ಅವರಂತೆ ನಾವು ನೀವು ಸಾಮಾನ್ಯ ಜನರು ಸಹ ನಮ್ಮ ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಬವುದು.
ಪುಲ್ವಾಮಾ ಉಗ್ರರ ದಾಳಿ ಬಳಿಕ ಯೋಧರ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಇದರಿಂದಾಗಿ 50 ಕ್ಕೂ ಹೆಚ್ಚು ಸೈನಿಕರು ವೀರ ಮರಣ ಸಲ್ಲಿಸಿದ್ದಾರೆ. ಹಲವಾರು ಯೋಧರು ಗಂಭೀರ ಗಾಯಾಳುಗಳಾಗಿದ್ದರೆ. ಅಲ್ಲದೆ ಭಾರತದಲ್ಲಿ ಪ್ರತಿ ಭಾರತೀಯರು ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತ ಇದ್ದರೆ. ಇಂಥದ ಸಂಧರ್ಭದಲ್ಲಿ ನಮ್ಮ ನೆಮ್ಮದಿಗಾಗಿ ನಮ್ಮ ರಕ್ಷಣೆಗಾಗಿ ಮತ್ತು ದೇಶಕ್ಕಾಗಿ ಹಗಲು ರಾತ್ರಿ ತಮ್ಮ ಜೀವದೊಂದಿಗೆ ಆಟ ಆಡುವ ಯೋಧರಿಗೆ ನಾವು ಈ ಭರವಸೆಯನ್ನು ನೀಡಬೇಕಿದೆ ಅವರು ಏಕಾಂಗಿಯಲ್ಲ ಬಾರದ ಲೋಕಕ್ಕೆ ಹೋದ ಸೈನಿಕರ ಕುಟುಂಬ ಒಂಟಿಯಲ್ಲ ನಾವು ಇಡೀ ದೇಶ ಅವರೊಂದಿಗಿದೆ.
ಇದರ ಮಧ್ಯೆಯಲ್ಲಿ ಈಗಾಗಲೇ ನಮಗಾಗಿ ಮತ್ತು ನಮ್ಮ ದೇಶಕ್ಕಾಗಿ ಹುತಾತ್ಮರಾದ ವೀರ ಯೋಧರ ಕುಟುಂಬಗಳ ನೆರವುಗಾಗಿ ಅವರ ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ವೆಚ್ಚ ಭರಿಸುವುದಾಗಿ ಹಲವಾರು ಜನರು ಬೆಂಬಲಿಸುತ್ತಿದ್ದಾರೆ. ಇಂದಿನ ಸೋಶಿಯಲ್ ಮೀಡಿಯಾ ಮತ್ತು ಟೆಕ್ನಾಲಜಿ ಬಳಸಿಕೊಳ್ಳುವ ಮೂಲಕ ದೊಡ್ಡ ದಾನಿಗಳಂತೆ ಆಗದೆ ಇದ್ದರು ನಾವು ನೀವು ಸಾಮಾನ್ಯ ಜನರು ಸಹ ನಮ್ಮ ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಬವುದು.
ಒಂದು ವೇಳೆ ನಿಮ್ಮ ಫೋನ್ಗಳಲ್ಲಿ ನೀವು ಸ್ಮಾರ್ಟ್ ಅಪ್ಲಿಕೇಶನ್ಗಳಾದ Paytm, PhonePe ಅಥವಾ Google Pay ಬಳಕೆದಾರರಾಗಿದ್ದು ಅಥವಾ ಲ್ಯಾಪ್ಟಾಪ್, ಡೆಸ್ಕ್ಟಾಪ್ ಬಳಸುತ್ತಿದ್ದು ಹುತಾತ್ಮರಾದ ವೀರ ಯೋಧರ ಕುಟುಂಬಗಳಿಗೆ ನೆರವು ನೀಡ ಬಯಸಿದರೆ ಅದರ ಸಂಪೂರ್ಣ ಮಾಹಿತಿ ಈ ವಿಡಿಯೋ ಮೂಲಕ ಹಂಚಿಕೊಳ್ಳುತ್ತೇವೆ. ಈ ವಿಡಿಯೋವನ್ನು ಮಾನವೀಯತೆಯ ಮೇರೆಗೆ ಲೈಕ್ ಶೇರ್ ಮಾಡದಿದ್ದರೇ ಪರವಾಗಿಲ್ಲ ಆದರೆ ಈ ಮಾಹಿತಿಯನ್ನು ಬೇರೆಯವರೊಂದಿಗೆ ದಯವಿಟ್ಟು ಹಂಚಿಕೊಳ್ಳಿ.
Paytm ಬಳಕೆದಾರರು: ಪೆಟಿಎಂ ತೆರೆದ ತಕ್ಷಣ ಇದರ ಹೋಂ ಸ್ಕ್ರೀನ್ ಮೇಲೆಯೇ Contribute CRPF Braveheart ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ ಒಂದು ಹೊಸ ಪೇಜ್ ತೆರೆಯುತ್ತದೆ. ಇದರಲ್ಲಿ ನಿಮ್ಮ ಹೆಸರು, ನೀಡ ಬಯಸಿದರೆ ನಿಮ್ಮ PAN ಮಾಹಿತಿ ನೀಡಿದ ನಂತರ ನಿಮ್ಮ ಕೈಲಾದ ಮೊತ್ತವನ್ನು 2000, 1000, 500 ರೂಗಳಿಗಿಂತ ಹೆಚ್ಚು ಅಥವಾ ಕಡಿಮೆ ನೆರವು ಮಾಡಬವುದು.
PhonePe ಬಳಕೆದಾರರು: ಫೋನ್ ಪೇ ಬಳಕೆದಾರರು ಸಹ ಹೋಂ ಸ್ಕ್ರೀನ್ ಮೇಲೆಯೇ Contribute Pulwama CRPF Braveheart ಬ್ಯಾನರ್ ಕಾಣಿಸುತ್ತದೆ. ಇಲ್ಲಿ Contribute Now ಮೇಲೆ ಕ್ಲಿಕ್ ಮಾಡಿದ ನಂತರ ಒಂದು ಹೊಸ ಪೇಜ್ ತೆರೆಯುತ್ತದೆ. ಇದರಲ್ಲಿ ನಿಮ್ಮ ಕೈಲಾದ ಮೊತ್ತವನ್ನು ಹಾಕಿ ಕಳುಯಿಸಬವುದು.
Google Pay ಬಳಕೆದಾರರು: ಗೂಗಲ್ ಪೇ ಬಳಕೆದಾರರು ಅಪ್ಲಿಕೇಶನ್ ತೆರೆದ ತಕ್ಷಣ ನಿಮಗೆ CRPF ಬಟನ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ನಂತರ ಒಂದು ಹೊಸ ಪೇಜ್ ತೆರೆಯುತ್ತದೆ. ಇದರಲ್ಲಿ ನಿಮ್ಮ ಕೈಲಾದ ಮೊತ್ತವನ್ನು ಹಾಕಿ ಕಳುಯಿಸಬವುದು.
ಒಂದು ವೇಳೆ ನೀವು ಲ್ಯಾಪ್ಟಾಪ್, ಡೆಸ್ಕ್ಟಾಪ್ ಬಳಸುತ್ತಿದ್ದು ಹುತಾತ್ಮರಾದ ವೀರ ಯೋಧರ ಕುಟುಂಬಗಳಿಗೆ ನೆರವು ನೀಡ ಬಯಸಿದರೆ ಈ https://bharatkeveer.gov.in/ ಇದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಬಲಭಾಗದಲ್ಲಿ Click here to Contribute ಮೇಲೆ ಕ್ಲಿಕ್ ಮಾಡಿ ನಿಮ್ಮ ಕೈಲಾದ ಮೊತ್ತವನ್ನು ಹಾಕಿ ಕಳುಯಿಸಬವುದು ಜೈ ಹಿಂದ್.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile