ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಈಗ ಕೇವಲ ಟೆಲಿಕಾಂ ಕಂಪನಿಯಾಗಿ ಸೀಮಿತವಾಗಿರಲು ಬಯಸುವುದಿಲ್ಲ. ರಿಲಯನ್ಸ್‌ನಿಂದ ಜಿಯೋಫೋನ್ ನೆಕ್ಸ್ಟ್ (JioPhone Next) ಸ್ಮಾರ್ಟ್‌ಫೋನ್ ಬಿಡುಗಡೆಯಾದ ನಂತರ ಸ್ಮಾರ್ಟ್ಫೋನ್, ಟಿವಿಗಳು, ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್‌ಗಳನ್ನು ತಯಾರಿಸುವ ಕೆಲಸವನ್ನು ತ್ವರಿತವಾಗಿ ಪ್ರಾರಂಭಿಸಲು ಬಹುಶಃ ಇದು ಕಾರಣವಾಗಿದೆ. ಈಗ ಕಂಪನಿಯು ರಿಲಯನ್ಸ್ ಟಿವಿ ಮತ್ತು ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಲು ಹೊರಟಿದೆ. ರಿಲಯನ್ಸ್‌ನ ಟ್ಯಾಬ್ಲೆಟ್ ಮತ್ತು ಟಿವಿ ಮುಂದಿನ ವರ್ಷ ಅಂದರೆ 2022 ರಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.
JioPhone Next ನಂತೆಯೇ Jio Smart TV ಮತ್ತು Jio ಟ್ಯಾಬ್ಲೆಟ್ ಬೆಲೆಯು ತುಂಬಾ ಕಡಿಮೆಯಿರುವ ಸಾಧ್ಯತೆಯಿದೆ. ಈಗ ಕಂಪನಿಯು ಇನ್ನೂ ಎರಡು ಗ್ರಾಹಕಸ್ನೇಹಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ ಟ್ಯಾಬ್ಲೆಟ್ ಮತ್ತು ಕಡಿಮೆ ಬೆಲೆಯ ಸ್ಮಾರ್ಟ್ ಟಿವಿಯನ್ನು ರಿಲೀಸ್ ಮಾಡಲು ಪ್ಲಾನ್ ಮಾಡಿದೆಯಂತೆ. ವರದಿಗಳ ಪ್ರಕಾರ ಭಾರತೀಯ ಟೆಲಿಕಾಂ ದೈತ್ಯ ಮುಂದಿನ ವರ್ಷ ಕಡಿಮೆ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯಗಳುಳ್ಳ ಹೊಸ ಜಿಯೋ ಟ್ಯಾಬ್ಲೆಟ್ ಮತ್ತು ಜಿಯೋ ಟಿವಿ(Reliance Jio's Smart TV)ಯನ್ನು ಹೊರತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಶೀಘ್ರದಲ್ಲಿಯೇ ಜಿಯೋ ಟ್ಯಾಬ್ಲೆಟ್(Jio Tablet) ಮತ್ತು ಜಿಯೋ ಟಿವಿ ದೇಶೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಈ ಉತ್ಪನ್ನಗಳ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಇದುವರೆಗೂ ಕಂಪನಿ ನೀಡಿಲ್ಲ. ಭವಿಷ್ಯದಲ್ಲಿ ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಫೀಚರ್ಸ್ ಹೊಂದಿರುವ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಟಿವಿ ಪರಿಚಯಿಸಲು ಉತ್ಸುಕವಾಗಿದೆ. ಈ 2 ಉತ್ಪನ್ನಗಳ ಹೊರತಾಗಿಯೂ ಕಂಪನಿ ಲ್ಯಾಪ್‌ಟಾಪ್(Jio Laptop) ಹೊರತರುವ ನಿಟ್ಟಿನಲ್ಲಿಯೂ ಕಾರ್ಯನಿರ್ವಹಿಸುತ್ತಿದೆ ಎಂಬ ಮಾತುಗಳು ಹರಿದಾಡುತ್ತಿದೆ
OTT ಅಪ್ಲಿಕೇಶನ್‌ಗಳಿಗೆ ಸರ್ಪೋರ್ಟ್ ಮಾಡುವ ಹೊಸ ಸ್ಮಾರ್ಟ್ ಟಿವಿ ಹಲವಾರು ವೈಶಿಷ್ಟ್ಯಗಳನ್ನು(Reliance Jio TV Specifications) ಹೊಂದಿರಲಿದೆ. ವಿಶೇಷವಾಗಿ ಕಂಪನಿಯು ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಜೊತೆಗೆ ಟಿವಿಯೊಂದಿಗೆ ಸೆಟಪ್ ಬಾಕ್ಸ್ ಕೂಡ ಒದಗಿಸಲಿದೆ. ಈ ಉತ್ಪನ್ನವನ್ನು ಹಲವಾರು ಗಾತ್ರದ ಆಯ್ಕೆಗಳಲ್ಲಿ ಅಂದರೆ ವಿವಿಧ ಇಂಚಿನ ಟಿವಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ.
ಜಿಯೋ ಟ್ಯಾಬ್ಲೆಟ್ PragatiOS ಔಟ್-ಆಫ್-ದಿ-ಬಾಕ್ಸ್ ನಲ್ಲಿ ರನ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ JioPhone Nextಗಾಗಿ Google ಪಾಲುದಾರಿಕೆಯಲ್ಲಿ ರಚಿಸಲಾಗಿರುವ ಕಂಪನಿಯ ಸ್ವಾಮ್ಯದ ಆಪರೇಟಿಂಗ್ ಸಿಸ್ಟಮ್ ಹೊಂದುವ ನಿರೀಕ್ಷೆ. ಟ್ಯಾಬ್ಲೆಟ್ ದೊಡ್ಡ ಡಿಸ್‌ಪ್ಲೇಯನ್ನು ಹೊಂದಿರಲಿದ್ದು ಅಮೆರಿಕದ ಚಿಪ್‌ಮೇಕರ್‌ನೊಂದಿಗಿನ ಭಾರತೀಯ ಬ್ರ್ಯಾಂಡ್‌ನ ಪಾಲುದಾರಿಕೆಯಿಂದ ಪ್ರವೇಶ ಮಟ್ಟದ ಕ್ವಾಲ್ಕಾಮ್ ಚಿಪ್‌ಸೆಟ್‌ನಿಂದ ಪ್ರಾಯಶಃ ಚಾಲಿತವಾಗಬಹುದು. ಇದರ ಹೊರತಾಗಿ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿರುವ ವಿವಿಧ ಕಂಪನಿಗಳ ಟ್ಯಾಬ್ಲೆಟ್ ನಂತೆಯೇ ಜಿಯೋ ಕಂಪನಿಯ ಟ್ಯಾಬ್ಲೆಟ್(Reliance Jio Tablet) ಬೆಲೆಯು ಇರಲಿದೆ ಎಂದು ತಿಳಿದುಬಂದಿದೆ.