ವಕೀಲನ ಖಾತೆಯಿಂದ 50 ಲಕ್ಷ ಉಡೀಸ್ ಮಾಡಿದ ಹ್ಯಾಕರ್ ಕಹಾನಿ
ಫೋನ್ ಹ್ಯಾಕಿಂಗ್ ವಂಚನೆಗಳು ಎಷ್ಟು ಸಾಮಾನ್ಯವಾಗಿದೆ ಎಂದರೆ ಪ್ರತಿ ಐವರಲ್ಲಿ ಇಬ್ಬರು ಈ ಬಲೆಗೆ ಬೀಳುತ್ತಿದ್ದಾರೆ.
ಇದು ಸಿಮ್ ವಿನಿಮಯ (SIM Swap Scam) ಪ್ರಕರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ
ಫೋನ್ ಹ್ಯಾಕಿಂಗ್ ವಂಚನೆಗಳು ಎಷ್ಟು ಸಾಮಾನ್ಯವಾಗಿದೆ ಎಂದರೆ ಪ್ರತಿ ಐವರಲ್ಲಿ ಇಬ್ಬರು ಈ ಬಲೆಗೆ ಬೀಳುತ್ತಿದ್ದಾರೆ. ಇತ್ತೀಚೆಗೆ ಉತ್ತರ ದೆಹಲಿಯಲ್ಲಿ ವಾಸಿಸುವ ವಕೀಲರೊಬ್ಬರು ಈ ಬಲೆಗೆ ಬಿದ್ದಿದ್ದಾರೆ. ಈ ಸಿಮ್ ಸ್ವಾಪ್ ಹಗರಣದಲ್ಲಿ (SIM Swap Scam) ಇವರು 50 ಲಕ್ಷ ರೂಪಾಯಿ ಕಳೆದುಕೊಂಡಿರುವ ಹೊಸ ಘಟನೆ ಈಗ ಬೆಳಕಿಗೆ ಬಂದಿದೆ. ಈ ವೇಳೆ ವಕೀಲರು ಕರೆ ಸ್ವೀಕರಿಸಲಿಲ್ಲ ಅಲ್ಲದೆ ಯಾರೊಂದಿಗೂ ಯಾವುದೇ ವಿವರಗಳನ್ನು ಸಹ ಹಂಚಿಕೊಂಡಿಲ್ಲ. ವಾಸ್ತವವಾಗಿ ಅಪರಿಚಿತ ಸಂಖ್ಯೆಗಳಿಂದ ವ್ಯಕ್ತಿಯ ಸಂಖ್ಯೆಗೆ 3 ಮಿಸ್ಡ್ ಕಾಲ್‌ಗಳನ್ನು ಸ್ವೀಕರಿಸಲಾಗಿದೆ. ಇದಾದ ಬಳಿಕ ಅವರ ಖಾತೆಯಲ್ಲಿ ಭಾರಿ ನಷ್ಟದ ದೊಡ್ಡ ವಂಚನೆ ನಡೆದಿದೆ.
Also Read: Laptop Sale 2023: ಅಮೆಜಾನ್ ಸೇಲ್‌ನಲ್ಲಿ ಈ ಲ್ಯಾಪ್‌ಟಾಪ್‌ಗಳ ಮೇಲೆ ಭಾರಿ ಡೀಲ್‌ಗಳು
ಸಿಮ್ ವಿನಿಮಯ (SIM Swap Scam) ಪ್ರಕರಣ
ಇದು ಸಿಮ್ ವಿನಿಮಯ (SIM Swap Scam) ಪ್ರಕರಣವಾಗಿರಬಹುದು ಎಂದು ಪೊಲೀಸರು ಸದ್ಯಕ್ಕೆ ಶಂಕೆ ವ್ಯಕ್ತಪಡಿಸಿದ್ದಾರೆ. ವರದಿಗಳ ಪ್ರಕಾರ ವಕೀಲರೊಬ್ಬರು ಅಪರಿಚಿತ ಫೋನ್ ಸಂಖ್ಯೆಯಿಂದ ಮೂರು ಬಾರಿಯ ಮಿಸ್ಡ್ ಕಾಲ್‌ಗಳನ್ನು ಸ್ವೀಕರಿಸಿದ್ದಾರೆ. ಇದರ ನಂತರ ಅವರು ಆ ನಂಬರ್‌ಗೆ ಕರೆ ಮಾಡಿದಾಗ ಅದು ಸಾಮಾನ್ಯ ಕೊರಿಯರ್ ಡೆಲಿವರಿಯ ಕರೆಯಾಗಿತ್ತು. ವಕೀಲರು ಆತನಿಗೆ ತಮ್ಮ ಮನೆಯ ವಿಳಾಸ ನೀಡಿದರು. ಡೆಲಿವರಿ ಬಾಯ್ ತನ್ನ ಪಾರ್ಸೆಲ್ ಅನ್ನು ಅವರ ಮನೆಗೆ ಪ್ಯಾಕೇಜ್ ತಲುಪಿಸಿದ್ದಾನೆ. ಇದರ ನಂತರ ಅವರ ಖಾತೆಯಿಂದ ಹಣ ಕಳುವಾಗಿರುವ ಮೆಸೇಜ್ ಬಂದಿವೆ. ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ ತನಿಖೆಯ ಸಮಯದಲ್ಲಿ ಅವರ ಬ್ರೌಸರ್ ಕೆಲವು ಬ್ರೌಸಿಂಗ್ ಹಿಸ್ಟರಿಯನ್ನು ಹೊಂದಿದ್ದು ಅದು ಅಸಾಮಾನ್ಯವಾಗಿದೆ. ವ್ಯಕ್ತಿಗೆ ತಿಳಿದಿಲ್ಲದ ಕೆಲವು ಸೈಟ್‌ಗಳು ಮತ್ತು ಲಿಂಕ್‌ಗಳು ಸಹ ಇದ್ದವು. ಇದರೊಂದಿಗೆ ವ್ಯಕ್ತಿಗೆ ತಿಳಿದಿರದ ಕೆಲವು UPI ನೋಂದಣಿಗಳು ಮತ್ತು ಫಿಶಿಂಗ್ SMS ಸಹ ಫೋನ್ ಒಳಗಿತ್ತು ಹಣವನ್ನು ಕಡಿತಗೊಳಿಸಿದ ನಂತರ ವ್ಯಕ್ತಿಯು ತನ್ನನ್ನು IFSO ಅಧಿಕಾರಿ ಎಂದು ಪರಿಚಯಿಸಿಕೊಂಡ ಮೆಸೇಜ್ ಸ್ವೀಕರಿಸಿದನು. ಆದರೆ ವಕೀಲರು ಅವರೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
SIM ಸ್ವಾಪಿಂಗ್ ಹಗರಣ ಎಂದರೇನು?
ವಂಚಕರು ಸಿಮ್ ವಿನಿಮಯದ ಮೂಲಕ ಸಿಮ್ ಕಾರ್ಡ್‌ಗಳನ್ನು ಪಡೆಯುತ್ತಾರೆ. ಇದರೊಂದಿಗೆ ಅವರು ಬಳಕೆದಾರರ ವಿವರಗಳನ್ನು ಮತ್ತು ಹಣವನ್ನು ಕದಿಯುತ್ತಾರೆ. ಸ್ಕ್ಯಾಮರ್ ಬಳಕೆದಾರರ ಸಿಮ್‌ಗೆ ಪ್ರವೇಶವನ್ನು ಪಡೆದಾಗ ಅವನು ಬಳಕೆದಾರರ ಸ್ನೇಹಿತರು ಮತ್ತು ಸಂಬಂಧಿಕರಿಂದ ಹಣವನ್ನು ಕೇಳುತ್ತಾನೆ. ಇತ್ತೀಚಿನ ದಿನಗಳಲ್ಲಿ ಬಹು ಅಂಶಗಳ ಪರಿಶೀಲನೆಯು (Multi-factor authentication) ಅಗತ್ಯವಾಗಿದೆ. ಆದ್ದರಿಂದ ಸ್ಕ್ಯಾಮರ್ ನಿಮ್ಮ ಸಿಮ್ ಕಾರ್ಡ್ ಅನ್ನು ಪ್ರವೇಶಿಸಿದರೆ ನಿಮ್ಮ ಸಂಪೂರ್ಣ ಖಾತೆಯನ್ನು ಖಾಲಿ ಮಾಡಲು ಸಮಯ ತೆಗೆದುಕೊಳ್ಳುವುದಿಲ್ಲ.
ಸಿಮ್ ಸ್ವಾಪಿಂಗ್‌ನಿಂದ ಸುರಕ್ಷಿತವಾಗಿರುವುದು ಹೇಗೆ?
- ಮೊದಲಿಗೆ ನಿಮ್ಮ ಸಿಮ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ ತಕ್ಷಣವೇ ನಿಮ್ಮ ಟೆಲಿಕಾಂ ಆಪರೇಟರ್‌ಗೆ ತಿಳಿಸಿ ದೂರು ನೀಡಿ.
- ಪಾಸ್‌ವರ್ಡ್ ಇಲ್ಲದೆ ನಿಮ್ಮ ಫೋನ್‌ನಲ್ಲಿ ಬೇರೆಯವರು ನಿಮ್ಮ ಸಿಮ್ ಅನ್ನು ಬಳಸದಂತೆ ತಡೆಯಲು ನೀವು ಸಿಮ್ ಅನ್ನು ಲಾಕ್ ಮಾಡಲು ಸಹ ಸಾಧ್ಯವಾಗುತ್ತದೆ.
- ನಿಮ್ಮ ಯಾವುದೇ ವೈಯಕ್ತಿಕ ಅಥವಾ ಬ್ಯಾಂಕಿಂಗ್ ಮಾಹಿತಿಗಳನ್ನು ನೀವು ಇಂದಿಗೂ ಯಾರೊಂದಿಗೂ ಹಂಚಿಕೊಳ್ಳಬೇಡಿ.
- ನಿಮಗೆ ಯಾವುದೇ ಅನುಮಾನಾಸ್ಪದ ಮೆಸೇಜ್ ಅಥವಾ ಕರೆ ಬಂದರೆ ತಕ್ಷಣವೇ ಕನೆಕ್ಷನ್ ಸಂಪರ್ಕ ಕಡಿತಗೊಳಿಸಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿ.
- ಅಪರಿಚಿತ ಕರೆ ಅಥವಾ ಕೋಡ್ಗಳಿಗೆ ಸಾಧ್ಯವಾದಷ್ಟು ಯಾವುದೇ ಪ್ರತಿಕ್ರಿಯೆಗಳನ್ನು ನೀಡಬೇಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile