PAN 2.0 ಎಂದರೇನು? ಪ್ಯಾನ್ ಕಾರ್ಡ್‌ನಲ್ಲಿ QR Code ಅಳವಡಿಸುವುದರಿಂದ ಪ್ರಯೋಜನವೇನು?

Updated on 27-Nov-2024
HIGHLIGHTS

ಹೊಸ PAN 2.0 ಎಂದರೇನು? ಇದೇಗೆ ಕೆಲಸ ಮಾಡುತ್ತೆ?

PAN Card) ಒಳಗೆ ಈ QR Code ಅಳವಡಿಸುವುದರಿಂದಾಗುವ ಪಯೋಜನ ಮತ್ತು ಉಪಯೋಗಗಳೇನು ತಿಳಿಯಿರಿ

ಭಾರತದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಈ ಹೊಸ PAN 2.0 ಅನ್ನು ಪರಿಚಯಿಸಿದೆ. ಭಾರತ ಸರ್ಕಾರದಿಂದ ಪರಿಚಯಿಸಲಾಗಿರುವ ಶಾಶ್ವತ ಖಾತೆ ಸಂಖ್ಯೆ (PAN Card) ಈಗ ದೇಶದಲ್ಲಿ ಅತಿ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ. ಇದರ ಮಹತ್ವ ಎಷ್ಟಿದೆ ಅಂದ್ರೆ ನಮ್ಮಲ್ಲಿ ಅನೇಕರು ಸಿಮ್ ಕಾರ್ಡ್ ಖರೀದಿಸುವುದರಿಂದ ಹಿಡಿದು ಬ್ಯಾಂಕ್ ಖಾತೆ ಮತ್ತು ತೆರಿಗೆ ಸಲ್ಲಿಸುವುದರವರೆಗೆ ಈ ಪ್ರಮುಖ ದಾಖಲೆಯನ್ನು ಕಡ್ಡಾಯವಾಗಿ ಬಳಸಲೇಬೇಕಾಗುತ್ತದೆ. ಇಂದಿನ ದಿನಗಳಲ್ಲಿ ನಿಮ್ಮ ಯಾವುದೇ ಸರ್ಕಾರೀ ಕೆಲಸ ಕಾರ್ಯಗಳನ್ನು ಮಾಡಬೇಕಂದರೆ ಈ ಪಾನ್ ಕಾರ್ಡ್ ಅಗತ್ಯವಾಗಿದೆ.

ಈ ಮೂಲಕ ಭಾರತ ಸರ್ಕಾರ ಇದಕ್ಕೆ ಹೊಸ ಅಪ್ಡೇಟ್ ಅಡಿಯಲ್ಲಿ PAN 2.0 ಎಂಬ ಯೋಜನೆಯನ್ನು ಪರಿಚಯಿಸಿ ಈಗ ಇದರೊಳಗೆ QR ಕೋಡ್ ತರಲು ಸಜ್ಜಾಗಿದೆ. ಈ ಸುದ್ದಿ ಬರುತ್ತಿದಂತೆ ಇಂಟರ್ನೆಟ್ ದುನಿಯಾದಲ್ಲಿ ಇದಕ್ಕೆ ಸಂಭಂದಿಸಿದ ಅನೇಕ ಪೋಸ್ಟ್ ಮತ್ತು ಅಪೂರ್ಣ ಮಾಹಿತಿಗಳು ಬಂದಿದ್ದು ನಿಮಗೆ ಅರ್ಥವಾಗುವ ಮತ್ತು ಸರಳ ರೀತಿಯಲ್ಲಿ ಈ ಸುದ್ದಿಯನ್ನು ತಿಳಿಸಲು ನು ಪ್ರತ್ನಿಸಿದ್ದೇನೆ. ಪ್ರಸ್ತುತ ಈ ಹೊಸ PAN 2.0 ಎಂದರೇನು? ಪ್ಯಾನ್ ಕಾರ್ಡ್‌ನಲ್ಲಿ QR Code ಅಳವಡಿಸುವುದರಿಂದ ಪ್ರಯೋಜನವೇನು? ಎನ್ನುವುದರ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.

Also Read: Instagram ವಿಡಿಯೋಗಳನ್ನು ಡೌನ್ಲೋಡ್ ಮಾಡೋದು ಹೇಗೆ? ತುಂಬ ಜನರಿಗೆ ತಿಳಿಯದ ಟ್ರಿಕ್ ಇಲ್ಲಿದೆ!

ಹೊಸ PAN 2.0 ಎಂದರೇನು?

ಈ ಹೊಸ PAN 2.0 ಕೇಂದ್ರ ಸರ್ಕಾರದ ಆಡಳಿತ ಪ್ರಾಜೆಕ್ಟ್ ಆಗಿದ್ದು ಲೇಟೆಸ್ಟ್ ಟೆಕ್ನಾಲಜಿಯ ಮೂಲಕ ತೆರಿಗೆದಾರರ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಆಧುನೀಕರಿಸಲು ವಿನ್ಯಾಸಗೊಳಿಸಲಾಗಿರುವ ಹೊಸ ಯೋಜನೆಯಾಗಿದೆ. ಭಾರತದಲ್ಲಿ ತೆರಿಗೆದಾರರ ಸೇವೆಗಳನ್ನು ಸುಧಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಪ್ಯಾನ್ ಕಾರ್ಡ್‌ಗಳಲ್ಲಿ (PAN Card) ಹೊಸ QR ಕೋಡ್ ವ್ಯವಸ್ಥೆಯನ್ನು ಅಳವಡಿಸಲು ಅಡ್ವಾನ್ಸ್ ಆವೃತ್ತಿಯಾದ PAN 2.0 ಅನ್ನು ಪರಿಚಯಿಸಿದೆ. ಅಲ್ಲದೆ ಇದನ್ನು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) 1,435 ಕೋಟಿ ರೂಪಾಯಿಯ ತೆರಿಗೆ ಸಂಬಂಧಿತ ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಎಲ್ಲರಿಗೂ ಪ್ರವೇಶಿಸುವಂತೆ ಮಾಡುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯನ್ನು ಇಟ್ಟಿದೆ.

ಪ್ಯಾನ್ ಕಾರ್ಡ್‌ನಲ್ಲಿ QR Code ಅಳವಡಿಸುವುದರಿಂದ ಪ್ರಯೋಜನವೇನು?

ಮೊದಲಿಗೆ ಈ ಯೋಜನೆಯ ಪ್ರಯೋಜನಗಳೇನು ಎನ್ನುವ ಬದಲು ಸರ್ಕಾರ ಈ ಹೊಸ ಪ್ರಸ್ತಾಪದಲ್ಲಿ ನಮ್ಮ ಮಾಹಿತಿಯನ್ನು ವೇಗವಾಗಿ ತನ್ನತ್ತ ಸೆಳೆಯಲು ತಂದಿರುವ ಸ್ಮಾರ್ಟ್ ಟೆಕ್ನಾಲಜಿ ಏನೇನು ಮಾಡುತ್ತೆ ಎಂದು ತಿಳಿಯುವುದು ಮುಖ್ಯವಾಗಿದೆ. ಪ್ಯಾನ್ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ ಹಾಕುವುದರಿಂದ ಪ್ರಯೋಜನ ಎಷ್ಟೇ ಇದ್ದರೂ ಇದರ ಲಾಭ ಸಾಮಾನ್ಯ ಜನರಿಗೆ ಎಂದು ಸಿಗದ ಕಹಿಸತ್ಯ ಜೀರ್ಣಿಸಿಕೊಳ್ಳಬೇಕು. ಯಾಕೆಂದರೆ ಇದೆ ಮಾದರಿಯ QR ಕೋಡ್ ಸೇವೆ ಸರ್ಕಾರ ಈಗಾಗಲೇ ಆಧಾರ್ ಕಾರ್ಡ್ಗಳಲ್ಲಿ (Aadhaar Card) ಅಳವಡಿಸಿದ್ದು ಈಗ ಪಾನ್ ಕಾರ್ಡ್ ಸರದಿಯಾಗಿದೆ.

ಈ ಪ್ಯಾನ್ 2.0 ಯೋಜನೆಯು ತೆರಿಗೆದಾರರಿಗೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಹೊಸ PAN 2.0 ಯೋಜನೆಯಲ್ಲಿ ಅತ್ಯಾಕರ್ಷಕ ಫೀಚರ್ ಅಂದ್ರೆ ಇನ್ಮೇಲೆ ನಿಮ್ಮ PAN ಕಾರ್ಡ್‌ಗಳಲ್ಲೂ QR ಕೋಡ್‌ಗಳನ್ನು ಪರಿಚಯಿಸಲಾಗುತ್ತದೆ. ಇದರಿಂದ ನಿಮ ಪ್ರತಿಯೊಂಡು ಬ್ಯಾಂಕ್ ಮತ್ತು ಹಣಕಾಸಿನ ವ್ಯವಹಾರಗಳ ಮೇಲೆ ಸರ್ಕಾರಿ ಸಂಸ್ಥೆಗಳು ಎಲ್ಲವನ್ನು ಡಿಜಿಟಲ್ ವ್ಯವಸ್ಥೆಗಳಿಗೆ ಮಾರ್ಪಡಿಸಿ ತನ್ನ ಕಣ್ಣ ಮುಂದೆ ಇಡುವ ಗುರಿಯನ್ನು ಹೊಂದಿದ್ದು ಇದರಿಂದ ಕಪ್ಪು ಹಣಕ್ಕೆ (Black Money) ಬ್ರೇಕ್ ಹಾಕಲಿದೆ.

ಮತ್ತೊಂದು ಪ್ರಯೋಜನವೆಂದರೆ ಈ ಹೊಸ PAN 2.0 ಉಪಕ್ರಮವು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು PAN ಸಂಪರ್ಕಿಸುವ ಮೂಲಕ ಸರ್ಕಾರದ ಡಿಜಿಟಲ್ ಇಂಡಿಯಾ ಮಿಷನ್ ಅನ್ನು ಬಲಪಡಿಸಿಕೊಳ್ಳಿತ್ತದೆ. ಅಲ್ಲದೆ ಈ ಹೊಸ ಸುಧಾರಣೆ ಕೇವಲ ಅಪ್‌ಗ್ರೇಡ್ ಮಾತ್ರವಲ್ಲದೆ ಡಿಜಿಟಲ್ ಇಂಡಿಯಾ ಆಂದೋಲನದಲ್ಲಿ ಪ್ರಮುಖ ಹೆಜ್ಜೆಯಾಗಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :