New SIM Card Rule: ಆನ್‌ಲೈನ್ ವಂಚನೆ ಮತ್ತು ಹ್ಯಾಕಿಂಗ್ ತಡೆಯಲು ಸಿಮ್ ಕಾರ್ಡ್‌ನ ಹೊಸ ನಿಯಮ ಜಾರಿಗೆ!

New SIM Card Rule: ಆನ್‌ಲೈನ್ ವಂಚನೆ ಮತ್ತು ಹ್ಯಾಕಿಂಗ್ ತಡೆಯಲು ಸಿಮ್ ಕಾರ್ಡ್‌ನ ಹೊಸ ನಿಯಮ ಜಾರಿಗೆ!
HIGHLIGHTS

ಭಾರತದಲ್ಲಿ ಆನ್‌ಲೈನ್ ವಂಚನೆ ಮತ್ತು ಹ್ಯಾಕಿಂಗ್ ಮಾಡುವವರನ್ನು ತಡೆಯಲು ಹೊಸ ಸಿಮ್ ಕಾರ್ಡ್ (SIM Card) ನಿಯಮ ಜಾರಿ.

ವಂಚಕರು ಮೊಬೈಲ್ ಕಳೆದುಹೋದ ಅಥವಾ ಡ್ಯಾಮೇಜ್ ನೆಪದಲ್ಲಿ ಅವರು ಹೊಸ ಸಿಮ್ ಕಾರ್ಡ್ (SIM Card) ಅನ್ನು ಪಡೆಯುತ್ತಾರೆ.

ಭಾರತದಲ್ಲಿ 1ನೇ ಜುಲೈ 2024 ರಿಂದ ದೇಶಾದ್ಯಂತ ಸಿಮ್ ಕಾರ್ಡ್ (SIM Card) ಹೊಸ ನಿಯಮಗಳು ಜಾರಿಗೆ ಬರಲು ಸಿದ್ಧವಾಗಿದೆ.

New SIM Card Rule: ನೀವು ಮೊಬೈಲ್ ಬಳಕೆದಾರರಾಗಿದ್ದರೆ ನಿಮಗಾಗಿ ಒಂದು ಪ್ರಮುಖ ಸುದ್ದಿಯನ್ನು ಇಲ್ಲಿ ನೀಡುತ್ತಿದ್ದೇವೆ ಏಕೆಂದರೆ 1ನೇ ಜುಲೈ 2024 ರಿಂದ ದೇಶಾದ್ಯಂತ ಸಿಮ್ ಕಾರ್ಡ್ ಹೊಸ ನಿಯಮಗಳು ಜಾರಿಗೆ ತರಲು ಸಿದ್ಧವಾಗಿದೆ. ಆನ್‌ಲೈನ್ ವಂಚನೆ ಮತ್ತು ಹ್ಯಾಕಿಂಗ್ ಮಾಡುವವರನ್ನು ತಡೆಯುವುದು ಇದರ ಉದ್ದೇಶವಾಗಿದೆ. SIM ಕಾರ್ಡ್‌ನ ಹೊಸ ನಿಯಮಗಳು ಜುಲೈ 1 ರಿಂದ ದೇಶಾದ್ಯಂತ ಅನ್ವಯಿಸುತ್ತವೆ. ಮೊಬೈಲ್ ಸಿಮ್ ಕಾರ್ಡ್‌ಗಳಿಗೆ (SIM Card) ಹೊಸ ನಿಯಮಗಳು ಮತ್ತು ನಿಬಂಧನೆಗಳನ್ನು ನೀಡಲಾಗಿದೆ.

Also Read: 8GB RAM ಮತ್ತು 50MP ಸೋನಿ ಕ್ಯಾಮೆರಾವುಳ್ಳ Narzo 70 Pro 5G ಲಾಂಚ್! ಬೆಲೆ ಮತ್ತು ಟಾಪ್ 5 ಫೀಚರ್ಗಳೇನು?

New SIM Card Rule ಹೇಳುವುದೇನು?

15ನೇ ಮಾರ್ಚ್ 2024 ರಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಹೊಸ ನಿಯಮಗಳನ್ನು ಹೊರಡಿಸಿದೆ. ಇದು 1ನೇ ಜುಲೈ 2024 ರಿಂದ ದೇಶಾದ್ಯಂತ ಅನ್ವಯವಾಗಲಿದೆ. ಹೊಸ ನಿಯಮಗಳ ಪ್ರಕಾರ ಇತ್ತೀಚೆಗೆ ತಮ್ಮ ಸಿಮ್ ಕಾರ್ಡ್‌ಗಳನ್ನು ವಿನಿಮಯ ಮಾಡಿಕೊಂಡ ಮೊಬೈಲ್ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಲು ಸಾಧ್ಯವಾಗುವುದಿಲ್ಲ. ಸಿಮ್ ವಿನಿಮಯವನ್ನು ಸಿಮ್ ಸ್ವಾಪಿಂಗ್ ಎಂದು ಕರೆಯಲಾಗುತ್ತದೆ.

New SIM Card Rule Will Be Applicable From 1st July 2024
New SIM Card Rule Will Be Applicable From 1st July 2024

ಸಿಮ್ ಕಾರ್ಡ್ ಕಳೆದುಹೋದಾಗ ಅಥವಾ ಡ್ಯಾಮೇಜ್ ಆದಾಗ ಸಿಮ್ ವಿನಿಮಯ ಸಂಭವಿಸುತ್ತದೆ. ಇದು ಸಂಭವಿಸಿದಲ್ಲಿ ನಿಮ್ಮ ಹಳೆಯ ಸಿಮ್ ಅನ್ನು ಹೊಸ ಸಿಮ್‌ನೊಂದಿಗೆ ಬದಲಾಯಿಸಲು ನಿಮ್ಮ ಟೆಲಿಕಾಂ ಆಪರೇಟರ್ ಅನ್ನು ನೀವು ಕೇಳುತ್ತೀರಿ. ಈ ಹೊಸ ನಿಯಮಗಳನ್ನು ಬದಲಾಯಿಸುವ ಮೂಲಕ ವಂಚನೆಯ ಘಟನೆಗಳನ್ನು ನಿಲ್ಲಿಸಬಹುದು ಎಂದು TRAI ಹೇಳುತ್ತದೆ. ಅಲ್ಲದೆ ನಿಮಗೊತ್ತಾ ಒಂದು ವೇಳೆ ಜಾಲಿ ಸಿಮ್ ಕಾರ್ಡ್ (Fake SIM Card Purchas) ಖರೀದಿಯಲ್ಲಿ ಸಿಲಿಕಿಕೊಂಡ್ರೆ 3 ವರ್ಷದ ಜೈಲು ಶಿಕ್ಷೆ ಅಥವಾ 50 ಲಕ್ಷದವರೆಗೆ ದಂಡವನ್ನು ಕಟ್ಟಬೇಕಾಗುತ್ತದೆ.

What Is a SIM Swap?

ಇಂದಿನ ದಿನಗಳಲ್ಲಿ ಸಿಮ್ ವಿನಿಮಯದ ವಂಚನೆಗಳು (SIM Swap Scam) ಹೆಚ್ಚಾಗಿದ್ದು ಇದರಲ್ಲಿ ವಂಚಕರು ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಫೋಟೋವನ್ನು ಸುಲಭವಾಗಿ ಸೆರೆಹಿಡಿಯುತ್ತಾರೆ. ಇದಾದ ನಂತರ ಮೊಬೈಲ್ ಕಳೆದುಹೋದ ಅಥವಾ ಡ್ಯಾಮೇಜ್ ನೆಪದಲ್ಲಿ ಅವರು ಹೊಸ ಸಿಮ್ ಕಾರ್ಡ್ ಅನ್ನು ಪಡೆಯುತ್ತಾರೆ. ಇದರ ನಂತರ ನಿಮ್ಮ ನಂಬರ್‌ಗೆ ಬಂದ OTP ವಂಚಕರನ್ನು ತಲುಪುತ್ತದೆ. ಆದ್ದರಿಂದ TRAI ಹೊಸ ಸೇವೆಯನ್ನು ಪ್ರಾರಂಭಿಸಲು ದೂರಸಂಪರ್ಕ ಇಲಾಖೆಗೆ (DoT) ಶಿಫಾರಸು ಮಾಡಿದೆ.

New SIM Card Rule Will Be Applicable From 1st July 2024
New SIM Card Rule Will Be Applicable From 1st July 2024

ಇದರಲ್ಲಿ ಪ್ರತಿ ಒಳಬರುವ ಕರೆಗಳ ಹೆಸರನ್ನು ಮೊಬೈಲ್ ಬಳಕೆದಾರರ ಹ್ಯಾಂಡ್‌ಸೆಟ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಸಂಪರ್ಕ ಪಟ್ಟಿಯಲ್ಲಿ ಹೆಸರು ಉಳಿಸಿದ್ದರೂ ಅಥವಾ ಇಲ್ಲದಿದ್ದರೂ ಸಹ. ಇದರಿಂದ ವಂಚನೆ ಪ್ರಕರಣಗಳನ್ನು ನಿಯಂತ್ರಿಸಬಹುದು. ಆದರೆ ಇದು ಖಾಸಗಿತನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಹೊಸ SIM Card ನಿಯಮದಿಂದಾಗುವ ಪ್ರಯೋಜನಗಳೇನು?

ವಂಚನೆಯ ಘಟನೆಗಳನ್ನು ತಡೆಗಟ್ಟುವ ಸಲುವಾಗಿ ಇಂತಹ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು TRAI ಹೇಳುತ್ತದೆ. ವಂಚಕರು ಸಿಮ್ ಸ್ವಾಪಿಂಗ್ ಅಥವಾ ಮೊಬೈಲ್ ಸಂಪರ್ಕವನ್ನು ಬದಲಾಯಿಸಿದ ತಕ್ಷಣ ಪೋರ್ಟ್ ಮಾಡುವುದನ್ನು ತಡೆಯಲು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಸಿಮ್‌ ಕಾರ್ಡ್‌ ಸಂಬಂಧ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಹೊಸ ನಿಯಮವನ್ನು ಜಾರಿಗೆ ತಂದಿದ್ದು ಇನ್ಮುಂದೆ ಬಳಕೆದಾರರು ತಮ್ಮ ಸಿಮ್ ಅನ್ನು ಸ್ವ್ಯಾಪ್ ಮಾಡಿದ ನಂತರ 7 ದಿನಗಳವರೆಗೆ ತಮ್ಮ ಸಿಮ್ ಅನ್ನು ಪೋರ್ಟ್ ಮಾಡುವಂತಿಲ್ಲ ಎಂದು ನಿಯಮ ಜಾರಿಗೊಳಿಸಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo