SIM Cards 2024: 1ನೇ ಜನವರಿ 2024 ರಿಂದ ಸಿಮ್ ಕಾರ್ಡ್‌ಗಳಿಗೆ ಹೊಸ ನಿಯಮ ಜಾರಿ | Tech News

SIM Cards 2024: 1ನೇ ಜನವರಿ 2024 ರಿಂದ ಸಿಮ್ ಕಾರ್ಡ್‌ಗಳಿಗೆ ಹೊಸ ನಿಯಮ ಜಾರಿ | Tech News
HIGHLIGHTS

ಸಿಮ್ ಕಾರ್ಡ್‌ಗಳ (SIM Card) ವಂಚನೆಗಳನ್ನು ತಡೆಯಲು ಸರ್ಕಾರದಿಂದ ಹೊಸ ನಿಯಮಗಳಲ್ಲಿ ತರಲು ಸಜ್ಜಾಗಿದೆ

ಹೊಸ ಸಿಮ್ ಕಾರ್ಡ್ ಖರೀದಿಸಲು ಇನ್ಮುಂದೆ ಯಾವುದೇ ದಾಖಲೆಗಳನ್ನು ಪ್ರಿಂಟ್ ಮಾಡಿ ನೀಡುವ ಅಗತ್ಯಗಳಿರುವುದಿಲ್ಲ

1ನೇ ಜನವರಿ 2024 ರಿಂದ ಹೊಸ ಸಿಮ್ ಕಾರ್ಡ್ (SIM Card) ಪಡೆಯುವಾಗ ಅನೇಕ ವಿಷಯಗಳನ್ನು ಅನುಸರಿಸುವುದು ಅನಿವಾರ್ಯ

SIM Cards 2024: ಭಾರತದಲ್ಲಿ ಡಿಪಾರ್ಟ್ಮೆಂಟ್ ಒಫ್ ಟೆಲಿಕಮ್ಯುನಿಕೇಷನ್ (DoT) ಆನ್ಲೈನ್ ಮತ್ತು ಸಿಮ್ ಕಾರ್ಡ್‌ಗಳ (SIM Scams) ವಂಚನೆಗಳನ್ನು ತಡೆಯಲು ಸರ್ಕಾರ ಹೊಸ 2024 ವರ್ಷದಿಂದ ಹಲವು ಸಿಮ್ ನಿಯಮಗಳಲ್ಲಿ ಭಾರಿ ಬದಲಾವಣೆಗಳನ್ನು ತರಲು ಸಜ್ಜಾಗಿದೆ. ಈ ಮೂಲಕ ಇನ್ಮುಂದೆ ನೀವು ಹೊಸ ಸಂಖ್ಯೆಯನ್ನು ಪಡೆಯಲು ಈ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ನೀವು ಇದನ್ನು ನೀವು ನಿರ್ಲಕ್ಷಿಸಿದರೆ ಭಾರಿ ನಷ್ಟವನ್ನು ಅನುಭವಿಸುತ್ತೀರಿ ಮಾತ್ರವಲ್ಲದೆ 1ನೇ ಜನವರಿ 2024 ರಿಂದ ಹೊಸ ಸಿಮ್ ಕಾರ್ಡ್ (SIM Card) ಪಡೆಯುವಾಗ ಅನೇಕ ವಿಷಯಗಳನ್ನು ಅನುಸರಿಸುವುದು ಅನಿವಾರ್ಯವಾಗಿ ಕಡ್ಡಾಯಗೊಳಿಸಲಿದೆ.

Also Read: Lava Storm 5G ಫೋನ್ ಡ್ಯೂಯಲ್ ಕ್ಯಾಮೆರಾ ಮತ್ತು Powerful ಪ್ರೊಸೆಸರ್‌ನೊಂದಿಗೆ ಬಿಡುಗಡೆಗೆ ಡೇಟ್ ಫಿಕ್ಸ್

SIM Cards 2024: ಪೇಪರ್ ರಹಿತ KYC ಕಡ್ಡಾಯ!

ಈ ಹೊಸ ನಿಯಮದಲ್ಲಿ ನೀವು ಗಮನಿಸಬೇಕಿರುವ ಬಹು ಮುಖ್ಯವಾದ ಅಂಶವೆಂದರೆ ಹೊಸ ಸಿಮ್ ಕಾರ್ಡ್ ಖರೀದಿಸಲು ಇನ್ಮುಂದೆ ಯಾವುದೇ ದಾಖಲೆಗಳನ್ನು ಪ್ರಿಂಟ್ ಮಾಡಿ ನೀಡುವ ಅಗತ್ಯಗಳಿರುವುದಿಲ್ಲ. ಒಂದು ವೇಳೆ ಯಾವುದೇ ಅಂಗಡಿಯಲ್ಲಿ ನಿಮ್ಮ ದಾಖಲೆಯನ್ನು ಜೆರಾಕ್ಸ್ ಮಾಡಿ ನೀಡುವಂತೆ ಕೇಳಿದರೆ ಅಥವಾ ಅವರೇ ನಿಮ್ಮ ದಾಖಲೆಯ ಪ್ರಿಂಟ್ ಪಡೆದರೆ ಅದು ಈಗ ಕಾನೂನು ಬಾಹಿರವಾಗಿದೆ. ನಮ್ಮ ಸಲಹೆ ಅಂದ್ರೆ ನೀವು ನೇರವಾಗಿ Jio, Airtel, Vi ಅಥವಾ BSNL ಸ್ಟೋರ್‌ಗಳಿಗೆ ನೇರವಾಗಿ ಹೋಗಿ ದಾಖಲೆಗಳ ಮಾಹಿತಿಯನ್ನು ಮಾತ್ರ ನೀಡಿ ಹೊಸ ಸಿಮ್ ಕಾರ್ಡ್ ಪಡೆಯಬಹುದು.

SIM Cards 2024

ಈ ಮೂಲಕ ನೀವು ಹೊಸ ಸಿಮ್ ಕಾರ್ಡ್‌ಗೆ ಪೇಪರ್ ರಹಿತ KYC ಅನ್ನು ಸಹ ಪೂರ್ಣಗೊಳಿಸಿ ವಂಚನೆಗಳಿಗೆ ಆರಂಭದಿಂದಲೇ ಕಡಿವಾಣ ಹಾಕಬಹುದು. ಅಂದ್ರೆ ನಿಮ್ಮ ದಾಖಲೆ ಮಾತ್ರವಲ್ಲದೆ ಹೊಸ ಸಿಮ್ ಪಡೆಯಲು ಈಗ ಭಾರತೀಯ ಮೊಬೈಲ್ ಬಳಕೆದಾರರು ಯಾವುದೇ ಪೇಪರ್ ಫಾರ್ಮ್ ಅನ್ನು ಸಹ ಭರ್ತಿ ಮಾಡದೆಯೇ ಹೊಸ ಸಿಮ್ ಕಾರ್ಡ್ ಪಡೆಯಬಹುದು. ದೂರಸಂಪರ್ಕ ಇಲಾಖೆಯ ಇತ್ತೀಚೆಗೆ ಹೊರಡಿಸಿದ ನೋಟಿಫಿಕೇಶನ್ ಪ್ರಕಾರ ವಾಸ್ತವವಾಗಿ ಸೈಬರ್ ಅಪರಾಧವನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಇದು ನಕಲಿ ಸಿಮ್ ಕಾರ್ಡ್‌ಗಳನ್ನು ಮತ್ತು ವಂಚನೆಗಳಿಗೆ ಬ್ರೇಕ್ ನೀಡಲಿದೆ.

ದುರುಪಯೋಗವಾದ್ರೆ ಸಿಮ್ ನೀಡುವ ಅಂಗಡಿ / ಸ್ಟೋರ್ ಹೊಣೆ

ಯಾವುದೇ ಅಂಗಡಿ ಅಥವಾ ಸ್ಟೋರ್ನಿಂದ ನೀವು ಪಡೆದ ಸಿಮ್ ಕಾರ್ಡ್‌ಗಳಿಗೆ ಒಂದು ರೀತಿಯಲ್ಲಿ ಸಿಮ್ ಸೆಲ್ ಪಾಯಿಂಟ್ ಬಗ್ಗೆಯೂ ಮಾಹಿತಿ ಪಡೆಯಲಾಗುವುದು. ಏಕೆಂದರೆ ಭವಿಷ್ಯದಲ್ಲಿ ಯಾವುದೇ ಅಪರಾಧ ಸಂಭವಿಸಿದರೆ ಈ ವಿಷಯದಲ್ಲಿ ಮಾರಾಟದ ಪಾಯಿಂಟ್ ಅನ್ನು ಸಹ ಪ್ರಶ್ನಿಸಬಹುದು. ಏಕೆಂದರೆ ಇದರೊಂದಿಗೆ ಅಂಗಡಿ / ಸ್ಟೋರ್ ಆ ಕನೆಕ್ಷನ್ ಮೇಲೆ ಹಿಡಿತವನ್ನು ತನ್ನೊಂದಿಗೆ ಇಟ್ಟುಕೊಳ್ಳುತ್ತದೆ. ಈ ಕುರಿತು ಈಗಾಗಲೇ 9ನೇ ಆಗಸ್ಟ್ 2022 ರಂದು ಸರ್ಕಾರ ನೋಟಿಫಿಕೇಶನ್ ಹೊರಡಿಸಿದ್ದು ಅದರಲ್ಲಿ ಪೇಪರ್ ಆಧಾರಿತ ಕೆವೈಸಿಗೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು ಆದರೆ ಈಗ ಅದನ್ನು ಬದಲಾಯಿಸಿದೆ.

ಬಯೋಮೆಟ್ರಿಕ್ ಆಧಾರದ ಮೇಲೆ ಮಾತ್ರ ಸಿಮ್ ಕಾರ್ಡ್ ಲಭ್ಯ

ಭಾರತದಲ್ಲಿ ಜನ ಸಾಮಾನ್ಯರಿಗೆ ಸಿಮ್ ಕಾರ್ಡ್ (SIM Card) ಪಡೆಯಲು ಯಾವುದೇ ತೊಂದರೆಗಳಾಗುವುದಿಲ್ಲ. ಆದರೆ ಇನ್ಮುಂದೆ ಕೇವಲ ಬಯೋಮೆಟ್ರಿಕ್ ಆಧಾರದ ಮೇಲೆ ಮಾತ್ರ ಸಿಮ್ ಕಾರ್ಡ್‌ಗಳನ್ನು ಜನರಿಗೆ ನೀಡಲಾಗುವುದು. ಯಾವುದೇ ನಕಲಿ ಅಥವಾ ಬಹು ಸಿಮ್ ಕಾರ್ಡ್ ನೀಡಲಾಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮೊದಲು ಸಾಮಾನ್ಯವಾಗಿ ಜನರು ಯಾವುದೇ / ಯಾರದೋ ಐಡಿ ಕಾರ್ಡ್‌ಗಳನ್ನು ನೀಡಿ ಸಿಮ್ ಕಾರ್ಡ್ ಅನ್ನು ಪಡೆಯುತ್ತಿದ್ದರು. ನಂತರ ಅದನ್ನು ಅಪರಾಧದ ಉದ್ದೇಶಕ್ಕೂ ಬಳಸಲಾಗುತ್ತಿತ್ತು ಆದರೆ ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಹೊಸ ನಿಯಮವನ್ನು ಜಾರಿಗೊಳಿಸಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo