ಇನ್ಮುಂದೆ SBI ಗ್ರಾಹಕರು WhatsApp ನಲ್ಲೇ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ ಗೊತ್ತಾ?

ಇನ್ಮುಂದೆ SBI ಗ್ರಾಹಕರು WhatsApp ನಲ್ಲೇ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ ಗೊತ್ತಾ?
HIGHLIGHTS

SBI ತನ್ನ ಸೇವೆಗಳನ್ನು ಸರಳಗೊಳಿಸುವ ಸಲುವಾಗಿ WhatsApp ಬ್ಯಾಂಕಿಂಗ್ ಸೇವೆಗಳನ್ನು ಪ್ರಾರಂಭಿಸಿದೆ.

SBI ಬ್ಯಾಂಕಿಂಗ್ ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ WhatsApp ನಲ್ಲಿ +91 9022690226 ಗೆ 'ಹಾಯ್' ಎಂದು ಸಂದೇಶವನ್ನು ಕಳುಹಿಸಬೇಕು.

ಭಾರತದ ಅತಿದೊಡ್ಡ ಸಾರ್ವಜನಿಕ ಬ್ಯಾಂಡ್ SBI (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ತನ್ನ ಸೇವೆಗಳನ್ನು ಸರಳಗೊಳಿಸುವ ಸಲುವಾಗಿ WhatsApp ಬ್ಯಾಂಕಿಂಗ್ ಸೇವೆಗಳನ್ನು ಪ್ರಾರಂಭಿಸಿದೆ. ದೇಶದಲ್ಲೇ ಅತ್ಯಂತ ಹೆಚ್ಚು ಬಳಕೆಯಲ್ಲಿರುವ WhatsApp ಅಪ್ಲಿಕೇಷನ್ ನಲ್ಲಿ SBI ಬ್ಯಾಂಕ್ ಗ್ರಾಹಕರು ಇದೀಗ ಕೆಲವು ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದ್ದು ಯಾವುದೇ ಇತರೆ ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡದಂತೆಯೇ ಕೆಲವು ಸೇವೆಗಳನ್ನು ಪಡೆಯಬಹುದು ಎಂದು SBI ಬ್ಯಾಂಕ್ ಮಾಹಿತಿ ನೀಡಿದೆ.

WhatsApp ನಲ್ಲಿ SBI ಬ್ಯಾಂಕಿಂಗ್ ಸೇವೆ ನೊಂದಾಯಿಸಿಕೊಳ್ಳಿ

WhatsApp ಅಪ್ಲಿಕೇಷನ್‌ನಲ್ಲಿ SBI ಬ್ಯಾಂಕಿಂಗ್ ಸೇವೆಯನ್ನು ಪಡೆಯಲು ನೀವು ನಿಮ್ಮ ಬ್ಯಾಂಕ್ ಖಾತೆಯನ್ನು WhatsApp ನಲ್ಲಿ ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ SBI ಬ್ಯಾಂಕಿಂಗ್ ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ WhatsApp ನಲ್ಲಿ +91 9022690226 ಗೆ 'ಹಾಯ್' ಎಂದು ಸಂದೇಶವನ್ನು ಕಳುಹಿಸಬೇಕು. ಇದಕ್ಕೆ ಪ್ರತ್ಯುತ್ತರವಾಗಿ WhatsApp "ಆತ್ಮೀಯ ಗ್ರಾಹಕರೇ ನೀವು SBI WhatsApp ಬ್ಯಾಂಕಿಂಗ್ ಸೇವೆಗಳಿಗೆ ಯಶಸ್ವಿಯಾಗಿ ನೋಂದಾಯಿಸಲ್ಪಟ್ಟಿದ್ದೀರಿ" ಎಂದು ಹೇಳುತ್ತದೆ. ಒಂದು ವೇಳೆ SBI ಬ್ಯಾಂಕಿಂಗ್ ನಲ್ಲಿನೋಂದಾಯಿಸದ ಗ್ರಾಹಕರು SBI WhatsApp ಬ್ಯಾಂಕಿಂಗ್ ಸೇವೆಗಳಿಗೆ ನೋಂದಾಯಿಸಲಾಗಿಲ್ಲ ಎಂಬ ಸಂದೇಶವನ್ನು ಸ್ವೀಕರಿಸುತ್ತಾರೆ.

SBI WhatsApp ಬ್ಯಾಂಕಿಂಗ್ ಸೇವೆಯನ್ನು ಬಳಸುವುದು ಹೇಗೆ?

WhatsApp ನಲ್ಲಿ ನೋಂದಾಯಿಸಿಕೊಂಡ ನಂತರ SBI WhatsApp ಬ್ಯಾಂಕಿಂಗ್ ಸೇವೆಗಳಿಗೆ ನಿಮಗೆ ಸ್ವಾಗತವಿದೆ ಎಂಬ ದೃಢೀಕರಣವನ್ನು ನೀವು ಪಡೆಯುತ್ತೀರಿ ಮತ್ತು ಕೆಳಗಿನ ಯಾವುದೇ ಆಯ್ಕೆಗಳನ್ನು ಆಯ್ಕೆ ಮಾಡಲು ಕೇಳಲಾಗುತ್ತದೆ. ಬ್ಯಾಂಕ್ ಬ್ಯಾಲೆನ್ಸ್, ಮಿನಿ ಸ್ಟೇಟ್‌ಮೆಂಟ್, ಡಿ-ರಿಜಿಸ್ಟರ್ ಫ್ರಂ ವಾಟ್ಸಾಪ್ ಬ್ಯಾಂಕಿಂಗ್ ಎಂಬ ಮೂರು ಆಯ್ಕೆಗಳನ್ನು ನೀವು ಕಾಣುತ್ತೀರಾ. ಇವುಗಳಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಮಿನಿ ಸ್ಟೇಟ್‌ಮೆಂಟ್ ಆಯ್ಕೆಗಳು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಮೊತ್ತ ಹಾಗೂ ನಿಮ್ಮ ಖಾತೆಯ ಕೊನೆಯ ಐದು ವಹಿವಾಟುಗಳನ್ನು ತೋರಿಸುತ್ತವೆ.

ನೀವು ಡಿ-ರಿಜಿಸ್ಟರ್ ಆಯ್ಕೆ ಕ್ಲಿಕ್ ಮಾಡಿದರೆ ನೀವು WhatsApp ಬ್ಯಾಂಕಿಂಗ್ ಸೇವೆಯಿಂದ ನಿರ್ಗಮಿಸಬಹುದು. ಇದಲ್ಲದೆ SBI ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೂ WhatsApp ಸೇವೆಗಳನ್ನು ನೀಡಲಾಗುತ್ತಿದೆ. ಎಸ್‌ಬಿಐ ಕಾರ್ಡ್ ವಾಟ್ಸಾಪ್ ಕನೆಕ್ಟ್ ಹೆಸರಿನ ಮೂಲಕ ಬಳಕೆದಾರರು ವಾಟ್ಸಾಪ್‌ನಲ್ಲಿ ಬ್ಯಾಂಕ್‌ಗೆ ಸಂಪರ್ಕಿಸಬಹುದು ಮತ್ತು ಅವರ ಖಾತೆಯ ಮಾಹಿತಿ, ಬಾಕಿ ಉಳಿದಿರುವ ಬ್ಯಾಲೆನ್ಸ್, ರಿವಾರ್ಡ್ ಪಾಯಿಂಟ್‌ಗಳು, ಕಾರ್ಡ್ ಪಾವತಿಗಳು ಮತ್ತು ಹೆಚ್ಚಿನದನ್ನು ತಿಳಿದುಕೊಳ್ಳಬಹುದು.

ಅಗತ್ಯ ಮಾಹಿತಿಯನ್ನು ಪಡೆಯಲು ಬಳಕೆದಾರರು ವಾಟ್ಸಾಪ್‌ನಲ್ಲಿ 'OPTIN' ಪಠ್ಯವನ್ನು 9004022022 ಗೆ ಕಳುಹಿಸಬೇಕು. ಸೇವೆಗೆ ನೋಂದಾಯಿಸಲು, SBI ಕ್ರೆಡಿಟ್ ಕಾರ್ಡ್ ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 8080945040 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬೇಕು.

 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo