ನಿಮ್ಮ ಒಂದು ಕ್ಲಿಕ್‌ ನಿಮ್ಮ ಮೊಬೈಲ್ ನಂಬರ್ ಹ್ಯಾಕರ್ ಕೈ ಸೇರಿಸುತ್ತೆ! ಏನಿದು SIM Swap ವಂಚನೆ?

Updated on 19-Jun-2024
HIGHLIGHTS

ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಮೂಲದ ಹೊಸ ರೀತಿಯ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚು ಹೊರಹೊಮ್ಮುತ್ತಿದೆ.

ಕರೆ ಮತ್ತು ಮೆಸೇಜ್‌ಗಳನ್ನು ತಮ್ಮ ಸಿಮ್ ಕಾರ್ಡ್‌ಗೆ ವರ್ಗಾಯಿಸುವುದನ್ನು ಸಿಮ್ ಸ್ವಾಪ್ (SIM Swap) ಎಂದು ಕರೆಯಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಮೂಲದ ಹೊಸ ರೀತಿಯ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚು ಹೊರಹೊಮ್ಮುತ್ತಿದೆ. ಇದರಲ್ಲಿ ವಂಚಕರು ಜನಸಾಮಾನ್ಯರ ಮೊಬೈಲ್ ಸಂಖ್ಯೆಯನ್ನು ನಿಮಗೆ ಅರಿವಿಲ್ಲದೆ ನಿಮ್ಮ ಮೊಬೈಲ್ ಅನ್ನು ನಕಲೀಕರಿಸಿ ಕದ್ದು ಅದರಲ್ಲಿ ಬರುವ ಕರೆ ಮತ್ತು ಮೆಸೇಜ್‌ಗಳನ್ನು ತಮ್ಮ ಸಿಮ್ ಕಾರ್ಡ್‌ಗೆ ವರ್ಗಾಯಿಸುವುದನ್ನು ಸಿಮ್ ಸ್ವಾಪ್ (SIM Swap) ಎಂದು ಕರೆಯಲಾಗುತ್ತದೆ. ಈ ರೀತಿಯಾಗಿ ಅವರು ನಿಮ್ಮ ಬ್ಯಾಂಕ್ ಖಾತೆಯ ಮೂಲಕ ಬರುವ ಮೆಸೇಜ್ ಮತ್ತು ಕರೆಗಳೊಂದಿಗೆ ನಿಮ್ಮ ಸೋಶಿಯಲ್ ಮೀಡಿಯಾ ಮತ್ತು ಇತರ ಪ್ರಮುಖ ಸ್ಥಳಗಳಿಗೆ ಪರಿಶೀಲನೆ ಕೋಡ್‌ಗಳನ್ನು ಪಡೆಯಬಹುದು. ಆದರೆ ಇವರ ಮೊದಲ ಹೆಜ್ಜೆ ಅಂದ್ರೆ ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುವುದು. ನಿಮ್ಮ ವೈಯಕ್ತಿಕ ಡೇಟಾವನ್ನು ಕದಿಯುವ ಮೂಲಕ ನಿಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಬಹುದು.

Also Read: 32MP ಸೆಲ್ಫಿ ಕ್ಯಾಮೆರಾದ ಲೇಟೆಸ್ಟ್ Realme GT 6T 5G ಸ್ಮಾರ್ಟ್‌ಫೋನ್‌ ಮೇಲೆ ₹4000 ರೂಗಳ ಭಾರಿ ಡಿಸ್ಕೌಂಟ್!

What is SIM Swap scam?

ಮೊದಲಿಗೆ ನೀವು ಈ ಸಿಮ್ ಸ್ವಾಪ್ ಅಂದ್ರೆ ಏನು ಎನ್ನುವುದನ್ನು ತಿಳಿದುಕೊಳ್ಳುವುದು ತುಂಬ ಮುಖ್ಯವಾಗಿದೆ. ನಿಮ್ಮ ಮೊಬೈಲ್ ಅನ್ನು ರಿಮೋಟ್ ಮೂಲಕ ಕಂಟ್ರೋಲ್ ಮಾಡುವುದರೊಂದಿಗೆ ನಿಮ್ಮ ಫೋನ್ ಒಳಗಿನ ಸಂಪೂರ್ಣ ಮಾಹಿತಿಯನ್ನು ಕಡಿಯುತ್ತಾರೆ. ಈಗಾಗಲೇ ಮೇಲೆ ತಿಳಿಸಿರುವಂತೆ ಇದರಲ್ಲಿ ವಂಚಕರು ನಿಮ್ಮ ಮೊಬೈಲ್ ಸಂಖ್ಯೆಯನ್ನು ಮಿಮಗೆ ಅರಿವಿಲ್ಲದೆ ಕದ್ದು ಅದರಲ್ಲಿ ಬರುವ ಕರೆ ಮತ್ತು ಮೆಸೇಜ್‌ಗಳನ್ನು ತಮ್ಮ ಸಿಮ್ ಕಾರ್ಡ್‌ಗೆ ವರ್ಗಾಯಿಸಬಹುದು. ಆದರೆ ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಈ ಸಿಮ್ ಸ್ವಾಪ್ (SIM Swap) ಹಗರಣವನ್ನು ತಪ್ಪಿಸಬಹುದು. ಇದರಿಂದಾಗಿ ನಿಮ್ಮ ಫೋನ್ ಕಳೆದೋದ್ರೆ ತಕ್ಷಣ ನಿಮ್ಮ ಸಿಮ್ ಕಾರ್ಡ್ ಕಂಪನಿಯ ಕಸ್ಟಮರ್ ಕೇರ್ ಸಂಪರ್ಕಿಸಿ ಬಂದ್ ಮಾಡಿಸಿಕೊಳ್ಳಿ.

What is SIM Swap scam

ಈ ಸಿಮ್ ಸ್ವಾಪ್ ವಂಚನೆಗಳಿಂದ ಸುರಕ್ಷಿತವಾಗಿರುವುದು ಹೇಗೆ?

ನಿಮ್ಮ ವೈಯಕ್ತಿಕ ಮಾಹಿತಿಯನ್ನು ವಿನಂತಿಸುವ ಅಪರಿಚಿತ ಸಂಖ್ಯೆಗಳಿಂದ ನೀವು ಕರೆಗಳು ಅಥವಾ ಪಠ್ಯಗಳನ್ನು ಸ್ವೀಕರಿಸಿದರೆ ಪ್ರತಿಕ್ರಿಯಿಸಬೇಡಿ. ಕಾನೂನುಬದ್ಧ ಕಂಪನಿಗಳು ಅಪೇಕ್ಷಿಸದ ಚಾನಲ್‌ಗಳ ಮೂಲಕ ಸೂಕ್ಷ್ಮ ವಿವರಗಳನ್ನು ಕೇಳುವುದಿಲ್ಲ. ಅಲ್ಲದೆ ಮಲ್ಟಿ-ಫ್ಯಾಕ್ಟರ್ ದೃಢೀಕರಣ (MFA) ಅನಧಿಕೃತ ಪ್ರವೇಶದ ವಿರುದ್ಧ ನಿಮ್ಮ ಗುರಾಣಿಯಾಗಿದೆ. ಆದರೆ ಎಲ್ಲಾ MFA ವಿಧಾನಗಳನ್ನು ಸಮಾನವಾಗಿ ರಚಿಸಲಾಗಿಲ್ಲ. ಯಾವುದೇ ರಕ್ಷಣೆಯಿಲ್ಲದೆ SMS ಪರಿಶೀಲನೆಯು ಉತ್ತಮವಾಗಿದ್ದರೂ ಇದು SIM ಸ್ವಾಪಿಂಗ್‌ಗೆ ಒಳಗಾಗುತ್ತದೆ. ಫಿಂಗರ್‌ಪ್ರಿಂಟ್ ಅಥವಾ ಫೇಶಿಯಲ್ ರೆಕಗ್ನಿಷನ್ ಸ್ಕ್ಯಾನರ್‌ಗಳು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ದೃಢೀಕರಣ ಅಪ್ಲಿಕೇಶನ್‌ಗಳು ಅಥವಾ ಭದ್ರತಾ ಕೀಗಳಂತಹ ಹೆಚ್ಚು ಸುರಕ್ಷಿತ MFA ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳಿ.

What is SIM Swap scam

ನಿಮ್ಮ ಸಿಮ್ ಕಾರ್ಡ್ ಅನ್ನು ಯಾರಾದರೂ ಹೈಜಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ನೀವು ಅನುಮಾನಿಸಿದರೆ ತಕ್ಷಣವೇ ನಿಮ್ಮ ಮೊಬೈಲ್ ಸೇವಾ ಪೂರೈಕೆದಾರರಿಗೆ ವರದಿ ಮಾಡಿ. ನೀವು ಎಷ್ಟು ಬೇಗನೆ ಕಾರ್ಯನಿರ್ವಹಿಸುತ್ತೀರೋ ಅಷ್ಟು ವೇಗವಾಗಿ ಅವರು ಅನಧಿಕೃತ ಪ್ರವೇಶವನ್ನು ತಡೆಗಟ್ಟಲು ಮತ್ತು ಸಂಭಾವ್ಯ ಹಾನಿಯನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬಹುದು. ಅಲ್ಲದೆ ಅಪ್ಪಿತಪ್ಪಿಯೂ ನಿಮಗೆ ಅರಿವಿಲ್ಲದ ಲಿಂಕ್ ಮೇಲೆ ಕ್ಲಿಕ್ ಮಾಡಲೇಬೇಡಿ ಅಲ್ಲದೆ ಅಪರಿಚಿತರಿಗೆ ಕರೆ ಮಾಡಲು ಫೋನ್ ನೀಡಲೇ ಬೇಡಿ. ಫೋನ್ ಕಳೆದೋದ್ರೆ ತಕ್ಷಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿ FIR ಕಾಪಿ ಪಡೆದುಕೊಳ್ಳಿ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :