ಈ ಡಿಸೆಂಬರ್‌ನಲ್ಲಿ Gmail ಖಾತೆಯಿಂದ ಹಿಡಿದು SIM Card ವರೆಗೆ ಈ ನಿಯಮಗಳಲ್ಲಿ ಭಾರಿ ಬದಲಾವಣೆ

Updated on 05-Dec-2023
HIGHLIGHTS

1ನೇ ಡಿಸೆಂಬರ್‌ನಿಂದ ನೀವು ಅನುಸರಿಸಬೇಕಾದ ಮೂರು ಹೊಸ ನಿಯಮಗಳಿವೆ.

ಗೂಗಲ್ ಅಕೌಂಟ್ ಪಾಲಿಸಿ (Inactive Google Account Policy) ಅನ್ನು 1ನೇ ಡಿಸೆಂಬರ್ 2023 ರಂದು ಆರಂಭಿಸಿದೆ.

ನೀವು ಮೊಬೈಲ್ ಬಳಕೆದಾರರಾಗಿದ್ದರೆ ವರ್ಷದ ಕೊನೆಯೊಳಗೆ ಅಂದ್ರೆ 1ನೇ ಡಿಸೆಂಬರ್‌ನಿಂದ ನೀವು ಅನುಸರಿಸಬೇಕಾದ ಮೂರು ಹೊಸ ನಿಯಮಗಳಿವೆ. ಇದು ಸಿಮ್ ಕಾರ್ಡ್‌ಗಳನ್ನು (SIM Card) ಖರೀದಿಸುವ ಮತ್ತು ಮಾರಾಟ ಮಾಡುವ ಪ್ರಕ್ರಿಯೆಯನ್ನು ಬದಲಾಯಿಸುತ್ತದೆ. 1 ಡಿಸೆಂಬರ್ 2023 ರಿಂದ ದೂರಸಂಪರ್ಕ ಇಲಾಖೆ ಸಿಮ್ ಕಾರ್ಡ್‌ಗಳಿಗಾಗಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಹೊಸ ಸಿಮ್ ಕಾರ್ಡ್ ಖರೀದಿಸುವಾಗ ಗ್ರಾಹಕರು ತಮ್ಮ ಡೇಟಾವನ್ನು ಅಪ್ಡೇಟ್ ಮಾಡಿಕೊಂಡು ಸಿಮ್ ಕಾರ್ಡ್ ಡೀಲರ್‌ಗಳನ್ನು ಪರಿಶೀಲಿಸಿಕೊಂಡಿರಬೇಕು. ಒಟ್ಟಿಗೆ ಬೃಹತ್ ಕನೆಕ್ಷನ್ ಇನ್ನು ಮುಂದೆ ಅನುಮತಿಸಲಾಗುವುದಿಲ್ಲ. ಹೊಸ ನಿಯಮಗಳ ಪ್ರಕಾರ ಎಲ್ಲಾ ವ್ಯಕ್ತಿಗಳು ಡಿಜಿಟಲ್ ನೋ ಯುವರ್ ಕಸ್ಟಮರ್ (KYC) ಪ್ರಕ್ರಿಯೆ ಒಳಗೊಂಡು ಪೂರ್ಣಗೊಳಿಸಿರಬೇಕು. ಇದು ಈ ಸಿಮ್ ನೀಡುವ ಡೀಲರ್ ಮತ್ತು ಸಿಮ್ ಕಂಪನಿಯ ಜವಾಬ್ದಾರಿಯಾಗಿರುತ್ತದೆ.

Also Read: 5000mAh ಬ್ಯಾಟರಿ ಮತ್ತು Powerful ಪ್ರೊಸೆಸರ್‌ನೊಂದಿಗೆ Tecno Spark Go 2024 ಬಿಡುಗಡೆ

ಬಳಸದ Gmail ಖಾತೆಗಳು ಡಿಲೀಟ್

ಗೂಗಲ್‌ ಸಂಸ್ಥೆ ತನ್ನ ಹೊಸ ಇನ್‌ಆಕ್ವಿವ್ ಗೂಗಲ್ ಅಕೌಂಟ್ ಪಾಲಿಸಿ (Inactive Google Account Policy) ಅನ್ನು 1ನೇ ಡಿಸೆಂಬರ್ 2023 ರಂದು ಆರಂಭಿಸಿದೆ. ಅಂದ್ರೆ ನಿಮ್ಮ ಜಿಮೈಲ್ ಇನ್‌ಆಕ್ವಿವ್ ಖಾತೆಯನ್ನು ಆಕ್ಟಿವ್ ಮಾಡಿಕೊಳ್ಳಲು ಸಲಹೆ ನೀಡುತ್ತದೆ. ಜಿಮೈಲ್ ಖಾತೆಗಳನ್ನುಡಿಲೀಟ್ ಮಾಡಲು Google ತಯಾರಿ ನಡೆಸುತ್ತಿದ್ದು ಗೂಗಲ್ ಸೇವೆಗಳನ್ನು ಮತ್ತಷ್ಟು ಸರಳ ಮತ್ತು ಸುರಕ್ಷಿತಗೊಳಿಸುವ ಸಲುವಾಗಿ ಬಳಕೆದಾರರ ಡೇಟಾವನ್ನು ರಕ್ಷಿಸಲು ಕಳೆದ ಎರಡು ವರ್ಷಗಳಿಂದ ಬಳಸದ ಜಿಮೈಲ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಗೂಗಲ್ ಮುಂದಾಗಿದೆ. ಇದು ಇಮೇಲ್‌ಗಳು, ಸಂಪರ್ಕಗಳು, ಕ್ಯಾಲೆಂಡರ್‌ಗಳು ಮತ್ತು ಇತರ ಡೇಟಾವನ್ನು ಒಳಗೊಂಡಿರುವ ಕಾರಣ ನಿಮ್ಮ ಜಿಮೈಲ್ ಖಾತೆಯನ್ನು ಉಳಿಸಿಕೊಳ್ಳಲು ಈಗಲೇ ನಿಮ್ಮ ಜಿಮೈಲ್ ಖಾತೆಗಳನ್ನು ಲಾಗ್ ಇನ್ ಮಾಡಿ ಒಂದಿಷ್ಟು ಸಮಯ ಕಳೆಯಿರಿ.

SIM Card ನಿಯಮಗಳನ್ನು ಬದಲಾಯಿಸಲಾಗಿದೆ

ಹೊಸ ಸಿಮ್ ಕಾರ್ಡ್ (SIM Card) ಖರೀದಿ ನಿಯಮಗಳಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹೊಸ ನಿಯಮಗಳ ಅಡಿಯಲ್ಲಿ 1 ಡಿಸೆಂಬರ್ 2023 ರಿಂದ ಯಾವುದೇ ಬಳಕೆದಾರರಿಗೆ ಸೀಮಿತ ಸಂಖ್ಯೆಯ ಸಿಮ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಯಾವುದೇ ವ್ಯಕ್ತಿ ಅಥವಾ ಸಿಮ್ ಕಾರ್ಡ್ ಮಾರಾಟಗಾರರು ಈ ನಿಯಮಗಳನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಸರ್ಕಾರ ಭಾರಿ ಕ್ರಮ ಕೈಗೊಳ್ಳಲಿದೆ. ಇದರ ಅಡಿಯಲ್ಲಿ ವ್ಯಕ್ತಿಯ ನೋಂದಣಿಯನ್ನು ರದ್ದುಗೊಳಿಸಿ ಸುಮಾರು 10 ಲಕ್ಷದವರೆಗೆ ದಂಡ ತೆರಬೇಕಾಗುತ್ತದೆ. ಗ್ರಾಹಕರು ಹೊಸ ಸಿಮ್‌ಗಳನ್ನು ಖರೀದಿಸುತ್ತಿದ್ದರೆ ಅಥವಾ ಅಸ್ತಿತ್ವದಲ್ಲಿರುವ ಸಂಖ್ಯೆಯಲ್ಲಿ ಹೊಸದಕ್ಕೆ ಬದಲಾಯಿಸಲು ಯೋಚಿಸುತ್ತಿದ್ದರೆ ಹೊಸ ಅರ್ಜಿಯೊಂದಿಗೆ ಲೇಟೆಸ್ಟ್ ದಾಖಲೆಗಳ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿದೆ.

ಜೀವನ್ ಪ್ರಮಾಣ ಫೇಸ್ ಅಪ್ಲಿಕೇಶನ್

ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ನೀವು ಜೀವನ್ ಪ್ರಮಾಣ ಫೇಸ್ ಅಪ್ಲಿಕೇಶನ್ ಅನ್ನು ಬಳಸಬೇಕು. ಈ ಅಪ್ಲಿಕೇಶನ್ ಅನ್ನು ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ಇದರ ನಂತರ ನೀವು ನಿಮ್ಮ ಮುಖವನ್ನು ಸ್ಕ್ಯಾನ್ ಮಾಡಬೇಕು. ಈ ಪ್ರಕ್ರಿಯೆಯಲ್ಲಿ ನಿಮ್ಮ ಮುಖವನ್ನು ಚೌಕಟ್ಟಿನಲ್ಲಿ ಇರಿಸಬೇಕಾಗುತ್ತದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :