ಭಾರತದಲ್ಲಿ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಒನ್‌ಪ್ಲಸ್ (OnePlus) ಈಗ ಅತಿ ಹೆಚ್ಚಿನ ನಕಾರಾತ್ಮಕ ಸುದ್ದಿಗಳ ಸುಳಿಗೆ ಸಿಲಿಕಿಕೊಂಡಿದೆ. ಯಾಕೆಂದರೆ ಒನ್‌ಪ್ಲಸ್‌ನೊಂದಿಗೆ ವ್ಯಾಪಾರ ಮಾಡುವ ದೊಡ್ಡ ಆಫ್‌ಲೈನ್ ಮೊಬೈಲ್ ಫೋನ್ ಚಿಲ್ಲರೆ ವ್ಯಾಪಾರಿಗಳು ಈ ಬ್ರಾಂಡ್ ಮೂಲಕ ಭಾರಿ ತಲೆನೋವಿನಿಂದ ಕಾಲ ಕಳೆಯುತ್ತಿರುವುದಾಗಿ ಸುದ್ದಿಗಳು ಹೆಚ್ಚಾಗಿ ಕೇಳಿ ಬರುತ್ತಿವೆ.
ಇದಕ್ಕೆ ಪರಿಣಾಮವಾಗಿ ಈ ಚಿಲ್ಲರೆ ವ್ಯಾಪಾರಿಗಳು ಸಹ ಮುಂದಿನ ತಿಂಗಳಿಂದ ಕರ್ನಾಟಕ ಸೇರಿ ಹಲವು ರಾಜ್ಯಗಳ ಒನ್‌ಪ್ಲಸ್ (OnePlus) ಸ್ಟೋರ್‌ಗಳಲ್ಲಿ ಮಾರಾಟ ಸ್ಥಗಿತಗೊಳಿಸುವುದಾಗಿ ನಿರ್ಧರಿಸಿವೆ. ಇದರೊಂದಿಗೆ ಕೈ ಜೋಡಿಸಿರುವ ಬೆಂಗಳೂರು, ಹೈದರಾಬಾದ್, ಮುಂಬೈ, ಗುಜರಾತ್, ಆಂಧ್ರಪ್ರದೇಶ, ಚೆನ್ನೈ, ಕೊಯಮತ್ತೂರು, ವೆಲ್ಲೂರು, ವಿಶಾಖಪಟ್ಟಣಂ ಸೇರಿದಂತೆ 4,500 ಕ್ಕೂ ಹೆಚ್ಚು ಪ್ರಮುಖ ಚಿಲ್ಲರೆ ಅಂಗಡಿಗಳು 1ನೇ ಮೇ 2024 ರಿಂದ ಮಾರಾಟವನ್ನು ನಿಲ್ಲಿಸುವ ನಿರೀಕ್ಷೆಗಳಿವೆ.
Also Read: 12GB RAM ಮತ್ತು 6000mAh ಬ್ಯಾಟರಿಯ Moto G64 5G ಬಿಡುಗಡೆ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್‌ಗಳೇನು?
ಇದಕ್ಕೆ ಕಾರಣವೆಂದರೆ ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳ ಕಡೆಗೆ OnePlus ಕ್ಯಾರೇ ಎನ್ನುತ್ತಿಲ್ಲವಂತೆ ಇದರೊಂದಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ನಡುವಿನ ಬೆಲೆ ವ್ಯತ್ಯಾಸ, ದುರ್ಬಲ ಮಾರ್ಜಿನ್ ರಚನೆ ಮತ್ತು ಕ್ಲೈಮ್ ಇತ್ಯರ್ಥದಲ್ಲಿ ಗಮನಾರ್ಹ ವಿಳಂಬ ಸೇರಿದಂತೆ ಹತ್ತಾರು ವಿಷಯಗಳನ್ನು ಪರಿಗಣಿಸಿರುವ ರಿಟೇಲ್ ಸ್ಟೋರ್ ಮಾಲೀಕರು ಒನ್‌ಪ್ಲಸ್ (OnePlus) ಸ್ಟೋರ್‌ಗಳಲ್ಲಿ ಮಾರಾಟ ಸ್ಥಗಿತಗೊಳಿಸಲು ನಿರ್ಧಾರಿಸಿವೆ.
ಇದರಲ್ಲಿ ಪ್ರಮುಖವಾ ಪೂರ್ವಿಕಾ ಮೊಬೈಲ್ಸ್ (Poorvika Mobiles), ಬಿಗ್ ಸಿ ಮೊಬೈಲ್ಸ್ (Big C Mobiles), ಪೈ ಇಂಟರ್ನ್ಯಾಷನಲ್ ಇಲೆಕ್ಟ್ರಾನಿಕ್ಸ್ (Pai International Electronics), ಸಂಗೀತಾ ಮೊಬೈಲ್ಸ್ (Sangeetha Mobiles), ಸೆಲ್ ಪಾಯಿಂಟ್ (Cell Point), ದಿ ಚೆನ್ನೈ ಮೊಬೈಲ್ಸ್ (The Chennai Mobiles), ಕಿಂಗ್ ಮೊಬೈಲ್ಸ್ (King Mobiles), ಇತರವುಗಳಲ್ಲಿ ಸೌಥ್ ಭಾರತ ಸಂಘಟಿತ ಚಿಲ್ಲರೆ ವ್ಯಾಪಾರಿಗಳ ಸಂಘ (ORA) ಪ್ರತಿನಿಧಿಸುವ 40% ಕ್ಕಿಂತ ಹೆಚ್ಚು ಮೊಬೈಲ್‌ಗಳನ್ನು ಹೊಂದಿವೆ.
ಕಳೆದ ವರ್ಷವಿಡೀ OnePlus ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ಗಮನಾರ್ಹ ಅಡೆತಡೆಗಳನ್ನು ನಾವು ಎದುರಿಸಿದ್ದೇವೆ. ಅವುಗಳನ್ನು ಇನ್ನೂ ಪೂರ್ತಿಯಾಗಿ ಪರಿಹರಿಸಲಾಗಿಲ್ಲ ಎಂದು ORA (Organized Retailers Association) ಅಧ್ಯಕ್ಷರಾದ ಶ್ರೀಧರ್ ಹೇಳಿದರು. ಪ್ರಸ್ತುತ OnePlus ತನ್ನ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲು ಚಿಲ್ಲರೆ ವ್ಯಾಪಾರಿಗಳಿಗೆ ಸುಮಾರು 5% ಮಾರ್ಜಿನ್‌ಗಳನ್ನು ನೀಡುತ್ತದೆ. ಸ್ಯಾಮ್‌ಸಂಗ್‌ನಂತಹ ಇತರ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ 17% ಮಾರ್ಜಿನ್‌ಗಳನ್ನು ಸಹ ನೀಡುತ್ತದೆ.
ಇದಲ್ಲದೆ ಚಿಲ್ಲರೆ ವ್ಯಾಪಾರಿಗಳು ಕಂಪನಿಯಿಂದ ವಾರಂಟಿ ಮತ್ತು ಸೇವಾ ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸುವಲ್ಲಿ ಮುಂದುವರಿದ ವಿಳಂಬಗಳು ಮತ್ತು ತೊಡಕುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಗ್ರಾಹಕರ ಅತೃಪ್ತಿಗೆ ಕಾರಣವಾಗಿದೆ ಮತ್ತು ಈ ಸಮಸ್ಯೆಗಳನ್ನು ಉಲ್ಬಣಗೊಳಿಸಲು ಮತ್ತು ಪರಿಹರಿಸಲು ಪುನರಾವರ್ತಿತ ಪ್ರಯತ್ನಗಳ ಹೊರತಾಗಿಯೂ ನಮ್ಮ ಮೇಲೆ ಹೊರೆಗಳನ್ನು ಹೆಚ್ಚಿಸಿದೆ ಎಂದು ಶ್ರೀಧರ್ ಹೇಳಿದರು.
OnePlus ನೊಂದಿಗೆ ವ್ಯಾಪಾರ ಮಾಡಲು ಆಫ್‌ಲೈನ್ ಮೊಬೈಲ್ ಫೋನ್ ಚಿಲ್ಲರೆ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಆಲ್ ಇಂಡಿಯಾ ಮೊಬೈಲ್ ರೀಟೇಲರ್ಸ್ ಅಸೋಸಿಯೇಷನ್ (AIMRA) ಗ್ರೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಒನ್‌ಪ್ಲಸ್ ಉತ್ಪನ್ನಗಳ ಸಾಕಷ್ಟು ಸ್ಟಾಕ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
OnePlus ತನ್ನ ವಿಶೇಷ ಮಳಿಗೆಗಳು, ದೊಡ್ಡ ಸ್ವರೂಪದ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಆನ್‌ಲೈನ್ ಚಾನೆಲ್‌ಗಳಿಗೆ ಆದ್ಯತೆ ನೀಡುತ್ತಿದೆ ಎಂದು ಚಿಲ್ಲರೆ ವ್ಯಾಪಾರಿಗಳು ಆರೋಪಿಸಿದರು ಇದು ಆಫ್‌ಲೈನ್ ಚಿಲ್ಲರೆ ಚಾನೆಲ್‌ಗಳಲ್ಲಿ ಪೂರೈಕೆ ಕೊರತೆಯನ್ನು ಸೃಷ್ಟಿಸಿತು. ಇದಲ್ಲದೆ OnePlus ಸಾಧನಗಳೊಂದಿಗೆ ಉತ್ಪನ್ನಗಳು ಅಥವಾ ಸೇವೆಗಳ ಕಡ್ಡಾಯ ಬಂಡಲಿಂಗ್ ಕೂಡ ಚಿಲ್ಲರೆ ವ್ಯಾಪಾರಿಗಳ ಕಾಳಜಿಯ ಕ್ಷೇತ್ರಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.