ರಿಲಯನ್ಸ್ ಜಿಯೋದಿಂದ ಹೊಸ Jio Space Fiber ಸೇವೆ ಆರಂಭ? ಇದರ ಪ್ರಯೋಜನಗಳೇನು?

Updated on 21-Feb-2024
HIGHLIGHTS

ಜಿಯೋ ಸ್ಪೇಸ್ ಫೈಬರ್ (Jio Space Fiber) ಒಂದು ಸ್ಯಾಟಲೈಟ್ ಆಧಾರಿತ ಇಂಟರ್ನೆಟ್ ಸಂಪರ್ಕ ಸಾಧನವಾಗಿದೆ.

ರಿಲಯನ್ಸ್ ಜಿಯೋದ ಕನೆಕ್ಟಿವಿಟಿ ಪೋರ್ಟ್‌ಫೋಲಿಯೊದಲ್ಲಿ ಜಿಯೋ ಸ್ಪೇಸ್ ಫೈಬರ್ ಮೂರನೇ ಪ್ರಮುಖ ತಂತ್ರಜ್ಞಾನವಾಗಿದೆ.

Jio Space Fiber ಸ್ಯಾಟಲೈಟ್ ಆಧಾರಿತ ಗಿಗಾ ಫೈಬರ್ ಸೇವೆಯನ್ನು IMC 2023 ಈವೆಂಟ್‌ನಲ್ಲಿ ಆಕಾಶ್ ಅಂಬಾನಿ ಪರಿಚಯಿಸಿದರು.

ರಿಲಯನ್ಸ್ ಜಿಯೋ ದೇಶದ ದೂರದ ಪ್ರದೇಶಗಳಲ್ಲಿಯೂ ಹೆಚ್ಚಿನ ವೇಗದ ಇಂಟರ್ನೆಟ್ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಹೊಸ ತಂತ್ರಜ್ಞಾನವನ್ನು ಪ್ರಾರಂಭಿಸಿದೆ. ಈ ತಂತ್ರಜ್ಞಾನದ ಹೆಸರು ಜಿಯೋ ಸ್ಪೇಸ್ ಫೈಬರ್ (Jio Space Fiber) ಆಗಿದ್ದು ಇದು ಸ್ಯಾಟಲೈಟ್ ಆಧಾರಿತ ಗಿಗಾ ಫೈಬರ್ ತಂತ್ರಜ್ಞಾನವಾಗಿದ್ದು ಫೈಬರ್ ಕೇಬಲ್ ಮೂಲಕ ಇಂಟರ್ ನೆಟ್ ಸೌಲಭ್ಯ ಕಷ್ಟವಾಗಿರುವ ಪ್ರದೇಶಗಳಲ್ಲೂ ಹೈಸ್ಪೀಡ್ ಇಂಟರ್ ನೆಟ್ ಸೌಲಭ್ಯ ಒದಗಿಸಲಿದೆ.

ಜಿಯೋ ಸ್ಪೇಸ್ ಫೈಬರ್ ಕಡಿಮೆ ಬೆಲೆಯಲ್ಲಿ ದೇಶಾದ್ಯಂತ ಲಭ್ಯವಾಗಲಿದೆ. ದೆಹಲಿಯ ಪ್ರಗತಿ ಮೈದಾನದಲ್ಲಿ ದೂರದ ಪ್ರದೇಶಗಳಲ್ಲಿ ಇಂಟರ್ನೆಟ್ ನೀಡಲು ಜಿಯೋ ಸ್ಪೇಸ್ ಫೈಬರ್ (Jio Space Fiber) ಸ್ಯಾಟಲೈಟ್ ಆಧಾರಿತ ಗಿಗಾ ಫೈಬರ್ ಸೇವೆಯನ್ನು IMC 2023 ಈವೆಂಟ್‌ನಲ್ಲಿ ಆಕಾಶ್ ಅಂಬಾನಿ ಪರಿಚಯಿಸಿದರು.

What is Jio space fiber?

ಜಿಯೋ ಸ್ಪೇಸ್ ಫೈಬರ್ (Jio Space Fiber) ಒಂದು ಸ್ಯಾಟಲೈಟ್ ಆಧಾರಿತ ಇಂಟರ್ನೆಟ್ ಸಂಪರ್ಕ ಸಾಧನವಾಗಿದೆ. ಈ ಹೊಸ ತಂತ್ರಜ್ಞಾನವನ್ನು ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ (IMC 2023) ರಿಲಯನ್ಸ್ ಜಿಯೋದ ಚೆರ್‌ಮ್ಯಾನ್ ಆಕಾಶ್ ಅಂಬಾನಿ ಪ್ರದರ್ಶಿಸಿದರು. ಇದು ಮಧ್ಯಮ ಅರ್ಥ್ ಆರ್ಬಿಟ್ (MEO) ಉಪಗ್ರಹ ಇಂಟರ್ನೆಟ್ ಅನ್ನು ನೀಡಲು ಲಕ್ಸೆಂಬರ್ಗ್ ಮೂಲದ ಸ್ಯಾಟಲೈಟ್ ದೂರಸಂಪರ್ಕ ಕಂಪನಿಯಾದ SES (Societe Europeenne des Satellites) ಕಂಪನಿಯೊಂದಿಗೆ Jio ತನ್ನ ಪಾಲುದಾರಿಕೆಯನ್ನು ಘೋಷಿಸಿದೆ.

ಇದನ್ನೂ ಓದಿ: Amazon Finale Sale 2023: ಅತಿ ಕಡಿಮೆ ಬೆಲೆಗೆ ಅತ್ಯುತ್ತಮ Smart Watch ಭಾರಿ ಮಾರಾಟ

Jio Space Fiber ಹೇಗೆ ಕೆಲಸ ಮಾಡುತ್ತದೆ?

ಜಿಯೋ ಸ್ಪೇಸ್ ಫೈಬರ್ ಸ್ಯಾಟಲೈಟ್ ಆಧಾರಿತ ಸೇವೆಯಾಗಿದ್ದು ಅದು ಸ್ಯಾಟಲೈಟ್ ಮೂಲಕ ಇಂಟರ್ನೆಟ್ ಪ್ರವೇಶವನ್ನು ಒದಗಿಸುತ್ತದೆ. ಈ ಸೇವೆಯು ಫೈಬರ್ ಕೇಬಲ್ ಮೂಲಕ ಇಂಟರ್ನೆಟ್ ಅನ್ನು ತಲುಪಲು ಕಷ್ಟಕರವಾದ ಪ್ರದೇಶಗಳಲ್ಲಿ ಸಹ ಇಂಟರ್ನೆಟ್ ಪ್ರವೇಶವನ್ನು ಒದಗಿಸುತ್ತದೆ. ಜಿಯೋ ಸ್ಪೇಸ್ ಫೈಬರ್‌ಗಾಗಿ ಗ್ರಾಹಕರಿಗೆ ಸ್ಯಾಟಲೈಟ್ ಡಿಶ್ ಮತ್ತು ವೈ-ಫೈ ರೂಟರ್ ಅಗತ್ಯವಿರುತ್ತದೆ. ಸ್ಯಾಟಲೈಟ್‌ನಿಂದ ಸಂಕೇತವನ್ನು ಸ್ವೀಕರಿಸುತ್ತದೆ. ಮತ್ತು Wi-Fi ರೂಟರ್ ಆ ಸಂಕೇತವನ್ನು ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಇತರ ಸಾಧನಗಳಿಗೆ ರವಾನಿಸುತ್ತದೆ.

ಜಿಯೋ ಸ್ಪೇಸ್ ಫೈಬರ್‌ನ ಪ್ರಯೋಜನಗಳೇನು?

  • ಫೈಬರ್ ಕೇಬಲ್ ಮೂಲಕ ಇಂಟರ್ನೆಟ್ ಅನ್ನು ತಲುಪಲು ಕಷ್ಟವಾಗಿರುವ ಪ್ರದೇಶಗಳಲ್ಲಿ ಸಹ ಇದು ಇಂಟರ್ನೆಟ್ ಪ್ರವೇಶವನ್ನು ಒದಗಿಸುತ್ತದೆ.
  • ಇದರೊಂದಿಗೆ ಬಳಕೆದಾರರು ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಪಡೆಯುತ್ತಾರೆ.
  • ಇದು ಕಡಿಮೆ ವೆಚ್ಚದ ಇಂಟರ್ನೆಟ್ ಸೇವೆಯಾಗಿದೆ.

ಮೊದಲು ಈ ಸ್ಥಳಗಳಲ್ಲಿ Jio Space Fiber ಲಭ್ಯ

ರಿಲಯನ್ಸ್ ಜಿಯೋ ತನ್ನ ಹೊಸ ಸ್ಯಾಟಲೈಟ್ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆ ‘ಜಿಯೋ ಸ್ಪೇಸ್ ಫೈಬರ್’ ಅನ್ನು ಭಾರತದ ನಾಲ್ಕು ದೂರದ ಪ್ರದೇಶಗಳಲ್ಲಿ ಲಭ್ಯವಾಗುವಂತೆ ಮಾಡಿದೆ. ಜಿಯೋ ಮೊದಲಿಗೆ ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವನ, ಛತ್ತೀಸ್‌ಗಢದ ಕೊರ್ಬಾ, ಒರಿಸ್ಸಾದ ನಬರಂಗಪುರ ಮತ್ತು ಅಸ್ಸಾಂನ ONGC ಜೋರ್ಹತ್ ಈ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ. ರಿಲಯನ್ಸ್ ಜಿಯೋದ ಕನೆಕ್ಟಿವಿಟಿ ಪೋರ್ಟ್‌ಫೋಲಿಯೊದಲ್ಲಿ ಜಿಯೋ ಸ್ಪೇಸ್ ಫೈಬರ್ ಮೂರನೇ ಪ್ರಮುಖ ತಂತ್ರಜ್ಞಾನವಾಗಿದೆ.

ಜಿಯೋ ಫೈಬರ್ ಮತ್ತು ಜಿಯೋ ಏರ್ ಫೈಬರ್ ನಂತರ ಇದು ಮೂರನೇ ತಂತ್ರಜ್ಞಾನವಾಗಿದ್ದು ಭಾರತದ ಎಲ್ಲಾ ಮೂಲೆಗಳಲ್ಲಿ ಇಂಟರ್ನೆಟ್ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ರಿಲಯನ್ಸ್ ಜಿಯೋ ದೂರದ ಮುಖ್ಯವಾಗಿ ಹಳ್ಳಿ ಗುಡ್ಡಗಾಡು ಪ್ರದೇಶಗಳಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸಲು SES ಕಂಪನಿಯ ಉಪಗ್ರಹಗಳನ್ನು ಬಳಸಲು ನಿರ್ಧರಿಸಿದೆ. SES ಅಂತರಾಷ್ಟ್ರೀಯ ಸ್ಯಾಟಲೈಟ್ ಸೇವಾ ಪೂರೈಕೆದಾರ. SES ಉಪಗ್ರಹಗಳನ್ನು ಬಳಸಿಕೊಂಡು Jio ಸ್ಪೇಸ್ ಫೈಬರ್ ದೇಶದ ಎಲ್ಲಾ ಮೂಲೆಗಳಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಪ್ರವೇಶವನ್ನು ಒದಗಿಸುತ್ತದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :