Pushpa 2 OTT Release: ಭಾರತದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ನಾಯಕನಾಗಿ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿಯಾಗಿ ನಟಿಸಿರುವ ಆಕ್ಷನ್ ದ್ರಿಲ್ಲರ್ ಡ್ರಾಮಾದೊಂದಿಗೆ ಅದ್ದೂರಿಯಾಗಿ ಪ್ರದರ್ಶನಗೊಳ್ಳುತ್ತಿರುವ ಪುಷ್ಪ (Pushpa 2) ಸಿನಿಮಾವನ್ನು Netflix ಮೂಲಕ Telugu, Tamil, Kannada, Malayalam ಮತ್ತು Hindi ಭಾಷೆಗಳಲ್ಲಿ ವೀಕ್ಷಿಯಬಹುದು. ಅಲ್ಲದೆ ಈ Netflix ಈ ಬ್ಲಾಕ್ ಬಸ್ಟರ್ ಪುಷ್ಪ ಮೂವಿಯನ್ನು ಬರೋಬ್ಬರಿ 275 ಕೋಟಿ ರೂಗಳನ್ನು ನೀಡಿ ತನ್ನ OTT ಪಟ್ಟಿಗೆ ಸೇರಿಸಿಕೊಂಡಿದೆ.
ಪ್ರಸ್ತುತ ಈ ಪುಷ್ಪ (Pushpa 2) ಸಿನಿಮಾ ಬರೋಬ್ಬರಿ 650 ಕೋಟಿಗೂ ಅಧಿಕ ಆದಾಯವನ್ನು ಗಳಿಸಿಕೊಂಡಿದ್ದು 1000 ಕೋಟಿಯ ಗುರಿಯನ್ನು ಮುಟ್ಟಲು ಸಾಗುತ್ತಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರ ದೇಶಾದ್ಯಂತ ಇಷ್ಟಪಟ್ಟಿದ್ದರೂ ಅಭಿಮಾನಿಗಳು ಪುಷ್ಪ (Pushpa 2) OTT ದಿನಾಂಕಕ್ಕಾಗಿ ಹುಡುಕುತ್ತಿದ್ದಾರೆ. ಈ ಜಬರದಸ್ತ್ Pushpa 2 ಸಿನಿಮಾ OTT ಬಿಡುಗಡೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
Also Read: Tecno Phantom V2 Series ಮೊದಲ ಮಾರಾಟ ನಾಳೆಯಿಂದ ಶುರ! ಆಫರ್ ಬೆಲೆ ಮತ್ತು ಫೀಚರ್ಗಳೇನು?
ಜನಪ್ರಿಯ ನೆಟ್‌ಪ್ಲಿಕ್ಸ್ ಅಲ್ಲು ಅರ್ಜುನ್ ಅವರ ಚಲನಚಿತ್ರ ಪುಷ್ಪ (Pushpa 2) ಡಿಜಿಟಲ್ ರೈಟ್ ಪಡೆದುಕೊಂಡಿದೆ. OTT ಪ್ಲಾಟ್‌ಫಾರ್ಮ್ ಈ ವರ್ಷದ ಆರಂಭದಲ್ಲಿ ಮಾಹಿತಿ ನೀಡಿತು ಮತ್ತು ಭಾಷೆಯ ಲಭ್ಯತೆಯ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಂಡಿದೆ. ಥಿಯೇಟ್ರಿಕಲ್ ಬಿಡುಗಡೆಯ ನಂತರ ಆಕ್ಷನ್ ದ್ರಿಲ್ಲರ್ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ OTT ದೈತ್ಯದಲ್ಲಿ ಬಿಡುಗಡೆಯಾಗಲಿದೆ. ಅಲ್ಲದೆ ‘#NetflixPandaga’ ಎಂಬ ಪೋಸ್ಟ್ ನೊಂದಿಗೆ ಹ್ಯಾಶ್‌ಟ್ಯಾಗ್ ಅನ್ನು ಹಂಚಿಕೊಂಡಿದ್ದಾರೆ.
ಇದರ ಬಗ್ಗೆ Sacnilk Technologies Pvt. Ltd ವರದಿಗಳ ಪ್ರಕಾರ ನೋಡುವುದಾದರೆ Netflix ಈ ಬ್ಲಾಕ್ ಬಸ್ಟರ್ ಪುಷ್ಪ (Pushpa 2) ಮೂವಿಯನ್ನು ಬರೋಬ್ಬರಿ 275 ಕೋಟಿ ರೂಗಳನ್ನು ನೀಡಿ ತನ್ನ OTT ಪಟ್ಟಿಗೆ ಸೇರಿಸಿರುವ ಕಾರಣ ಪ್ಲಾಟ್‌ಫಾರ್ಮ್‌ನಲ್ಲಿ ಇನ್ನೂ ಹೆಚ್ಚಿನ ದಿನಗಳಿಗೆ ಕಾಯುವ ಅಗತ್ಯವಿಲ್ಲ ಅನ್ನುವುದು ನಿಮಗೆ ಸೂಚಿಸುತ್ತದೆ. ಯಾಕೆಂದರೆ ಸಾಮಾನ್ಯವಾಗಿ ನಿಮಗೆ ಮಾಹಿತಿ ನೀಡುವುದಾದರೆ ದೊಡ್ಡ ಬಜೆಟ್ ಸಿನಿಮಾಗಳು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ 6-8 ವಾರಗಳ ನಂತರವಷ್ಟೇ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳು ಹೇಳುತ್ತವೆ. ಆದರೆ ಪ್ರಸ್ತುತ ಇದರ ಬಗ್ಗೆ ಕಂಪನಿ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.