ನೀವೊಬ್ಬ ಭಾರತೀಯನಾಗಿದ್ದರೆ ನಿಮಗೆ ಗೊತ್ತಿರಬಹುದು ಪ್ಯಾನ್ ಕಾರ್ಡ್ (PAN Card) ಅತಿ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ. ಆದಾಯ ತೆರಿಗೆ (ITR) ಸಲ್ಲಿಸುವುದರಿಂದ ಹಿಡಿದು ನಿಮ್ಮ ಹೂಡಿಕೆ ಮಾಡಲು, ಆಸ್ತಿ ಖರೀದಿಸಲು ಮತ್ತು ಬ್ಯಾಂಕ್ ಖಾತೆ ತೆರೆಯುವಂತಹ ಇತ್ಯಾದಿ ಅಗತ್ಯ ಕಾರ್ಯಗಳಿಗೆ ಪ್ಯಾನ್ ಕಾರ್ಡ್ ನಿಜಕ್ಕೂ ಅತ್ಯಗತ್ಯವಾಗಿದೆ. ದೀರ್ಘಕಾಲದವರೆಗೆ ಪ್ಯಾನ್ ಕಾರ್ಡ್ ಬಳಸುವುದರಿಂದ ಕೆಲವೊಮ್ಮೆ ಹಾಳಾಗಬಹುದು ಅಥವಾ ಕಳೆದು ಹೋಗುವುದು ಸಾಮಾನ್ಯವಾಗಿದೆ.
Also Read: Amazon Gif Sale: ಲೇಟೆಸ್ಟ್ ಸ್ಮಾರ್ಟ್ ಟಿವಿಗಳ ಮೇಲೆ Attractive ಡೀಲ್ ಪಡೆಯಲು ಇಂದು ಕೊನೆ ದಿನ
ಈ ಸಂದರ್ಭದಲ್ಲಿ ಕೆಲವೇ ನಿಮಿಷಗಳಲ್ಲಿ ಆನ್‌ಲೈನ್ ಮೂಲಕ ನಿಗದಿತ ಶುಲ್ಕ ಪಾವತಿಸಿ ಮತ್ತೆ ಪಡೆಯಬಹುದು. ಇದಕ್ಕಾಗಿ ನೀವು ಕೆಲವು ಸುಲಭ ಹಂತಗಳನ್ನು ಈ ಕೆಳಗೆ ನೀವು ಅನುಸರಿಸಬಹುದು. ಆದಾಯ ತೆರಿಗೆ ಇಲಾಖೆಯು UTIITSL ಅಥವಾ NSDL-TIN ಮೂಲಕ ಪ್ಯಾನ್ ಕಾರ್ಡ್ ನೀಡುತ್ತದೆ. ನಿಮ್ಮ PAN ಕಾರ್ಡ್ ಅನ್ನು ಯಾವ ಏಜೆನ್ಸಿ ನೀಡಿದೆ ಎಂಬುದರ ಆಧಾರದ ಮೇಲೆ ನಿಮ್ಮ ಡಾಕ್ಯುಮೆಂಟ್‌ನ ಮರುಮುದ್ರಣವನ್ನು ಪಡೆಯಲು ಸಂಪರ್ಕಿಸಬಹುದು.
ನಿಮ್ಮ ಪ್ಯಾನ್ ಕಾರ್ಡ್ ಕಳ್ಳತನವಾಗಿದ್ದಲ್ಲಿ ಅಥವಾ ನೀವೇ ಕಳೆದುಕೊಂಡಿದ್ದಲ್ಲಿ ನೀವು ಹತ್ತಿರದ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿಕೊಳ್ಳಬೇಕು. ನಂತರ ಇದರ ಎಫ್‌ಐಆರ್ ಪ್ರತಿಯನ್ನು ನಕಲಿ ಪ್ಯಾನ್ ಕಾರ್ಡ್ ಅರ್ಜಿಯ ದಾಖಲೆಗಳೊಂದಿಗೆ ಕಳುಹಿಸಬೇಕಾಗುತ್ತದೆ. ನೀವು ನೋಂದಾಯಿತ ಪೋಸ್ಟ್ ಮೂಲಕ ಪ್ಯಾನ್ ಅರ್ಜಿಯ ಸ್ವೀಕೃತಿಯನ್ನು ಕಳುಹಿಸುವಾಗ ನಿಮ್ಮ ಅಪ್ಲಿಕೇಶನ್ ನಂಬರ್ ಜೊತೆಗೆ ಮರುಮುದ್ರಣಕ್ಕಾಗಿ ಅರ್ಜಿ ನಮೂದಿಸಬೇಕಾಗುತ್ತದೆ. ನೀಡುವ ದೂರು ಪ್ಯಾನ್ ಕಾರ್ಡ್ ಅನ್ನು ಬೇರೆಯವರು ದುರುಪಯೋಗದಿಂದ ತಪ್ಪಿಸಲು ಇದು ಅತಿ ಮುಖ್ಯವಾಗಿರುತ್ತದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ