SIM Card: ಡಿ.1 ರಿಂದ ಸಿಮ್ ಕಾರ್ಡ್‌ಗಳ ಈ ನಿಯಮದಲ್ಲಿ ಭಾರಿ ಬದಲಾವಣೆ! ಅನುಸರಿಸದಿದ್ದರೆ ಪಕ್ಕ ಜೈಲು ಪಾಲು!

SIM Card: ಡಿ.1 ರಿಂದ ಸಿಮ್ ಕಾರ್ಡ್‌ಗಳ ಈ ನಿಯಮದಲ್ಲಿ ಭಾರಿ ಬದಲಾವಣೆ! ಅನುಸರಿಸದಿದ್ದರೆ ಪಕ್ಕ ಜೈಲು ಪಾಲು!
HIGHLIGHTS

ಸಿಮ್ ಕಾರ್ಡ್‌ಗಳಿಗೆ (SIM Card) ಸಂಬಂಧಿಸುವ ಹೊಸ ನಿಯಮಗಳು ನಾಳೆ ಅಂದ್ರೆ 1ನೇ ಡಿಸೆಂಬರ್ 2023 ರಿಂದ ಅನ್ವಯ

ಈ ಹೊಸ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ಮತ್ತು ಜೈಲು ಶಿಕ್ಷೆಗೆ ಒಳಪಡಿಸಲಾಗುತ್ತದೆ.

ಭಾರತದಲ್ಲಿ ಸಿಮ್ ಕಾರ್ಡ್‌ಗಳಿಗೆ (SIM Card) ಸಂಬಂಧಿಸುವ ಹೊಸ ನಿಯಮಗಳು ಭಾರಿ ಸುದ್ದಿ ಮಾಡುತ್ತಿದ್ದು ಈ ಹೊಸ ರೂಲ್ಸ್ ಬಗ್ಗೆ ಮಾಹಿತಿಗಳನ್ನು ಮುಂದೆ ನೀಡಲಾಗಿದೆ. ಭಾರತದ ಟೆಲಿಕಾಂ ಇಲಾಖೆಯು (DoT – Department of Telecommunications) ನಾಳೆ ಅಂದ್ರೆ 1ನೇ ಡಿಸೆಂಬರ್ 2023 ರಿಂದ ಹೊಸ ಸಿಮ್ ಕಾರ್ಡ್‌ಗಳ ಮಾರಾಟ ಮತ್ತು ಖರೀದಿಗೆ ಹೊಸ ಮಾನದಂಡಗಳನ್ನು ಜಾರಿಗೆ ತರಲು ಸಿದ್ಧವಾಗಿದೆ. ಇದನ್ನು ಕೇಂದ್ರ ಸರ್ಕಾರವು ಮೊದಲು ಇದೇ ಆಗಸ್ಟ್‌ನಲ್ಲಿ ಈ ನಿಯಮಗಳನ್ನು ಮೊದಲು ಘೋಷಿಸಿ 3 ತಿಂಗಳ ಕಾಲಾವಕಾಶವನ್ನು ನೀಡಲಾಗಿತ್ತು ಈಗ ಈ ಸಮಯ ಮುಗಿದಿದ್ದು ನಾಳೆಯಿಂದ ಅನ್ವಯವಾಗಲಿದೆ. ಮೊಬೈಲ್ ಫೋನ್ ಬಳಕೆದಾರರು ಸಿಮ್ ಕಾರ್ಡ್ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.

Also Read: 16GB RAM ಮತ್ತು Powerful ಪ್ರೊಸೆಸರ್‌ನೊಂದಿಗೆ Redmi K70 Series ಬಿಡುಗಡೆ! ಬೆಲೆ ಮತ್ತು ಫೀಚರ್ ತಿಳಿಯಿರಿ

ಇಂದಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿರುವ ನಕಲಿ ಸಿಮ್ ಕಾರ್ಡ್‌ಗಳಿಗೆ (SIM Card) ಸಂಬಂಧಿಸಿದ ವಂಚನೆಗಳನ್ನು ತಡೆಯಲು ಸರ್ಕಾರ ಈ ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸಿದೆ. ಹೆಚ್ಚುತ್ತಿರುವ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ದೂರಸಂಪರ್ಕ ಇಲಾಖೆಯು ಸಿಮ್ ಕಾರ್ಡ್ ಖರೀದಿ ಮತ್ತು ಮಾರಾಟಕ್ಕೆ ಹೊಸ ನಿಯಮಗಳನ್ನು ತರುತ್ತಿದ್ದು 1ನೇ ಡಿಸೆಂಬರ್ 2023 ರಿಂದ ದೇಶಾದ್ಯಂತ ಜಾರಿಯಾಗಲಿದೆ. ಈ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ಮತ್ತು ಜೈಲು ಶಿಕ್ಷೆಯನ್ನು ಒಳಗೊಂಡಿದೆ.

SIM Card Rules

ಸಿಮ್ ಕಾರ್ಡ್‌ಗಳಿಗೆ (SIM Card) ಹೊಸ ನಿಯಮ

SIM ಕಾರ್ಡ್ ಡೀಲರ್ಗಳಿಗೆ ಖಡಕ್ ವಾರ್ನಿಂಗ್: ಯಾರೇ ಸಿಮ್ ಕಾರ್ಡ್ ಖರೀದಿಸಿದ್ರು ಪೂರ್ತಿಯಾಗಿ ಅಸಲಿ ದಾಖಲೆಗಳ ಪರಿಶೀಲನೆ ಅಂದ್ರೆ ಆಧಾರ್ ಮತ್ತು ಹಲವಾರು ವೈಯಕ್ತಿಕ ಡೇಟಾದೊಂದಿಗೆ ಪೂರ್ತಿಯಾಗಿ ಹಾದು ಹೋಗಬೇಕಿದೆ. ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವಾಗ ಅಂಗಡಿಯ ಮಾಲೀಕರು ಸಹ ಪೂರ್ತಿಯಾಗಿ ತಮ್ಮನ್ನು ನೋಂದಾಯಿಸಿಕೊಂಡಿರಬೇಕು. ಇಲ್ಲವಾದರೆ ಟೆಲಿಕಾಂ ಆಪರೇಟರ್‌ಗಳು ಮತ್ತು ತಪ್ಪಿಸ್ಥ ಇಬ್ಬರು ಪೊಲೀಸ್ ಪರಿಶೀಲನೆಗೆ ಜವಾಬ್ದಾರರಾಗಿರುತ್ತಾರೆ. ಇದರ ಅನುಸರಣೆಯಲ್ಲಿ ಉಲ್ಲಂಘಿಸುವವರಿಗೆ 10 ಲಕ್ಷ ರೂಪಾಯಿ ದಂಡ ತೆರಬೇಕಾಗುತ್ತದೆ.

ಹೆಚ್ಚುವರಿ ಸಿಮ್ ಕಾರ್ಡ್ ವಿತರಣೆ: ಈ ಹೊಸ ನಿಯಮಗಳು ಹೊಸ ಸಿಮ್ ಕಾರ್ಡ್ ಖರೀದಿಗೆ ಮಿತಿಯನ್ನು ನೀಡಿದ್ದು ಸಾಮಾನ್ಯ ಗ್ರಾಹಕರ ಒಂದು ಐಡಿಯಲ್ಲಿ 9 ಸಿಮ್ ಕಾರ್ಡ್‌ಗಳನ್ನು ಖರೀದಿಸಬಹುದು ಅಷ್ಟೇ. ಆದರೆ ಈ ಮಿತಿಯ ನಿಯಮ ಪ್ರತಿಷ್ಠಿತ ಕಂಪನಿ ಅಥವಾ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲವಾದರೂ ದಾಖಲೆಗಳ ಪರಿಶೀಲನೆ ಬಹು ಮುಖ್ಯವಾಗಿದೆ.

ಸಿಮ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುವಿಕೆ: ಈ ಮೊದಲೇ ಹೇಳಿದಂತೆ ಸಿಮ್ ಕಾರ್ಡ್‌ಗಳನ್ನು ಇನ್ನು ಮುಂದೆ ದೊಡ್ಡ ಪ್ರಮಾಣದಲ್ಲಿ ನೀಡದಿರುವ ಕಾರಣ ಯಾರೇ ನಂಬರ್‌ಗಳನ್ನು ಬಳಸದಿದ್ದರೆ ಪೂರ್ತಿಯಾಗಿ ಬಂದ್ ಆದ ಆ ಸಂಖ್ಯೆಯು 90 ದಿನಗಳ ಅವಧಿಯ ನಂತರ ಮಾತ್ರ ಇನ್ನೊಬ್ಬ ವ್ಯಕ್ತಿಗೆ ನೀಡಲು ಅವಕಾಶವಿದೆ.

ಉಲ್ಲಂಘಿಸುವವರಿಗೆ ಭಾರಿ ದಂಡ: ಇಂದು ರಾತ್ರಿಯೊಳಗೆ ಅಂದ್ರೆ 30ನೇ ನವೆಂಬರ್ 2023 ಒಳಗೆ ನೋಂದಾಯಿಸದ ಸಿಮ್‌ಗಳನ್ನು ಮಾರಾಟ ಮಾಡುವ ಮಾರಾಟಗಾರರು 10 ಲಕ್ಷ ರೂಪಾಯಿಗಳವರೆಗೆ ದಂಡದೊಂದಿಗೆ ಜೈಲು ಸೇರುವ ಸಾಧ್ಯತೆಗಳಿವೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo