ಪ್ರಸಾರ ಭಾರತಿಯಿಂದ Waves ಎಂಬ ಹೊಸ OTT ಪ್ಲಾಟ್‌ಫಾರ್ಮ್ ಬಿಡುಗಡೆಗೊಳಿಸಿದೆ!
ಈ ಹೊಸ Waves ಪ್ಲಾಟ್‌ಫಾರ್ಮ್ 12ಕ್ಕೂ ಅಧಿಕ ಭಾಷೆಗಳೊಂದಿಗೆ 60ಕ್ಕೂ ಅಧಿಕ ಚಾನೆಲ್‌ಗಳನ್ನು ಹೊಂದಿದೆ.
Waves: ಗೋವಾದಲ್ಲಿ ನಡೆದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಸಾರ ಭಾರತಿ Waves ಎಂಬ ಹೊಸ OTT ಪ್ಲಾಟ್‌ಫಾರ್ಮ್ 12ಕ್ಕೂ ಅಧಿಕ ಭಾಷೆಗಳಲ್ಲಿ 60ಕ್ಕೂ ಅಧಿಕ ಚಾನೆಲ್‌ಗಳೊಂದಿಗೆ ಅನಾವರಣಗೊಳಿಸಿದೆ. ಇದನ್ನು ಗೋವಾದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಪ್ರಸಾರ ಭಾರತಿ ತನ್ನ ಒಟಿಟಿ ಪ್ಲಾಟ್‌ಫಾರ್ಮ್ ವೇವ್ (Waves) ಅನ್ನು ಅನಾವರಣಗೊಳಿಸಿದೆ. ಇದರೊಂದಿಗೆ ಭಾರತದ ಜನಪ್ರಿಯ ಸರ್ಕಾರಿ ಪ್ರಸಾರ ಸಂಸ್ಥೆ ದೂರದರ್ಶನ ಒಟಿಟಿ ವ್ಯಾಪ್ತಿಗೆ ಕಾಲಿಟ್ಟಿದೆ.
Waves OTT ಹಳೆಯ ಸೀರಿಯಲ್‌ಗಳನ್ನು ಪುನರುಜ್ಜಿವನಗೊಳಿಸುವ ಗುರಿ:
ರಾಮಾಯಣ, ಮಹಾಭಾರತದಂತಹ ಕ್ಲಾಸಿಕ್ ಕಾರ್ಯಕ್ರಮಗಳ ಜೊತೆಗೆ ಸುದ್ದಿ, ಸಾಕ್ಷ್ಯಚಿತ್ರಗಳು ಮತ್ತು ಹಲವಾರು ಭಾಷೆಗಳ ಕಾರ್ಯಕ್ರಮಗಳನ್ನು ಇದು ಒಳಗೊಂಡಿದೆ. ಡಿಡಿಯಲ್ಲಿ ಪ್ರಸಾರವಾದ ಕ್ಲಾಸಿಕ್ ಕಂಟೆಂಟ್‌ಗಳು, ಸಮಕಾಲೀನ ಕಾರ್ಯಕ್ರಗಳ ಸಮೃದ್ಧ ಮಿಶ್ರಣವನ್ನು ಒಟಿಟಿ ಒಳಗೊಂಡಿರಲಿದೆ. ಆಧುನಿಕ ಡಿಜಿಟಲ್ ಟ್ರೆಂಡ್‌ಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಡಿಡಿಯ ಹಳೆಯ ಸೀರಿಯಲ್‌ಗಳನ್ನು ಪುನರುಜ್ಜಿವನಗೊಳಿಸುವ ಗುರಿಯನ್ನೂ ಇದು ಹೊಂದಿದೆ.
Also Read: iQOO 13 Launch: ಮುಂಬರಲಿರುವ ಐಕ್ಯೂ ಫೋನ್ ಬಿಡುಗಡೆಗೆ ಡೇಟ್ ಫಿಕ್ಸ್! ನಿರೀಕ್ಷಿತ ಫೀಚರ್ಗಳೇನು?
12ಕ್ಕೂ ಅಧಿಕ ಭಾಷೆಗಳಲ್ಲಿ 60ಕ್ಕೂ ಅಧಿಕ ಚಾನೆಲ್ ಲಭ್ಯ!
ವೇವ್ ಒಟಿಟಿಯಲ್ಲಿ ಡಿಡಿಯಲ್ಲಿ ಪ್ರಸಾರವಾಗಿ ದಾಖಲೆ ಬರೆದಿದ್ದ ರಾಮಾಯಣ, ಮಹಾಭಾರತ, ಶಕ್ತಿಮಾನ್ ಹಾಗೂ ಹಮ್ ಲೋಗ್ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. ಅದರೊಂದಿಗೆ ನ್ಯೂಸ್, ಡಾಕ್ಯುಮೆಂಟರಿಗಳು ಹಾಗೂ ಸ್ಥಳೀಯ ವಿಚಾರಗಳನ್ನೂ ಒಟಿಟಿ ನೀಡಲಿದೆ. ಹಿಂದಿ, ಇಂಗ್ಲಿಷ್, ಬೆಂಗಾಲಿ, ಮರಾಠಿ, ಕನ್ನಡ, ಮಲಯಾಳಂ, ತೆಲುಗು, ತಮಿಳು, ಗುಜರಾತಿ, ಪಂಜಾಬಿ, ಅಸ್ಸಾಮಿ ಮುಂತಾದ 12ಕ್ಕೂ ಹೆಚ್ಚು ಭಾಷೆಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಒಳಗೊಂಡ ಕಥೆಗಳೊಂದಿಗೆ ‘ವೇವ್’ OTT ಆಗಿ ಈ ವಲಯಕ್ಕೆ ಕಾಲಿಟ್ಟಿದೆ.
ಇದರಲ್ಲಿ 10 ಜಾನರ್‌ಗಳ ಇನ್ಫೋಎಂಟರ್‌ಟೇನ್‌ಮೆಂಟ್, ಅದರೊಂದಿಗೆ ವಿಡಿಯೋ ಆನ್ ಡಿಮಾಂಡ್, ಫ್ರೀ ಟು ಪ್ಲೇ ಗೇಮಿಂಗ್, ರೇಡಿಯೋ ಸ್ಟ್ರೀಮಿಂಗ್, ಲೈವ್ ಟಿವಿ ಸ್ಟ್ರೀಮಿಂಗ್, 65 ಲೈವ್ ಚಾನೆಲ್‌ಗಳು, ಹಲವಾರು ಆಪ್ ಇಂಟಿಗ್ರೇಷನ್‌ಗಳು, ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಮೂಲಕ ಆನ್‌ಲೈನ್ ಶಾಪಿಂಗ್ ಬೆಂಬಲಿತ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಕೂಡ ಇದರಲ್ಲಿ ಇರಲಿದೆ.
ಈ ವೇದಿಕೆಯಲ್ಲಿ ಅಯೋಧ್ಯೆಯಿಂದ ಪ್ರಭು ಶ್ರೀರಾಮ್ ಲಲ್ಲಾ ಆರತಿ ಲೈವ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ಮನ್ ಕಿ ಬಾತ್‌ನಂತಹ ಲೈವ್ ಈವೆಂಟ್‌ಗಳಿ ಇರಲಿವೆ. ಆನಿಮೇಷನ್ ಕಾರ್ಯಕ್ರಮಳಾದ ಡಾಗ್ಗಿ ಅಡೈಂಚರ್, ಛೋಟಾ ಭೀಮ್, ತೆನಾಲಿರಾಮ್, ಅಕ್ಟರ್ ಬೀರ್ಬಲ್ ಮತ್ತು ಕೃಷ್ಣ ಜಂಪ್, ಫೂಟ್ ಚೆಫ್, ರಾಮ್ ದಿ ಯೋಧ, ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಂತಹ ಆಟಗಳನ್ನು ಸಹ ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile