Samsung AI: ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯ ಮತ್ತು ಹೆಚ್ಚು ಭರವಸೆಯ ಸ್ಮಾರ್ಟ್ಫೋನ್ ಬ್ರಾಂಡ್ ಸ್ಯಾಮ್‌ಸಂಗ್ ಈಗ ಲೇಟೆಸ್ಟ್ ಟೆಕ್ನಾಲಜಿಯನ್ನು AI (Artificial Intelligence) ಹೊಂದಿಕೊಂಡು ತನ್ನದೆಯಾದ ಹೊಸ ಆರ್ಟಿಫಿಷಿಯಲ್ ಇಂಟೆಲಿಜೆಂಟ್ ಅನ್ನು ಅಭಿವೃದ್ಧಿಪಡಿಸಿದೆ. ತನ್ನದೇಯಾದ ಭಾಷಾ ಮಾದರಿ ಸ್ಯಾಮ್‌ಸಂಗ್ ಗೌಸ್ (Samsung Gauss) ಮತ್ತು ಗ್ಯಾಲಕ್ಸಿ ಎಐ (Galaxy AI) ಅನ್ನು ಬಳಸಿಕೊಂಡು ಹೊಸ ಫೀಚರ್ಗಳ ಸಂಯುಕ್ತವನ್ನು ತಯಾರಿಸಿದೆ. ಇದರಿಂದ ಕರೆಗಳನ್ನು ಲೈವ್ ಟ್ರಾನ್ಸ್‌ಲೇಟ್ ಮಾಡಿ ನಿಮ್ಮ ಸ್ಥಳೀಯ ಭಾಷೆಗೆ ವರ್ಗಾಯಿಸಲಾಗುತ್ತದೆ. ಆದರೆ ಪ್ರಸ್ತುತ ಈ ಸೇವೆಯನ್ನು ಕಂಪನಿ ಕೇವಲ Samsung Galaxy S24 ಫೋನ್ಗಳಿಗೆ ನೀಡಿದೆ. ಮುಂದಿನ ದಿನಗಳಲ್ಲಿ ಬೆಲೆ ಸರಣಿಯ ಫೋನ್ಗಳು ಈ ಪಟ್ಟಿಗೆ ಸೇರುವ ನಿರೀಕ್ಷೆಗಳಿವೆ.
Also Read: ದೀಪಾವಳಿ ದಿನದಂದು ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆಗಿದ್ದೇನು? ರಹಸ್ಯ ತೆರೆದಿಟ್ಟ Sundar Pichai
ಕಂಪನಿಯು ಗೌಸ್ AI ಮಾದರಿಯನ್ನು ಸಿಯೋಲ್‌ನಲ್ಲಿ ವಾರ್ಷಿಕ ಟೆಕ್ ಕೂಟವಾದ ಸ್ಯಾಮ್‌ಸಂಗ್ ಡೆವಲಪರ್ ಕಾನ್ಸರೆನ್ಸ್ (SDC) ನಲ್ಲಿ ಬಿಡುಗಡೆ ಮಾಡಿತು. ಈ ಲೇಟೆಸ್ಟ್ ಸ್ಯಾಮ್‌ಸಂಗ್ ಎಐ ಸೇವೆಗಳು ಭಾಷೆಗಳು, ಕೋಡ್ಗಳು, ಇಮೇಜ್, ವಿಡಿಯೋ, ಆಡಿಯೋ ಮತ್ತು ಮಲ್ಟಿ ಮೀಡಿಯಾದ ಬಗ್ಗೆ ವಿವರ ಅಷ್ಟೇಯಲ್ಲದೆ ಲಾಜಿಕಲ್ ಉತ್ತರಗಳನ್ನು ಸಹ ನೀಡುತ್ತದೆ. ಅಲ್ಲದೆ ಇಮೇಲ್ ಬರೆಯುವುದು, ಕಂಟೆಂಟ್ ಅನುವಾದಿಸುವುದು ಇತ್ಯಾದಿ ಕೆಲಸಗಳನ್ನು ಸುಲಭಗೊಳಿಸಲು ಇದು ಉಪಯುಕ್ತವಾಗಲಿದೆ ಎಂದು ಕಂಪನಿ ಹೇಳಿದೆ. ಅಷ್ಟೇ ಅಲ್ಲ ಈ ತಂತ್ರಜ್ಞಾನ ಬಳಕೆದಾರರಿಗೆ ಕ್ರಿಯೇಟಿವ್ ಕೆಲಸ ಮಾಡಲು ನೆರವಾಗಲಿದೆ ಎನ್ನಲಾಗಿದೆ.
ಕಂಪನಿಯು ಇದನ್ನು ಗೌಸ್ ಮೂರು ಉಪವಿಭಾಗಗಳನ್ನು ಒಳಗೊಂಡಿದೆ. ಅವೆಂದರೆ ಗಾಸ್ ಭಾಷೆ, ಗಾಸ್ ಇಮೇಜ್ ಮತ್ತು ಗಾಸ್ ಕೋಡ್ ಇದರ ಮುಖ್ಯವಾಗಿದೆ. ಸ್ಯಾಮ್‌ಸಂಗ್ AI ಮಾದರಿಯು ಪಠ್ಯ ಮತ್ತು ಇಮೇಜ್ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಗೌಸ್ ಕೋಡಿಂಗ್‌ನಲ್ಲಿಯೂ ಸಹಾಯ ಮಾಡಬಹುದು. ಈ Gauss ಮುಂದಿನ ವರ್ಷದಿಂದ ಮೊಬೈಲ್ ಸಾಧನಗಳಲ್ಲಿ ವೈಶಿಷ್ಟ್ಯಗಳನ್ನು ಪವರ್ ಮಾಡುವ ನಿರೀಕ್ಷೆಯಿದೆ. ಇದು ಮತ್ತೆ Galaxy S24 ಫೋನ್‌ಗಳು ಇತರ ಅಪ್‌ಡೇಟ್‌ಗಳ ಹೊರತಾಗಿ ಕೆಲವು ಹೊಸ AI ವೈಶಿಷ್ಟ್ಯಗಳಲ್ಲಿವೆ ಎಂದು ಸೂಚಿಸುತ್ತದೆ. ಈ ಲೇಟೆಸ್ಟ್ ನವೀಕರಣದ ಬಗ್ಗೆ ನಿಮ್ಮ ಅನಿಸಿಕೆಗಳೇನು ಕಾಮೆಂಟ್ ಮಾಡಿ ತಿಳಿಸಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ