಮಾಡಲು ಆಧಾರ್ ಕಾರ್ಡ್ ಅನ್ನು ಯುಎಎನ್ ಗೆ ಲಿಂಕ್ ಮಾಡಿರಬೇಕು ಜೊತೆಗೆ KYC ಪೂರ್ಣಗೊಂಡಿರಬೇಕು.

ಉದ್ಯೋಗಿಗಳ ಭವಿಷ್ಯ ನಿಧಿ (EPF) ಇದನ್ನು ಪಿಎಫ್ (ಪ್ರಾವಿಡೆಂಟ್ ಫಂಡ್) ಎಂದೂ ಕರೆಯಲಾಗುತ್ತದೆ. ಇದು ಅರ್ಹ ಸಂಸ್ಥೆಯ ಉದ್ಯೋಗಿಗಳಿಗೆ ಕಡ್ಡಾಯ ಉಳಿತಾಯ ಮತ್ತು ನಿವೃತ್ತಿ ಯೋಜನೆಯಾಗಿದೆ. ಉದ್ಯೋಗಿಗಳು ತಮ್ಮ ನಿವೃತ್ತ ಜೀವನದಲ್ಲಿ ಈ ನಿಧಿಯ ಕಾರ್ಪಸ್‌ಗೆ ಹಿಂತಿರುಗಬಹುದು. EPF ನಿಯಮಗಳ ಪ್ರಕಾರ ಉದ್ಯೋಗಿಗಳು ತಮ್ಮ ಮೂಲ ವೇತನದ 12% ಅನ್ನು ಪ್ರತಿ ತಿಂಗಳು ಈ ನಿಧಿಗೆ ನೀಡಬೇಕು. ಉದ್ಯೋಗದಾತನು ಉದ್ಯೋಗಿಯ PF ಖಾತೆಗೆ ಹೊಂದಾಣಿಕೆಯ ಮೊತ್ತವನ್ನು ನೀಡುತ್ತಾರೆ. 

EPF ಖಾತೆಗಳಲ್ಲಿ ಠೇವಣಿ ಮಾಡಿದ ಮೊತ್ತವು ವಾರ್ಷಿಕ ಆಧಾರದ ಮೇಲೆ ಬಡ್ಡಿಯನ್ನು ಗಳಿಸುತ್ತದೆ. ಉದ್ಯೋಗಿಗಳು ನಿವೃತ್ತರಾದ ನಂತರ ತಮ್ಮ ಇಪಿಎಫ್‌ನಲ್ಲಿ ಸಂಗ್ರಹವಾದ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಅದಕ್ಕೂ ಮೊದಲು ಆನ್‌ಲೈನ್‌ ಮೂಲಕ ಹಣವನ್ನು ಹಿಂಪಡೆಯಲು ಉದ್ಯೋಗಿಗಳ ಭವಿಷ್ಯ ನಿಧಿ ಸದಸ್ಯ e-SEWA ಪೋರ್ಟಲ್ UAN ನಂಬರ್ ಮತ್ತು ಪಾಸ್ವರ್ಡ್ ತಿಳಿದಿರಬೇಕು. ಪಿಎಫ್ ಖಾತೆಗೆ ಹಣವನ್ನು ಜಮಾ ಮಾಡಲು ಆಧಾರ್ ಕಾರ್ಡ್ ಅನ್ನು ಯುಎಎನ್ ಗೆ ಲಿಂಕ್ ಮಾಡಿರಬೇಕು ಜೊತೆಗೆ KYC ಪೂರ್ಣಗೊಂಡಿರಬೇಕು.

ಪಿಎಫ್​ ಹಣವನ್ನು ಆನ್‌ಲೈನ್‌ನಲ್ಲಿ ಡ್ರಾ ಮಾಡುವುದೇಗೆ? 

ಹಂತ 1: ಮೊದಲಿಗೆ ಯುಎಎನ್ ಪೋರ್ಟಲ್ unifiedportal-mem.epfindia.gov.in/memberinterface/ ಗೆ ಭೇಟಿ ನೀಡಿ. 

ಹಂತ 2: ನಿಮ್ಮ ಯುಎಎನ್, ಪಾಸ್‌ವರ್ಡ್ ಮತ್ತು ಕ್ಯಾಪ್ಚಾವನ್ನು ಬಳಸಿಕೊಂಡು ಇ-ಸೇವಾ ಪೋರ್ಟಲ್ ಗೆ ಲಾಗ್ ಇನ್ ಮಾಡಿ.

ಹಂತ 3: ಆನ್‌ಲೈನ್ ಸೇವೆಗಳು (Online Services) ಕ್ಲಿಕ್ ಮಾಡಿ ಮತ್ತು ಕ್ಲೈಮ್ (Claim) ಆಯ್ಕೆಯನ್ನು ಆರಿಸಿ. ಆ ಬಳಿಕ ನಿಮ್ಮ ಬ್ಯಾಂಕ್ ಖಾತೆ ಮಾಹಿತಿಯನ್ನು ನಮೂದಿಸಿ.ನಂತರ Proceed for Online Claim ಮೇಲೆ ಕ್ಲಿಕ್ ಮಾಡಿ.

ಹಂತ 4: ಬಳಿಕ ಕ್ಲೈಮ್ ಫಾರ್ಮ್‌ನಲ್ಲಿ ಡ್ರಾಪ್‌ಡೌನ್ ಬಾಕ್ಸ್‌ನಿಂದ ಹಣವನ್ನು ಹಿಂತೆಗೆದುಕೊಳ್ಳಲು ಕಾರಣವನ್ನು ಆಯ್ಕೆಮಾಡಿ. ಅಗತ್ಯ ವಿವರಗಳು ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಬಳಿಕ ಒಟಿಪಿಗಾಗಿ ವಿನಂತಿಸಿ. 

ಹಂತ 5: ಒಟಿಪಿ ಬಂದ ಕೂಡಲೇ ಅಪ್​ಲೋಡ್​ ಮಾಡಿ ಮತ್ತುಕ್ಲೈಮ್ ಅರ್ಜಿಯನ್ನು ಸಲ್ಲಿಸಿ. ಕೆಲ ದಿನಗಳಲ್ಲಿ ನಿಮ್ಮ ಹಣ ನಿಮ್ಮ ರಿಜಿಸ್ಟರ್​ ಖಾತೆಗೆ ಬರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo