ಸ್ಯಾಮ್‌ಸಂಗ್‌ 43 ಇಂಚಿನ Crystal iSmart 4K Ultra HD Smart Tv ಈಗ ಕೇವಲ 29,999 ರೂಗಳಿಗೆ ಲಭ್ಯ!

Updated on 09-Apr-2024
HIGHLIGHTS

ಸ್ಯಾಮ್‌ಸಂಗ್‌ (Samsung) ತನ್ನ ಲೇಟೆಸ್ಟ್ 4K Ultra HD Smart TV ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್‌ಗಳನ್ನು ನೀಡುತ್ತಿದೆ.

ಸ್ಮಾರ್ಟ್ ಟಿವಿ (Smart TV) ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ Amazon ನೀಡುತ್ತಿರುವ ಈ ಅತ್ಯುತ್ತಮ ಡೀಲ್ ಮತ್ತು ಆಫರ್ಗಳನ್ನು ಪರಿಶೀಲಿಸಬಹುದು.

ಸ್ಮಾರ್ಟ್ ಟಿವಿಯನ್ನು ಖರೀದಿಸುವಾಗ ಗ್ರಾಹಕರು ಪ್ರಮುಖ ಬ್ಯಾಂಕ್‌ನಿಂದ 12 ತಿಂಗಳ ನೋ-ಕಾಸ್ಟ್ EMI ಸೌಲಭ್ಯವನ್ನು ಸಹ ಪಡೆಯಬಹುದು.

ಭಾರತದಲ್ಲಿ ಸ್ಯಾಮ್‌ಸಂಗ್‌ (Samsung) ತನ್ನ ಲೇಟೆಸ್ಟ್ 4K Ultra HD Smart TV ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್‌ಗಳನ್ನು ನೀಡುತ್ತಿದೆ. ನಿವೊಂದು ಹೊಸ ಸ್ಮಾರ್ಟ್ ಟಿವಿ (Smart TV) ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ Amazon ನೀಡುತ್ತಿರುವ ಈ ಅತ್ಯುತ್ತಮ ಡೀಲ್ ಮತ್ತು ಆಫರ್ಗಳನ್ನು ಪರಿಶೀಲಿಸಬಹುದು. ಯಾಕೆಂದರೆ ನಿಮಗೆ ಅತಿ ಕಡಿಮೆ ಬೆಲೆಗೆ 43 ಇಂಚಿನ ಅತಿದೊಡ್ಡ 4K Ultra HD ಸ್ಮಾರ್ಟ್ ಟಿವಿಯ ಮೇಲೆ ಎಲ್ಲಿಲ್ಲದ ರಿಯಾಯಿತಿಯನ್ನು ನೀಡುತ್ತಿದೆ. ಈ ಸ್ಮಾರ್ಟ್ ಟಿವಿಯ (Smart TV) ಒಂದಿಸತು ಹೈಲೈಟ್ ಸ್ಮಾರ್ಟ್ ಫೀಚರ್ ನೋಡುವುದಾದರೆ ಇದರಲ್ಲಿ Netflix, Prime Video, Zee5, SonyLiv, Youtube, Hotstar Smart ಪಡೆಯುತ್ತಿರಾ ಇದರೊಂದಿಗೆ HDR 10+ ಮತ್ತು ಡ್ಯುಯಲ್ ಆಡಿಯೋ ಆಕರ್ಷಕ ಫೀಚರ್ ಆಗಿದೆ.

Samsung 43 inches Crystal iSmart 4K Ultra HD TV ಬೆಲೆ ಮತ್ತು ಲಭ್ಯತೆ

ಮೊದಲಿಗೆ ಈ ಸ್ಮಾರ್ಟ್ ಟಿವಿ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾತಾನಾಡುವುದಾದರೆ ಅಮೆಜಾನ್ ಮೂಲಕ ಲಭ್ಯವಿರುವ ಈ ಬೆಸ್ಟ್ ಡೀಲ್‌ನಲ್ಲಿ ಆಸಕ್ತ ಗ್ರಾಹಕರು ಈ Samsung 108 cm (43 inches) Crystal iSmart 4K Ultra HD Smart LED TV ಸ್ಮಾರ್ಟ್ ಟಿವಿಯ MRP ಬೆಲೆ ನೋಡವುದಾದರೆ ₹52,900 ರೂಗಳಾಗಿವೆ ಆದರೆ ಅಮೆಜಾನ್ ಇಂಡಿಯಾ ಇದನ್ನು ಪೂರ್ತಿ -43% ಡಿಸ್ಕೌಂಟ್ ಜೊತೆಗೆ ಕೇವಲ ₹29,990 ರೂಗಳಿಗೆ ಮಾರಾಟ ಮಾಡುತ್ತಿದೆ.

Samsung 43 inches Crystal iSmart 4K Ultra HD Smart TV

ಅಲ್ಲದೆ ಇನ್ನು ಕಡಿಮೆಗೊಳಿಸಲು ನೀವು HSBC ಕ್ರೆಡಿಟ್ ಕಾರ್ಡ್ ಮೂಲಕ ಒಂದೇ ಸಲ ನೇರವಾಗಿ ಖರೀದಿಸಿದರೆ 10% ಅಂದ್ರೆ ಸುಮಾರು 2000 ರೂಗಳ ತ್ವರಿತ ಡಿಸ್ಕೌಂಟ್ ಸಹ ಪಡೆಯುವಿರಿ. ಇದರೊಂದಿಗೆ ಸ್ಮಾರ್ಟ್ ಟಿವಿಯನ್ನು ಖರೀದಿಸುವಾಗ ಗ್ರಾಹಕರು ಪ್ರಮುಖ ಬ್ಯಾಂಕ್‌ನಿಂದ 12 ತಿಂಗಳ ನೋ-ಕಾಸ್ಟ್ EMI ಸೌಲಭ್ಯವನ್ನು ಸಹ ಪಡೆಯಬಹುದು.

Also Read: ಒಮ್ಮೆ ನಿಮ್ಮ ಮೊಬೈಲ್‌ನಲ್ಲಿ ಈ ಸೆಟ್ಟಿಂಗ್ ಮಾಡ್ಕೊಳ್ಳಿ ಬೇರೆ ಯಾರು ನಿಮ್ಮ SIM Card ಬಳಸಲು ಸಾಧ್ಯವಿಲ್ಲ!

ಸ್ಯಾಮ್‌ಸಂಗ್‌ Crystal iSmart 4K Ultra HD Smart TV ವಿಶೇಷಣಗಳು

Samsung Crystal 4K iSmart UHD ಟಿವಿಗಳು SlimFit ಕ್ಯಾಮ್ ಮೂಲಕ ವೀಡಿಯೊ ಕರೆ ಮಾಡುವ ಬೆಂಬಲದೊಂದಿಗೆ ಬರುತ್ತವೆ. ಇದು ಟಿವಿಯಿಂದ ನೇರವಾಗಿ ವೀಡಿಯೊ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಬಳಕೆದಾರರನ್ನು ಅನುಮತಿಸುತ್ತದೆ. ಟಿವಿಗಳ ಹೊಸ ಶ್ರೇಣಿಯು ಕಾಮ್ ಆನ್‌ಬೋರ್ಡಿಂಗ್ ವೈಶಿಷ್ಟ್ಯದೊಂದಿಗೆ ಅಂತರ್ನಿರ್ಮಿತ IoT ಹಬ್ ಮತ್ತು ಪ್ರಕಾಶವನ್ನು ಸ್ವಯಂಚಾಲಿತವಾಗಿ ಹೊಂದಿಸಲು IoT-ಸಕ್ರಿಯಗೊಳಿಸಿದ ಸಂವೇದಕಗಳೊಂದಿಗೆ ಬರುತ್ತದೆ. ಒಂದೇ ಸ್ಥಳದಲ್ಲಿ ಮನರಂಜನೆ, ಗೇಮಿಂಗ್ ಮತ್ತು ಸುತ್ತುವರಿದ ಆಯ್ಕೆಗಳನ್ನು ಒಟ್ಟುಗೂಡಿಸುತ್ತದೆ. Tizen OS- ಚಾಲಿತ ಮನರಂಜನಾ ಕೇಂದ್ರವು Samsung TV Plus ಪ್ರವೇಶವನ್ನು ನೀಡುತ್ತದೆ.

Samsung 43 inches Crystal iSmart 4K Ultra HD Smart TV

Samsung 43 inches Crystal iSmart 4K Ultra HD TV ಆಟೋ ಗೇಮ್ ಮೋಡ್ ಮತ್ತು ಮೋಷನ್ ಎಕ್ಸ್‌ಸೆಲೇಟರ್ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಇದು ಅಂತಿಮ ಗೇಮಿಂಗ್ ಅನುಭವಕ್ಕಾಗಿ ವೇಗವಾಗಿ ಫ್ರೇಮ್ ಪರಿವರ್ತನೆ ಮತ್ತು ಕಡಿಮೆ ಲೇಟೆನ್ಸಿಯನ್ನು ಅನುಮತಿಸುತ್ತದೆ. ಸ್ಮಾರ್ಟ್ ಟಿವಿ ಅತ್ಯುತ್ತಮವಾದ ವೀಕ್ಷಣೆಯ ಅನುಭವವನ್ನು ನೀಡಲು ಸ್ಮಾರ್ಟ್ ವರ್ಕ್, ಗೇಮಿಂಗ್ ಮತ್ತು ಸ್ಮಾರ್ಟ್ ವಾಚಿಂಗ್‌ನಂತಹ ಬಹು ವಿಧಾನಗಳನ್ನು ಹೊಂದಿದೆ.ಇವುಗಳ ಹೊರತಾಗಿ ಟಿವಿಗಳು HDR10+ ಬೆಂಬಲ ಮತ್ತು 3-ಸೈಡ್ ಬೆಜೆಲ್-ಲೆಸ್ ವಿನ್ಯಾಸದೊಂದಿಗೆ 1-ಬಿಲಿಯನ್ ಟ್ಯೂರ್ ಕಲರ್ ಡಿಸ್ಪ್ಲೇ ಪ್ಯಾನೆಲ್‌ನೊಂದಿಗೆ ಬರುತ್ತವೆ. ಹೆಚ್ಚುವರಿಯಾಗಿ ಅವರು ಕ್ಯೂ-ಸಿಂಫನಿ, OTS ಲೈಟ್ ಮತ್ತು ಅಡಾಪ್ಟಿವ್ ಸೌಂಡ್ ಟೆಕ್ನಾಲಜಿಯನ್ನು ಸಹ ಬೆಂಬಲಿಸುತ್ತಾದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :