ಮುಂದಿನ ತಿಂಗಳ ಒಳಗೆ ತಪ್ಪದೆ ಈ ಕೆಲಸ ಮಾಡಿ, ಅಪ್ಪಿತಪ್ಪಿ ಮರೆತರೆ ನಿಮಗೆ 10,000 ದಂಡ ಗ್ಯಾರಂಟಿ!

Updated on 14-Feb-2023
HIGHLIGHTS

Aadhaar-PAN Link: ಭಾರತೀಯ ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಹೊಂದಿರುವವರಿಗೆ ತಮ್ಮ ಪ್ಯಾನ್ ಕಾರ್ಡ್‌ಗಳನ್ನು ಆಧಾರ್ ಕಾರ್ಡ್‌ಗಳೊಂದಿಗೆ ಲಿಂಕ್ ಮಾಡಲು ಹಲವು ಬಾರಿ ನೆನಪಿಸುತ್ತಿದೆ. ಪ್ಯಾನ್ ಆಧಾರ್ ಲಿಂಕ್ ಮಾಡಲು 31ನೇ ಮಾರ್ಚ್ 2023 ಆಗಿದೆ. ಈ ದಿನಾಂಕದೊಳಗೆ ಲಿಂಕ್ ಅನ್ನು ಸ್ಥಾಪಿಸದಿದ್ದರೆ. ಪ್ಯಾನ್ ಕಾರ್ಡ್ ಅಮಾನ್ಯವಾಗುತ್ತದೆ. ಮತ್ತು ತಡವಾಗಿ ಲಿಂಕ್ ಮಾಡಲು ರೂ 1,000 ದಂಡವನ್ನು ವಿಧಿಸಲಾಗುತ್ತದೆ. ಪ್ರತಿಯೊಂದು ಹಣಕಾಸಿನ ಕೆಲಸಕ್ಕೂ ನಮಗೆ ಪಾನ್ ಕಾರ್ಡ್ ಬೇಕೇ ಬೇಕು ಪಾನ್ ಕಾರ್ಡ್ ಇಲ್ಲದೆ ನಮಗೆ ಯಾವ ಹಣಕಾಸಿನ ಕೆಲಸವೂ ಸುಗಮವಾಗಿ ಆಗಲ್ಲ ಎಲ್ಲಾ ದಾಖಲೆಗಳಿಗೂ ಪಾನ್ ಕಾರ್ಡ್ ಪ್ರಮುಖವಾಗಿ ಕೇಳಿರುತ್ತಾರೆ.

Aadhaar ಮತ್ತು PAN ಕಾರ್ಡನ್ನು ಲಿಂಕ್

ನಿಮ್ಮ ಪಾನ್ ಕಾರ್ಡ್ ಡಾಕ್ಯೂಮೆಂಟ್ ಸರಿಯಾಗಿ ಕಾರ್ಯನಿರ್ವಹಿಸಬೇಕೆಂದು ನೀವು ಬಯಸಿದರೆ ಈ ಸುದ್ದಿಯನ್ನು ನೀವು ತಿಳಿದುಕೊಳ್ಳಲೇಬೇಕು. ಇದೀಗ ಬಂದ ಹೊಸ ರೂಲ್ಸ್ ಪ್ರಕಾರ ನಿಮಗೆಲ್ಲ ತಿಳಿದಿರುವಂತೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡನ್ನು ಲಿಂಕ್ ಮಾಡಬೇಕಾಗಿದೆ.ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಕೊನೆಯ ದಿನಾಂಕ ಹತ್ತಿರ ಮಂದಿದೆ ಇದೆ.ಮಾರ್ಚ್ 31 2023ರಂದು ನಿಗದಿಪಡಿಸಲಾಗಿದೆ. ಮುಂದಿನ ತಿಂಗಳಿನ ಒಳಗಡೆ ನೀವು ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ.. ನಿಮ್ಮ ಪಾನ್ ಕಾರ್ಡ್ ಯಾವುದೇ ಕಾರ್ಯನಿರ್ವಹಿಸಲ್ಲ ಇದು ಯಾವುದೇ ಪ್ರಯೋಜನಕ್ಕೆ ಬರಲ್ಲ. ಅಷ್ಟೇ ಅಲ್ಲದೆ ನೀವು ಪಾನ್ ಕಾರ್ಡನ್ನು ಲಿಂಕ್ ಮಾಡದೆ ಇದ್ದಲ್ಲಿ 10,000 ದಂಡವನ್ನು ಪಾವತಿಸಬೇಕಾಗುತ್ತದೆ.

ಲಿಂಕ್ ಮಾಡದೆ ಇದ್ದಲ್ಲಿ 10,000 ದಂಡ

ಆದಾಯ ತೆರಿಗೆ ಇಲಾಖೆಯು ಪ್ರತಿಯೊಬ್ಬರ ನಂದಾಯ್ತು ಮೊಬೈಲ್ ಸಂಖ್ಯೆ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ನಿರಂತರವಾಗಿ ಮನವಿ ಮಾಡುತ್ತಿದ್ದಾರೆ. ನೀವು ಈಗಾಗಲೇ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದಲ್ಲಿ ಕೊನೆಯ ದಿನಾಂಕದವರೆಗೆ ಕಾಯಬೇಡಿ. ತಕ್ಷಣವೇ ಈ ಕೆಲಸವನ್ನು ಪೂರ್ಣಗೊಳಿಸಿ ಏಕೆಂದರೆ ಒಂದು ಸಲ ಪ್ಯಾನ್ ನಿಷ್ಕ್ರಿಯಗೊಂಡರೆ ನಿಮ್ಮ ಹಣಕಾಸಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ನಿಷ್ಕ್ರಿಯಗೊಂಡ ಪಾನ್ ಕಾರ್ಡ್ ಡಾಕ್ಯೂಮೆಂಟ್ ಅನ್ನು ನೀವು ಬಳಸಿದರೆ ಹತ್ತು ಸಾವಿರ ರೂಪಾಯಿವರೆಗೂ ದಂಡ ವಿಧಿಸಲಾಗುವುದು. ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಸೆಕ್ಷನ್ 282B ಅಡಿಯಲ್ಲಿ ಈ ದಂಡವನ್ನು ವಿಧಿಸಲಾಗುತ್ತದೆ.

ಮ್ಯೂಚುಯಲ್ ಫಂಡ್, ಸ್ಟಾಕ್, ಬ್ಯಾಂಕ್ಇ, ನ್ಕಮ್ ಟ್ಯಾಕ್ಸ್ ಕೆಲಸಗಳನ್ನು ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಅಲ್ಲದೆ ಒಂದು ಸಲ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಹೊಸ ಪಾನ್ ಕಾರ್ಡ್ ಪಡೆಯುವುದು ಸಹ ನಿಷೇಧಿಸಲಾಗಿದೆ. ಅಸ್ಸಾಂ ಜಮ್ಮು ಕಾಶ್ಮೀರ ಮತ್ತು ಮೇಘಾಲಯದಲ್ಲಿ ವಾಸಿಸುವ ನಾಗರಿಕರು ಆಧಾರ್ ಮತ್ತು ಫ್ಯಾನ್ ಅನ್ನು ಲಿಂಕ್ ಮಾಡುವ ಅಗತ್ಯವಿಲ್ಲ ಅಲ್ಲದೆ 80 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಇದನ್ನು ಮಾಡುವ ಅಗತ್ಯವಿಲ್ಲ ಅವರಿಗೆ ರಿಯಾಯಿತಿ ಕೊಡಲಾಗಿದೆ. ನೀವು ಮನೆಯಲ್ಲಿ ಕೂತುಕೊಂಡು ನಿಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು..ಯಾವುದೇ ಅಂಗಡಿ ಅಥವಾ ಆಫೀಸ್ಗೆ ಹೋಗಿ ನೀವು ಡಾಕ್ಯೂಮೆಂಟ್ ಗಳನ್ನು ಸಬ್ಮಿಟ್ ಮಾಡುವ ಅವಶ್ಯಕತೆ ಇಲ್ಲ. ಆನ್ಲೈನ್ ಮೂಲಕವೇ ಲಿಂಕ್ ಮಾಡಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :