ಭಾರತದ ಮೊಟ್ಟ ಮೊದಲ ಮಲ್ಟಿಪ್ಲೇಯರ್ ವಿಆರ್ ಕ್ರಿಕೆಟ್ ಗೇಮ್ ಅನ್ನು ಸಚಿನ್ ತೆಂಡುಲ್ಕರ್ ಅನಾವರಣಗೊಳಿದ್ದರೆ.

ಭಾರತದ ಮೊಟ್ಟ ಮೊದಲ ಮಲ್ಟಿಪ್ಲೇಯರ್ ವಿಆರ್ ಕ್ರಿಕೆಟ್ ಗೇಮ್ ಅನ್ನು ಸಚಿನ್ ತೆಂಡುಲ್ಕರ್ ಅನಾವರಣಗೊಳಿದ್ದರೆ.
HIGHLIGHTS

ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸೇರಿ ಮಲ್ಟಿಪ್ಲೇಯರ್ ಪಂದ್ಯಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತದೆ.

ಡಿಜಿಟಲ್ ಎಂಟರ್ಟೈನ್ಮೆಂಟ್ ಮತ್ತು ಗೇಮಿಂಗ್ ಕಂಪೆನಿಯಾದ Jet Synthesys ಮತ್ತು ಸಚಿನ್ ತೆಂಡೂಲ್ಕರ್ ಸೇರಿ ಭಾರತದ ಮೊಟ್ಟ ಮೊದಲ ಮಲ್ಟಿಪ್ಲೇಯರ್ ಸಚಿನ್ ಸಾಗಾ ವಿಆರ್ ಕ್ರಿಕೆಟ್ ಗೇಮ್ ಅನ್ನು ಪ್ರಾರಂಭಿಸಿದ್ದಾರೆ. ಈಗಾಗಲೇ ಹೇಳಿರುವಂತೆ ಇದು ಭಾರತದ ಮೊದಲ ಮಲ್ಟಿಪ್ಲೇಯರ್ ವರ್ಚುವಲ್ ರಿಯಾಲಿಟಿ ಕ್ರಿಕೆಟ್ ಗೇಮ್ ಆಗಿದ್ದು ಈ ಆಟ ನವ ದೆಹಲಿಯ CII ಇಂಡಿಯಾ ಗೇಮಿಂಗ್ ಷೋ (IGS) ಸಮಾರಂಭದಲ್ಲಿ ಸಚಿನ್ ಸಾಗಾ ವಿಆರ್ ಲಿಮಿಟೆಡ್ ಎಡಿಶನ್ ಹೆಡ್ಸೆಟ್ನೊಂದಿಗೆ ಬಿಡುಗಡೆಯಾಯಿತು.

ಸಚಿನ್ ಸಾಗಾ ವಿಆರ್ ಬಗ್ಗೆ ಮಾತನಾಡಬೇಕೆಂದ್ರೆ ಇದರಲ್ಲಿ ಆಟಗಾರನು ತಮ್ಮ ಬ್ಯಾಟಿಂಗ್ ಪ್ರತಿವರ್ತನವನ್ನು 150 ಕಿ.ಪಿ ಗಿಂತಲೂ ಹೆಚ್ಚಿನ ಬಾಲ್ಗಳನ್ನು ಎಸೆಯುವ ಬೌಲರ್ಗಳನ್ನು ಎದುರಿಸಲು ಪ್ರಯತ್ನಿಸುತ್ತಾರೆ ಇದು ಪಿಚ್ನಿಂದ ವಿಕೆಟ್ ಕೀಪರ್ಗೆ  ರಿಯಲ್ ಟೈಮ್ ಅಲ್ಲಿ ಟ್ರ್ಯಾಕ್ ಮಾಡಬವುದು. ಇದು 28 ಕ್ಕೂ ಹೆಚ್ಚು ಅನನ್ಯ ಕ್ರಿಕೆಟ್ ಶಾಟ್ಗಳೊಂದಿಗೆ ಮಾಸ್ಟರ್ ಸ್ವತಃ ನೈಜ ಸಮಯದ ನೆರಳು ಮತ್ತು ಚಲನೆಯ ಕ್ಯಾಪ್ಚರ್ಗಳನ್ನು ಅನುಭವಿಸಲು ಬಳಕೆದಾರರಿಗೆ ಅವಕಾಶ ಮಾಡಿಕೊಡುತ್ತದೆ.
 
ಇದರಲ್ಲಿ ಬಳಕೆದಾರರು ಲೆಜೆಂಡ್ ಮೂಡ್ ಅನ್ನು ಸಹ ಆಯ್ಕೆ ಮಾಡಿ ಸುಮಾರು 100 ಕ್ಕೂ ಹೆಚ್ಚು ಕ್ರಿಕೆಟ್ ಪಂದ್ಯಗಳನ್ನು ಆಡಬವುದು. ಮತ್ತು ಆಟಗಾರರು ಶೀಘ್ರ ಪಂದ್ಯಗಳಲ್ಲಿ ಅಂತರರಾಷ್ಟ್ರೀಯ ಎದುರಾಳಿಗಳನ್ನು ತೆಗೆದುಕೊಳ್ಳಬಹುದು. ಅಲ್ಲದೆ ಆಡುವವರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸೇರಿ ಮಲ್ಟಿಪ್ಲೇಯರ್ ಪಂದ್ಯಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತದೆ.

ಇದರ ಹೆಚ್ಚುವರಿಯಾಗಿ ಜೆಟ್ ಸಿಂಥೆಸಿಸ್ ಸಚಿನ್ ಸಾಗಾ ವಿಆರ್ ಲಿಮಿಟೆಡ್ ಎಡಿಶನ್ ಹೆಡ್ಸೆಟನ್ನು ಪ್ರಾರಂಭಿಸಿ ಗೂಗಲ್ ಕಾರ್ಡ್ಬೋರ್ಡ್ಗೆ ಹೊಂದಿಕೊಳ್ಳುವ 3000 ಕ್ಕೂ ಹೆಚ್ಚು ಅಪ್ಲಿಕೇಶನ್ಗಳಿಗೆ ಬೆಂಬಲವನ್ನು ನೀಡುತ್ತದೆ. ಈ ಹೆಡ್ಸೆಟ್ ಕ್ಷೇತ್ರದ 100° ಡಿಗ್ರಿ ವೀಕ್ಷಣೆ, ಉತ್ತಮ-ಗುಣಮಟ್ಟದ ರೆಸಿನ್ ಲೆನ್ಸ್ಗಳನ್ನು ಗೇಮಿಂಗ್ ಕ್ರಮಕ್ಕಾಗಿ ಕಸ್ಟಮೈಸ್ ಮಾಡಲಾದ ಬ್ಲೂಟೂತ್ ನಿಯಂತ್ರಕವನ್ನು ಬೆಂಬಲಿಸುತ್ತದೆ. ಇದನ್ನು ನೀವು vr.sachinsaga.com ನಲ್ಲಿ ಕೇವಲ 1499 ರೂಗಳಲ್ಲಿ ಖರೀದಿಸಬವುದು.

ಇಮೇಜ್ ಸೋರ್ಸ್:

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo