JioFiber ಬ್ರಾಡ್‌ಬ್ಯಾಂಡ್ ಖರೀದಿಸಬೇಕೆ? ಇದರ ಬೆಲೆ ಪ್ರಯೋಜನಗಳ ಮಾಹಿತಿ ಇಲ್ಲಿದೆ ನೋಡಿ

JioFiber ಬ್ರಾಡ್‌ಬ್ಯಾಂಡ್ ಖರೀದಿಸಬೇಕೆ? ಇದರ ಬೆಲೆ ಪ್ರಯೋಜನಗಳ ಮಾಹಿತಿ ಇಲ್ಲಿದೆ ನೋಡಿ
HIGHLIGHTS

ಕೆಲವೇ ಸಾವಿರ ರೂಪಾಯಿಗಳಲ್ಲಿ ನೀವು ಮನೆಯಲ್ಲಿ ಉತ್ತಮ ಇಂಟರ್‌ನೆಟ್ ಸಂಪರ್ಕವನ್ನು ಪಡೆಯಬಹುದು.

ನಿಮ್ಮ ಮನೆಯವರೆಲ್ಲರೂ ಸ್ಮಾರ್ಟ್‌ಫೋನ್, ಸ್ಮಾರ್ಟ್‌ಟಿವಿ, ಲ್ಯಾಪ್‌ಟಾಪ್ ಅಥವಾ ವೈರ್‌ಲೆಸ್ ಇಂಟರ್‌ನೆಟ್ ಸಂಪರ್ಕ

ಡೆಸ್ಕ್‌ಟಾಪ್ ಕಂಪ್ಯೂಟರ್ ಮೂಲಕ ಅತ್ಯುತ್ತಮ ಇಂಟರ್‌ನೆಟ್ ಸಂಪರ್ಕವನ್ನು ಪಡೆಯಬಹುದು.

ಭಾರತದಲ್ಲಿ ರಿಯಲನ್ಸ್ ಜಿಯೋ ತಂದಂತಹ ಬೃಹತ್ ಇಂಟರ್ನೆಟ್ ಕ್ರಾಂತಿಯೊಂದಿಗೆ ಇಂದು ವೇಗದ ಇಂಟರ್ನೆಟ್‌ಗಾಗಿ ನಾವು ಅನೇಕ ಅಗ್ಗದ ಯೋಜನೆಗಳನ್ನು ಹೊಂದಿದ್ದೇವೆ. ಉತ್ತಮ ಹೈಸ್ಪೀಡ್ ಹೋಮ್ ಇಂಟರ್ನೆಟ್ ಸಂಪರ್ಕಕ್ಕಾಗಿ ಇದೀಗ ಗ್ರಾಹಕರು ಹೆಚ್ಚೇನು ಪಾವತಿಸಬೇಕಾದ ಅವಶ್ಯಕತೆ ಕೂಡ ಇಲ್ಲ. ಕೆಲವೇ ಸಾವಿರ ರೂಪಾಯಿಗಳಲ್ಲಿ ನೀವು ಮನೆಯಲ್ಲಿ ಉತ್ತಮ ಇಂಟರ್‌ನೆಟ್ ಸಂಪರ್ಕವನ್ನು ಪಡೆಯಬಹುದು.

ಇದರಿಂದ ನಿಮ್ಮ ಮನೆಯವರೆಲ್ಲರೂ ಸ್ಮಾರ್ಟ್‌ಫೋನ್, ಸ್ಮಾರ್ಟ್‌ಟಿವಿ, ಲ್ಯಾಪ್‌ಟಾಪ್ ಅಥವಾ ವೈರ್‌ಲೆಸ್ ಇಂಟರ್‌ನೆಟ್ ಸಂಪರ್ಕವಿಲ್ಲದ ಡೆಸ್ಕ್‌ಟಾಪ್ ಕಂಪ್ಯೂಟರ್ ಮೂಲಕ ಅತ್ಯುತ್ತಮ ಇಂಟರ್‌ನೆಟ್ ಸಂಪರ್ಕವನ್ನು ಪಡೆಯಬಹುದು. ರಿಲಯನ್ಸ್ ಜಿಯೋದ JioFiber ಭಾರತದ ಅತಿದೊಡ್ಡ ಬ್ರಾಡ್‌ಬ್ಯಾಂಡ್ ಸೇವಾ ಪೂರೈಕೆದಾರರಲ್ಲಿ ಒಂದಾಗಿದೆ. Airtel, Excitel ಮತ್ತು MTNL ನಂತಹ ಹೆಚ್ಚಿನ ಕಂಪೆನಿಗಳ ಇಂಟರ್‌ನೆಟ್ ಸೇವೆಗಳು ಲಭ್ಯವಿದ್ದರೂ ಸಹ JioFiber ನ ವೇಗವು 30Mbps ನಿಂದ ಹಿಡಿದು 1Gbps ವರೆಗೆ ಇರುತ್ತದೆ.

ಹೆಚ್ಚುವರಿಯಾಗಿ ಸೇವೆಯು ಕಂಪನಿಯ ಸ್ವಂತ JioTV+ ಸೇವೆ, ಅನಿಯಮಿತ ಧ್ವನಿ ಕರೆ ಮತ್ತು 15 OTT ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯೊಂದಿಗೆ ಸಂಯೋಜಿಸಲ್ಪಟ್ಟಿದೆ. ಹಾಗಾಗಿ ಇಂದು ನಾವು ಮನೆಗೆ ಬ್ರ್ಯಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕವನ್ನು ಪಡೆಯಲು ಇರುವ ಪ್ರಸ್ತುತ ಜಿಯೋವಿನ ಅತ್ಯುತ್ತಮ ಯೋಜನೆಗಳ ಬಗ್ಗೆ ನಾವು ಪಟ್ಟಿ ಮಾಡಿದ್ದೇವೆ.

ಜಿಯೋವಿನ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಯೋಜನೆಗಳು ಶೂನ್ಯ ಮುಂಗಡ ವೆಚ್ಚವನ್ನು ಹೊಂದಿರುತ್ತವೆ. ಅಂದರೆ ಕಂಪನಿಯು ಯಾವುದೇ ಸ್ಥಾಪನೆ ಅಥವಾ ಭದ್ರತಾ ಠೇವಣಿ ವಿಧಿಸುವುದಿಲ್ಲ. ಹಾಗೆಯೇ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ತಿಂಗಳಿಗೆ ರೂ 399 ರಿಂದ ಪ್ರಾರಂಭಿಸಿ ತಿಂಗಳಿಗೆ ರೂ 8,499 ವರೆಗೆ ನೀಡುತ್ತಿದೆ. ಇದು Netflix, Amazon, Prime Video, Disney+ Hotstar VIP, Sony Liv, Zee5, Voot Select, Lionsgate Play, Sun NXT, hoichoi, Discovery+, JioCinema, Shemaroo, AltBalaji, Eros Now, ಮತ್ತು Voot Kids ಸೇರಿದಂತೆ OTT ಸೇವೆಗಳನ್ನು ಒದಗಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo