ಇನ್ನೂ 8 ದಿನ ಮಾತ್ರ ಬಾಕಿ! ಇಂದೇ ಉಚಿತವಾಗಿ Aadhaar ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಹಣ ನೀಡಬೇಕಾಗುತ್ತದೆ!

ಇನ್ನೂ 8 ದಿನ ಮಾತ್ರ ಬಾಕಿ! ಇಂದೇ ಉಚಿತವಾಗಿ Aadhaar ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಹಣ ನೀಡಬೇಕಾಗುತ್ತದೆ!
HIGHLIGHTS

ಯಾರ್ಯಾರು ಆಧಾರ್ ಕಾರ್ಡ್ (Aadhaar Card) ಹೊಂದಿದ್ದಾರೋ ಅವರಿಗೆ ತನ್ನ ವಿವರಗಳನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳುವಂತೆ ಹೇಳಿದೆ.

ಈ ಉಚಿತ ಸೌಲಭ್ಯಯನ್ನು ಸರ್ಕಾರ ಕೇವಲ ಕಳೆದ 10 ವರ್ಷಗಳಿಂದ ಯಾರ್ಯಾರು ತಮ್ಮ ಆಧಾರ್ ಕಾರ್ಡ್ ಮಾಹಿತಿಗಳನ್ನು ಬದಲಾಯಿಸಿಲ್ಲವೋ ಅಂಥವರು ಈ ಉಚಿತ ಸೇವೆಗೆ ಅರ್ಹರಾಗಿರುತ್ತಾರೆ

UIDAI ಕಳೆದ ಮಾರ್ಚ್ 15 ರಿಂದ ಈ ತಿಂಗಳ ಜೂನ್ 14 ರವರೆಗೆ ಮಾತ್ರ ಕಾಲಾವಕಾಶವನ್ನು ನೀಡಲಾಗಿದೆ.

ಭಾರತದಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಯಾರ್ಯಾರು ಆಧಾರ್ ಕಾರ್ಡ್ (Aadhaar Card) ಹೊಂದಿದ್ದಾರೋ ಅವರಿಗೆ ತನ್ನ ವಿವರಗಳನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳುವಂತೆ ಹೇಳಿದೆ. ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಮಾಡಲಾದ ನಿರ್ಧಾರದ ಭಾಗವಾಗಿ ಮೈಆಧಾರ್ ಪೋರ್ಟಲ್‌ನಲ್ಲಿ ಉಚಿತ ಡಾಕ್ಯುಮೆಂಟ್ ಅಪ್‌ಡೇಟ್ ಸೇವೆಯ ಲಾಭವನ್ನು ಪಡೆಯಲು ಜನರಲ್ಲಿ ಕೇಳಿಕೊಂಡಿದೆ. ಈ ಉಚಿತ ಸೌಲಭ್ಯ ಕೇವಲ ಯಾರ್ಯಾರು ಕಳೆದ 10 ವರ್ಷಗಳಿಂದ ಈವರೆಗೆ ತಮ್ಮ ಆಧಾರ್ ಕಾರ್ಡ್ ಮಾಹಿತಿಗಳನ್ನು ಬದಲಾಯಿಸಿಲ್ಲವೋ ಅಂಥವಾರಿಗಾಗಿ ಮಾತ್ರ ಈ ಉಚಿತ ಸೇವೆ ಲಭ್ಯವಿರುತ್ತದೆ. ಬಾಕಿ ಉಳಿದವರು ಸಹ ಅಪ್ಡೇಟ್ ಮಾಡಿಕೊಳ್ಳಬಹುದು ಆದರೆ ಅದಕ್ಕಾಗಿ ಪ್ರತ್ಯೇಕ ಶುಲ್ಕವನ್ನು ನೀಡಬೇಕಾಗುತ್ತದೆ.

ಉಚಿತ ಆಧಾರ್ ಆಪ್ಡೇಟ್ ಮಾಡಲು ಇನ್ನೂ ಕೇವಲ 8 ದಿನ ಬಾಕಿ!

ಭಾರತದಲ್ಲಿ ಈ ಸೇವೆಯ ಬಗ್ಗೆ ಹಲವಾರು ಜನರಿಗೆ ಹಲವಾರು ಪ್ರಕಾರದ ಗೊಂದಲಗಳಿವೆ. ಈ ಉಚಿತ ಸೌಲಭ್ಯಯನ್ನು ಸರ್ಕಾರ ಕೇವಲ ಕಳೆದ 10 ವರ್ಷಗಳಿಂದ ಯಾರ್ಯಾರು ತಮ್ಮ ಆಧಾರ್ ಕಾರ್ಡ್ ಮಾಹಿತಿಗಳನ್ನು ಬದಲಾಯಿಸಿಲ್ಲವೋ ಅಂಥವರು ಈ ಉಚಿತ ಸೇವೆಗೆ ಅರ್ಹರಾಗಿರುತ್ತಾರೆ ಎಂಬುದನ್ನು ಗಮನಿಸಬೇಕಿದೆ. ಅಲ್ಲದೆ ಈ ಸೇವೆಯನ್ನು ಕೇವಲ ಮೈಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಪಡೆಯಬಹುದಾಗಿದೆ ಅಂದ್ರೆ ನೀವು ಮನೆಯಲ್ಲೇ ಕುಳಿತು ನಿಗದಿತ ದಾಖಲೆಗಳನ್ನು ನೀಡಿ ಅಪ್ಡೇಟ್ ಮಾಡಿಕೊಳ್ಳಬಹುದು.

ಈ ಉಚಿತ ಸೇವೆಯನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಕಳೆದ  ಮಾರ್ಚ್ 15 ರಿಂದ ಈ ತಿಂಗಳ ಜೂನ್ 14 ರವರೆಗೆ ಮಾತ್ರ ಕಾಲಾವಕಾಶವನ್ನು ನೀಡಲಾಗಿದೆ. ಒಂದು ವೇಳೆ ನೀವು ಜೂನ್ 14 ಒಳಗೆ ಅಪ್ಡೇಟ್ ಮಾಡದಿದ್ದರೆ ನಂತರ ನಿಮ್ಮ ಪ್ರತಿಯೊಂದು ವಿವರಗಳ ಅಪ್ಡೇಟ್ ಮಾಡಲು ಶುಲ್ಕವನ್ನು ನೀಡಬೇಕಾಗುತ್ತದೆ. ದೇಶದ ಜನರು ತಮ್ಮ ಮಾಹಿತಿ ಅಂದ್ರೆ ತಮ್ಮ ಹೆಸರು, ಹುಟ್ಟಿದ ದಿನಾಂಕ, ವಿಳಾಸ, ಇತ್ಯಾದಿಗಳನ್ನು ಈ ಸೇವೆಯಲ್ಲಿ ಆಪ್ಡೇಟ್ ಮಾಡಿಕೊಳ್ಳಬಹುದು.

ಆಧಾರ್ ಕಾರ್ಡ್‌ನಲ್ಲಿ ವಿವರಗಳನ್ನು ಉಚಿತವಾಗಿ ಬದಲಾಯಿಸುವುದು ಹೇಗೆ?

ಹಂತ 1: ಕೊಡಲುಗೆ ನೀವು https://myaadhaar.uidai.gov.in/ ಲಿಂಕ್ ಮೇಲೆ ಅಥವಾ ಅಪ್ಲಿಕೇಶನ್ ಒಳಗೆ ಲಾಗಿನ್ ಮಾಡಿಕೊಳ್ಳಿ 

ಹಂತ 2: ಇದರ ನಂತರ 'ಡಾಕ್ಯುಮೆಂಟ್ ಅಪ್‌ಡೇಟ್' ಆಯ್ಕೆಮಾಡಿ ಮತ್ತು ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಅಸ್ತಿತ್ವದಲ್ಲಿರುವ ವಿವರಗಳನ್ನು ನೀವು ನೋಡಬಹುದು.

ಹಂತ 3: ಇದರಲ್ಲಿ ಎಲ್ಲಾ ವಿವರಗಳನ್ನು ಪರಿಶೀಲಿಸಿ ಮತ್ತು ಮುಂದಿನ ಹೈಪರ್-ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 4: ಡ್ರಾಪ್‌ಡೌನ್ ಪಟ್ಟಿಯಿಂದ ಐಡಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್ ದಾಖಲೆಯನ್ನು ಆಯ್ಕೆಮಾಡಿಕೊಳ್ಳಿ 

ಹಂತ 5: ಇದರ ನಂತರ ನೀವು ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ ಮತ್ತು ಪಾವತಿ ಮಾಡಲು ಮುಂದುವರಿಯಿರಿ ಅಷ್ಟೇ. 

ನಿಮ್ಮ ಆಧಾರ್‌ನ ಮಹತ್ವವೇನು?

ಈ ಮೂಲಕ ನೀವು ನಿಮ್ಮ ಕಳೆದ 10 ವರ್ಷಗಳಲ್ಲಿ ಭಾರತೀಯ ನಾಗರಿಕರಿಗೆ ಆಧಾರ್ ಸಂಖ್ಯೆಯು ವ್ಯಾಪಕವಾಗಿ ಗುರುತಿಸಲ್ಪಟ್ಟ ಗುರುತಿನ ರೂಪವಾಗಿದೆ. ನಿಮಗೊತ್ತಾ ನಿಮ್ಮ ನಮ್ಮೆಲ್ಲರ ಆಧಾರ್ ಕಾರ್ಡ್ ದೇಶದ ಆಧಾರಿತ ಗುರುತನ್ನು ಸುಮಾರು 1,200 ಭಾರತ ಸರ್ಕಾರಿ ಉಪಕ್ರಮಗಳು ಮತ್ತು ಕಾರ್ಯಕ್ರಮಗಳಲ್ಲಿ ಸೇವಾ ವಿತರಣೆಗಾಗಿ ಬಳಸಲಾಗುತ್ತದೆ. ಇವುಗಳನ್ನು ಫೆಡರಲ್ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಹ ನಿರ್ವಹಿಸುತ್ತವೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo