ಅಮೇರಿಕಾದ ನ್ಯೂ ಮೆಕ್ಸಿಕೋದ ವಿಜ್ಞಾನಿಗಳು ಪ್ರಾಣಿ ಸಾಮ್ರಾಜ್ಯವನ್ನು ಅಧ್ಯಯನ ಮಾಡಲು ಹೊಸ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಅವರು ಹಾರಾಟದ ಮಾದರಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಸಲುವಾಗಿ ಸತ್ತ ಟ್ಯಾಕ್ಸಿಡರ್ಮಿಡ್ ಪಕ್ಷಿಗಳಿಗೆ ಡ್ರೋನ್‌ಗಳನ್ನು ಹಾಕಲು ಪ್ರಯತ್ನಿಸಿದ್ದಾರೆ. ನಾವು ಸತ್ತ ಪಕ್ಷಿಗಳನ್ನು ಬಳಸಿ ಡ್ರೋನ್ ಮಾಡಬಹುದು ಎನ್ನುವ ಆಲೋಚನೆಯೊಂದಿಗೆ ಬಂದಿದ್ದೇವೆ" ಎಂದು ಡಾ. ನ್ಯೂ ಮೆಕ್ಸಿಕೋ ಇನ್‌ಸ್ಟಿಟ್ಯೂಟ್ ಆಫ್ ಮೈನಿಂಗ್ ಅಂಡ್ ಟೆಕ್ನಾಲಜಿಯ ಅಸೋಸಿಯೇಟ್ ಪ್ರೊಫೆಸರ್ ಮೊಸ್ತಫಾ ಹಸ್ಸನಾಲಿಯನ್ ರವರು ತಿಳಿಸಿದರು.
ಮೊದಲು ಜೀವಂತ ಪ್ರಾಣಿ ಹಿಂಡುಗಳ ನಡುವೆ ತಯಾರಿಸಿದ ಯಾಂತ್ರಿಕ 'ಪಕ್ಷಿಗಳನ್ನು' ಹಾರಿಸುವಾಗ ಅಗತ್ಯ ಫಲಿತಾಂಶಗಳನ್ನು ಪಡೆಯಲು ವಿಫಲವಾದರು ನಂತರ ಹಸನಾಲಿಯನ್ ಮತ್ತು ಅವರ ಸಹೋದ್ಯೋಗಿಗಳು ಅಸಾಂಪ್ರದಾಯಿಕ ವಿಧಾನವನ್ನು ಕಂಡುಹಿಡಿದರು. ಟ್ಯಾಕ್ಸಿಡರ್ಮಿಡ್ ಬರ್ಡ್ ಡ್ರೋನ್‌ಗಳನ್ನು ಪ್ರಸ್ತುತ ಕಸ್ಟಮೈಸ್ ಮಾಡಿದ ಪಂಜರದಲ್ಲಿ ಪರೀಕ್ಷಿಸಲಾಗುತ್ತಿದೆ. ಇವು ಸದ್ಯ ಸರಿಸುಮಾರು 20 ನಿಮಿಷಗಳ ಕಾಲ ಮಾತ್ರ ಹಾರಬಲ್ಲವು ಜೀವಂತ ಪ್ರಾಣಿ ಹಿಂಡುಗಳ ಜೊತೆಗೆ ನಕಲಿ ಡ್ರೋನ್‌ಗಳನ್ನು ಹಾರಿಸುವ ಈ ಯೋಜನೆಯು ನಿರ್ದಿಷ್ಟ ಮಾದರಿಗಳಲ್ಲಿ ಹಾರುವ ಮೂಲಕ ಪಕ್ಷಿಗಳು ಹೇಗೆ ತನ್ನ ಶಕ್ತಿಯನ್ನು ಉಳಿಸುತ್ತದೆ ಎಂಬುದರ ಕುರಿತು ಹೊಸ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಹಸನಾಲಿಯನ್ ರಾಯಿಟರ್ಸ್ಗೆ ರವರು ಈ ಪಕ್ಷಿಗಳು ತಮ್ಮಲ್ಲಿ ಶಕ್ತಿಯನ್ನು ಹೇಗೆ ನಿರ್ವಹಿಸುತ್ತವೆ ಎಂಬುದನ್ನು ನಾವು ಕಲಿತರೆ ಹೆಚ್ಚಿನ ಶಕ್ತಿ ಮತ್ತು ಇಂಧನವನ್ನು ಉಳಿಸಿ ನಾವು ಭವಿಷ್ಯದ ವಾಯುಯಾನ ಉದ್ಯಮಕ್ಕೆ ಅನ್ವಯಿಸಬಹುದೆಂದು ತಿಳಿಸಿದರು. ಹಕ್ಕಿಯ ಬಣ್ಣಗಳು ಹಾರುವ ಸಾಮರ್ಥ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಕುರಿತು ವಿಚಾರಗಳ ಸ್ಪಷ್ಟೀಕರಣ ಇನ್ನು ತನಿಖೆಯಲ್ಲಿದೆ.
ಇದರ ಕ್ರಮವಾಗಿ ಮತ್ತೊಬ್ಬ ವಿಜ್ಞಾನಿ ಬ್ರೆಂಡನ್ ಹೆರ್ಕೆನ್‌ಹಾಫ್ ರವರು ನಾವು ಪ್ರಯೋಗಗಳನ್ನು ನಡೆಸಿದ್ದೇವೆ ಮತ್ತು ನಮ್ಮ ಸ್ಥಿರ ರೆಕ್ಕೆಯ ವಿಮಾನಕ್ಕೆ ನಿರ್ದಿಷ್ಟ ಬಣ್ಣವನ್ನು ಸೇರಿಸುವುದರಿಂದ ಹಾರಾಟದ ದಕ್ಷತೆಯನ್ನು ಬದಲಾಯಿಸಬಹುದು ಎಂದು ಕಂಡುಕೊಂಡಿದ್ದೇವೆ. ಪಕ್ಷಿಗಳು ಅದೇ ವಿಷಯವನ್ನು ಅನುಭವಿಸುತ್ತವೆ ಎಂದು ನಾವು ಭಾವಿಸುತ್ತೇವೆಂದು ತಿಳಿಸಿದರು.
ಆಶ್ಚರ್ಯಕರವಾಗಿ ಈ ಅಧ್ಯಯನದ ಗಮನವು ದೀರ್ಘಾವಧಿಯ Conspiracy ಸಿದ್ಧಾಂತವನ್ನು ಬೆಂಬಲಿಸುತ್ತದೆ. ಇದರಲ್ಲಿ ಪಕ್ಷಿಗಳು ವಾಸ್ತವವಾಗಿ ಮಾನವ ನಿರ್ಮಿತ ಡ್ರೋನ್‌ಗಳಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಗಾಳಿಯಿಂದ ಮನುಷ್ಯರ ಮೇಲೆ ಕಣ್ಣಿಡಲು ಬಳಸಲಾಗುತ್ತದೆ. ಇದು ಪ್ರಪಂಚದಾದ್ಯಂತ ಹಲವಾರು ದೇಶಗಳಲ್ಲಿ ಅನುಯಾಯಿಗಳನ್ನು ಹೊಂದಿದೆ. ಅಲ್ಲದೆ ಈ ಬರ್ಡ್ ಡ್ರೋನ್ ಗಡಿಯಾಚೆಗಿನ ಭದ್ರತೆಗೆ ಮತ್ತು ಕಾರ್ಟೆಲ್ ಚಟುವಟಿಕೆಯನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.
ಮೂಲ: Firstpost