Screen Time For Kids: 2 ವರ್ಷಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ TV ಮತ್ತು Smartphone ವೀಕ್ಷಣೆ ನಿಷೇಧಿಸಿರುವ ಸರ್ಕಾರ!

Screen Time For Kids: 2 ವರ್ಷಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ TV ಮತ್ತು Smartphone ವೀಕ್ಷಣೆ ನಿಷೇಧಿಸಿರುವ ಸರ್ಕಾರ!
HIGHLIGHTS

ಸ್ಕ್ರೀನ್ ಸಮಯವನ್ನು (Screen Time For Kids) ಕಡಿಮೆಗೊಳಿಸಲು ಹೊಸ ನಿಯಮವೊಂದನ್ನು ಜಾರಿಗೊಳಿಸಿದೆ.

ಪುಟಾಣಿ ಮಕ್ಕಳು ಮತ್ತು ಯುವಜನತೆ ಸ್ಮಾರ್ಟ್​ಫೋನ್​ ಕೈಗಿಡದಿದ್ದರೆ ಊಟ ಮಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಅಥವಾ ಸ್ಮಾರ್ಟ್ ಡಿವೈಸ್ ಇಲ್ಲದೆ ಒಂದು ತಾಸು ಕಳೆಯಲು ಸಾಧ್ಯವಾಗದ ಸಮಯದಲ್ಲಿ ಸ್ವೀಡನ್ (Sweden) ದೇಶ ಮಕ್ಕಳ ಮತ್ತು ಯುವಜನತೆಯ ಮಾಡುವ ಕಾರ್ಯಗಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು ಸ್ಮಾರ್ಟ್​ಟಿವಿ, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್​ಫೋನ್​ಗಳ ಸ್ಕ್ರೀನ್ ಸಮಯವನ್ನು (Screen Time For Kids) ಕಡಿಮೆಗೊಳಿಸಲು ಅತ್ಯುತ್ತಮವಾದ ಮತ್ತು ಇಂದಿನ ದಿನಗಳಲ್ಲಿ ಹೆಚ್ಚು ಅಗತ್ಯವಿರುವ ಹೊಸ ನಿಯಮವೊಂದನ್ನು ಜಾರಿಗೊಳಿಸಿದೆ. ಭಾರತದಲ್ಲಿ ಸಾಮಾನ್ಯವಾಗಿ ಹೆಚ್ಚು ಕಾಣುವ ಕೆಟ್ಟ ಆಭ್ಯಾಸಗಳಲೊಂದಾಗಿರುವ ಚಟ ಅಂದ್ರೆ ಪುಟಾಣಿ ಮಕ್ಕಳು ಮತ್ತು ಯುವಜನತೆ ಸ್ಮಾರ್ಟ್​ಫೋನ್​ ಕೈಗಿಡದಿದ್ದರೆ ಊಟ ಮಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ.

Also Read: ಮುಂಬರುವ Realme P2 Pro 5G ಬಿಡುಗಡೆಗೆ ಡೇಟ್ ಫಿಕ್ಸ್, ನಿರೀಕ್ಷಿತ ಬೆಲೆ ಮತ್ತು ವಿಶೇಷಣಗಳೇನು?

ಏನಿದು ಸ್ವೀಡನ್ (Sweden) ಸರ್ಕಾರ ಹೊಸ ನಿಯಮ?

ಇದಕ್ಕೆ ಕಾರಣವಾಗಿರುವ ಹತ್ತಾರು ಬಗೆಯ ಸಮಸ್ಯೆಗಳು ಬಾಲ್ಯದಲ್ಲಿಯೇ ಉಲ್ಬಣಗೊಳ್ಳುತ್ತವೆ. ಪ್ರಸ್ತುತ ಇವೆಲ್ಲವನ್ನು ಗಮನಿಸಿದ ಸ್ವೀಡನ್ (Sweden) ಸರ್ಕಾರ ಭವಿಷ್ಯದಲ್ಲಿ ಇಂತಹ ಮಾರಕ ರೋಗಳಿಗೆ ಬಲಿಯಾಗುವುದು ಖಂಡಿತ ಎಂಬುದನ್ನು ಅರಿತು ಈ ಹೊಸ ನಿರ್ಧಾರವೊಂದನ್ನು ಮಾಡಿದೆ. ಏನಪ್ಪಾ ಈ ಹೊಸ ನಿಯಮ ಎನ್ನುವುದಾದರೆ 2 ವರ್ಷಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಟಿವಿ ಮತ್ತು ಸ್ಮಾರ್ಟ್ಫೋನ್ ವೀಕ್ಷಣೆ ನಿಷೇಧಿಸಿರುವ ಸರ್ಕಾರ!

Screen Time For Kids under the age of 2 Limited
Screen Time For Kids under the age of 2 Limited

ಸ್ವೀಡನ್​ ದೇಶವು ಇಂತಹದೊಂದು ನಿರ್ಧಾರಕ್ಕೆ ಬಂದಿದೆ. 2 ವರ್ಷಕ್ಕಿಂತ ಕೆಳಗಿನ ಮಕ್ಕಳು ಸ್ಮಾರ್ಟ್​ಫೋನ್​, ಸ್ಮಾರ್ಟ್​ಟಿವಿ ಬಳಸದಂತೆ ಪೋಷಕರನ್ನು ಒತ್ತಾಯಿಸಿದೆ. ಡಿಜಿಟಲ್​​​ ಮಾಧ್ಯಮ ಮತ್ತು ದೂರದರ್ಶನದಿಂದ ಸಂಪೂರ್ಣ ದೂರವಿಡಬೇಕು ಎಂದು ಕೇಳಿಕೊಂಡಿದೆ. ಸ್ಮಾರ್ಟ್​ಫೋನ್​ ಮತ್ತು ಸ್ಮಾರ್ಟ್​ಟಿವಿ ಸ್ಕ್ರೀನ್ ವೀಕ್ಷಣೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸ್ವೀಡನ್​ ಸರ್ಕಾರ ಹೇಳಿಕೆ ನೀಡಿದೆ. 2 ವರ್ಷಕ್ಕಿಂತ ದೊಡ್ಡ ಮಕ್ಕಳಿಗೆ ಸ್ಕ್ರೀನ್​ ಸಮಯವನ್ನು ನಿಯಂತ್ರಣದಲ್ಲಿಡಿ ಎಂದು ಹೇಳಿದೆ.

Screen Time For Kids: ಯಾರ್ಯಾರಿಗೆ ಎಷ್ಟು ಸಮಯ ಸ್ಕ್ರೀನ್ ಸಮಯ?

ಸರ್ಕಾರವು ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. 2 ರಿಂದ 5 ವರ್ಷದೊಳಗಿನ ಮಕ್ಕಳಿಗೆ ದಿನಕ್ಕೆ ಒಂದು ಗಂಟೆಯವರೆಗೆ ಮಾತ್ರ ಸ್ಕ್ರೀನ್​​ ಸಮಯ ಸೀಮಿತವಾಗಿರಬೇಕು ಎಂದು ಹೇಳಿದೆ. ನಂತರ 6 ರಿಂದ 12 ವಯಸ್ಸಿನ ಮಕ್ಕಳಿಗೆ ಸ್ಕ್ರೀನ್​ ಟೈಮಿಂಗ್​​​ ಪ್ರತಿದಿನ ಒಂದರಿಂದ ಎರಡು ಗಂಟೆಯವರೆಗೆ ನಿರ್ಬಂಧಿಸಬೇಕು. ಕೊನೆಯದಾಗಿ 13 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಪ್ರತಿದಿನ ಎರಡರಿಂದ ಮೂರು ಗಂಟೆಗಳ ಸ್ಕ್ರೀನ್ ಬಳಕೆಯನ್ನು ಮೀರಬಾರದು ಎಂದು ತಿಳಿಸಿದೆ.

Screen Time For Kids under the age of 2 Limited
Screen Time For Kids under the age of 2 Limited

ಮಲಗುವಾಗ ಸ್ಮಾರ್ಟ್​ಫೋನ್​ ಅಥವಾ ಟಿವಿ ಸ್ಕ್ರೀನ್ ವೀಕ್ಷಿಸುವುದನ್ನು ನಿಯಂತ್ರಿಸಿ ಎಂದು ಹೇಳಿದೆ. ಮಕ್ಕಳು ಮಲಗುವ ಕೋಣೆಯಲ್ಲಿ ಸ್ಮಾರ್ಟ್​ಫೋನ್​, ಟ್ಯಾಬ್ಲೆಟ್​​ ಇಡದಂತೆ ಕೇಳಿಕೊಂಡಿದೆ. ಸದ್ಯ ಮಕ್ಕಳಲ್ಲಿ ನಿದ್ರಾ ಬಿಕ್ಕಟ್ಟು ಎದುರಾಗುತ್ತಿದೆ. ಸ್ವೀಡನ್ (Sweden) ದೇಶದಲ್ಲಿ ಇತ್ತೀಚಿಗೆ ನಡೆಸಿದ ಪರೀಕ್ಷೆಯಲ್ಲಿ ಸುಮಾರು 15 ವರ್ಷದ ಮಕ್ಕಳು ಸರಿಯಾಗಿ ನಿದ್ರೆ ಮಾಡುತ್ತಿಲ್ಲ ಎಂಬ ವರದಿ ಹೊರಬಿದ್ದಿದೆ. ಇದರಿಂದಾಗಿ ಅವರಲ್ಲಿ ಖಿನ್ನತೆ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಿರುವ ಕಾರಣ ಸ್ವೀಡನ್ (Sweden) ದೇಶ ಈ ನಿರ್ಣಯಕ್ಕೆ ಬಂದಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo