Noisefit Twist ಸ್ಮಾರ್ಟ್‌ವಾಚ್‌ ರೂ.2000 ಕ್ಕಿಂತ ಕಡಿಮೆ ಬೆಲೆಗೆ ಬ್ಲೂಟೂತ್ ಕಾಲಿಂಗ್ ಫೀಚರ್‌ನೊಂದಿಗೆ ಬಿಡುಗಡೆ

Noisefit Twist ಸ್ಮಾರ್ಟ್‌ವಾಚ್‌ ರೂ.2000 ಕ್ಕಿಂತ ಕಡಿಮೆ ಬೆಲೆಗೆ ಬ್ಲೂಟೂತ್ ಕಾಲಿಂಗ್ ಫೀಚರ್‌ನೊಂದಿಗೆ ಬಿಡುಗಡೆ
HIGHLIGHTS

ಈ Noise ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕಾಲಿಂಗ್‌ ಫೀಚರ್‌ನೊಂದಿಗೆ ಬರುತ್ತದೆ.

Noisefit Twist ಸ್ಮಾರ್ಟ್‌ವಾಚ್‌ ಅನ್ನು ರೂ. 1999 ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

Noise ಕರೆ ಮಾಡುವ ಸ್ಮಾರ್ಟ್‌ವಾಚ್ ಪೋರ್ಟ್‌ಫೋಲಿಯೊದ ವಿಸ್ತರಣೆಯ ಭಾಗವಾಗಿ ಲೈನ್‌ಅಪ್‌ಗೆ Noisefit Twist ಅನ್ನು ಸೇರಿಸಿದೆ.

Noisefit Twist: ಜನಪ್ರಿಯ ಸ್ಮಾರ್ಟ್‌ವಾಚ್‌ ಕಂಪನಿಯಾದ ನಾಯ್ಸ್ ಭಾರತದಲ್ಲಿ ಹೊಸ Smartwatch ಅನ್ನು ಪರಿಚಯಿಸಿದೆ. Noisefit Twist ನಲ್ಲಿ  ಕರೆ ಮಾಡುವ ಸ್ಮಾರ್ಟ್‌ವಾಚ್ ಉತ್ಪನ್ನ ಸಾಲಿನ ವಿಸ್ತರಣೆಯ ಭಾಗವಾಗಿ ಲೈನ್‌ಅಪ್‌ಗೆ ಸೇರಿಸಲಾಗಿದೆ. ಸ್ಮಾರ್ಟ್‌ವಾಚ್‌ ನೂರಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳು, ಹಂಡ್ರೆಡ್ ಪ್ಲಸ್ ವಾಚ್ ಫೇಸಸ್ ಮತ್ತು ಬ್ಲೂಟೂತ್ ಕಾಲಿಂಗ್ ಫೀಚರ್ ಜೊತೆಗೆ ಮುಟ್ಟಿನ ಆರೋಗ್ಯವನ್ನು ಟ್ರ್ಯಾಕಿಂಗ್ ಮಾಡುವುದನ್ನ ಈ ಡಿವೈಸ್‌ ಒಳಗೊಂಡಿದೆ. 2022 ರಲ್ಲಿ ನಾಯ್ಸ್ ಭಾರತದಲ್ಲಿ ನಂಬರ್‌ ಒನ್ ಸ್ಮಾರ್ಟ್ wearable ಬ್ರ್ಯಾಂಡ್ ಆಯಿತು. ಕಂಪನಿಯು ಭಾರತೀಯ wearable ಮಾರುಕಟ್ಟೆಯಲ್ಲಿ ಅಸಾಧಾರಣ 25% ಪಾಲನ್ನು ಹೊಂದಿದೆ.

Noisefit Twist ಬೆಲೆ ಮತ್ತು ಲಭ್ಯತೆ

Noisefit Twist ಅನ್ನು ರೂ 1999 ರ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ  ಸ್ಮಾರ್ಟ್‌ವಾಚ್‌ ಬ್ಲ್ಯಾಕ್,ವೈನ್,ಸಿಲ್ವರ್,ಮಿಡ್ನೈಟ್ ಬ್ಲೂ,ಗೋಲ್ಡ್ ಮತ್ತು ಪಿಂಕ್ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. Amazon ಮತ್ತು Noise ಅಧಿಕೃತ ವೆಬ್‌ಸೈಟ್ ಎರಡರಲ್ಲೂ Noisefit Twist ಅನ್ನು ಖರೀದಿಸಬಹುದು. Noise ಗ್ರಾಹಕರಿಗೆ ಅವರ ಹೆಚ್ಚುತ್ತಿರುವ ಬೇಡಿಕೆಗಳಿಗೆ ಹೊಂದಿಕೊಳ್ಳುವ ಫೀಚರ್‌ ಭರಿತ ಅತ್ಯಾಧುನಿಕ ಉತ್ಪನ್ನಗಳನ್ನು  ಒದಗಿಸುವುದರೊಂದಿಗೆ ಅದರ ಎರ್ಗೊನೊಮಿಕ್ ಡಿಸೈನ್,ಯುನಿಕ್ ರೌಂಡ್ ಡಯಲ್, ಅಡ್ವಾನ್ಸಡ್ ಕಾಲಿಂಗ್ ಎಕ್ಸ್ಪೀರಿಯೆನ್ಸ್ ಮತ್ತು ಸ್ಟ್ರೈನ್-ಫ್ರೀ ಡಿಸ್ಪ್ಲೇಯನ್ನು ಒಳಗೊಂಡಿರುತ್ತದೆ.

Noisefit Twist ಫೀಚರ್ಸ್

Noisefit Twist 240*240 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 246 PPI ನ ಪಿಕ್ಸೆಲ್ ಡೆನ್ಸಿಟಿಯೊಂದಿಗೆ 1.38 ಇಂಚಿನ TFT ರೌಂಡ್ ಡಿಸ್‌ಪ್ಲೇಯನ್ನು ಹೊಂದಿದೆ.ಉತ್ತಮ ವೀಕ್ಷಣೆಗಾಗಿ ಡಿಸ್ಪ್ಲೇಯು ಸ್ಟ್ರೈನ್-ಫ್ರೀ ಬಳಕೆಗಾಗಿ 550 ನಿಟ್ಸ್ ಬ್ರೈಟ್ನೆಸ್ ಅನ್ನು ಹೊಂದಿದೆ. ಇದು ಆಧುನಿಕವಾಗಿರುವುದರಿಂದ ಅದರ ಒಟ್ಟಾರೆ ಆಕರ್ಷಣೆಯನ್ನು ಹೆಚ್ಚಿಸುತ್ತದೆ.ಹೆಚ್ಚುವರಿಯಾಗಿ ಇನ್-ಬಿಲ್ಟ್ ಸ್ಪೀಕರ್‌ಗಳು ಮತ್ತು ಮೈಕ್ರೊಫೋನ್‌ನಿಂದ  ಕಡಿಮೆ ಬ್ಯಾಟರಿ ಬಳಕೆಯೊಂದಿಗೆ ಲ್ಯಾಗ್-ಫ್ರೀ ಕಾಲ್ಸ್ ಲಾಭವನ್ನು ಬಳಕೆದಾರರು ಈಗ ಪಡೆಯಬಹುದು.ಇದು ಡಯಲ್ ಪ್ಯಾಡ್‌ನಿಂದ ಡಯಲ್ ಮಾಡಲು ಮತ್ತು ಇತ್ತೀಚಿನ ಕರೆಗಳ ಲಾಗ್‌ಗೆ ಪ್ರವೇಶವನ್ನು ಅನುಮತಿಸುತ್ತದೆ. ಇದು ಯಾವಾಗಲೂ ಪ್ರಯಾಣದಲ್ಲಿರುವ ನವಯುವಕರಿಗೆ ಇದು ಸೂಕ್ತವಾಗಿದೆ.

NoiseFit Twist IP68 ನೀರು ಮತ್ತು ಧೂಳು ಪ್ರತಿನಿರೋಧಕವಾಗಿದೆ. ಇದು ಇನ್ ಬಿಲ್ಟ್ನಾಯ್ಸ್ ಹೆಲ್ತ್ ಸೂಟ್ ಅನ್ನು ಹೊಂದಿದೆ. ಇದು SPO2, ಹೃದಯ ಬಡಿತ, ಉಸಿರಾಟ ಮತ್ತು ಮಲಗುವ ಅಭ್ಯಾಸಗಳು ಮತ್ತು ಚಟುವಟಿಕೆಯ ಮಟ್ಟಗಳು ಸೇರಿದಂತೆ ಎಲ್ಲಾ ಪ್ರಮುಖ ಅಂಶಗಳನ್ನು ಪತ್ತೆಹಚ್ಚುವ ಡಿವೈಸ್‌ ಇದಾಗಿದ್ದು  ಹೆಲ್ತ್‌ ಸೂಟ್ ಅನ್ನು ಇದು ಒಳಗೊಂಡಿದೆ. 100 ಕ್ರೀಡಾ ವಿಧಾನಗಳು, ಹಂಡ್ರೆಡ್ ಪ್ಲಸ್ ವಾಚ್ ಫೇಸಸ್ ಮತ್ತು ಸ್ತ್ರೀ ಸೈಕಲ್ ಟ್ರ್ಯಾಕಿಂಗ್ ಜೊತೆಗೆ ಸಾಮಾನ್ಯ ಆರೋಗ್ಯ ಮೇಲ್ವಿಚಾರಣೆ ಸಹ ನೀಡುತ್ತದೆ. ಇತ್ತೀಚಿನ ಕಾಲ್ ಲಾಗ್‌ಗಳಿಗೆ ಪ್ರವೇಶವನ್ನು ನೀಡುತ್ತದೆ ಮತ್ತು Noise Buzz ಮೂಲಕ 10 ಸಂಪರ್ಕಗಳನ್ನು ಉಳಿಸುವ ಸಾಮರ್ಥ್ಯವನ್ನು ಹೊಂದುವ ಮೂಲಕ ಈ ಸ್ಮಾರ್ಟ್‌ವಾಚ್ ನೊಂದಿಗಿನ ಸಂವಹನವನ್ನು ಅತ್ಯಂತ ಸಂವಾದಾತ್ಮಕವಾಗಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo