ಈಗಾಗಲೇ ಮೇಲೆ ತಿಳಿಸಿರುವಂತೆ ಹೊಸ ವರ್ಷದಲ್ಲಿ ರಿಲಯನ್ಸ್ ಜಿಯೊ ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಪರದೆಯ ಸ್ಮಾರ್ಟ್ಫೋನ್ಗಳನ್ನು ತರಲು ಪಾಲುದಾರರೊಂದಿಗೆ ವರದಿ ಮಾಡುತ್ತಿರುವುದಾಗಿ ಎಕಾನೊಮಿಕ್ ಟೈಮ್ಸ್ ವರದಿ ಮಾಡಿದೆ. ಜಿಯೋವಿನ ಮುಂಬರುವ ಫೋನ್ಗಳನ್ನು ಕೈಗೆಟುಕುವ ಬೆಲೆಯಲ್ಲಿ ಬರುವುದಾಗಿ ಹೇಳಲಾಗುತ್ತಿದೆ. ಅಲ್ಲದೆ ಇವು 4G ಸಪೋರ್ಟ್ ಮಾಡುವ ಫೋನ್ಗಳಾಗಿರುತ್ತವೆ.
ರಿಲಯನ್ಸ್ ಜಿಯೋ ಅಮೆರಿಕದ ಗುತ್ತಿಗೆ ತಯಾರಕರಾದ ಫ್ಲೆಕ್ಸ್ನೊಂದಿಗೆ (Flex) ಕಂಪನಿಯನ್ನು ಭಾರತದಲ್ಲಿ Apple, Samsung, Xiaomi, Oppo ಬ್ರ್ಯಾಂಡ್ಗಳಂತೆ ಇಲ್ಲಿಯೇ ಸ್ಥಳೀಯವಾಗಿ ಸುಮಾರು 100 ದಶಲಕ್ಷ ಸ್ಮಾರ್ಟ್ಫೋನ್ಗಳನ್ನು ಉತ್ಪಾದಿಸಲು ಕಂಪನಿಯು ಮಾತುಕತೆ ನಡೆಸುತ್ತಿದೆ. ಇದರೊಂದಿಗೆ ಮುಖೇಶ್ ಅಂಬಾನಿ ನೇತೃತ್ವದ ಕಂಪನಿ ತನ್ನ ಮಾರುಕಟ್ಟೆ ಪಾಲನ್ನು ವಿಸ್ತರಿಸಲು ಬಯಸುವ ನಿರೀಕ್ಷೆಯಿದೆ.
"ಭಾರತದಲ್ಲಿ 4G ಸ್ಮಾರ್ಟ್ಫೋನ್ಗೆ ಇನ್ನೂ ಹೆಚ್ಚಿನ ಬದಲಾವಣೆಯನ್ನು ತರಲು ಹೆಚ್ಚಿನ ಗ್ರಾಹಕರನ್ನು ಬಳಸಿಕೊಳ್ಳುವಂತಹ ದೊಡ್ಡ ಸ್ಕ್ರೀನ್ ಸ್ಮಾರ್ಟ್ಫೋನ್ಗಳನ್ನು ಹೊಂದಿರುವ ಪಾಲುದಾರರೊಂದಿಗೆ ನಾವು ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ ಸರಿಯಾದ ರೀತಿಯ ಅನುಭವವನ್ನು ನೀಡುವ ಉತ್ಪಾಕರೊಂದಿಗೆ ಕೈಗೆಟುಕುವ ಫೋನ್ಗಳ ವಿಷಯದ ಬಗ್ಗೆ ಮಾತುಕತೆ ಮಾಡಲಿದ್ದೇವೆಂದು" ರಿಲಯನ್ಸ್ ಜಿಯೋ ಮುಖ್ಯ ಮಾರಾಟ ಸುನಿಲ್ ದತ್ ಹೇಳಿದ್ದಾರೆ.
ರಿಲಯನ್ಸ್ ಜಿಯೋ ಮೂಲಭೂತವಾಗಿ ಸುಮಾರು 500 ಮಿಲಿಯನ್ ಫೀಚರ್ ಫೋನ್ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು ಅವುಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಡೇಟಾ ಮತ್ತು ಉತ್ತಮವಾದ ಒಳ್ಳೆ ಬೆಲೆಯ ಮೂಲಕ ಸ್ಮಾರ್ಟ್ಫೋನ್ಗೆ ಬದಲಿಸಲು ಬಯಸುತ್ತದೆ. ಕಂಪನಿಯು ತನ್ನ 4G ಸೇವೆಗಳನ್ನು ಭಾರತದಲ್ಲಿ ಪರಿಚಯಿಸಿದಾಗ ಅದೇ ರೀತಿ ಮಾಡಿತ್ತು. ಇದರ ಬಗ್ಗೆ ನೀವೇನು ಹೇಳುತ್ತಿರೆಂದು ಕಾಮೆಂಟ್ ಮಾಡಿ ತಿಳಿಸಿ.