ಮಕ್ಕಳ ದಿನಾಚರಣೆಯ (Children's Day 2024) ವಿಶೇಷತೆಯಾಗಿ ಈ ಸ್ಮಾರ್ಟ್ ಗಿಫ್ಟ್ ನೀಡಿ.
ಪ್ರತಿಯೊಂದು ಮಗುವಿನ ಬಳಿ ಇರಲೇಬೇಕಾದ ಟೆಕ್ ಉಪಯುಕ್ತ ಸ್ಮಾರ್ಟ್ ಗ್ಯಾಜೆಟ್ಗಳು ಇಲ್ಲಿವೆ.
ಈ ಟೆಕ್ ಉಪಯುಕ್ತ ಸ್ಮಾರ್ಟ್ ಗ್ಯಾಜೆಟ್ಗಳು ಸುರಕ್ಷಿತೆಯೊಂದಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಈ ವರ್ಷದ ಮಕ್ಕಳ ದಿನಾಚರಣೆಯ (Happy Children’s Day 2024) ವಿಶೇಷತೆಯಾಗಿ ನೀವು ನಿಮ್ಮ ಮಕ್ಕಳಿಗೆ ಈ ಅತ್ಯುತ್ತಮ ಸುರಕ್ಷಿತ ಮತ್ತು ಹೆಚ್ಚು ಪ್ರಯೋಜನಕಾರಿ ಗ್ಯಾಜೆಟ್‌ಗಳನ್ನು ನೀಡಿ ಅವರಿಗೆ ಮತ್ತಷ್ಟು ರಕ್ಷಣೆಯನ್ನು ನೀಡಬಹುದು. ವೇಗವಾಗಿ ಬೆಳೆಯುತ್ತಿರುವ ಇಂದಿನ ಜನ ಜೀವನದಲ್ಲಿ ಟೆಕ್ನಾಲಜಿ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಿಕ್ಕಾಪಟ್ಟೆ ಮುನ್ನಡೆಯನ್ನು ಪಡೆದು ಓಡುತ್ತಿದೆ. ಇಂದಿನ ಮಕ್ಕಳು ಸಹ ಇದರೊಂದಿಗೆ ಹೆಜ್ಜೆ ಹಾಕುತ್ತ ಸೋಶಿಯಲ್ ಮೀಡಿಯಾ ಮತ್ತು ಟೆಕ್ನಾಲಜಿ ಕಡೆಗೆ ಹೆಚ್ಚು ವಾಲುತ್ತಿದ್ದಾರೆ.
ಮಕ್ಕಳ ದಿನಾಚರಣೆಯ (Children’s Day 2024) ಗಿಫ್ಟ್
ಇಂತಹ ಸಂಧರ್ಭದಲ್ಲಿ ನಮ್ಮ ಮಕ್ಕಳಿಗೆ ಹೊರಗಿನ ಪ್ರಪಂಚದಿಂದ ಒಂದಿಷ್ಟು ಹೆಚ್ಚುವರಿಯ ರಕ್ಷಣೆ ಬೇಕೆ ಬೇಕು ಅಲ್ವಾ. ಆದ್ದರಿಂದ ಈ ಪಟ್ಟಿಯಲ್ಲಿ ನಾವು GPS enabled Smartwatch, Re-Writable LCD Writing Pad, Wireless Headphones ಮತ್ತು Smart GPS Tracker ಅನ್ನು ಪಟ್ಟಿ ಮಾಡಲಾಗಿದೆ. ಇವೆಲ್ಲ ಪ್ರತಿಯೊಂದು ಮಗುವಿನ ಬಳಿ ಇರಲೇಬೇಕಾದ ಟೆಕ್ ಉಪಯುಕ್ತ ಗ್ಯಾಜೆಟ್ಗಳು ಅಂದ್ರೆ ತಪ್ಪಿಲ್ಲ ಯಾಕೆಂದರೆ ಇವು ಸುರಕ್ಷಿತೆಯೊಂದಿಗೆ ಹೆಚ್ಚು ಪ್ರಯೋಜನಕಾರಿ ಸಹ ಆಗಿರೋದೆ ವಿಶೇಷ. ಅಲ್ಲದೆ ಈ ಮಕ್ಕಳ ದಿನಾಚರಣೆಯ (Children’s Day 2024) ಅಂಗವಾಗಿ ಮಕ್ಕಳಿಗೆ ಇವನ್ನು ಕೊಡುಗೆಯಾಗಿ ನೀಡಬಹುದು.
Also Read: Vivo Y18t ಸ್ಮಾರ್ಟ್ ಫೋನ್ ಸದ್ದಿಲ್ಲದೇ 50MP ಕ್ಯಾಮೆರಾದೊಂದಿಗೆ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
IMOO Watch Phone Z1 Kids Smart Watch
ಈ ಪಟ್ಟಿಯಲ್ಲಿ ಮೊದಲಿಗೆ ನಿಮ್ಮ ಮಕ್ಕಳಿಗೆ ಈ ಸ್ಮಾರ್ಟ್ ವಾಚ್ ನೀಡಬಹುದು. ಇದರ ಬೆಲೆ ಸಾಮಾನ್ಯ ಸ್ಮಾರ್ಟ್ ವಾಚ್ಗಳಿಗೆ ಹೋಲಿಸಿದರೆ ಕೊಂಚ ಹೆಚ್ಚಾಗಿದೆ. ಆದರೆ ಇದರ ಫೀಚರ್ ಯಾವುದೇ ದೊಡ್ಡ ಬ್ರಾಂಡ್ ನೀಡದಂತ ಫೀಚರ್ ನೀಡುತ್ತಿದೆ.ಇದರಲ್ಲಿ ಸಿಮ್ ಕಾರ್ಡ್, ಕ್ಯಾಮೆರಾ, GPS, Wi-Fi ಮತ್ತು ಉತ್ತಮ ಬ್ಯಾಟರಿ ಫೀಚರ್ ಹೆಚ್ಚು ವಿಶೇಷವಾಗಿದೆ.
ಇದನ್ನು ಮಕ್ಕಳ ಕೈಯಲ್ಲಿ ಕಟ್ಟಿ ನೀವು ನಿಮ್ಮ ಫೋನ್ ಒಳಗೆ ಅಪ್ಲಿಕೇಶನ್ ಬಳಸಿಕೊಂಡು ರಿಯಲ್ ಟೈಮ್ ಲೊಕೇಶನ್ ಟ್ರ್ಯಾಕ್ ಮಾಡಬಹುದು. ಈ ಸ್ಮಾರ್ಟ್ ವಾಚ್ ರಿಯಲ್ ಸಮಯದಲ್ಲಿ ವಿಡಿಯೋ ಕರೆಯನ್ನು ಸಹ ಸ್ಪೋರ್ಟ್ ಮಾಡಲು 2MP ಕ್ಯಾಮೆರಾ ಹೊಂದಿದೆ. ಈ ಸ್ಮಾರ್ಟ್ ವಾಚ್ ಅಮೆಜಾನ್ ಮೂಲಕ ₹7,990 ರೂಗಳಿಗೆ ಖರೀದಿಸಬಹುದು.
Redmi LCD Re-Writing Pad with Stylus
ಈ ಪಟ್ಟಿಯ ಎರಡನೇಯ ಗ್ಯಾಜೆಟ್ ಅಂದ್ರೆ ಈ ಬರೆಯುವ ಸ್ಕ್ರೀನ್ ಹೊಂದಿರುವ ಪ್ಯಾಡ್ ಆಗಿದೆ. ಮಾರುಕಟ್ಟೆಯಲ್ಲಿ ಅನೇಕ ಮಾದರಿಯ ಲಿಖಿತ ಪ್ಯಾಡ್ ಮಾರಾಟವಾಗುತ್ತಿವೆ. ಆದರೆ Redmi ಬ್ರಾಂಡ್ ಕಂಪನಿಯ ಈ ಪ್ಯಾಡ್ ವಿಶೇಷವೆಂದರೆ ಇದರಲ್ಲಿ ಝೀರೋ ಪವರ್ ಸ್ಕ್ರೀನ್ ಜೊತೆಗೆ Anti-Blue Light Screen ಹೊಂದಿರುವುದರಿಂದ ಮಕ್ಕಳ ಕಣ್ಣುಗಳಿಗೆ ಯಾವುದೇ ರೀತಿಯ ತೊಂದರೆಯ ಭಯವಿರೋಲ್ಲ.
ಅಲ್ಲದೆ ಒನ್ ಬಟನ್ ಬಳಸಿ ಪೂರ್ತಿ ಅಳಿಸಬಹುದು. ಇದನ್ನು ಮಕ್ಕಳು ಹೊಸ ನೋಟ್ ಅಥವಾ ಪರೀಕ್ಷೆಗಳಿಗೆ ಮುಂಚೆ ಪ್ರಶ್ನೆ ಮತ್ತು ಉತ್ತರವನ್ನು ಬರೆದು ಅಭ್ಯಾಸ ಮಾಡಲು ಇದೊಂದು ಉತ್ತಮ ಆಯ್ಕೆಯಾಗಿ ಪಡೆಯಬಹುದು. ಇದನ್ನು ನೀವು ಅಮೆಜಾನ್ ಮೂಲಕ ಕೇವಲ ₹699 ರೂಗಳಿಗೆ ಖರೀದಿಸಬಹುದು.
EarFun Kids Headphones with Mic
ಈ ಉತ್ತಮ ಗುಣಮಟ್ಟದ ಪ್ರಕಾರ ಇದು ಅದ್ಭುತವಾಗಿದ್ದು ನಿಮ್ಮ ಹಣಕ್ಕೆ ಮೌಲ್ಯ ಮತ್ತು ವಾಯ್ಸ್ ಗುಣಮಟ್ಟವು ನವೀಕೃತವಾಗಿದೆ. ಉತ್ಪನ್ನವು ನೋಟದಲ್ಲಿ ತುಂಬಾ ಸುಂದರವಾಗಿರುತ್ತದೆ. ಇದರ ಲಾಂಗ್ ಲಾಸ್ಟಿಂಗ್ ಕಾರ್ಯಕ್ಷಮತೆ ಕೂಡ ತುಂಬಾ ಚೆನ್ನಾಗಿದೆ. ಇದರ ವಾಯ್ಸ್ ಯೋಗ್ಯವಾಗಿದೆ. ತುಂಬಾ ಜೋರಾಗಿ ಅಲ್ಲ ಅದು ಕಿವಿಯಲ್ಲಿ ನೋವುಂಟುಮಾಡುತ್ತದೆ. ಇದು ಮಕ್ಕಳ ಕಿವಿಯನ್ನು ಉತ್ತಮವಾಗಿಡುವ ಸೌಂಡ್ ಕ್ವಾಲಿಟಿಯೊಂದಿಗೆ ಬರುತ್ತದೆ. ಇದನ್ನು ಕಂಪನಿ ಮಕ್ಕಳಿಗಾಗಿಯೇ ತಯಾರಿಸಿ ಮಾರಾಟ ಮಾಡುತ್ತಿದೆ. ಇದನ್ನು ನೀವು ಅಮೆಜಾನ್ ಮೂಲಕ ಕೇವಲ ₹1239 ರೂಗಳಿಗೆ ಖರೀದಿಸಬಹುದು.
EASYSHOP C9 Wireless Bluetooth GPS Tracker
ಈ ಪಟ್ಟಿಯ ಕೊನೆಯದಾಗಿ ನಿಮ್ಮ ಮಕ್ಕಳು ಶಾಲೆ, ಕಾಲೇಜು ಅಥವಾ ಹೊರಗೆ ಟ್ಯೂಷನ್ ಅಥವಾ ಬೇರೆ ಯಾವುದೇ ಕಾರಣಕ್ಕಾಗಿ ಮನೆಯಿಂದ ಹೊರಗಡೆ ಇರುವವರಾಗಿದ್ದಾರೆ ಈ Wireless Bluetooth GPS Tracker ಕಡ್ಡಾಯವಾಗಿ ಅವರ ಬಳಿ ಇರಲೇಬೇಕು. ಇದರಿಂದ ನಿಮ್ಮ ಮತ್ತು ನಿಮ್ಮ ಮಕ್ಕಳ ಕನೆಕ್ಷನ್ ಜೊತೆಗಿರುತ್ತದೆ. ಮತ್ತು ಅವರನ್ನು ನೀವು ಮನೆಯಿಂದಲೇ ಟ್ರ್ಯಾಕ್ ಮಾಡಿ ತಿಳಿಯಬಹುದು. ಈ ರೀತಿ ಇದರ ಅನೇಕ ಉಪಯೋಗಳಿಂದ ತುಂಬಿದೆ. ಅದರಲ್ಲೂ ತುರ್ತು ಸನ್ನಿವೇಶಗಳಿಗೆ ಇದೊಂದು ವರದಾನ ಅಂದ್ರೆ ಸಹ ತಪ್ಪಿಲ್ಲ. ಇದನ್ನು ನೀವು ಅಮೆಜಾನ್ ಮೂಲಕ ಕೇವಲ ₹199 ರೂಗಳಿಗೆ ಖರೀದಿಸಬಹುದು.
Disclosure: This article contains affiliate links
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile