ಭಾರತದಲ್ಲಿ ಅತಿ ಶೀಘ್ರದಲ್ಲೇ ಪೊಕೊ ಕಂಪನಿ ತನ್ನ ಮುಂಬರಲಿರುವ ಹೊಚ್ಚ ಹೊಸ POCO Pad 5G ಅನ್ನು 23ನೇ ಆಗಸ್ಟ್ 2024 ರಂದು ಮಧ್ಯಾಹ್ನ 12:00 ಗಂಟೆಗೆ ಅಧಿಕೃತವಾಗಿ ಬಿಡುಗಡೆಯಾಗಲಿರುವುದಾಗಿ ಕಂಪನಿ ಟ್ವಿಟ್ಟರ್ ಮೂಲಕ ತಿಳಿಸಿದೆ. POCO Pad 5G ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು ಈಗ ಇದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. POCO Pad 5G ಉತ್ತಮ Snapdragon 7s Gen 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮತ್ತು 10,000mAh ಬ್ಯಾಟರಿಯನ್ನು ಹೊಂದಿದೆ.
ಭಾರತದಲ್ಲಿ POCO Pad 5G ಬೆಲೆಯನ್ನು ನೋಡುವುದಾದರೆ ಇದನ್ನು ಸುಮಾರು 25,000 ರೂಪಾಯಿಗಳಾಗಿರುತ್ತದೆ ಎಂದು ವದಂತಿಗಳಿವೆ ಮತ್ತು ಭಾರತೀಯ ಆವೃತ್ತಿಯು ಜಾಗತಿಕ ರೂಪಾಂತರದ ವಿಶೇಷಣಗಳನ್ನು ಅನುಸರಿಸಬಹುದು ಎಂದು ನಿರೀಕ್ಷಿಸಲಾಗಿದೆ. ಇದರ ಬಗ್ಗೆ ಈಗಾಗಲೇ ಕಳೆದ ತಿಂಗಳು ಡಿಜಿಟ್ ಮತ್ತು ಟೈಮ್ಸ್ ನೌ ಟೆಕ್ ಜೊತೆಗೆ ಮಾತಾನಾಡಿದ POCO ಇಂಡಿಯಾದ ದೇಶದ ಮುಖ್ಯಸ್ಥ ಹಿಮಾಂಶು ಟಂಡನ್ ಇದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಅವರು ನೀಡಿದ್ದರು.
Poco Pad ಜಾಗತಿಕ ರೂಪಾಂತರವು 12.1 ಇಂಚಿನ 1.5K IPS LCD ಡಿಸ್ಟ್ ಜೊತೆಗೆ 120Hz ರಿಫ್ರೆಶ್ ರೇಟ್, ಡಾಲ್ಟಿ ವಿಷನ್, 600 nits ಬೈಟ್‌ನೆಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. POCO Pad 5G ಆಂಡ್ರಾಯ್ಡ್ 14 ಆಧಾರಿತ HyperOS ನಲ್ಲಿ ಬಾಕ್ಸ್ ಹೊರಗೆ ರನ್ ಆಗುತ್ತದೆ. POCO Pad 5G ಅನ್ನು ಸ್ನಾಪ್‌ಡ್ರಾಗನ್ 7s Gen 2 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು 8GB ಯ LPDDR4X RAM ಮತ್ತು 256GB UFS 2.2 ಸ್ಟೋರೇಜ್‌ನೊಂದಿಗೆ ಜೋಡಿಯಾಗಿದೆ.
Also Read: Moto G45 5G ಭಾರತದಲ್ಲಿ 8GB RAM ಜೊತೆಗೆ ಬಿಡುಗಡೆಗೆ ಡೇಟ್ ಫಿಕ್ಸ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
ಈ ಡಿವೈಸ್ 8GB RAM ಮತ್ತು 256GB UFS 2.2 ಸ್ಟೋರೇಜ್‌ನೊಂದಿಗೆ ಬರುತ್ತದೆ. ಅಲ್ಲದೆ ಮೀಸಲಾದ MicroSDXC ಸ್ಲಾಟ್ ಮೂಲಕ ವಿಸ್ತರಿಸಬಹುದಾಗಿದೆ. ಈ ಟ್ಯಾಬ್ಲೆಟ್ 33W ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡ 10,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಕ್ಯಾಮೆರಾಗಳಿಗಾಗಿ ಇದು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8MP ಮೆಗಾಪಿಕ್ಸೆಲ್ ಹಿಂಭಾಗದ ಕ್ಯಾಮರಾ ಮತ್ತು 8MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮರಾವನ್ನು ಒಳಗೊಂಡಿದೆ.