ONDC News: ಭಾರತದಲ್ಲಿ ಅದರಲ್ಲಿಯೂ ಮೆಟ್ರೋ ನಗರದಲ್ಲಿ ಯಾವುದೇ ರೀತಿಯ ಆಹಾರ ವಿತರಣಾ ಅಥವಾ ಆನ್ಲೈನ್ ಫುಡ್ ಆರ್ಡರ್ ಅಂಥ ಬಂದಾಗ ಮೊದಲಿಗೆ ನಮ್ಮ ತಲೆ ಮತ್ತು ನಾಲಿಗೆಯ ಮೇಲೆ ಬರುವ ಎರಡು ಹೆಸರುಗಳೆಂದರೆ ಸ್ವಿಗ್ಗಿ (Swiggy) ಮತ್ತು ಜೊಮಾಟೊ (Zomato) ಆಗಿದೆ. ಆದರೆ ಮೂರನೇ ಆಟಗಾರನೂ ಸಹ ಈ ವಲಯಕ್ಕೆ ಕಾಲಿಟ್ಟಿದ್ದು ಇದು ಸ್ವಲ್ಪ ಸಮಯದವರೆಗೆ ಮಾರುಕಟ್ಟೆಯಲ್ಲಿದೆ. ಆದರೂ ಇದು ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಯನ್ನು ಗಳಿಸಲು ಪ್ರಾರಂಭಿಸಿದೆ. ಈ ಸೇವೆಯನ್ನು ONDC (Open Network for Digital Commerce) ಎಂದು ಕರೆಯಲಾಗುತ್ತದೆ. ಇದೊಂದು ಸರ್ಕಾರಿ ಸೇವೆಯಾಗಿದ್ದು ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳಿಗೆ ನೇರವಾಗಿ ಪ್ರತಿಸ್ಪರ್ಧಿಸುತ್ತಿದೆ.
ಮೊದಲ ಬಾರಿಗೆ ಈ ಸೇವೆಯನ್ನು ದೇಶದಲ್ಲಿ 2021 ಡಿಸೆಂಬರ್ ನಲ್ಲಿ ಸಂಯೋಜಿಸಲಾಗಿತ್ತು ಈ ONDC ಎಲ್ಲಾ ಉತ್ಪನ್ನಗಳು ಮತ್ತು ಸೇವೆಗಳ ಸಂಗ್ರಾಹಕವಾಗಿದೆ. ಇದು ಗ್ರಾಹಕರಿಗೆ ಕೇವಲ ಒಂದು ಕ್ಲಿಕ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಲು, ಬಟ್ಟೆಗಳನ್ನು ಖರೀದಿಸಲು, ಚಲನಚಿತ್ರ ಟಿಕೆಟ್‌ಗಳನ್ನು ಖರೀದಿಸಲು, ದಿನಸಿ ವಸ್ತುಗಳನ್ನು ಮತ್ತು ಎಲೆಕ್ಟ್ರಾನಿಕ್ಸ್‌ಗಳನ್ನು ಆರ್ಡರ್ ಮಾಡಲು ಅನುಮತಿಸುತ್ತದೆ. ಗಮನಾರ್ಹವಾಗಿ ಒಬ್ಬ ವ್ಯಕ್ತಿಯು ONDC ಮೂಲಕ ಆಹಾರವನ್ನು ಆರ್ಡರ್ ಮಾಡಿದಾಗ ಥರ್ಡ್ ಪಾರ್ಟಿ ಆಪ್ (Swiggy ಮತ್ತು Zomato ಮತ್ತಿತರೇ) ಒಳಗೊಳ್ಳುವ ಅಗತ್ಯವಿಲ್ಲದೇ ನೇರವಾಗಿ ರೆಸ್ಟೋರೆಂಟ್ ಮೂಲಕ ವಿತರಣೆಯನ್ನು ಆ ರೆಸ್ಟೋರೆಂಟ್ ನಿಗದಿ ಪಡಿಸಿರುವ ಬೆಲೆಯಲ್ಲೇ ನಿಮಗೆ ಡೆಲಿವರಿ ಮಾಡಲಾಗುತ್ತದೆ. ಈ ಮೂಲಕ ಥರ್ಡ್ ಪಾರ್ಟಿ ಆಪ್ಗಳಿಗೆ ನೀಡುತ್ತಿದ್ದ ಹೆಚ್ಚುವರಿ ಹಣವನ್ನು ನೀಡಬೇಕಿಲ್ಲ.
https://twitter.com/ONDC_Official/status/1650837605875851269?ref_src=twsrc%5Etfw
ಇದು ಪ್ರತ್ಯೇಕ ಅಪ್ಲಿಕೇಶನ್ ಅಲ್ಲ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಆದ್ದರಿಂದ ಬಳಕೆದಾರರು ಅದನ್ನು ಬಳಸಲು ondc.org ಗೆ ನ್ಯಾವಿಗೇಟ್ ಮಾಡಬೇಕು. ಇದು UPI ನಂತೆ ಕಾರ್ಯನಿರ್ವಹಿಸುತ್ತದೆ ಅಂದರೆ Paytm, PhonePe, Meesho ಮುಂತಾದ ಅಸ್ತಿತ್ವದಲ್ಲಿರುವ ಅಪ್ಲಿಕೇಶನ್‌ಗಳಿಗೆ ಇದನ್ನು ಸೇರಿಸಬಹುದು. ಈ ಸೇವೆಯನ್ನು Paytm ನಲ್ಲಿಯೂ ಪಡೆಯಬಹುದು. ಅಲ್ಲಿ ಜನರು ಸರ್ಚ್ ಬಾರ್‌ನಲ್ಲಿ ONDC ಎಂದು ಟೈಪ್ ಮಾಡಬೇಕು ಮತ್ತು ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡಿದರೆ ಆಯಿತು ಅಷ್ಟೇ. ಅಂದ್ರೆ ಬೆಲೆ ಅಪ್ಲಿಕೇಶನ್ಗಳಿಗೆ ಹೋಗಬೇಕಿಲ್ಲ.
ಮೊದಲಿಗೆ ಒಂದು ಸಣ್ಣ ಉದಾಹರಣೆಯೊಂದಿಗೆ ನೋಡುವುದಾದರೆ ಸಾಮಾನ್ಯವಾಗಿ ಬಿಗ್ ತಂದೂರಿ ಪನೀರ್ ಬರ್ಗರ್‌ನ ಬೆಲೆ Swiggy ಮತ್ತು Zomato ಎರಡಕ್ಕೂ ₹359 ಆಗಿತ್ತು ಆದರೆ ONDC ನಲ್ಲಿ ₹270 ಆಗಿದೆ. ಅಂದ್ರೆ ನೀವು ಸುಮಾರು 25% ಕಡಿಮೆಯಾಗಿದೆ. ಲಭ್ಯತೆ ವರದಿಗಳನ್ನು ಉಲ್ಲೇಖಿಸಿ ONDC ಅಲ್ಲಿ ಈಗಾಗಲೇ ದೈನಂದಿನ ಆರ್ಡರ್ ಮಾರ್ಕ್ 10,000 ಕ್ಕೂ ಹೆಚ್ಚು ದಾಟಿದೆ. ಸೆಪ್ಟೆಂಬರ್ 2022 ರ ಹೊತ್ತಿಗೆ, ಇದನ್ನು ಬೆಂಗಳೂರಿನಾದ್ಯಂತ 16 ಸ್ಥಳಗಳಲ್ಲಿ ಬೀಟಾ ಪರೀಕ್ಷಿಸಲಾಗುತ್ತಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ನಗರವು ಆಲ್ಫಾ ಪರೀಕ್ಷೆಗಳನ್ನು ಆಯೋಜಿಸಿತ್ತು ಈ ಪ್ರಕ್ರಿಯೆಯನ್ನು ಸೆಪ್ಟೆಂಬರ್ ವೇಳೆಗೆ 80ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸುವ ನಿರೀಕ್ಷೆಯಿದೆ.