ಭಾರತದಲ್ಲಿ ಇಂದು ಅತಿ ಹೆಚ್ಚು ನಿರೀಕ್ಷಿತ ಮತ್ತು ಜನಪ್ರಿಯ ಟೆಲಿಕಾಂ ಬ್ರಾಂಡ್ ರಿಲಯನ್ಸ್ ಜಿಯೋ ತನ್ನ 46ನೇ ವಾರ್ಷಿಕ ಸಾಮಾನ್ಯ ಸಭೆ ಅಂದ್ರೆ AGM (Annual General Meeting) 2023 ಅನ್ನು ಇಂದು ಮಧ್ಯಾಹ್ನ 2:00pm ಗಂಟೆಗೆ ಹಮ್ಮಿಕೊಂಡಿದೆ. ಈ ಸಭೆಯಲ್ಲಿ ರಿಲಯನ್ಸ್ ಜಿಯೋ ದೇಶದಲ್ಲಿ ಕೆಲವು ಮಹತ್ತರವಾದ ಹೆಜ್ಜೆಗಳನ್ನು ಸ್ಥಾಪಿಸಲು ಸಜ್ಜಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಚೇರ್ಮನ್ ಮುಕೇಶ ಅಂಬಾನಿ (Mukhesh Ambani) ಕೆಲವು ಮಹತ್ವದ ಮಾತುಗಳುನ್ನು ಹೇಳಲಿದ್ದಾರೆ. ಇದರಲ್ಲಿ ಜಿಯೋ ಫೈನಾನ್ಷಿಯಲ್ ಸರ್ವೀಸಸ್‌ನ ಮಾರ್ಗಸೂಚಿಯಾ ಬಗ್ಗೆ ಮತ್ತು ವರ್ಷದ ಅಂತ್ಯದೊಳಗೆ ದೇಶದಾದ್ಯಂತ 5G India ಮಾಡುವ ಗುರಿಯನ್ನು ಹೊಂದಿದೆ.
ಇಂದು ಮೊದಲಾಯನೇಯದಾಗಿ ಮುಕೇಶ್ ಅಂಬಾನಿಯವರ ಹೊಸ ಕಂಪನಿ ಜಿಯೋ ಫೈನಾನ್ಷಿಯಲ್ ಸರ್ವಿಸಸ್ (Jio Financial Services) ಮಾರ್ಗಸೂಚಿಗೆ ಸಂಬಂಧಿಸಿದಂತೆ ಪ್ರಮುಖ ಘೋಷಣೆಗಳನ್ನೂ ನೀಡುವ ನಿರೀಕ್ಷೆಗಳಿವೆ. ಏಕೆಂದರೆ ಇದರ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾಗಿದ್ದು ಲಿಸ್ಟಿಂಗ್ ದಿನದಿಂದ ಕಂಪನಿಯ ಷೇರುಗಳು ನಿರಂತರವಾಗಿ ಕುಸಿಯುತ್ತಿವೆ. ಇದರ ಷೇರುದಾರರು ಈ ಕಂಪನಿಯಲ್ಲಿ ಬಾಹ್ಯ ಹೂಡಿಕೆ ಸೇರಿದಂತೆ ಇತರ ಅಪ್ಡೇಟ್ಗಳನ್ನು ಪಡೆಯುವ ನಿರೀಕ್ಷೆಗಳಿವೆ.
ರಿಲಯನ್ಸ್ ಕಳೆದ ವರ್ಷದ ಮುಖೇಶ್ ಅಂಬಾನಿ ವಿಶೇಷ ಘೋಷಣೆಯ ಮೇಲೆ ಈಗ ಹೂಡಿಕೆದಾರರು ಹೆಚ್ಚಿನ ಕಣ್ಣಿಟ್ಟಿದ್ದಾರೆ. ಏಕೆಂದರೆ ವಾಸ್ತವವಾಗಿ ಹೂಡಿಕೆದಾರರು ರಿಲಯನ್ಸ್ ಟೆಲಿಕಾಂ ಮತ್ತು ರಿಲಯನ್ಸ್ ರಿಟೇಲ್‌ನ IPO (Initial Public Offerings) ಕುತೂಹಲದಿಂದ ಕಾಯುತ್ತಿದ್ದಾರೆ. ಇಂದು ನಡೆಯಲಿರುವ 46ನೇ ವಾರ್ಷಿಕ ಸಾಮಾನ್ಯ ಸಭೆ ಅಂದ್ರೆ AGM (Annual General Meeting) 2023 ಅಧ್ಯಕ್ಷ ಮುಖೇಶ್ ಅಂಬಾನಿ Jio ಮತ್ತು Retail IPO ಕುರಿತು ಹೊಸ ಅಪ್ಡೇಟ್ ಅನ್ನು ಸಹ ನೀಡುವ ನಿರೀಕ್ಷೆಗಳಿವೆ.
ರಿಲಯನ್ಸ್ ನಿರೀಕ್ಷಿತ ಘೋಷಣೆ ಅಂದ್ರೆ ಅದು ವರ್ಷದ ಅಂತ್ಯದೊಳಗೆ ದೇಶದಾದ್ಯಂತ 5G India ಮಾಡುವ ಗುರಿಯನ್ನು ಹೊಂದಿರುವುದು. ಏಕೆಂದರೆ ದೇಶದಲ್ಲಿ ಈ 5G ರೋಲ್‌ಔಟ್ ಮಾಡಿ ಭಾರತವನ್ನು 5G India ಮಾಡುವುದಕ್ಕೆ ಜಿಯೋ ಈಗಾಗಲೇ ಪಣ ತೊಟ್ಟಿದೆ. ಅಲ್ಲದೆ ಕೈಗೆಟಕುವ ಬೆಲೆಗೆ ಆಕರ್ಷಕ 5G ಪ್ರಿಪೇಯ್ಡ್ ಯೋಜನೆಗಳ ವಿವರಗಳನ್ನು ಒಳಗೊಂಡಂತೆ AGM ನಲ್ಲಿ ಈ ಉಪಕ್ರಮದ ಪ್ರಮುಖ ನವೀಕರಣವನ್ನು ನಿರೀಕ್ಷಿಸಲಾಗಿದೆ. ಇದರೊಂದಿಗೆ ಸಾಮಾನ್ಯ ಜನರ ಅತಿ ಹೆಚ್ಚು ನಿರೀಕ್ಷಿತ ಘೋಷಣೆ JioPhone 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಬಗ್ಗೆ ನಡೆಯುತ್ತಿರುವ ಉಹಾಪೋಹಾ ನಿಜವಾಗುವ ಸಾಧ್ಯತೆಗಳಿವೆ.
ರಿಲಯನ್ಸ್ ಮುಂಬರಲಿರುವ ಕೆಲವು ವರ್ಷ ಅಂದ್ರೆ 2035 ವೇಳೆಗೆ ದೇಶದ ಕಾರ್ಬನ್ ಶೂನ್ಯವಾಗುವ ನಿರೀಕ್ಷೆಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ $10 ಬಿಲಿಯನ್ ಹೊಸ ಇಂಧನ ವ್ಯವಹಾರಗಳಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸುವ ನಿರೀಕ್ಷೆ. AGM ನಲ್ಲಿ ಸಂಬಂಧಿತ ಯೋಜನೆಗಳ ಪ್ರಗತಿಯ ಕುರಿತು ಕೆಲವು ಅಪ್ಡೇಟ್ಗಳನ್ನು ಮುಖೇಶ್ ಅಂಬಾನಿ ನೀಡಬಹುದು. ಇದು ಕಾರ್ಯಾರಂಭಕ್ಕಾಗಿ ಟೈಮ್‌ಲೈನ್ ಅನ್ನು ಬಹಿರಂಗಪಡಿಸುವುದು ಮತ್ತು ಈ ಉದ್ಯಮಗಳಿಂದ ಸಂಭಾವ್ಯ ಗಳಿಕೆಗಳನ್ನು ಒಳಗೊಂಡಿರುತ್ತದೆ.