ಇಂದಿನ ದಿನಗಳಲ್ಲಿ ಇಂಟರ್‌ನೆಟ್ (Internet) ಇಲ್ಲದೆ ಒಂದು ದಿನ ಕಳೆಯುವುದು ಕಷ್ಟವಾಗುತ್ತಿದೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ (Smartphone) ಕಾಣಬಹುದು. ಅನೇಕ ಬಾರಿ ಬಳಕೆದಾರರು ತಮ್ಮ ಮೊಬೈಲ್ ಡೇಟಾ ಮುಗಿದ ನಂತರ ತಮ್ಮ ಫೋನ್ ಅನ್ನು ಸಾರ್ವಜನಿಕ ವೈಫೈಗೆ (Public Wi-Fi) ಸಂಪರ್ಕಿಸಿ ಬಳಸುವುದನ್ನು ಹೆಚ್ಚಾಗಿ ಹೋಟೆಲ್, ಮಾಲ್, ರೈಲ್ವೆ ಸ್ಟೇಷನ್, ಬಸ್ ಸ್ಟಾಂಡ್‌ಗಳ ಸ್ಥಳಗಳಲ್ಲಿ ಹೆಚ್ಚಾಗಿ ಈ ಘಟನೆಯನ್ನು ಕಾಣಬಹುದು. ಆದರೆ ನಿಮಗೊತ್ತಾ ಈ ಸಾರ್ವಜನಿಕ ವೈಫೈ ಬಳಸುವುದರಿಂದ ನಿಮ್ಮನ್ನು ನೀವೇ ಅಪಾಯದ ಭಾವಿಗೆ ಸಿಲುಕಿಸಿಕೊಳ್ಳುವ ಸಂದರ್ಭಗಳು ಸೃಷ್ಟಿಯಾಗುತ್ತವೆ. ನೀವು ಇದರಲ್ಲಿ ಒಬ್ಬರಾಗಿದ್ದಾರೆ ಅಥವಾ ಅಂಥವರ ಪರಿಚಯ ನಿಮಗಿದ್ದರೆ ಈ ಮಾಹಿತಿ ಹಂಚಿಕೊಳ್ಳಿ.
ನಿಮ್ಮ ಫೋನ್ ಸೆಟ್ಟಿಂಗ್‌ನಲ್ಲಿ ಸ್ವಯಂಚಾಲಿತ ವೈ-ಫೈ ನೆಟ್‌ವರ್ಕ್ ಸಹಾಯದಿಂದ ನಿಮ್ಮ ಫೋನ್ ಯಾವುದೇ ಸಾರ್ವಜನಿಕ ವೈ-ಫೈಗೆ ಸಂಪರ್ಕಗೊಳ್ಳುತ್ತದೆ. ಆದರೆ ಈ ರೀತಿ ಮಾಡುವುದರಿಂದ ನಿಮ್ಮ ಫೋನ್‌ಗೆ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? ಸಾರ್ವಜನಿಕ ವೈಫೈ ಸಹಾಯದಿಂದ ಹ್ಯಾಕರ್‌ಗಳು ನಿಮ್ಮ ಖಾಸಗಿ ಅಥವಾ ವೈಯಕ್ತಿಕ ವಿವರಗಳನ್ನು ಸುಲಭವಾಗಿ ಕದಿಯಬಹುದು. ಆದ್ದರಿಂದ ನೀವು ಯಾವಾಗಲೂ ಸ್ವಯಂಚಾಲಿತ ಸಂಪರ್ಕವನ್ನು ಆಫ್ ಮಾಡಬೇಕು.
ಇದನ್ನೂ ಓದಿ: ಭಾರತದಲ್ಲಿ Jio Bharat B1 4G ಫೀಚರ್ ಫೋನ್ ಬಿಡುಗಡೆ, ಬೆಲೆ ₹1300 ರೂಗಳಿಗಿಂತ ಕಡಿಮೆ
ನೀವು ಸಾರ್ವಜನಿಕ Wi-Fi ಅನ್ನು ಬಳಸುವಾಗ ಯಾವಾಗಲೂ ವಿಶ್ವಾಸಾರ್ಹ ನೆಟ್‌ವರ್ಕ್ ಅನ್ನು ಬಳಸಿ. ಬಳಕೆದಾರರ ಡೇಟಾವನ್ನು ಕದಿಯಲು ಅನೇಕ ಬಾರಿ ಸ್ಕ್ಯಾಮರ್‌ಗಳು ತಮ್ಮ ಹಾಟ್‌ಸ್ಪಾಟ್‌ನ ಹೆಸರನ್ನು ವೈಫೈ ಎಂದು ಹೊಂದಿಸುತ್ತಾರೆ. ಬಳಕೆದಾರರು ಈ ನೆಟ್‌ವರ್ಕ್‌ಗೆ ಸಂಪರ್ಕಿಸಿದಾಗ ಹ್ಯಾಕರ್‌ಗಳು ನಿಮ್ಮ ವೈಯಕ್ತಿಕ ಡೇಟಾವನ್ನು ಹ್ಯಾಕ್ ಮಾಡುವುದನ್ನು ಇಂದಿನ ದಿನಗಳಲ್ಲಿ ಟಿವಿ ಮತ್ತು ಪತ್ರಿಕೆಗಳಲ್ಲಿ ಕಾಣಬಹುದು.
ಸಾರ್ವಜನಿಕ ವೈಫೈಗೆ ಸಂಪರ್ಕಗೊಂಡಾಗ ಅದರ ಮೂಲಕ ಯಾವುದೇ ಬ್ಯಾಂಕ್ ಸಂಬಂಧಿತ ಕೆಲಸವನ್ನು ಮಾಡದಂತೆ ನಿಮಗೆ ಸಲಹೆ ನೀಡಲಾಗುತ್ತದೆ. ಅನೇಕ ಬಾರಿ ಇದರ ನೆಪದಲ್ಲಿ ವಂಚಕರು ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ಮತ್ತು ನಿಮ್ಮ ಫೋನ್‌ನಿಂದ ಲಾಗಿನ್ ವಿವರಗಳನ್ನು ಕದಿಯುತ್ತಾರೆ. ಸಾರ್ವಜನಿಕ ವೈಫೈ ಸಹಾಯದಿಂದ ಹ್ಯಾಕರ್‌ಗಳು ಆರಾಮವಾಗಿ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ಕದಿಯುತ್ತಾರೆ.
ಸಾರ್ವಜನಿಕ Wi-Fi ನೆಟ್‌ವರ್ಕ್‌ಗಳಲ್ಲಿ ನಿಮ್ಮ ಮಾಹಿತಿಯನ್ನು ರಕ್ಷಿಸಲು VPN ಅನ್ನು ಬಳಸಿ. ಸುರಕ್ಷಿತ ಎನ್‌ಕ್ರಿಪ್ಟ್ ಮಾಡಿದ ನೆಟ್‌ವರ್ಕ್ ಮೂಲಕ VPN ನಿಮ್ಮ ಡೇಟಾವನ್ನು ಮರು-ಮಾರ್ಗದಲ್ಲಿ ಕನೆಕ್ಟ್ ಮಾಡುತ್ತದೆ. ನೀವು ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ VPN ಅಪ್ಲಿಕೇಶನ್‌ಗಳನ್ನು ಕಾಣಬಹುದು. ಅಂದ್ರೆ ನೀವು ಆಂಡ್ರಾಯ್ಡ್, ವಿಂಡೋಸ್, iOS ಅಥವಾ macOS ಆಪರೇಟಿಂಗ್ ಸಿಸ್ಟಮ್ ಹೊಂದಿದ್ದರೂ ಸಹ ಈ VPN ಅನ್ನು ನೀವು ಬಳಸಬಹುದು.