ಕೆಲವೇ ನಿಮಿಷದಲ್ಲಿ ನಿಮ್ಮದೇ ಹಾಡುಗಳನ್ನು ರಚಿಸಿ ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲಿ!
ಭಾರತ ಸೇರಿದಂತೆ ಉತ್ತರ ಅಮೇರಿಕಾ ಮತ್ತು ಯುರೋಪ್‍ನಲ್ಲಿ ಈ OnePlus AI Music Studio ಬಿಡುಗಡೆ
OnePlus ಕೆಲವೇ ನಿಮಿಷಗಳಲ್ಲಿ ತಮ್ಮದೇಯಾದ ಹಾಡುಗಳನ್ನು ಕ್ರಿಯೇಟ್ ಮಾಡಲು ಹೊಸ ಪ್ಲಾಟ್‌ಫಾರ್ಮ್ ತೆರೆದಿದೆ
ಜನಪ್ರಿಯ ಸ್ಮಾರ್ಟ್ಫೋನ್ ತಯಾರಕರಾದ ಒನ್‌ಪ್ಲಸ್ ಈಗ ಹೊಸ ವಲಯಕ್ಕೆ ಕಾಲಿಟ್ಟಿದೆ. OnePlus ಬಳಕೆದಾರರಿಗೆ ಕಂಪನಿ ಒನ್‌ಪ್ಲಸ್ ಎಐ ಮ್ಯೂಸಿಕ್ ಸ್ಟುಡಿಯೋ (OnePlus AI Music Studio) ಎಂಬ ಹೊಸ ದಾರಿಯನ್ನು ತೆರೆದಿದೆ. ಇನ್ಮೇಲೆ ಕೆಲವೇ ನಿಮಿಷಗಳಲ್ಲಿ ಯಾರು ಬೇಕಾದರೂ ತಮ್ಮದೇಯಾದ ಹಾಡುಗಳನ್ನು ಸಂಯೋಜಿಸಲು ಅನುಮತಿಸುವ ಪ್ಲಾಟ್‌ಫಾರ್ಮ್ ಬಿಡುಗಡೆಗೊಳಿಸಿದೆ. ಇದು ಬಳಕೆದಾರರಿಗೆ ಮ್ಯೂಸಿಕ್ ಅನ್ನು ಕ್ರಿಯೇಟ್ ಮಾಡಲು ಮತ್ತು ಅವುಗಳನ್ನು AI ರಚಿತವಾದ ಬೀಟ್‌ಗಳೊಂದಿಗೆ ಸಂಯೋಜಿಸಲು ಅನುಮತಿಸುತ್ತದೆ. ನಿಮ್ಮ ಹಾಡನ್ನು ರಚಿಸಿದ ನಂತರ ಅದನ್ನು ಪೂರ್ತಿಯಾಗಿ ಶೇರ್ ಸಹ ಮಾಡಬಹುದು. ಈವರೆಗೆ ಮ್ಯೂಸಿಕ್ ಸಂಯೋಜನೆಯು ಕೆಲವೇ ಜನರ ಕೈಯಲ್ಲಿ ಕೇಂದ್ರೀಕೃತವಾಗಿತ್ತು ಆದರೆ ಈಗ ಇದು ಎಲ್ಲರಿಗೂ ಲಭ್ಯ.
Also Read: 3 ತಿಂಗಳ ಉಚಿತ Disney+ Hotstar ಜೊತೆಗೆ Unlimited ಕರೆ ಮತ್ತು ಡೇಟಾ ನೀಡುವ Jio ಪ್ಲಾನ್ ಬೆಲೆ ಎಷ್ಟು?
ಒನ್‌ಪ್ಲಸ್ ಎಐ ಮ್ಯೂಸಿಕ್ ಸ್ಟುಡಿಯೋ (OnePlus AI Music Studio) ಸ್ಪರ್ಧೆ
ಈ ಹೊಸ ಒನ್‌ಪ್ಲಸ್ ಎಐ ಮ್ಯೂಸಿಕ್ ಸ್ಟುಡಿಯೋ (OnePlus AI Music Studio) ಸೇವೆಯ ಅಳವಡಿಕೆಯನ್ನು ಹೆಚ್ಚಿಸಲು ಕಂಪನಿ ಭಾರತ ಸೇರಿದಂತೆ ಉತ್ತರ ಅಮೇರಿಕಾ ಮತ್ತು ಯುರೋಪ್ ವ್ಯಾಪಿಸಿ ಈ ಸ್ಪರ್ಧೆಯನ್ನು ಪ್ರಾರಂಭಿಸಿದೆ. ಇದರಲ್ಲಿ ಭಾಗವಹಿಸುವವರು ತಮ್ಮ ಮ್ಯೂಸಿಕ್ ಹಾಡುಗಳನ್ನು 17ನೇ ಡಿಸೆಂಬರ್ ಸಂಜೆ 5:00pm ಗಂಟೆಗೆ ಸಲ್ಲಿಸಲು ಪ್ರೋತ್ಸಾಹಿಸಲಾಗುತ್ತದೆ. ಒನ್‌ಪ್ಲಸ್ ಕಂಪನಿಯು ಪ್ರತಿ ಪ್ರದೇಶದಿಂದ 100 ಅಪ್ಲಿಕೇಶನ್ಗಳನ್ನು ಆಯ್ಕೆ ಮಾಡಲು ಯೋಜಿಸಿದ್ದು ವಿಜೇತರು ಒನ್‌ಪ್ಲಸ್ ವೆಬ್‌ಸೈಟ್‌ನಲ್ಲಿ ಪ್ರಾಡಕ್ಟ್‌ಗಳಿಗೆ ರಿಡೀಮ್ ಮಾಡಬಹುದಾದ ಕೂಪನ್‌ಗಳನ್ನು ಪಡೆಯಬಹುದು.
ನಿಮ್ಮ ಸ್ವಂತ AI ಮ್ಯೂಸಿಕ್ ರಚಿಸುವುದು ಹೇಗೆ?
➥ಇದು ಎಲ್ಲ OnePlus ಬಳಕೆದಾರರಿಗೆ ಲಭ್ಯವಿದ್ದು ಮೊದಲಿಗೆ ನೀವು ಭಾರತದವರಾಗಿದ್ದರೆ https://aimusicstudio.oneplus.in/ ಲಿಂಕ್ ಮೇಲೆ ಕ್ಲಿಕ್ ಮಾಡಿ, ನೀವು ಭಾರತೀಯರಲ್ಲದ ಬಳಕೆದಾರರಾಗಿದ್ದರೆ https://aimusicstudio.oneplus.com/ ಲಿಂಕ್ ಮೇಲೆ ಕ್ಲಿಕ್ ಮಾಡಿ.
➥ಇದರಲ್ಲಿ ಸೈನ್-ಇನ್ ಮಾಡಿ ನಿಮ್ಮ ವಿವರಗಳನ್ನು ನಮೂದಿಸಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಹಂಚಿಕೊಂಡ OTP ಅನ್ನು ನಮೂದಿಸಿ
➥ಇದರ ನಂತರ ‘Create Music’ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಆದ್ಯತೆಯ ಪ್ರಕಾರ ನಿಮ್ಮ ಮೂಡ್ ಮತ್ತು ಥೀಮ್ ಅನ್ನು ಆಯ್ಕೆ ಮಾಡಿ. ನಿಮ್ಮ ಸಾಹಿತ್ಯವನ್ನು ರಚಿಸಲು AI ಗಾಗಿ ಪ್ರೊವೈಡ್ ಪ್ರಾಮ್ಟ್ (Provide Prompt) ಅನ್ನು ಕ್ಲಿಕ್ ಮಾಡಿ.
➥ಇದು ನಿಮಗೆ ವೈಯಕ್ತಿಕವಾಗಿ ಯಾವುದಾದರೂ ವಿಷಯದ ಮೇಲೆ ನಿಮ್ಮ ಹಾಡನ್ನು ರಚಿಸಿಕೊಳ್ಳಲು ಅವಕಾಶ ನೀಡುತ್ತದೆ. AI ನಿಮ್ಮ ಹಾಡನ್ನು ಬರೆಯಲು ನಿಮ್ಮ ಸಂಗೀತ ಮತ್ತು ಸಂಗೀತ ವೀಡಿಯೊವನ್ನು ರಚಿಸಲು ಒಂದೆರಡು ನಿಮಿಷ ಕಾಯಬೇಕು ಅಷ್ಟೇ.
ಒನ್‌ಪ್ಲಸ್ ಎಐ ಮ್ಯೂಸಿಕ್ ಸ್ಟುಡಿಯೋ (OnePlus AI Music Studio) ಮಾರ್ಗಸೂಚಿ
ನಿಮಗೆ ನಿಮ್ಮ ಉತ್ತಮ ಫಲಿತಾಂಶ ಸಿಗೂ ವರೆಗೂ ಎಷ್ಟು ಬಾರಿ ಬೇಕಾದರೂ ಹಾಡಿ ಪದಗಳನ್ನು ಬದಲಾಯಿಸಿ ಪ್ರಯೋಗಿಸಬಹುದು. ಒಮ್ಮೆ ನಿಮ್ಮ ಹಾಡು ಪೂರ್ತಿಯಾದ ನಂತರ #oneplusaimusicstudio ನೊಂದಿಗೆ ನಿಮ್ಮ ಎಲ್ಲಾ ಸಾಮಾಜಿಕ ಹ್ಯಾಂಡಲ್‌ಗಳಲ್ಲಿ ಅದನ್ನು ಡೌನ್‌ಲೋಡ್ ಮಾಡಲು ಮತ್ತು ಪ್ರಕಟಿಸಲು ಮರೆಯಬೇಡಿ ಯಾಕೆಂದರೆ ಇದು ಕಡ್ಡಾಯವಾಗಿದೆ. ಗಮನಿಸಿ ಕಾಪಿ ರೈಟ್ ಕಾನೂನುಗಳನ್ನು ಉಲ್ಲಂಘಿಸುವ, ಆಕ್ಷೇಪಾರ್ಹ ಅಥವಾ ಅನುಚಿತ ವಿಷಯವನ್ನು ಒಳಗೊಂಡಿರುವ ಅಥವಾ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾದ ಅಪ್ಲಿಕೇಶನ್‌ಗಳನ್ನು ಅನರ್ಹಗೊಳಿಸಲಾಗುತ್ತದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile