TRAI News: ನಿಮಗೆ ಬರುವ ಅನಗತ್ಯ ಕರೆ ಮತ್ತು ಮೆಸೇಜ್ ಟೆಲಿಮಾರ್ಕೆಟಿಂಗ್ಗೆ ಸಂಬಂಧಿಸಿದಂತೆ ಪ್ರತಿದಿನ ಸುಮಾರು 3 ಕರೆ ಅಥವಾ ಮೆಸೇಜ್ ಬರುವುದು ಇಂದಿನ ದಿನಗಳಲ್ಲಿ ಸಾಮನ್ಯವಾಗಿ ಬಿಟ್ಟಿದೆ. ಏಕೆಂದರೆ ದೇಶದಲ್ಲಿ ಸುಮಾರು 64% ಭಾರತೀಯರು ಇಂತಹ ಕರೆ ಮತ್ತು ಮೆಸೇಜ್ ಸ್ವೀಕರಿಸುತ್ತಾರೆಂದು ವರದಿಯಾಗಿದೆ. ಕಾಲರ್ ಐಡಿ ಬಗ್ಗೆ ಮಾಹಿತಿಯನ್ನು ಒದಗಿಸುವ ಟ್ರೂಕಾಲರ್‌ನ ಅಪ್ಲಿಕೇಶನ್ ಸಮೀಕ್ಷೆಯ ಪ್ರಕಾರ ವಿಶ್ವದಾದ್ಯಂತ ಸ್ಪ್ಯಾಮ್ ಕರೆಗಳನ್ನು ಮಾಡುವಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಪ್ರತಿ ಭಾರತೀಯರು ಸರಾಸರಿಯಾಗಿ ತಿಂಗಳಿಗೆ 17 ಸ್ಪ್ಯಾಮ್ ಕರೆಗಳನ್ನು ಪಡೆಯುತ್ತಾರೆ. ಇಂತಹ ಸ್ಪ್ಯಾಮ್ ಮತ್ತು ಟೆಲಿಮಾರ್ಕೆಟಿಂಗ್ ಕರೆ ಮಾಡುವವರನ್ನು ನಿಲ್ಲಿಸುವ ಸಲುವಾಗಿ ಸರ್ಕಾರ ಯೋಜನೆಯೊಂದನ್ನು ಅಭಿವೃದ್ಧಿಪಡಿಸುತ್ತಿದೆ.
ಮೊದಲ ಬಾರಿಗೆ ಸರ್ಕಾರದಿಂದ ಈ ಹೊಸ ಮಾದರಿಯ ಟೆಕ್ನಾಲಜಿ ಜನಸಾಮ್ಯಾರಿಗೆ ಹೆಚ್ಚು ಅನುಕೂಲಕರವಾದ ಸೇವೆಯನ್ನು ತಂದಿದೆ. ಏಕೆಂದರೆ ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ ದಿನಕ್ಕೆ 3-5 ಅಪರಿಚಿತ ಕರೆ ಅಥವಾ ಅನಗತ್ಯ ಮೆಸೇಜ್ ಬರುತ್ತಲೇ ಇರುತ್ತದೆ. ಇದರಿಂದ ಸಾಮನ್ಯವಾಗಿ ಪ್ರತಿಯೊಬ್ಬರೂ ಕಿರಿಕಿರಿಯ ಅನುಭವನ್ನು ಹೊಂದಿರುತ್ತಾರೆ. ಆದ್ದರಿಂದ AI ಸ್ಪ್ಯಾಮ್ ಫಿಲ್ಟರ್ ಬಳಕೆಯಿಂದ ಸ್ಪ್ಯಾಮ್ ಕರೆಗಳು ಮಾತ್ರವಲ್ಲದೆ ಸ್ಪ್ಯಾಮ್ SMS ಗಳನ್ನು ಸಹ ನಿಲ್ಲಿಸಬಹುದು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI)ಫಿಲ್ಟರಿಂಗ್ ನಕಲಿ ಕರೆಗಳನ್ನು ಗುರುತಿಸುವುದನ್ನು ಈಗ ಸರಳಗೊಳಿಸುತ್ತದೆ. ಬಳಕೆದಾರರನ್ನು ಸ್ಕ್ಯಾಮರ್‌ಗಳಿಂದ ಇದು ರಕ್ಷಿಸುತ್ತದೆ.
ಈ ಪ್ರಯತ್ನಕ್ಕೆ ಟೆಲಿಕಾಂ ಕಂಪನಿಗಳನ್ನು ನಿಯಂತ್ರಣದಲ್ಲಿಡುವ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಬೆಂಬಲಿಸುತ್ತದೆ. ಭಾರ್ತಿ ಏರ್‌ಟೆಲ್, ಜಿಯೋ, BSNL ಮತ್ತು ವೊಡಾಫೋನ್ ಐಡಿಯಾ ಸೇರಿದಂತೆ ದೇಶದ ಟೆಲಿಕಾಂ ಕಂಪನಿಗಳಿಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡಲಾಗಿದೆ. ಜಿಯೋ ಈ ಹೊಸ ಫಿಲ್ಟರ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು. ಏರ್‌ಟೆಲ್ ಈಗಾಗಲೇ ಈ ಹೊಸ AI ಸ್ಪ್ಯಾಮ್ ಫಿಲ್ಟರ್ ಅನ್ನು ಪರಿಚಯಿಸುವ ಬಗ್ಗೆ ಮಾಹಿತಿಯನ್ನು ಘೋಷಿಸಿದೆ. ಆದರೆ BSNL ಮತ್ತು ವೊಡಾಫೋನ್ ಐಡಿಯಾ ಇದರ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಬಳಕೆದಾರರನ್ನು ಗುರಿಯಾಗಿಸುವ ಸ್ಪ್ಯಾಮ್ ಮತ್ತು ಟೆಲಿಮಾರ್ಕೆಟಿಂಗ್ ಕರೆ ಮಾಡುವವರು 10 ಅಂಕೆಗಳ ಸಂಖ್ಯೆಗಳಿಂದ ಮಾತ್ರ ಕರೆಗಳನ್ನು ಮಾಡುತ್ತಾರೆ. ಬಳಕೆದಾರರು ಸಾಮಾನ್ಯವಾಗಿ ಈ 10 ಅಂಕಿಯ ಸಂಖ್ಯೆಗಳಿಂದ ನಕಲಿ ಕರೆಗಳನ್ನು ಪಡೆಯುತ್ತಾರೆ. ಇದರಿಂದಾಗಿ ಸರ್ಕಾರವು 10 ಅಂಕಿಯ ಸಂಖ್ಯೆಯಲ್ಲಿ ಬರುವ ಕರೆಗಳ ಬಗ್ಗೆ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತದೆ. ಇಂತಹ ಕರೆಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಟೆಲಿಕಾಂ ಕಂಪನಿಗಳಿಗೆ TRAI ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.